For Quick Alerts
ALLOW NOTIFICATIONS  
For Daily Alerts

ನಿಮ್ಮ ಕೊಠಡಿಯಲ್ಲಿನ ಸಿಗರೇಟ್ ವಾಸನೆಯನ್ನು ನಿಯಂತ್ರಿಸುವುದು ಹೇಗೆ?

|

ಯಾವುದೇ ಒಂದು ಚಟವನ್ನು ರೂಢಿಸಿಕೊಂಡು ಬಂದಿರುವವರಿಗೆ ಅವರ ಚಟದ ಬಗ್ಗೆ ಅಪಾರವಾದ ಗೌರವ. ಅವರು ಮಾಡಿದ್ದೇ ಸರಿ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮನೆ ಮಾಡಿರುತ್ತದೆ. ಮದ್ಯಪಾನ ಧೂಮಪಾನ ಹೀಗೆ ಹತ್ತು-ಹಲವಾರು ಚಟಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಕಿರಿಕಿರಿ ಉಂಟು ಮಾಡುವಂತೆ ನಡೆದುಕೊಳ್ಳುತ್ತಿರುತ್ತಾರೆ.

ಧೂಮಪಾನ ಎಂದಾಕ್ಷಣ ತಮ್ಮ ಸಿಗರೇಟ್ ಸೇವನೆಯ ವಾಸನೆ ಇಡೀ ಕೊಠಡಿಯ ತುಂಬ ಹಬ್ಬಿ ಕೊಠಡಿಗೆ ಹೋಗಿ ಬರುವವರಿಗೂ ಮತ್ತು ಅಪರೂಪಕ್ಕೆ ಬರುವ ನೆಂಟರಿಷ್ಟರಿಗೂ ಮೂಗಿಗೆ ಬಡಿಯುತ್ತಿರುತ್ತದೆ. ಸಿಗರೇಟ್ ಸೇವನೆ ಮಾಡುವವರಿಗೆ ಇದರಿಂದ ಯಾವುದೇ ಬೇಸರ ಉಂಟಾಗದಿದ್ದರೂ, ಧೂಮಪಾನದಿಂದ ದೂರ ಇರುವವರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬಹಳ ಕಿರಿಕಿರಿ ಮತ್ತು ಮನಸ್ಸಿಗೆ ಬೇಸರ ಉಂಟಾಗುತ್ತದೆ.

ಕೊಠಡಿಯಲ್ಲಿ ಹಬ್ಬಿದ ಧೂಮಪಾನದ ವಾಸನೆಯನ್ನು ಹೊಡೆದೋಡಿಸಲು ಅಥವಾ ವಾಸನೆ ಬರದಂತೆ ತಡೆಯಲು ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಕೊಡಲಾಗಿದೆ.

1. ಆಶ್ ಟ್ರೇ ದೂರವಿಡಿ

1. ಆಶ್ ಟ್ರೇ ದೂರವಿಡಿ

ಮೊದಲನೆಯದಾಗಿ ನೀವು ವಾಸಿಸುವ ಕೊಠಡಿಯಿಂದ ಆಶ್ ಟ್ರೇ ಮತ್ತು ಇತರ ಧೂಮಪಾನಕ್ಕೆ ಸಂಬಂಧ ಪಟ್ಟ ವಸ್ತುಗಳನ್ನು ಹೊರ ಹಾಕಿ. ಧೂಮಪಾನ ಮಾಡಿದ ಯಾವುದೇ ವ್ಯಕ್ತಿಯಿಂದ ಧೂಮಪಾನ ವಾಸನೆ ಬರುವುದು ಸಹಜ. ಆದರೆ ಆಶ್ ಟ್ರೇ ಮತ್ತು ಇತರೆ ಧೂಮಪಾನಕ್ಕೆ ಸಂಬಂಧ ಪಟ್ಟ ವಸ್ತುಗಳಿಂದ ಇದಕ್ಕಿಂತ ಹೆಚ್ಚಾಗಿ ವಾಸನೆ ಬರಲು ಪ್ರಾರಂಭವಾಗುತ್ತದೆ. ಇದರಿಂದ ಮುಕ್ತಿ ಪಡೆಯಬೇಕಾದರೆ ನಿಮ್ಮ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಬೇಕಿದ್ದರೆ ಏರ್ ಫಿಲ್ಟರ್ ಕೂಡ ಉಪಯೋಗಿಸಬಹುದು. ಇದರಿಂದ ನಿಮ್ಮ ಕೊಠಡಿಯಲ್ಲಿ ಶುದ್ಧ ಗಾಳಿಯ ವಾತಾವರಣ ನಿರ್ಮಾಣವಾಗುತ್ತದೆ.

2. ಕಿಟಕಿಗಳ ಬಾಗಿಲುಗಳನ್ನು ತೆರೆಯಿರಿ

2. ಕಿಟಕಿಗಳ ಬಾಗಿಲುಗಳನ್ನು ತೆರೆಯಿರಿ

ನಿಮ್ಮ ಕೊಠಡಿಯ ಕಿಟಕಿ ಬಾಗಿಲುಗಳನ್ನು ತೆರೆಯುವುದರಿಂದ ಸಂಪೂರ್ಣವಾಗಿ ಧೂಮಪಾನದ ವಾಸನೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗದೇ ಇದ್ದರೂ, ತಾತ್ಕಾಲಿಕವಾಗಿ ಇರುವ ವಾಸನೆಯನ್ನು ಸ್ವಲ್ಪ ಮಟ್ಟಿಗೆ ದೂರ ಮಾಡಬಹುದು. ಇದಕ್ಕೆ ಪೂರಕವಾಗಿ ಕಿಟಕಿಯ ಬಳಿ ಒಂದು ಫ್ಯಾನ್ ಇಡಿ ಹಾಗೂ ಫ್ಯಾನ್ ಒಳ ಮುಖವಾಗಿರಲಿ. ಇದರಿಂದ ನೈಸರ್ಗಿಕವಾಗಿ ಕಿಟಕಿಯ ಮೂಲಕ ಬರುವ ಗಾಳಿಯ ಜೊತೆಗೆ ಫ್ಯಾನಿನ ಗಾಳಿ ಸಹ ಸೇರಿಕೊಂಡು ಇಡೀ ಕೊಠಡಿ ನಿಧಾನವಾಗಿ ತಂಗಾಳಿಯ ಹಿಡಿತಕ್ಕೆ ಒಳಗಾಗುತ್ತದೆ.

3. ವಾಸನೆ ದೂರ ಮಾಡುವ ಸ್ಪ್ರೇ ಸಹ ಉಪಯೋಗಿಸಬಹುದು

3. ವಾಸನೆ ದೂರ ಮಾಡುವ ಸ್ಪ್ರೇ ಸಹ ಉಪಯೋಗಿಸಬಹುದು

ಈಗಿನ ಕಾಲಮಾನದಲ್ಲಿ ಎಂತಹ ದುರ್ವಾಸನೆಯನ್ನು ಬೇಕಾದರೂ ದೂರ ಮಾಡುವಂತಹ ಉತ್ತಮ ಸ್ಪ್ರೇ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗಾಗಿ ತಮ್ಮ ಸುವಾಸನಾಭರಿತ ವಾಸನೆಯಿಂದ ಧೂಮಪಾನದ ವಾಸನೆಯನ್ನು ಅತಿಕ್ರಮಿಸಿ ನಿಮ್ಮ ಕೊಠಡಿ ಶುದ್ಧವಾಗುವಂತೆ ಮಾಡುತ್ತವೆ. ಸ್ಪ್ರೇ ಖರೀದಿ ಮಾಡಬೇಕಾದರೆ ಅದರ ಮೇಲಿನ ಲೇಬಲ್ ನಲ್ಲಿ " ವಾಸನೆಯನ್ನು ದೂರ ಮಾಡುವ " ಎಂಬ ಅಂಶವನ್ನು ಗಮನಿಸಿ ನಂತರ ಖರೀದಿಸಿ. ಏಕೆಂದರೆ ನೀವು ಇಷ್ಟ ಪಟ್ಟು ಖರೀದಿಸುವ ಎಲ್ಲಾ ಸ್ಪ್ರೇ ಗಳು ಧೂಮಪಾನದ ವಾಸನೆಯನ್ನು ದೂರ ಮಾಡುವುದಿಲ್ಲ. ಆದ್ದರಿಂದ ನಿರ್ದಿಷ್ಟ ಸ್ಪ್ರೇ ಖರೀದಿಯ ಬಗ್ಗೆ ಗಮನ ಕೊಡಿ.

4. ಧೂಪದ್ರವ್ಯವನ್ನು ಹೊತ್ತಿಸಿ

4. ಧೂಪದ್ರವ್ಯವನ್ನು ಹೊತ್ತಿಸಿ

ನಾವು ದೇವರಿಗೆ ಹಚ್ಚುವ ಗಂಧದ ಕಡ್ಡಿ, ಕರ್ಪೂರ, ಧೂಪ ಇತ್ಯಾದಿಗಳು ನಿಮಗೆ ನೆನಪಿರಬಹುದು. ಒಂದು ಸ್ಥಳದಲ್ಲಿ ಅದನ್ನು ಹಚ್ಚಿಟ್ಟರೆ, ಅದು ಸಂಪೂರ್ಣವಾಗಿ ಬೇಯುವವರೆಗೂ ಇಡೀ ಮನೆಯ ತುಂಬಾ ತನ್ನ ಸುವಾಸನೆ ಹಬ್ಬಿಸುತ್ತದೆ ಮತ್ತು ಧೂಮಪಾನದ ವಾಸನೆಯನ್ನು ಮರೆ ಮಾಡುತ್ತದೆ. ಹಾಗಾಗಿ ನಿಮ್ಮ ಕೊಠಡಿಯ ಯಾವುದಾದರೂ ಒಂದು ಮೂಲೆಯಲ್ಲಿ ಧೂಪದ್ರವ್ಯವನ್ನು ಒಂದು ಬಟ್ಟಲಿನಲ್ಲಿ ಹೊತ್ತಿಸಿ ಇಡಿ. ಧೂಮಪಾನದ ವಾಸನೆ ಸಂಪೂರ್ಣವಾಗಿ ಮಾಯವಾದ ನಂತರ ಧೂಪದ್ರವ್ಯವನ್ನು ನೀರು ಹಾಕಿ ಆರಿಸಿ.

5. ವೈಟ್ ವಿನೆಗರ್ ನ ಉಪಯೋಗ

5. ವೈಟ್ ವಿನೆಗರ್ ನ ಉಪಯೋಗ

ವಿನೆಗರ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಅದರ ವಾಸನೆ ಅಷ್ಟಾಗಿ ಕಾಣಿಸದಿದ್ದರೂ ಇತರ ವಾಸನೆಗಳನ್ನು ತನ್ನತ್ತ ಸೆಳೆಯುತ್ತದೆ ಮತ್ತು ಹೀರಿಕೊಳ್ಳುತ್ತದೆ. ಒಂದು ಬಟ್ಟಲಿನಲ್ಲಿ ವೈಟ್ ವಿನೆಗರ್ ಹಾಕಿ ನಿಮ್ಮ ಕೊಠಡಿಯಲ್ಲಿಡಿ. ಸಂಜೆಯ ಹೊತ್ತಿಗೆ ಫಲಿತಾಂಶ ನಿಮಗೆ ತಿಳಿಯುತ್ತದೆ. ನಂತರ ಬಟ್ಟಲಿನಲ್ಲಿರುವ ವಿನೆಗರ್ ದ್ರವವನ್ನು ಹೊರಗಡೆ ಚೆಲ್ಲಿ ಬಿಡಿ. ಧೂಮಪಾನದ ವಾಸನೆಯ ರೀತಿ ವಿನೆಗರ್ ವಾಸನೆ ಬಹಳ ಹೊತ್ತಿನ ತನಕ ಕೊಠಡಿಯಲ್ಲಿ ಇರುವುದಿಲ್ಲ. ಇದರ ಜೊತೆಗೆ ನೀವು ಬೇಕಿದ್ದರೆ ಬೇಕಿಂಗ್ ಸೋಡಾ, ಕ್ಯಾಟ್ ಲಿಟ್ಟರ್ ಅಥವಾ ಆಕ್ಟಿವೇಟೆಡ್ ಚಾರ್ಕೋಲ್ ತುಂಡುಗಳನ್ನು ಉಪಯೋಗಿಸಬಹುದು. ಏಕೆಂದರೆ ಇವೆಲ್ಲ ವಾಸನೆಗಳನ್ನು ಹೀರಿಕೊಳ್ಳುವ ವಸ್ತುಗಳು. ಆದರೆ ನೆನಪಿರಲಿ, ಇವುಗಳನ್ನು ಸ್ವಲ್ಪ ದಿನಗಳ ಬಳಿಕ ನೀವು ಬದಲಾಯಿಸಬೇಕು.

6. ಫರ್ನಿಚರ್ ವಸ್ತುಗಳನ್ನು ಹೊರಗಿಡಿ

6. ಫರ್ನಿಚರ್ ವಸ್ತುಗಳನ್ನು ಹೊರಗಿಡಿ

ಮೇಲಿನ ಎಲ್ಲಾ ವಿಧಾನಗಳನ್ನು ಅನುಸರಿಸಿದ ಬಳಿಕವೂ ಧೂಮಪಾನದ ವಾಸನೆ ಹಾಗೇ ಇದ್ದರೆ, ಅದು ನಿಮ್ಮ ಫರ್ನಿಚರ್ ವಸ್ತುಗಳಲ್ಲಿ ಕೂಡ ಸೇರಿ ಕೊಂಡಿರಬಹುದು. ಆದ್ದರಿಂದ ನಿಮ್ಮ ಸೋಫಾ ಸೆಟ್, ಚೇರ್, ಟೇಬಲ್ ಇತ್ಯಾದಿಗಳನ್ನು ಒಂದೆರಡು ದಿನಗಳ ಕಾಲ ಕೊಠಡಿಯ ಹೊರಗಡೆ ಬಿಸಿಲಿನಲ್ಲಿಡಿ. ಸೂರ್ಯನ ಅತಿ ನೇರಳೆ ಕಿರಣಗಳು ವಾಸನೆ ಕಾರುವ ಬ್ಯಾಕ್ಟೀರಿಯಾ ಗಳನ್ನು ಕೊಲ್ಲುತ್ತವೆ ಮತ್ತು ಧೂಮಪಾನದ ವಾಸನೆಯನ್ನು ದೂರ ಮಾಡುತ್ತವೆ.

7. ಬೇಕಿಂಗ್ ಸೋಡಾ ಸಿಂಪಡಿಸಿ

7. ಬೇಕಿಂಗ್ ಸೋಡಾ ಸಿಂಪಡಿಸಿ

ನಿಮ್ಮ ಕೊಠಡಿಯ ಕಾರ್ಪೆಟ್ ಮತ್ತು ಫರ್ನಿಚರ್ ಮೇಲೆ ಬೇಕಿಂಗ್ ಸೋಡಾ ಸಿಂಪಡಿಸುವುದು ಅತ್ಯಂತ ಸುಲಭ ವಿಧಾನವಾಗಿದೆ. ಸಣ್ಣದಾಗಿ ಧೂಮಪಾನ ವಾಸನೆ ಬರುತ್ತಿದ್ದರೆ ಈ ವಿಧಾನ ನಿಮಗೆ ಉಪಯೋಗಕ್ಕೆ ಬರುತ್ತದೆ. ನೀವು ಬೇಕಿದ್ದರೆ ವಿನೆಗರ್ ಅನ್ನು ಫರ್ನಿಚರ್ ಗಳ ಮೇಲೆ ಸವರಬಹುದು. ಆದರೆ ದಟ್ಟವಾದ ವಾಸನೆಗಳಿಗೆ ಇದು ಅಷ್ಟು ಪರಿಣಾಮಕಾರಿ ಅಲ್ಲ. ಆದ್ದರಿಂದ ಬೇಕಿಂಗ್ ಸೋಡಾ 72 ಗಂಟೆಗಳ ನಂತರ ಫರ್ನಿಚರ್ ಗಳ ಮೇಲೆ ಯಾವುದೇ ವಾಸನೆಯನ್ನು ಇರಲು ಬಿಡುವುದಿಲ್ಲ.

1. ಗೋಡೆಗಳು ಮತ್ತು ತಾರಸಿಯನ್ನು ಸ್ವಚ್ಛ ಮಾಡಿ : -

1. ಗೋಡೆಗಳು ಮತ್ತು ತಾರಸಿಯನ್ನು ಸ್ವಚ್ಛ ಮಾಡಿ : -

ಮೇಲಿನ ಯಾವುದೇ ವಿಧಾನಗಳು ಫಲ ಕೊಡದೇ ಇದ್ದರೆ ಮತ್ತು ಧೂಮಪಾನದ ವಾಸನೆ ಹಾಗೇ ಇದ್ದರೆ ನೀವು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಬಹುದು

ನಿಮ್ಮ ಮನೆಯ ಗೋಡೆಗಳು ಮತ್ತು ತಾರಸಿಯನ್ನು ಅಮೋನಿಯಾ ಯುಕ್ತ ಕ್ಲೀನರ್ ನಿಂದ ಸ್ವಚ್ಛಗೊಳಿಸಿ. ಏಕೆಂದರೆ ವಾಸನೆ ಕಣ್ಣಿಗೆ ಕಾಣದಿದ್ದರೂ ಪ್ರತಿ ವಸ್ತುವಿನ ಮೇಲೆ ಕುಳಿತುಕೊಂಡಿರುತ್ತದೆ. ಗೋಡೆಯ ಮೇಲಿರುವ ಬಣ್ಣದ ಸಣ್ಣ ಪದರ ಧೂಮಪಾನದ ವಾಸನೆಯನ್ನು ಆಕರ್ಷಿಸಿರುತ್ತದೆ. ಧೂಮಪಾನ ಮಾಡುವ ವ್ಯಕ್ತಿ ಅಲ್ಲಿಂದ ತೆರಳಿದ ನಂತರವೂ ಈ ವಾಸನೆ ಹಾಗೆ ಇರುತ್ತದೆ. ಆದ್ದರಿಂದ ಕೆಲವೊಂದು ಬಾರಿ ನೀವು ಇಡೀ ಮನೆಯನ್ನು ಮತ್ತೊಮ್ಮೆ ಪೈಂಟ್ ಮಾಡಬೇಕಾಗಿ ಬರುತ್ತದೆ. ಹೊಸ ಬಣ್ಣದ ಪದರ ಹಳೆಯ ಬಣ್ಣದ ಮೇಲೆ ಕುಳಿತು ವಾಸನೆಯನ್ನು ಮರೆ ಮಾಡುತ್ತದೆ. ಪೈಂಟ್ ಮಾಡುವ ಮೊದಲು ಪ್ರೈಮರ್ ಬಳಸುವುದನ್ನು ಮರೆಯಬೇಡಿ. ಇದು ವಾಸನೆಯನ್ನು ಹಾಗೆ ಹಿಡಿದಿಟ್ಟುಕೊಳ್ಳಲು ಸಹಾಯವಾಗುತ್ತದೆ.

2. ಗಟ್ಟಿ ಮೇಲ್ಮೈ ಪದರಗಳನ್ನು ಒರೆಸಿ : -

2. ಗಟ್ಟಿ ಮೇಲ್ಮೈ ಪದರಗಳನ್ನು ಒರೆಸಿ : -

ವಿನೆಗರ್ ವಾಸನೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ತುಂಬಾ ಹೊತ್ತು ಇರುವುದಿಲ್ಲ ಮತ್ತು ಕ್ರಮೇಣವಾಗಿ ಧೂಮಪಾನದ ವಾಸನೆಯ ಜೊತೆಗೆ ಮಾಯವಾಗುತ್ತದೆ.

3 ಕಾರ್ಪೆಟ್ ಗಳನ್ನು ಸ್ಟೀಮ್ ಕ್ಲೀನ್ ಮಾಡಿ : -

3 ಕಾರ್ಪೆಟ್ ಗಳನ್ನು ಸ್ಟೀಮ್ ಕ್ಲೀನ್ ಮಾಡಿ : -

ನಿಮ್ಮ ಮನೆಯ ಕಾರ್ಪೆಟ್ ಗಳನ್ನು ಕ್ಲೀನ್ ಮಾಡಲು ಸ್ಟೀಮ್ ಕ್ಲೀನಿಂಗ್ ಮಷೀನ್ ಅನ್ನು ಬಾಡಿಗೆಗೆ ತಂದು ಅಥವಾ ಖರೀದಿ ಮಾಡಿ ಸ್ವಚ್ಛ ಮಾಡಬಹುದು. ಒಂದು ವೇಳೆ ನೀವು ಕಾರ್ಪೆಟ್ ಗಳನ್ನು ಬದಲಾಯಿಸುವ ಯೋಚನೆ ಮಾಡಿದ್ದರೆ, ಮೊದಲು ಕಾರ್ಪೆಟ್ ಗಳ ಕೆಳಗೆ ಇರುವ ನೆಲವನ್ನು ಚೆನ್ನಾಗಿ ತೊಳೆದು ಅದು ಆರಿದ ನಂತರ ಹೊಸ ಕಾರ್ಪೆಟ್ ಗಳನ್ನು ಹಾಕಬಹುದು.

4. ನಿಮ್ಮ ಬಟ್ಟೆಗಳನ್ನು, ದಿಂಬುಗಳನ್ನು, ಬ್ಲ್ಯಾಂಕೆಟ್ ಗಳನ್ನು ಸ್ವಚ್ಛಗೊಳಿಸಿ : -

ವಾಷಿಂಗ್ ಮಷೀನ್ ನಲ್ಲಿ ತೊಳೆಯಬಹುದಾದ ವಸ್ತುಗಳನ್ನು ಸ್ವಚ್ಛಗೊಳಿಸಲು 1 ಕಪ್ ( 240 ಎಂಎಲ್ ) ನಷ್ಟು ವೈಟ್ ವಿನೆಗರ್ ಉಪಯೋಗಿಸಿ. ಮಷೀನ್ ನಲ್ಲಿ ಬಟ್ಟೆಗಳು ತಿರುಗುವಾಗ ವಿನೆಗರ್ ವಾಸನೆಯನ್ನು ಹೀರಿಕೊಳ್ಳುತ್ತದೆ. ಮಿಕ್ಕ ಎಲ್ಲ ವಸ್ತುಗಳಿಗೆ ಡ್ರೈ ಕ್ಲೀನರ್ ಉಪಯೋಗಿಸಿ ಸ್ವಚ್ಛ ಮಾಡಬಹುದು. ಆದರೆ ಈ ವಸ್ತುಗಳನ್ನು ಒಂದೇ ಬಾರಿಗೆ ಸ್ವಚ್ಛಗೊಳಿಸಲಾಗುವುದಿಲ್ಲ.

 6. ಕಿಟಕಿಗಳು ಮತ್ತು ಗಾಜುಗಳನ್ನು ಮರೆಯಬೇಡಿ

6. ಕಿಟಕಿಗಳು ಮತ್ತು ಗಾಜುಗಳನ್ನು ಮರೆಯಬೇಡಿ

5. ಕರ್ಟನ್ ಗಳನ್ನು ಸ್ವಚ್ಛಗೊಳಿಸಿ : -

ನಿಮ್ಮ ಕಿಟಕಿಗಳ ಹಾಗೂ ಬಾಗಿಲುಗಳ ಬಳಿ ಹಾಕಿರುವ ಕರ್ಟನ್ ಬಟ್ಟೆಗಳನ್ನು ಸ್ವಚ್ಛ ಗೊಳಿಸುವುದನ್ನು ಮರೆಯಬೇಡಿ. ಮಷೀನ್ ನಲ್ಲಿ ತೊಳೆಯಬಹುದಾದಂತಹ ಕರ್ಟನ್ ಗಳಾದರೆ ಸುಲಭವಾಗಿ ತೊಳೆಯಬಹುದು. ಇಲ್ಲವೆಂದರೆ ಡ್ರೈ ಕ್ಲೀನಿಂಗ್ ಮುಖಾಂತರ ಸಹ ಸ್ವಚ್ಛ ಮಾಡಬಹುದು.ಇಲ್ಲಿ ವೈಟ್ ವಿನೆಗರ್ ಸಹ ಸ್ವಚ್ಛ ಮಾಡಲು ಉಪಯೋಗಿಸಬಹುದು.

6. ಕಿಟಕಿಗಳು ಮತ್ತು ಗಾಜುಗಳನ್ನು ಮರೆಯಬೇಡಿ : -

ಧೂಮಪಾನದ ವಾಸನೆ ಸಣ್ಣ ಸಣ್ಣ ರಂಧ್ರಗಳಲ್ಲಿ ಕೂಡ ಅವಿತಿರುತ್ತದೆ. ಅಂದರೆ ಕಿಟಕಿಗಳ ಮಧ್ಯೆ ಜೋಡಿಸಿರುವ ಗಾಜುಗಳ ಸಂದುಗಳಲ್ಲಿ ಸಹ ಸೇರಿಕೊಂಡಿರುತ್ತದೆ. ಇದು ನಿಮಗೆ ಕಣ್ಣಿಗೆ ಕಾಣದಿದ್ದರೂ ವಾಸನೆ ಮಾತ್ರ ಹೋಗಿರುವುದಿಲ್ಲ. ಬೇಸಿಗೆಯ ಕಾಲದಲ್ಲಿ ಕಿಟಕಿಗಳು ಬಿಸಿಯಾಗಲು ಪ್ರಾರಂಭ ಮಾಡಿದಾಗ ಈ ವಾಸನೆ ಹೊರಗೆ ಬಂದು ಮತ್ತೊಮ್ಮೆ ನಿಮ್ಮ ಇಡೀ ಕೋಣೆಯನ್ನು ಆವರಿಸುತ್ತದೆ. ಆದ್ದರಿಂದ ಇದರ ಪರಿಹಾರಕ್ಕೆ ನೀವು ಒಂದು ಸ್ಪ್ರೇ ಬಾಟಲಿ ತೆಗೆದುಕೊಂಡು, ಅದಕ್ಕೆ ಸ್ವಲ್ಪ ವೈಟ್ ವಿನೆಗರ್ ಹಾಕಿ ಒಂದು ಪೇಪರ್ ಟವಲ್ ನ ಸಹಾಯದಿಂದ ಕಿಟಕಿಗಳು ಮತ್ತು ಗಾಜುಗಳನ್ನು ಸ್ವಚ್ಛಗೊಳಿಸಿ.

ಮನೆಯ ಒಳಗಿನ ಗಾಳಿಯನ್ನು ಸ್ವಚ್ಛಗೊಳಿಸುವ ಬಗೆ :

ಮನೆಯ ಒಳಗಿನ ಗಾಳಿಯನ್ನು ಸ್ವಚ್ಛಗೊಳಿಸುವ ಬಗೆ :

1. ಏರ್ ಪ್ಯೂರಿಫೈರ್ ಗೆ ಇದೆ ಶುದ್ಧ ಗಾಳಿ ಒದಗಿಸುವ ಶಕ್ತಿ : -

ಮೊದಲಿಗೆ ಒಂದು ಏರ್ ಪ್ಯೂರಿಫೈಯರ್ ತನ್ನಿ. ಇದು ತನ್ನ ಕಾರ್ಯ ವೈಖರಿಯಿಂದ ವಾಸನೆಯನ್ನು ತಂದೊಡ್ಡುವ ಬ್ಯಾಕ್ಟೀರಿಯಗಳನ್ನು ಮತ್ತು ರಾಸಾಯನಿಕ ಅಣುಗಳನ್ನು ಗಾಳಿಯಿಂದಲೇ ಫಿಲ್ಟರ್ ಮಾಡುತ್ತದೆ. ಜೊತೆಗೆ ಅದೇ ಗಾಳಿಯನ್ನು ಸ್ವಚ್ಛ ಮಾಡಿ ಶುದ್ಧ ಗಾಳಿಯನ್ನು ಕೊಠಡಿಯ ತುಂಬಾ ಹಬ್ಬುವಂತೆ ಮಾಡುತ್ತದೆ. ಏರ್ ಪ್ಯೂರಿಫೈಯರ್ ಗಳು ಅಲರ್ಜಿ ಮತ್ತು ಅಸ್ತಮಾ ಗಳಿಂದ ಬಳಲುತ್ತಿರುವ ಜನರಿಗೆ ತೊಂದರೆ ಕೊಡುವ ಗಾಳಿಯಲ್ಲಿನ " ಅಲ್ಲರ್ಜನ್ " ವಸ್ತುಗಳನ್ನು ಸಹ ಹೀರಿಕೊಳ್ಳುತ್ತವೆ.

2. ಹೀಟರ್ ಮತ್ತು ಏರ್ ಕಂಡೀಷನರ್ ಗಳಲ್ಲಿರುವ ಏರ್ ಫಿಲ್ಟರ್ ಗಳನ್ನು ಆಗಾಗ ಬದಲಿಸಿ : -

ಏರ್ ಫಿಲ್ಟರ್ ಗಳು ಸಾಮಾನ್ಯವಾಗಿ ವಾಸನೆಗಳನ್ನು ಹೀರಿಕೊಳ್ಳುತ್ತವೆ. ನೀವು ಇಡೀ ಮನೆಯನ್ನು ಸ್ವಚ್ಛ ಮಾಡಿದ ನಂತರವೂ ವಾಸನೆ ಹಾಗೇ ಇದ್ದರೆ ಅದು ಸಹಜವಾಗಿಯೇ ಏರ್ ಫಿಲ್ಟರ್ ಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತವೆ. ಆದ್ದರಿಂದ ಧೂಮಪಾನ ವಾಸನೆಯನ್ನು ಹೊಂದಿರುವ ಫಿಲ್ಟರ್ ಗಳನ್ನು ಆಗಾಗ ಬದಲಾಯಿಸುವುದನ್ನು ಮರೆಯಬೇಡಿ.

3. ಓಜೋನ್ ಜನರೇಟರ್ ಒಮ್ಮೆ ಪ್ರಯತ್ನಿಸಿ : -

ಓಝೋನ್ ಜನರೇಟರುಗಳು O3 ಅಂಶವನ್ನು ಉತ್ಪತ್ತಿ ಮಾಡಿ ಸಾವಯುವ ಅಣುಗಳನ್ನು ಒಕ್ಸಿಡೈಜ್ ಮಾಡುತ್ತವೆ (ವಾಸನೆಗಳನ್ನು ಉಂಟು ಮಾಡುವ ಮೂಲ ಕಾರಣಗಳು) ಹಲವಾರು ಜನರು ಈ ವಿಧಾನವನ್ನು ವಾಸನೆಯನ್ನು ಹೊಡೆದೋಡಿಸುವ ಅದ್ಭುತ ವಿಧಾನ ಎಂದು ಒಪ್ಪಿಕೊಂಡಿದ್ದಾರೆ. ಓಝೋನ್ ಜನರೇಟರ್ ಅನ್ನು ನಿಮ್ಮ ಕೊಠಡಿಯ ಒಳ ಭಾಗದಲ್ಲಿ ಇರಿಸಿ ಟೈಮರ್ ಸೆಟ್ ಮಾಡಿ. ಇದಕ್ಕೂ ಮುಂಚೆ ಕೊಠಡಿಯ ಎಲ್ಲಾ ಕಿಟಕಿಗಳನ್ನು ಮುಚ್ಚಿ. ಕೊಠಡಿಯ ಒಳ ಭಾಗದಲ್ಲಿರುವ ಎಲ್ಲಾ ವಸ್ತುಗಳನ್ನು ಹೊರಗಿಟ್ಟು ಬಾಗಿಲು ಭದ್ರಗೊಳಿಸಿ. ಇದರಿಂದ ಓಝೋನ್ ಗಾಳಿಯು ಇಡೀ ಕೊಠಡಿಯ ತುಂಬಾ ಹಬ್ಬಿಕೊಳ್ಳಲು ಸಹಾಯವಾಗುತ್ತದೆ. ಓಝೋನ್ ಜನರೇಟರ್ ನಿಂತು ಹೋದ ನಂತರ ಕನಿಷ್ಟ ಒಂದು ಗಂಟೆಯಾದರೂ ಕಾಯ್ದು ನಂತರ ಕೊಠಡಿಯ ಒಳಗೆ ಪ್ರವೇಶ ಮಾಡಿ.

English summary

How To Get Rid Of Smoke Smell In A Room

How to get rid of smoke smell in a room, Here are useful tips. Have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X