For Quick Alerts
ALLOW NOTIFICATIONS  
For Daily Alerts

ಒಬ್ಬರಿಗೆ ಕೋವಿಡ್ 19 ಬಂದರೆ ಉಳಿದವರಿಗೆ ಹರಡದಿರಲು ಮನೆಯನ್ನು ಹೇಗೆ ಸ್ಯಾನಿಟೈಸ್ ಮಾಡಬೇಕು?

|

ಕೊರೊನಾ 2ನೇ ಅಲೆ ಇಡೀ ದೇಶದ ಚಿತ್ರಣವನ್ನು ಬದಲಾಯಿಸಿದೆ. ಸೋಖು ಹರಡುತ್ತಿರುವ ವೇಗ ನೋಡುತ್ತಿದ್ದರೆ ಸೋಂಕಿತರು ಇಲ್ಲದ ಮನೆಗಳು ತುಂಬಾ ಕಡಿಮೆ ಎಂದು ಹೇಳಬಹುದು. ನಗರ ಪ್ರದೇಶಗಳಲ್ಲಿ ಈ ಸೋಂಕು ತುಂಬಾ ವೇಗವಾಗಿ ಹರಡುತ್ತಿದೆ. ಮನೆಯಲ್ಲಿ ಒಂದು ಅಥವಾ ಇಬ್ಬರು ಸೋಂಕಿತರಾದರೆ ಇನ್ನು ಕೆಲವು ಮನೆಗಳಲ್ಲಿಇಡೀ ಮನೆಯ ಸದಸ್ಯರಿಗೆ ಸೊಂಕು ಹರಡಿರುವ ಎಷ್ಟೋ ಪ್ರಕರಣಗಳಿವೆ.

ಮನೆಯಲ್ಲಿ ಒಬ್ಬರಲ್ಲಿ ಲಕ್ಷಣಗಳು ಕಂಡು ಬಂದಾಗ ಪ್ರಾರಂಭದಲ್ಲಿಯೇ ಮುನ್ನೆಚ್ಚರಿಕೆವಹಿಸಿದರೆ ಒಂದೆರಡು ದಿನದಲ್ಲಿ ಮನೆಯವರಿಗೆಲ್ಲಾ ಹರಡುವುದು. ಏಕೆಂದರೆ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಸೋಂಕಾಣುಗಳು ಮನೆಯೊಳಗೆ ಇರುವುದು. ಅವರು ಮುಟ್ಟಿದ ವಸ್ತುಗಳನ್ನು ಅಥವಾ ಸೋಂಕಾಣುಗಳು ಬಿದ್ದ ಸ್ಥಳ ಅಥವಾ ವಸ್ತುವನ್ನು ಮತ್ತೊಬ್ಬರು ಮುಟ್ಟಿದಾಗ ಸೋಂಕು ಹರಡುವುದು. ಆದ್ದರಿಂದ ಮನೆಯಲ್ಲಿ ಒಬ್ಬರಿಗೆ ಸೋಂಕಿನ ಚಿಕ್ಕ ಲಕ್ಷಣಗಳು ಕಂಡು ಬಂದರೂ ಇಡೀ ಮನೆಯನ್ನು ಸ್ಯಾನಿಟೈಸ್‌ ಮಾಡಬೇಕು. ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ಸ್ಯಾನಿಟೈಸ್ ಹೇಗೆ ಮಾಡಬೇಕೆಂದು ಹೇಳಲಾಗಿದೆ ನೋಡಿ:

ಸೋಂಕಿತರನ್ನು ಐಸೋಲೇಟ್ ಮಾಡಿ

ಸೋಂಕಿತರನ್ನು ಐಸೋಲೇಟ್ ಮಾಡಿ

ಕೊರೊನಾ ಟೆಸ್ಟ್‌ಗೆ ಕೊಟ್ಟು ಫಲಿತಾಂಶ ಇನ್ನೂ ಬಂದಿಲ್ಲ ಅಂತ ತಡಮಾಡಬೇಡಿ, ರೋಗ ಲಕ್ಷಣ ಇರುವವರನ್ನು ಅಟ್ಯಾಚ್ಡ್ ಬಾತ್‌ರೂಂ ಇರುವ ಕೋಣೆಯಲ್ಲಿ ಐಸೋಲೇಟ್‌ ಮಾಡಬೇಕು. ಎಲ್ಲರಲ್ಲೂ ಈ ವ್ಯವಸ್ಥೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂಥ ವ್ಯವಸ್ಥೆ ಇಲ್ಲದವರು ಸೋಂಕು ಹರಡದಿರಲು ಹೆಚ್ಚಿನ ಮುಂಜಾಗ್ರತೆವಹಿಸಬೇಕಾಗುತ್ತದೆ, ಸೋಂಕಿತರನ್ನು ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ವ್ಯವಸ್ಥೆ ಮಾಡಿ ಬಾತ್‌ ರೂಂ ಹಾಗೂ ಟಾಯ್ಲೆಟ್‌ ಅನ್ನು ಪ್ರತಿ ಬಾರಿಯೂ ಸ್ವಚ್ಛ ಮಾಡಿ ಬಳಸಬೇಕಾಗುತ್ತದೆ.

ಸೋಂಕಿತರು ಸಾಮಾನ್ಯವಾಗಿ ಮುಟ್ಟುತ್ತಿದ್ದ ಸ್ಥಳಗಳು ಹಾಗೂ ವಸ್ತುಗಳನ್ನು ಸ್ಯಾನಿಟೈಸ್ ಮಾಡಿ

ಸೋಂಕಿತರು ಸಾಮಾನ್ಯವಾಗಿ ಮುಟ್ಟುತ್ತಿದ್ದ ಸ್ಥಳಗಳು ಹಾಗೂ ವಸ್ತುಗಳನ್ನು ಸ್ಯಾನಿಟೈಸ್ ಮಾಡಿ

ಸಾಮಾನ್ಯವಾಗಿ ಮುಟ್ಟುವ ಸ್ಥಳಗಳು ಚೇರ್‌, ಡೋರ್, ಅಡುಗೆ ಮನೆ, ಫ್ರಿಡ್ಜ್‌ ಹೀಗೆ ಅವರು ಮುಟ್ಟಿದ ಪ್ರತಿಯೊಂದು ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು. ಅವರು ಮುಟ್ಟಿದ ಫೋನ್‌ ಸೇರಿ ಎಲ್ಲವನ್ನೂ ಸ್ಯಾನಿಟೈಸ್ ಮಾಡಬೇಕು.

ನೆಲವನ್ನು ಸ್ಪಾಂಜ್ ಬಳಸಿ ಸ್ವಚ್ಛಗೊಳಿಸುವ ಬದಲು ಒಮ್ಮೆ ಬಳಸಿ ಬಿಸಾಡುವ ಪೇಪರ್‌ ಟವಲ್ ಬಳಸುವುದು ಸೂಕ್ತ, ಸ್ಪಾಂಜ್ ಅಥವಾ ಬಟ್ಟೆ ಬಳಸಿದರೆ ಸೋಂಕಾಣು ಮತ್ತೊಂದು ಸ್ಥಳಕ್ಕೆ ಹರಡುವ ಸಾಧ್ಯತೆ ಹೆಚ್ಚು.

ಬೆಡ್‌ ರೂಂ

ಬೆಡ್‌ ರೂಂ

ಸೋಂಕಿತರು ತುಂಬಾ ಸುಸ್ತಾಗಿರುವ ಕಾರಣ ಹೆಚ್ಚು ಹೊತ್ತು ಬೆಡ್‌ನಲ್ಲಿಯೇ ಕಳೆಯುತ್ತಾರೆ. ಆಗ ಸೋಂಕಾಣು ಹಾಸಿಗೆ, ಹೊದಿಕೆಯಲ್ಲಿ ಕಂಡು ಬರವ ಸಾಧ್ಯತೆ ಇದೆ, ಅವುಗಳನ್ನು ಕೂಡ ಸ್ಯಾನಿಟೈಸ್ ಮಾಡಬೇಕು. ಅವರ ಬಟ್ಟೆ ಹಾಗೂ ಹೊದಿಕೆ ತೆಗೆದುಕೊಳ್ಳುವಾಗ ಕೈಗಳಿಗೆ ಗ್ಲೌಸ್ ಧರಿಸಿರಿ.

ಮನೆಯ ಹಾಲ್ ಸ್ಯಾನಿಟೈಸ್ ಮಾಡಿ

ಮನೆಯ ಹಾಲ್ ಸ್ಯಾನಿಟೈಸ್ ಮಾಡಿ

ಮನೆಮಂದಿಯೆಲ್ಲಾ ಒಟ್ಟಾಗಿ ಕಳೆಯುವ ಸ್ಥಳ ಅದು ಹಾಲ್ ಆಗಿರುತ್ತದೆ. ಆದ್ದರಿಂದ ಹಾಲ್‌ನಲ್ಲಿರುವ ಪ್ರತಿಯೊಂದು ವಸ್ತುವನ್ನು ಸ್ಯಾನಿಟೈಸ್ ಮಾಡಬೇಕು.

ಬಾತ್‌ ರೂಂ ಮತ್ತು ಟಾಯ್ಲೆಟ್

ಬಾತ್‌ ರೂಂ ಮತ್ತು ಟಾಯ್ಲೆಟ್

ಈ ಸ್ಥಳದಲ್ಲಿ ಸ್ವಾಭಾವಿಕವಾಗಿ ಸೋಂಕಾಣು ಮತ್ತು ಬ್ಯಾಕ್ಟಿರಿಯಾ ಅಧಿಕವಿರುತ್ತದೆ. ಇನ್ನು ಆ ಬಾತ್‌ರೂಂ ಹಾಗೂ ಟಾಯ್ಲೆಟ್ ಬಳಸಿದ್ದರೆ ಅದನ್ನು ಸೋಂಕು ನಿವಾರಕ ಲಿಕ್ವಿಡ್ ಬಳಸಿ ಚೆನ್ನಾಗಿ ತೊಳೆಯಿರಿ. ನಂತರ ಸೋಪ್‌ ನೀರು ಹಚ್ಚಿ ತೊಳೆಯಿರಿ. ಸಿಂಕ, ನೆಲ, ಗೋಡೆಯ ಟೈಲ್ಸ್ ಎಲ್ಲವನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಿರಬೇಕು.

ಅಡುಗೆ ಮನೆ

ಅಡುಗೆ ಮನೆ

ಅಡುಗೆ ಮನೆಯಲ್ಲಿ ಅವರು ಬಲಸಿದ ತಟ್ಟೆ, ಲೋಟ, ಮುಟ್ಟಿದ ಸ್ಥಳ ಹೀಗೆ ಪ್ರತಿಯೊಂದು ವಸ್ತುವನ್ನು ಸ್ವಚ್ಛ ಮಾಡಬೇಕು. ಸೋಂಕಿತರಿಗೆ ನೀಡಲು ಪ್ರತ್ಯೇಕ ತಟ್ಟೆ, ಲೋಟ ಇಡಿ. ಅವರಿಗೆ ತೊಳೆಯಲು ಸಾಧ್ಯವಾಗದಿದ್ದರೆ ನೀವು ಗ್ಲೌಸ್ ಧರಿಸಿ ತೊಳೆಯಬೇಕು. ಬಿಸಿ ನೀರು ಬಳಸಿ ತೊಳೆಯಿರಿ.

ಬಟ್ಟೆ

ಸೋಂಕಿತರ ಬಟ್ಟೆಯನ್ನು ಪ್ರತ್ಯೇಕವಾಗಿ ತೊಳೆಯಿರಿ. ಅವುಗಳನ್ನು ಮೆಷಿನ್‌ಗೆ ಹಾಕಿದ ಬಳಿಕ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಕೈಯಲ್ಲಿ ತೊಳೆಯುವುದಾದರೆ ಬಿಸಿ ನೀರಿನಲ್ಲಿ ಹಾಕಿಟ್ಟು ನಂತರ ತೊಳೆಯಿರಿ.

English summary

How To Disinfect Your House After Someone In The family Has Flu

How to Disinfect Your House After Someone in the family has flu, read on,
Story first published: Saturday, May 8, 2021, 10:29 [IST]
X
Desktop Bottom Promotion