For Quick Alerts
ALLOW NOTIFICATIONS  
For Daily Alerts

ಬೆಲ್ಲ ಖರೀದಿಸುವಾಗ ಈ ವಿಧಾನಗಳ ಮೂಲಕ ಶುದ್ಧತೆ ಪರೀಕ್ಷೆ ಮಾಡಿಕೊಳ್ಳಿ..

|

ಇಂದಿನ ಕಲಬೆರಕೆ ಜಗತ್ತಿನಲ್ಲಿ ಶುದ್ಧವಾದ ಉತ್ಪನ್ನಗಳು ಸಿಗುವುದು ತುಂಬಾ ಅಪರೂಪ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅರೋಗ್ಯವನ್ನು ಲೆಕ್ಕಿಸದೇ ಆಹಾರ ಪದಾರ್ಥಗಳಿಗೆ ಕಲಬೆರಕೆ ಮಾಡುತ್ತಾರೆ. ಇದನ್ನರಿಯದ ನಾವು ಅದನ್ನೇ ಸೇವಿಸಿ, ಆರೋಗ್ಯಕ್ಕೆ ಕುತ್ತು ಮಾಡಿಕೊಳ್ಳುತ್ತೇವೆ.

ಇಂತಹ ಕಲಬೆರಕೆಗಳಿಂದ ಬೆಲ್ಲವೂ ಹೊರತಾಗಿಲ್ಲ. ಕಡಿಮೆ ಗುಣಮಟ್ಟದ ಬೆಲ್ಲಕ್ಕೆ ರಾಸಾಯನಿಕ ಸೇರಿಸಿ, ಹೆಚ್ಚು ಬೆಲೆಗೆ ಮಾರಾಟ ಮಾಡಿ, ಜನರಿಗೆ ಮೋಸ ಮಾಡುತ್ತಿದ್ದಾರೆ. ಆದರೆ ನಾವು ಮೊದಲೇ ಎಚ್ಚತ್ತುಕೊಂಡು, ಕಲಬೆರಕೆ ಆಹಾರ ಪದಾರ್ಥ ಬಳಕೆಯಿಂದ ಜಾಗರೂಕಾಗಿರಬೇಕು. ಹಾಗಾದ್ರೆ ಬನ್ನಿ ಬೆಲ್ಲದ ಕಲಬೆರಕೆಯನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಬೆಲ್ಲದ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ :

ಶುದ್ಧ ಬೆಲ್ಲವನ್ನ ಹೇಗೆ ತಯಾರಿಸಲಾಗುತ್ತದೆ?:

ಶುದ್ಧ ಬೆಲ್ಲವನ್ನ ಹೇಗೆ ತಯಾರಿಸಲಾಗುತ್ತದೆ?:

ಬೆಲ್ಲವನ್ನು ಕಬ್ಬಿನ ರಸದ ಪಾಕದಿಂದ ತಯಾರಿಸಲಾಗುತ್ತದೆ. ಕಬ್ಬಿನ ರಸವನ್ನು ಕೆಲವು ಗಂಟೆಗಳ ಕಾಲ ಕುದಿಸಿ, ಅದನ್ನು ಬೆಲ್ಲದ ಅಚ್ಚುಗಳಿಗೆ ಸೇರಿಸಿ, ತಣ್ಣಗಾಗಲೂ ಬಿಡುತ್ತಾರೆ. ಇದು ಗಟ್ಟಿಯಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಬೆಲ್ಲವು ಉತ್ತಮ ಪೌಷ್ಠಿಕಾಂಶವನ್ನು ಹೊಂದಿರುವುದರಿಂದ ಇದು ಬಿಳಿ ಸಕ್ಕರೆಗೆ ಆರೋಗ್ಯಕರ ಪರ್ಯಾಯವಾಗಿದೆ . ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ, ಬೆಲ್ಲ ಮತ್ತು ಸಕ್ಕರೆ ಎರಡರ ಕ್ಯಾಲೋರಿ ಅಂಶ ಒಂದೇ ಆಗಿರುತ್ತದೆ. ಬೆಲ್ಲವನ್ನು ಕಬ್ಬಿನ ರಸ ಕುದಿಸಿ ತಯಾರಿಸಿದರೆ, ಬಿಳಿ ಸಕ್ಕರೆಯು ಹಲವಾರು ಪ್ರಕ್ರಿಯೆಗಳ ಮೂಲಕ ಹಾದುಹೋಗುತ್ತದೆ.

ಬೆಲ್ಲದ ಆರೋಗ್ಯ ಪ್ರಯೋಜನಗಳೇನು?:

ಬೆಲ್ಲದ ಆರೋಗ್ಯ ಪ್ರಯೋಜನಗಳೇನು?:

ಬೆಲ್ಲವು ಕಬ್ಬಿಣ ಮತ್ತು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದ್ದು, ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಜೊತೆಗೆ ಉತ್ತಮ ಜೀರ್ಣಕ್ರಿಯೆಗೂ ಸಹಕಾರಿ. ಅತ್ಯಂತ ತಣ್ಣನೆಯ ದಿನಗಳಲ್ಲಿ ಅಂದರೆ ಚಳಿಗಾಲ ಅಥವಾ ಮಳೆಗಾಲದಲ್ಲಿ ಬೆಲ್ಲವು ನಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಆದರೆ ಈ ಲಾಭಗಳು ಯಾವ ಬೆಲ್ಲವನ್ನು ಸೇವಿಸುತ್ತೇವೆ ಎನ್ನುವುದರ ಮೇಲೆ ನಿಂತಿದೆ. ಏಕೆಂದರೆ ಕಲಬೆರಕೆ ಆಗಿರುವ ಬೆಳ್ಳದಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು. ಹಾಗಾಗಿ ಶುದ್ಧತೆ ಪರೀಕ್ಷಿಸುವುದು ತುಂಬಾ ಮುಖ್ಯ.

ಬೆಲ್ಲವನ್ನು ಸೇವಿಸಲು ಉತ್ತಮ ಸಮಯ ಯಾವುದು?

ಬೆಲ್ಲವನ್ನು ಸೇವಿಸಲು ಉತ್ತಮ ಸಮಯ ಯಾವುದು?

ಬೆಲ್ಲವು ದೇಹದಲ್ಲಿ ಬಹಳಷ್ಟು ಶಾಖವನ್ನು ಉತ್ಪಾದಿಸುತ್ತದೆ, ಆದ್ದರಿಂದ ಆರೋಗ್ಯ ತಜ್ಞರು ಚಳಿಗಾಲದಲ್ಲಿ ಮಾತ್ರ ಬೆಲ್ಲವನ್ನು ಸೇವಿಸಲು ಸಲಹೆ ನೀಡುತ್ತಾರೆ. ಬೇಸಿಗೆಯಲ್ಲಿ ಬೆಲ್ಲ ಸೇವನೆಯಿಂದ ಹೊಟ್ಟೆಯ ಸಮಸ್ಯೆಗಳು ಉದ್ಭವಿಸಬಹುದು. ಆದ್ದರಿಂದ, ಬೆಚ್ಚನೆಯ ವಾತಾವರಣದಲ್ಲಿ ಬೆಲ್ಲವನ್ನು ಕನಿಷ್ಠ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಬೆಲ್ಲದ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ?

ಬೆಲ್ಲದ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ?

ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಬೆಲ್ಲವು ಸರಿಯಾದ ಬಣ್ಣ, ಉತ್ತಮ ರುಚಿ ಮತ್ತು ಗಡಸುತನವನ್ನು ಹೊಂದಿರಬೇಕು. ನೀವು ಬೆಲ್ಲವನ್ನು ಖರೀದಿಸಲು ಹೋದಾಗಲೆಲ್ಲಾ ಶುದ್ಧತೆಯನ್ನು ಪರೀಕ್ಷಿಸುವುದು ಬಹಳ ಮುಖ್ಯ. ಆಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಪರೀಕ್ಷಿಸಿ:

1. ಬೆಲ್ಲದ ತುಂಡಿನ ರುಚಿ ನೋಡಿ. ಇದು ಸ್ವಲ್ಪ ಉಪ್ಪುಪ್ಪಾಗಿದ್ದರೆ ಖನಿಜ ಲವಣಗಳನ್ನು ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಸೂಚಿಸುತ್ತದೆ. ಜೊತೆಗೆ ಬೆಲ್ಲವು ತಂದು ಕೆಲವು ದಿನಗಳಾದ ಹೋದಂತೆ ಉಪ್ಪಾಗುತ್ತಾ ಹೋಗುತ್ತದೆ.

2. ಇನ್ನೂ ನೀವು ಬೆಲ್ಲದಲ್ಲಿ ಯಾವುದೇ ರೀತಿಯ ಕಹಿ ರುಚಿ ಗಮನಿಸಿದರೆ, ಬೆಲ್ಲ ಕುದಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕ ಬಳಕೆ ಆಗಿದೆ ಎಂದು ಅರ್ಥ ಮಾಡಿಕೊಳ್ಳಿ.

3. ಬೆಲ್ಲದಲ್ಲಿ ಹರಳುಗಳ ರೀತಿ ಕಂಡರೆ, ಅದಕ್ಕೆ ಸಿಹಿ ನೀಡಲು ಸಿಹಿಕಾರಕ ವಸ್ತುವನ್ನು ಬೆರಕೆ ಮಾಡಲಾಗಿದೆ ಎಂದರ್ಥ.

4. ಬೆಲ್ಲದ ಬಣ್ಣ ಗಾಢ ಕಂದು ಬಣ್ಣವು ಶುದ್ಧತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ವೇಳೆ ಬೆಲ್ಲ ಹಳದಿ ಬಣ್ಣದಲ್ಲಿದ್ದರೆ, ಅದಕ್ಕೆ ಬಣ್ಣ ಬರುವ ರಾಸಾಯನಿಕ ಬಳಕೆ ಮಾಡಲಾಗಿದೆ ಎಂಬುದರ ಸೂಚನೆಯಾಗಿದೆ.

5. ಯಾವಾಗಲೂ ಗಟ್ಟಿಯಾದ ಬೆಲ್ಲವನ್ನು ಖರೀದಿಸಿ. ಏಕೆಂದರೆ ಇಂತಹ ಬೆಲ್ಲದ ತಯಾರಿಕ ಪ್ರಕ್ರಿಯೆಯಲ್ಲಿ ಇದರರ್ಥ ಕಬ್ಬಿನ ರಸವನ್ನು ಕುದಿಸುವ ಯಾವುದೇ ರಾಸಾಯನಿಕ ಸೇರ್ಪಡೆ ಮಾಡುವುದಿಲ್ಲ.

English summary

How to Check Jaggery Purity and Quality in Kannada

Here we talking about How to Check Jaggery Purity and Quality in Kannada, read on
Story first published: Saturday, August 28, 2021, 16:57 [IST]
X
Desktop Bottom Promotion