For Quick Alerts
ALLOW NOTIFICATIONS  
For Daily Alerts

ನೋಡಿ ಈ ಮದ್ದುಗಳನ್ನು ಪ್ರಯತ್ನಿಸಿ- ಮನೆಯಿಂದ ಇಲಿ-ಜೇಡಗಳು ಮಂಗಮಾಯ!

|
ಮನೆಯಿಂದ ಇಲಿ, ಜಿರಳೆ, ಜೇಡ ಹಾಗು ಸೊಳ್ಳೆಗಳನ್ನ ಹೋಗಲಾಡಿಸಲು ಸರ ಮನೆಮದ್ದುಗಳು | Oneindia Kannada

ನಗರ ಮತ್ತು ಪಟ್ಟಣಗಳಲ್ಲಿ ಮನೆಗಳಲ್ಲಿ ವಾಸಿಸುವ ಜನರಿಗಿಂತ ಇಲಿ, ಜಿರಳೆ, ಸೊಳ್ಳೆ ಮತ್ತು ಜೇಡನ ಉಪಟಳವೇ ಹೆಚ್ಚು. ಒಂದಕ್ಕೊಂದು ಅಂಟಿಕೊಂಡಿರುವಂತಹ ಮನೆಗಳು, ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು, ತ್ಯಾಜ್ಯ ತಿಪ್ಪೆಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು, ಸ್ವಚ್ಛತೆಯ ಕೊರತೆ ಹೀಗೆ ಮೊದಲಾದ ಕಾರಣಗಳಿಂದ ಇಲಿ, ಹೆಗ್ಗಣ, ಜಿರಳೆ ಮನೆಯ ಒಳಗೆ ಮನೆ ಮಾಡಿಕೊಂಡು ಮನೆಯವರಿಗೆ ಕಾಟ ನೀಡುತ್ತಿರುತ್ತವೆ. ಇವುಗಳನ್ನು ಹೊಡೆದೋಡಿಸಲು ಒಮ್ಮೊಮ್ಮೆ ಹರಸಾಹಸ ಪಡಬೇಕಾಗುತ್ತದೆ. ಆದರೂ ಇವುಗಳು ಆಗಾಗ್ಗೆ ಮನೆಗೆ ಬಂದು ಕಾಟ ಕೊಡುತ್ತಲೇ ಇರುತ್ತವೆ. ಇವುಗಳಿಗೆ ಪ್ರತೀ ದಿನ ಆಹಾರ ದೊರಕುತ್ತಿದ್ದಲ್ಲಿ ಇವುಗಳನ್ನು ಮನೆಯಿಂದ ಓಡಿಸುವುದು ಕೊಂಚ ಪ್ರಯಾಸದ ಕೆಲಸವೇ ಸರಿ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಇವುಗಳನ್ನು ಮನೆಗೆ ಬರದಂತೆ ತಡೆಯಲು ನೀವು ಕೈಗೊಳ್ಳಬೇಕಾದ ಕೆಲವೊಂದು ಸುಲಭ ವಿಧಾನಗಳನ್ನು ತಿಳಿಸುತ್ತಿದ್ದೇವೆ.

ಅದಾಗ್ಯೂ ನೀವು ಸೇವಿಸುವ ಆಹಾರ ಇವುಗಳ ಪಾಲಾಗುತ್ತಿದೆ ಎಂದರೆ ಅವುಗಳು ವಿಷಕಾರಿಯಾಗಿರುತ್ತವೆ ಮತ್ತು ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮವನ್ನು ಬೀರುವುದರ ಜೊತೆಗೆ ನಮ್ಮ ಪ್ರಾಣಕ್ಕೂ ಕಂಟಕವಾಗಬಹುದು. ಹಾಗಿದ್ದರೆ ಇವುಗಳನ್ನು ನಿವಾರಿಸುವ ಆ ಸಲಹೆಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

how to get rid of mice fast

ಸೊಳ್ಳೆ ಮತ್ತು ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಹೇಗೆ?

ಈ ಪ್ರಾಣಿಗಳು ಮಂದ ದೃಷ್ಟಿಯನ್ನು ಹೊಂದಿದ್ದರೂ ವಾಸನೆಯ ವಿಷಯದಲ್ಲಿ ಎತ್ತಿದ ಕೈಯಾಗಿದೆ. ಇವುಗಳಿಗೆ ಮೂಸಲು ಆಗದೇ ಇರುವ ಪದಾರ್ಥಗಳನ್ನು ಇವುಗಳು ಪ್ರವೇಶಿಸುವ ಸ್ಥಳದಲ್ಲಿ ಇರಿಸುವುದರಿಂದ ಇವುಗಳು ಮನೆಗೆ ಬರದಂತೆ ತಡೆಗಟ್ಟಬಹುದಾಗಿದೆ.

ಟೀ ಬ್ಯಾಗ್‌ಗಳು

ಟೀ ಬ್ಯಾಗ್‌ಗಳು

ಟೀ ಬ್ಯಾಗ್‌ಗಳನ್ನು ಕುದಿಸಿಕೊಳ್ಳಿ ಹೆಚ್ಚು ಪರಿಮಳವನ್ನು ಹೊಂದಿರುವ ಟೀ ಬ್ಯಾಗ್‌ಗಳಾದ ಅಸ್ಸಾಮ್ ಟೀ, ನೀಲ್‌ಗಿರಿ ಮತ್ತು ಕಾಳುಮೆಣಸಿನ ಟೀ ಬ್ಯಾಗ್‌ಗಳನ್ನು ಆಯ್ದುಕೊಳ್ಳಿ ಇದರ ವಾಸನೆ ಇಲಿ ಮತ್ತು ಸೊಳ್ಳೆಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಒಮ್ಮೆ ಟೀ ಚೆನ್ನಾಗಿ ಕುದಿದ ನಂತರ ನೀರನ್ನು ಬಗ್ಗಿಸಿ. ಟೀ ಬ್ಯಾಗ್ ಅನ್ನು ಪಾತ್ರೆಯಿಂದ ತೆಗೆದು ಅದನ್ನು ಮನೆಯ ಸುತ್ತಲೂ ಇರಿಸಿ. 6-7 ಗಂಟೆಗಳ ಕಾಲ ಟೀ ಬ್ಯಾಗ್ ಮನೆಯಲ್ಲಿರಲಿ. ಇಲಿಗಳು ಬರುವ ಜಾಗದಲ್ಲಿ ಹೆಚ್ಚುವರಿ ಟೀ ಬ್ಯಾಗ್‌ಗಳನ್ನು ಇರಿಸಿ. 2-3 ದಿನಗಳ ಕಾಲ ನಿರಂತರವಾಗಿ ಈ ಕ್ರಿಯೆಯನ್ನು ಅನುಸರಿಸಿ. ನೋಡಿ ಇಲಿ ಮತ್ತು ಸೊಳ್ಳೆಗಳಿಂದ ನಿಮ್ಮ ಮನೆ ಮುಕ್ತವಾಗಿರುತ್ತದೆ.

ಬೇ ಎಲೆಗಳು

ಬೇ ಎಲೆಗಳು

ಬಾಯಿಗೆ ಸುವಾಸನೆಯನ್ನುಂಟು ಮಾಡುವ ಈ ಎಲೆಗಳು ನಿಮಗೆ ಇಲಿಗಳಿಂದ ಸೊಳ್ಳೆಗಳಿಂದ ಮುಕ್ತಿಯನ್ನು ನೀಡಲಿವೆ. ಇದನ್ನು ಸಣ್ಣ ಚೂರುಗಳನ್ನಾಗಿ ಮಾಡಿಕೊಂಡು ಈ ಜೀವಿಗಳು ಬರುವ ಜಾಗದಲ್ಲಿ ಹಾಕಿ. ಇದರ ವಾಸನೆಯು ಈ ಪ್ರಾಣಿಗಳನ್ನು ಹದ್ದುಬಸ್ತಿನಲ್ಲಿಡುತ್ತದೆ. ಅಷ್ಟೇ ಅಲ್ಲ ಬೇ ಎಲೆಗಳು ಅತ್ಯಂತ ಪ್ರಬಲವಾದ ಪರಿಮಳವನ್ನು ಹೊಂದಿರುತ್ತವೆ. ಇವುಗಳ ಪರಿಮಳಕ್ಕೆ ಜಿರಳೆಗಳು ಹತ್ತಿರ ಬರಲಾರವು. ಜಿರಳೆಗಳು ಅತ್ಯಂತ ಪರಿಮಳವನ್ನು ಸಹಿಸಲಾರವು. ಜಿರಳೆಗಳು ಬರುವಂತಹ ಪ್ರದೇಶದಲ್ಲಿ ಈ ಎಲೆಯನ್ನು ಇಟ್ಟರೆ ಅವು ಪ್ರವೇಶ ಪಡೆಯಲಾರವು. ಈ ಎಲೆಯನ್ನು ಒಣಗಿಸಿ, ಪುಡಿಮಾಡಿ. ನಂತರ ಪುಡಿಯನ್ನು ಬೇಕೆಂದ ಜಾಗದಲ್ಲಿ ಹರಡುವುದರಿಂದ ಜಿರಳೆಯನ್ನು ತಡೆಯಬಹುದು.

ಪೀನಟ್ ಬಟರ್

ಪೀನಟ್ ಬಟರ್

ಪೀ ನಟ್ ಬಟರ್ ನಿಮಗೆಷ್ಟು ಇಷ್ಟವೋ ನಿಮ್ಮ ಮನೆಯಲ್ಲಿರುವ ಇಲಿ ಜೇಡ ಕೂಡ ಅದನ್ನು ಇಷ್ಟಪಡುತ್ತವೆ. ಆದರೆ ಇದರ ವಾಸನೆಯು ಇಲಿಗೆ ಆಗುವುದಿಲ್ಲ ಮತ್ತು ಜೇಡನನ್ನು ಇದು ಬಂಧಿಸುತ್ತದೆ. ಇದು ಅಂಟಿನ ಗುಣವನ್ನು ಹೊಂದಿದ್ದು ಇಲಿಯು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಜೇಡ ಕೂಡ ಇದರ ಮೇಲೆ ಹಾದುಹೋದರೆ ಅದು ಕೂಡ ಅಂಟಿಕೊಳ್ಳುತ್ತದೆ.

ಪುದೀನಾ ಟೂತ್‌ಪೇಸ್ಟ್

ಪುದೀನಾ ಟೂತ್‌ಪೇಸ್ಟ್

ನಿಮ್ಮ ಮನೆಗೆ ಇಲಿಗೆ ಎಲ್ಲಿಂದ ಪ್ರವೇಶಿಸುತ್ತವೆ ಎಂಬುದನ್ನು ಕಂಡುಕೊಳ್ಳಿ. ಕುಳಿಯ ಜಾಗದಲ್ಲಿ ಉತ್ತಮ ಗುಣಮಟ್ಟದ ಪುದೀನಾ ಟೂತ್‌ಪೇಸ್ಟ್ ಅನ್ನು ಹಾಕಿ. ನಿಮ್ಮ ಕಪ್‌ಬೋರ್ಡ್‌ಗಳ ಅಡಿಗೂ ಪೇಸ್ಟ್ ಹಚ್ಚಿ. ಮನೆಯ ಬಾಗಿಲು ಮತ್ತು ಕಿಟಕಿಗಳಿಗೂ ಪೇಸ್ಟ್ ಹಚ್ಚಿ. ನೀವು ಕಡಿಮೆ ಪ್ರಮಾಣದಲ್ಲಿ ಇದನ್ನು ಹಚ್ಚಿದರೆ ಸಾಕು. ಇನ್ನೊಂದು ವಿಧಾವವಿದೆ ಪುದೀನಾ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಮತ್ತು ಅದನ್ನು ಇಲಿಗಳು ಓಡಾಡುವ ಜಾಗದಲ್ಲಿ ಮತ್ತು ಅವುಗಳು ವಾಸಿಸುತ್ತಿರುವ ಗುಂಡಿಗಳಲ್ಲಿ ಇಟ್ಟುನೋಡಿ.. ಆ ವಾಸನೆಯು ಅವುಗಳ ಶ್ವಾಸಕೋಶವನ್ನು ಕುಗ್ಗಿಸುತ್ತದೆ ಮತ್ತು ಇಲಿಗಳು ಸತ್ತುಹೋಗುತ್ತವೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಇಲಿ ಮತ್ತು ಜೇಡನನ್ನು ನಿವಾರಿಸಲು ಬೇಕಿಂಗ್ ಸೋಡಾ ಪರಿಣಾಮಕಾರಿಯಾದುದು. ಮನೆಯಿಂದ ಈ ಪ್ರಾಣಿಗಳು ನಿವಾರಣೆಯಾದ ನಂತರ ಮನೆಯನ್ನು ಸ್ವಚ್ಛಮಾಡುವುದೂ ಕೂಡ ಸರಳ ಕೆಲಸವಾಗಿದೆ. ಜೇಡನ ಬಲೆಗೆ ಬೇಕಿಂಗ್ ಸೋಡಾವನ್ನು ಹಾಕಿ, ಇನ್ನು ಇಲಿಗಳು ಬರುವ ಜಾಗಕ್ಕೆ ಹೆಚ್ಚು ಪ್ರಮಾಣದಲ್ಲಿ ಈ ಸೋಡಾವನ್ನು ಹಾಕಿ. ಬೇಕಿಂಗ್ ಸೋಡಾದ ವಾಸನೆಯನ್ನು ಇಲಿ ಮತ್ತು ಜೇಡ ಇಷ್ಟಪಡುವುದಿಲ್ಲ.

ಸ್ಟೀಲ್ ವೂಲ್

ಸ್ಟೀಲ್ ವೂಲ್

ನಿಮ್ಮ ಮನೆಗೆ ಇಲಿಗಳು ಪ್ರವೇಶಿಸುವ ಸ್ಥಳ ನಿಮಗೆ ಗೊತ್ತಾದರೆ ಇವುಗಳ ಬಳಕೆಯನ್ನು ನಿಮಗೆ ಮಾಡಬಹುದು. ಸ್ಟೀಲ್ ವೂಲ್ ಅನ್ನು ತುಂಡರಿಸಿಕೊಳ್ಳಿ ಮತ್ತು ಇಲಿ ಜೇಡ ಬರುವ ಎಲ್ಲಾ ಸ್ಥಳದಲ್ಲಿ ಹಾಕಿ. ಈ ವೂಲ್‌ನ ಸಹಾಯದಿಂದ ಇಲಿಗಳು ಪ್ರವೇಶಿಸುವ ಬಿಲವನ್ನು ಮುಚ್ಚಿ. ಇವುಗಳನ್ನು ತುಂಡರಿಸಿ ಇಲಿ ಹೆಗ್ಗಣಗಳಿಗೆ ಮನೆಯನ್ನು ಪ್ರವೇಶಿಸುವುದು ಕಷ್ಟದ ಮಾತಾಗಿದೆ. ಮನೆಯ ಎಲ್ಲಾ ಸ್ಥಳ ಮುಚ್ಚಿದೆ ಎಂಬುದಾಗಿ ಖಾತ್ರಿಪಡಿಸಿಕೊಳ್ಳಿ.

ದನದ ಸಗಣಿ

ದನದ ಸಗಣಿ

ನೀವು ಇಲಿಗಳನ್ನು ನೈಸರ್ಗಿಕವಾಗಿ ಸಾಯಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಖಂಡಿತ ದನದ ಸಗಣಿಯನ್ನು ಬಳಕೆ ಮಾಡಬಹುದು. ಒಂದು ವೇಳೆ ಇಲಿಗಳು ದನದ ಸಗಣಿಯನ್ನು ಸೇವಿಸಿದರೆ, ಅವುಗಳಿಗೆ ವಾಂತಿ ಶುರುವಾಗುತ್ತೆ ಮತ್ತು ಅತಿಯಾದ ವಾಂತಿಯಿಂದ ಇಲಿಗಳು ಸಾಯಲ್ಪಡುತ್ತದೆ.

ಲವಂಗದ ಎಲೆಗಳು ಹಾಗೂ ಈರುಳ್ಳಿ

ಲವಂಗದ ಎಲೆಗಳು ಹಾಗೂ ಈರುಳ್ಳಿ

ಇಲಿಗಳು ಲವಂಗದ ಎಲೆಗಳನ್ನು ತಮ್ಮ ಆಹಾರ ಎಂದು ಸೇವಿಸುತ್ತವೆ. ನೈಸರ್ಗಿಕವಾಗಿ ಇಲಿಗಳನ್ನು ಸಾಯಿಸಲು, ಈ ಎಲೆಗಳನ್ನು ಅವುಗಳ ಬಿಲಗಳಲ್ಲಿ ಇಡಬಹುದು. ಆದರೆ ಇದು ಇಲಿಗಳನ್ನು ಸಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈರುಳ್ಳಿ ಬಳಕೆ ಮಾಡುವುದು ಕೂಡ ಮತ್ತೊಂದು ಪ್ರಮುಖ ವಿಧಾನಗಳಲ್ಲಿ ಒಂದೆನಿಸಿದೆ. ನೀವು ಮಾಡಬೇಕಾಗಿರುವುದು ಇಷ್ಟೇ.. ಈರುಳ್ಳಿಯನ್ನು ಕತ್ತರಿಸಿ ಅವುಗಳ ಬಿಲಗಳಿಗೆ ಹಾಕಿ.ಇದು ಕೂಡ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ. ಈ ಎಲ್ಲಾ ವಿಧಾನಗಳು ಇಲಿಗಳ ಜೀವಕ್ಕೆ ಕುತ್ತು ತರುವುದು ಗ್ಯಾರೆಂಟಿ ಮತ್ತು ಹೀಗೆ ಮಾಡುವುದು ಯಾರಿಗೂ ಕೂಡ ಪ್ರಯಾಸದ ಕೆಲಸವೂ ಅಲ್ಲ, ದುಬಾರಿಯೂ ಅಲ್ಲ.

English summary

Tricks To Get Rid Of Mice And Spider

Mice and spider are the creatures that make the house dirtier and also result in spreading of a number of disease-causing germs in and around the house. Assam tea, Nilgiri tea or peppermint tea are most suited to get rid of mice and spider. Other things that can help to get rid of them are peanut butter, mint toothpaste, bay leaves, etc.
Story first published: Wednesday, July 25, 2018, 17:46 [IST]
X
Desktop Bottom Promotion