For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಹತ್ತು ವಸ್ತುಗಳು

By Hemanth
|

ದಿನಪೂರ್ತಿ ದುಡಿದು ಬಂದ ಬಳಿಕ ಮನೆಯಲ್ಲಿನ ಸಾಮಗ್ರಿಗಳನ್ನು ಸ್ವಚ್ಛ ಮಾಡಿಕೊಳ್ಳುವುದು ತುಂಬಾ ಸವಾಲಿನ ಕೆಲಸ. ಆದರೆ ಸ್ವಚ್ಛತೆಗಾಗಿ ಮನೆಯ ಕೆಲವು ಪ್ರಮುಖ ಸಾಮಗ್ರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಮನೆ ಸ್ವಚ್ಛವಾಗಿ, ಅಚ್ಚುಕಟ್ಟಾಗಿದ್ದರೆ ಮಾತ್ರ ಸುಂದರವಾಗಿ ಕಾಣುವುದು. ಸೌಂದರ್ಯವು ಕಾಣಿಸಿಕೊಳ್ಳುವುದು ಶುಚಿತ್ವವಿದ್ದಾಗ ಮಾತ್ರ. ಹೀಗಾಗಿ ಹೆಚ್ಚಿನವರು ಮನೆಯ ಸ್ವಚ್ಛತೆಗೆ ಮಹತ್ವ ನೀಡುವುದು. ಅದರಲ್ಲೂ ಕೆಲವೊಂದು ದುಬಾರಿ ವಸ್ತುಗಳ ಸ್ವಚ್ಛತೆ ಮಾಡದೇ ಇದ್ದರೆ ಆಗ ಅವುಗಳು ಕಳೆಗುಂದುವುದಿದೆ. ಈ ಲೇಖನದಲ್ಲಿ ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಬೇಕಾದ 10 ವಸ್ತುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದರ ಬಗ್ಗೆ ತಿಳಿಯಲು ಮುಂದೆ ಓದುತ್ತಾ ಸಾಗಿ...

cleaning house checklist

1.ಇಲೆಕ್ಟ್ರಾನಿಕ್ ವಸ್ತುಗಳು

ಇಂದಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲೂ ಹೆಚ್ಚಾಗಿ ಇಲೆಕ್ಟ್ರಾನಿಕ್ ವಸ್ತುಗಳು ಕಂಡುಬರುವುದು. ಆದರೆ ಇವುಗಳ ಮೇಲ್ಭಾಗವು ತುಂಬಾ ಸೂಕ್ಷ್ಮವಾಗಿರುವುದು. ಇದು ಫೋನ್ ಅಥವಾ ಕೀಬೋರ್ಡ್ ಆಗಿರಲಿ. ಇವುಗಳನ್ನು ಮನೆಯ ಬೇರೆ ಬೇರೆ ಸದಸ್ಯರು ಬಳಸುವಂತಹ ಸಾಧ್ಯತೆಗಳು ಹೆಚ್ಚಾಗಿರುವುದು. ಇಂತಹ ಪರಿಸ್ಥಿತಿಯಲ್ಲಿ ಪ್ರತೀ ವಾರ ಇದನ್ನು ಸ್ವಚ್ಛಮಾಡಿಕೊಳ್ಳಬೇಕು. ಇದರಿಂದ ಕೀಟಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ತಪ್ಪುವುದು.

2.ಬಾಗಿಲಿನ ಹಿಡಿಕೆ

ಬಾಗಿಲಿನ ಹಿಡಿಕೆಯೆನ್ನುವುದನ್ನು ಪ್ರತಿಯೊಬ್ಬರು ಬಳಸುವರು ಮತ್ತು ಕೀಟಾಣುಗಳಿಗೆ ವಾಸಸ್ಥಾನವಾಗಿರುವುದು. ಬಾಗಿಲಿನ ಹಿಡಕೆ ಮೂಲಕ ಹೆಚ್ಚಾಗಿ ಕೀಟಾಣುಗಳು ಹರಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ. ಇದರಿಂದ ಕೀಟಾಣು ವಿರೋಧಿ ಕ್ಲೀನರ್ ಬಳಸಿಕೊಂಡು 3-4 ದಿನಕ್ಕೊಮ್ಮೆ ಬಾಗಿಲಿನ ಹಿಡಿಕೆ ಒರೆಸಿಕೊಳ್ಳಿ. ಫ್ರಿಡ್ಜ್ ನ ಬಾಗಿಲಿನ ಹಿಡಿಕೆ ಕೂಡ ಇದೇ ನೀತಿ ಅನುಸರಿಸಿ. ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರೆ ಆಗ ನೀವು ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು. ಇದರಿಂದ ಕೀಟಾಣುಗಳು ಮನೆಯೊಳಗೆ ಹರಡುವುದು ತಪ್ಪುವುದು.

3.ಟಿವಿ ರಿಮೋಟ್

ಈ ಒಂದು ವಸ್ತುವನ್ನು ಮನೆಯ ಎಲ್ಲಾ ಸದಸ್ಯರು ಹೆಚ್ಚಾಗಿ ಬಳಸುವರು. ಊಟ ಮಾಡುತ್ತಲಿರುವಾಗ ಅಥವಾ ಏನಾದರೂ ತಿನ್ನುವಾಗ ಟಿವಿ ವೀಕ್ಷಿಸುವುದು ಕೀಟಾಣುಗಳಿಗೆ ಇದು ಮೂಲಸ್ಥಾನವಾಗಬಹುದು. ರಿಮೋಟ್ ನ್ನು ತಿಂಗಳಲ್ಲಿ ಒಂದು ಸಲವಾದರೂ ಸ್ವಚ್ಛಗೊಳಿಸಿದರೆ ಆಗ ಕೀಟಾಣುಗಳು ಹರಡುವುದನ್ನು ನಿಲ್ಲಿಸಬಹುದು.

ಮೊದಲು ರಿಮೋಟ್ ನ ಬ್ಯಾಟರಿ ತೆಗೆದಿಟ್ಟುಕೊಂಡ ಬಳಿಕ ರಿಮೋಟ್ ಸ್ವಚ್ಛಗೊಳಿಸಿದರೆ ತುಂಬಾ ಒಳ್ಳೆಯದು. ಒಂದು ನಯವಾದ ಬಟ್ಟೆ ತೆಗೆದುಕೊಂಡು ಸ್ವಲ್ಪ ಕ್ಲೀನಿಂಗ್ ಸೊಲ್ಯೂಷನ್ ಹಾಕಿ ಸ್ವಚ್ಛ ಮಾಡಿ. ಸಂಪೂರ್ಣ ರಿಮೋಟ್ ನ್ನು ಇದರಿಂದ ಸ್ವಚ್ಛಗೊಳಿಸಿ. ಹಿಯರ್ ಬಡ್ ತೆಗೆದುಕೊಂಡು ಅದಕ್ಕೆ ಕೆಲವು ಹನಿ ಸೊಲ್ಯೂಷನ್ ಹಾಕಿಕೊಂಡು ಅದರಿಂದ ರಿಮೋಟ್ ನ ಕ್ಲಿಷ್ಟ ಭಾಗಗಳನ್ನು ಸ್ವಚ್ಛ ಮಾಡಿ. ರಿಮೋಟ್ ನಲ್ಲಿ ಮಣ್ಣು ಅಂಟಿಕೊಂಡಿದ್ದರೆ ಅದನ್ನು ತೆಗೆಯಲು ಮರೆಯಬೇಡಿ. ಇದರ ಬಳಿಕ ರಿಮೋಟ್ ನ್ನು ಸಂಪೂರ್ಣವಾಗಿ ಒಣಗಿಸಿ. ಬಳಿಕ ಬ್ಯಾಟರಿ ಹಾಕಿ ಮತ್ತೆ ಬಳಸಿ.

4.ಡಿಶ್ ವಾಷರ್

ಮೊದಲು ನೀವು ಡಿಷ್ ವಾಷರ್ ನ ಹಿಡಿಕೆಯನ್ನು ಸ್ವಚ್ಛಗೊಳಿಸಬೇಕು. ಇದರ ಬಳಿಕ ತಳಭಾಗದ ರ್ಯಾಕ್ ತೆಗೆಯಿರಿ ಮತ್ತು ಒಂದು ಕಪ್ ಅಡುಗೆ ಸೋಡಾ ಇದಕ್ಕೆ ಸುರಿಯಿರಿ. ಒಂದು ಕಪ್ ವಿನೇಗರ್ ತೆಗೆದುಕೊಂಡು ಅದನ್ನು ಮೇಲ್ಭಾಗದ ರ್ಯಾಕ್ ಗೆ ಹಾಕಿ. ಉಳಿದ ಭಾಗವು ಖಾಲಿಯಾಗಿರಲಿ. ಇದರ ಬಳಿಕ ಕ್ಲೀನಿಂಗ್ ಗೆ ಡಿಷ್ ವಾಷರ್ ನ್ನು ಆನ್ ಮಾಡಿ. ಅಂತ್ಯದಲ್ಲಿ ನಿಮಗೆ ಡಿಷ್ ವಾಷರ್ ತುಂಬಾ ಸುವಾಸನೆ ಹಾಗೂ ಹೊಳೆಯುವುದು ಕಂಡುಬರುವುದು. ಎರಡು ಮೂರು ವಾರಕ್ಕೊಮ್ಮೆ ಹೀಗೆ ಮಾಡಿ.

5.ಏರ್ ಫಿಲ್ಟರ್ಸ್

ಏರ್ ಫಿಲ್ಟರ್ಸ್ ಗಳನ್ನು ಬಳಸುವಂತಹ ಮನೆಗಳು ಇದನ್ನು ಪ್ರತೀ 30-60 ದಿನಕ್ಕೊಮ್ಮೆ ಬದಲಾಯಿಸಬೇಕು. ನಿಮ್ಮ ಮನೆಯ ಗಾತ್ರ ಹಾಗೂ ಮನೆಯಲ್ಲಿರುವ ಜನರನ್ನು ಹೊಂದಿಕೊಂಡು ಇದನ್ನು ಬದಲಾಯಿಸುವ ಅಂತರವು ನಿರ್ಧಾರಿತವಾಗುವುದು. ಏರ್ ಫಿಲ್ಟರ್ ನ್ನು ಸ್ವಚ್ಛಗೊಳಿಸದೆ ಇದ್ದರೆ ಆಗ ಅದು ಕೀಟಾಣುಗಳಿಗೆ ವಾಸಸ್ಥಾನವಾಗಿ ಹಲವಾರು ರೋಗಗಳನ್ನು ಹರಡಬಹುದು.

6.ಸ್ವಚ್ಛಗೊಳಿಸುವ ಸ್ಪಾಂಜ್ ಗಳು

ನೀವು ಮನೆಯಲ್ಲಿ ಪಾತ್ರೆಗಳನ್ನು ತೊಳೆಯಲು ಬಳಸುವಂತಹ ಸ್ಪಾಂಜ್ ಗಳು ಕೀಟಾಣುಗಳ ದಾಳಿಯಿಂದ ದೂರವಿರಬೇಕು. ಇದಕ್ಕಾಗಿ ಸ್ಪಾಂಜ್ ನ್ನು ನೀರಿನಲ್ಲಿ ಮುಳುಗಿಸಿದ ಬಳಿಕ ನೇರವಾಗಿ ಮೈಕ್ರೋವೇವ್ ನಲ್ಲಿ ಇಡಬೇಕು.
ಎರಡು ನಿಮಿಷ ಕಾಲ ಮೈಕ್ರೋವೇವ್ ಸಂಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸಲಿ. ಇದು ಶೇ.90ರಷ್ಟು ಕೀಟಾಣುಗಳನ್ನು ಕೊಲ್ಲುವುದು. ಇಲ್ಲವಾದಲ್ಲಿ ಕೀಟಾಣುಗಳು ಸ್ಪಾಂಜ್ ನಲ್ಲಿ ನೆಲೆ ನಿಲ್ಲುವುದು. ಮೈಕ್ರೋವೇವ್ ನಿಂದ ನೀವು ಸ್ಪಾಂಜ್ ನ್ನು ತೆಗೆಯುವ ಮೊದಲು ಅದು ಸಂಪೂರ್ಣವಾಗಿ ತಣ್ಣಗಾಗಿರುವ ಬಗ್ಗೆ ಗಮನಹರಿಸಿ.

7.ಶೌಚಾಲಯದ ಹೊರಭಾಗ

ಶೌಚಾಲಯವನ್ನು ಪ್ರತಿಯೊಬ್ಬರು ಸ್ವಚ್ಛವಾಗಿಟ್ಟುಕೊಳ್ಳುವರು. ವಾರದಲ್ಲಿ ಒಂದು ಸಲವಾದರೂ ಶೌಚಾಲಯವನ್ನು ಸ್ವಚ್ಛ ಮಾಡುವರು. ಆದರೆ ಶೌಚಾಲಯದ ಬಾಹ್ಯ ಭಾಗವನ್ನು ಹೆಚ್ಚಿನವರು ಕಡೆಗಣಿಸುವರು. ಶೌಚಾಲಯದ ಬಾಹ್ಯ ಭಾಗವು ಇತರ ಭಾಗದಂತೆ ತುಂಬಾ ಕೊಳಕಾಗಿರುವುದು. ಇದರಿಂದ ಶೌಚಾಲಯ ಸ್ವಚ್ಛಗೊಳಿಸುವ ವೇಳೆ ಇದರ ಬಗ್ಗೆ ಗಮನಹರಿಸಬೇಕು. ಇದರ ಸೀಟ್, ಟ್ಯಾಂಕ್ ಮತ್ತು ಇತರ ಕೆಲವು ಬಾಹ್ಯ ಭಾಗಗಳನ್ನು ಸ್ವಚ್ಛಗೊಳಿಸಬೇಕು. ಫ್ಲಶ್ ಮಾಡುವ ಹಿಡಿಕೆಯನ್ನು ಕೂಡ ಸೋಂಕು ವಿರೋಧಿ ಸೊಲ್ಯೂಷನ್ ನಿಂದ ಸ್ವಚ್ಛ ಮಾಡಿ. ಯಾಕೆಂದರೆ ಇದನ್ನು ತುಂಬಾ ಜನರು ಮುಟ್ಟಿರುತ್ತಾರೆ. ಕೀಟಾಣುಗಳು ನೆಲೆನಿಲ್ಲದಂತೆ ಮಾಡಲು ನೀವು ಪ್ರತೀ ಸಲ ಟಾಯ್ಲೆಟ್ ನ ಲಿಡ್ ನ್ನು ಕೆಳಗೆ ಮಾಡಿದ ಬಳಿಕ ಫ್ಲಶ್ ಮಾಡಿ.

ಇದರಿಂದ ಸೂಕ್ಷ್ಮಾಣುಜೀವಿಗಳು ಗಾಳಿಗೆ ಬರುವುದು ತಪ್ಪುತ್ತದೆ. ಲಿಡ್ ಮುಚ್ಚದೆ ಇದ್ದರೆ ಆಗ ಗಾಳಿಯಲ್ಲಿ ಸೂಕ್ಷ್ಮಾಣುಜೀವಿಗಳು ಸೇರಿಕೊಂಡು ಸಂಪೂರ್ಣ ಶೌಚಾಲಯದಲ್ಲಿ ನೆಲೆನಿಲ್ಲಬಹುದು. ಇದರಿಂದ ರೋಗಗಳು ಕಾಣಿಸಿಕೊಳ್ಳಬಹುದು.

8.ಸ್ವಿಚ್ ಗಳು

ಬಾಗಿಲಿನ ಹಿಡಿಕೆಯಂತೆ ಮನೆಯ ಹೆಚ್ಚಿನ ಸದಸ್ಯರು ಸ್ವಿಚ್ ನ್ನು ಬಳಸುತ್ತಾರೆ. ಇದರಿಂದ ಕೀಟಾಣುಗಳು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗಬಹುದು. ಇದರಿಂದ ಸ್ವಿಚ್ ಬೋರ್ಡ್ ನ್ನು ಕೀಟಾಣು ವಿರೋಧಿ ಸೊಲ್ಯೂಷನ್ ಹಾಕಿಕೊಂಡು ಒರೆಸಿಕೊಳ್ಳಿ. ವಾರದಲ್ಲಿ ಒಂದು ಸಲ ಹೀಗೆ ಮಾಡಿ.

9.ಕೊಳವೆ(ಚರಂಡಿ)

ಪ್ರತೀ ದಿನ ನೀವು ಪಾತ್ರೆಗಳನ್ನು ತೊಳೆಯುವಾಗ ಅದರಲ್ಲಿ ಇರುವಂತಹ ಅಳಿದುಳಿದು ಆಹಾರವು ಹೋಗಿ ಸಿಂಕ್ ನ ಕೊಳವೆಯಲ್ಲಿ ಸೇರಿಕೊಳ್ಳುವುದು. ಇದರಿಂದ ಸೂಕ್ಷ್ಮಾಣು ಜೀವಿಗಳು ನಿರ್ಮಾಣವಾಗುವುದು. ಇಂತದನ್ನು ತಪ್ಪಿಸಲು ಪ್ರತಿ 15 ದಿನಕ್ಕೊಮ್ಮೆ ಇದನ್ನು ಸ್ವಚ್ಛಗೊಳಿಸುತ್ತಾ ಇರಬೇಕು.
ನೀರನ್ನು ಬಿಟ್ಟುಬಿಡಿ ಮತ್ತು ಕೊಳವೆಗೆ ಕೆಲವು ಐಸ್ ತುಂಡುಗಳನ್ನು ಹಾಕಿ. ಇದರಿಂದ ಕೊಳವೆಯು ಸ್ವಚ್ಛವಾಗುವುದು. ಇದಕ್ಕೆ ನೀವು ಕೆಲವು ತುಂಡು ಲಿಂಬೆ ಹಾಕಿದರೂ ಒಳ್ಳೆಯದು. ಇದು ಸಂಪೂರ್ಣವಾಗಿ ಸ್ವಚ್ಛವಾದ ಬಳಿಕ ಇದಕ್ಕೆ ಕೆಲವು ಹನಿ ಲಿಂಬೆರಸ ಸಿಂಪಡಿಸಿ. ಇದರಿಂದ ಸಿಂಕ್ ಸ್ವಚ್ಛವಾಗಿರುವುದು ಮತ್ತು ಸುವಾಸನೆ ಬರುವುದು.

10.ಉಪ್ಪು ಮತ್ತು ಕರಿಮೆಣಸಿನ ಹುಡಿಯ ಡಬ್ಬಿಗಳು

ಮನೆಯಲ್ಲಿ ಬರುವಂತಹ ಶೀತ ಮತ್ತು ಜ್ವರವು ಉಂಟುಮಾಡುವಂತಹ ಕೀಟಾಣುಗಳು ಇದೇ ಸ್ಥಳದಲ್ಲಿ ಬೆಳೆಯುವುದು. ಆದರೆ ಇದನ್ನು ಸ್ವಚ್ಛ ಮಾಡುವುದು ತುಂಬಾ ಸುಲಭ. ಪ್ರತೀ ರಾತ್ರಿ ಮನೆಯ ಡೈನಿಂಗ್ ಟೇಬಲ್ ನ್ನು ಸ್ವಚ್ಛಗೊಳಿಸುವ ವೇಳೆ ಉಪ್ಪು ಮತ್ತು ಕರಿಮೆಣಸಿನ ಹುಡಿಯ ಡಬ್ಬದ ಮೇಲಿನ ಭಾಗವನ್ನು ತೆಗೆದು ಒರೆಸಿಕೊಳ್ಳಬೇಕು.

ಹೀಗೆ ಮಾಡಿದರೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಮನೆ ಸದಸ್ಯರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವು ತಿಂಗಳಿಗೊಮ್ಮೆ ಇದನ್ನು ಸಂಪೂರ್ಣವಾಗಿ ಖಾಲಿ ಮಾಡಿಕೊಂಡು ಬಳಿಕ ಡಬ್ಬಗಳನ್ನು ಬಿಸಿ ನೀರಿನಲ್ಲಿ ಕೀಟಾಣುವಿರೋಧಿ ಸೊಲ್ಯೂಷನ್ ಹಾಕಿ ಮುಳುಗಿಸಿಟ್ಟು 15 ನಿಮಿಷ ಕಾಲ ಹಾಗೆ ಬಿಡಬೇಕು. ಇದರ ಬಳಿಕ ಒಣಗಿಸಿ ಒರೆಸಿಕೊಳ್ಳಬೇಕು. ಇದು ಸಂಪೂರ್ಣವಾಗಿ ಒಣಗಿದ ಬಳಿಕ ಮತ್ತೆ ಅದನ್ನು ಬಳಸಿಕೊಳ್ಳಬಹುದು. ನಿತ್ಯ ಜೀವನದಲ್ಲಿ ನೀವು ಬಳಸುವಂತಹ ವಸ್ತುಗಳನ್ನು ಹೇಗೆ ಸ್ವಚ್ಛ ಮಾಡಿಕೊಳ್ಳುವುದು ಎಂದು ನಿಮಗೆ ತಿಳಿದಿದೆ. ಇದರಿಂದ ನೀವು ಕೀಟಾಣುಗಳನ್ನು ದೂರವಿಡಬಹುದು. ಇದರೊಂದಿಗೆ ನಿಮ್ಮ ಹಾಗೂ ಕುಟುಂಬದವರ ಆರೋಗ್ಯ ಕೂಡ ಕಾಪಾಡಬಹುದು. ಮನೆಯು ಸ್ವಚ್ಛ ಹಾಗು ಸುವಾಸನೆಯಿಂದ ಕೂಡಿದ್ದರೆ ಆಗ ಮನೆಯಲ್ಲಿರುವರ ಆರೋಗ್ಯವು ಚೆನ್ನಾಗಿರುವುದು. ಮನೆಯು ಸ್ವಚ್ಛವಾಗಿದ್ದರೆ ಆಗ ಮನೆಯಲ್ಲಿ ಧನಾತ್ಮಕತೆಯು ತುಂಬುವುದು.

English summary

Things You Need To Clean At Home Daily

Indeed, our house is where all of us rush to in order to seek comfort. After having survived a long day at work, it is only here that we find peace. This is the reason why many people are seen to be overtly possessive about their homes. They take the best of care of their homes and ensure that only the most superior quality products make their way here. Once that is done, they like to keep it spick and span and ensure that the house looks beautiful at all times. However, despite all our efforts the house is not always as clean as we would like it to be. This is because there are important areas of the house that we tend to neglect during our cleaning drive sessions.
Story first published: Saturday, August 18, 2018, 15:22 [IST]
X
Desktop Bottom Promotion