For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿರುವ ಜಿರಳೆಗಳನ್ನು ಓಡಿಸಬೇಕಾ? ಹಾಗಾದರೆ ಹೀಗೆ ಮಾಡಿ...

By Divya Pandith
|

ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆ ಎಂದರೆ ವಿವಿಧ ಬಗೆಯ ಅಲರ್ಜಿ ಹಾಗೂ ರೋಗಗಳು ನಮ್ಮನ್ನು ಕಾಡುತ್ತವೆ. ದೇಶೀಯ ಜಿರಳೆಗಳು ಮನೆಯ ಸ್ವಚ್ಛತೆಗೆ ಅಡ್ಡಿ ಮಾಡುವುದಲ್ಲದೆ ಅನೇಕ ಬಗೆಯ ವಸ್ತುಗಳನ್ನು ಹಾಳು ಮಾಡುತ್ತವೆ. ಒಮ್ಮೆ ಈ ಜಿರಳೆಗಳಿಗೆ ಮನೆಯು ಆವಾಸ ಸ್ಥಾನವಾಯಿತೆಂದರೆ ಅದನ್ನು ಸಂಪೂರ್ಣವಾಗಿ ಓಡಿಸುವುದು ಕಷ್ಟವಾಗುತ್ತದೆ. ಜಿರಳೆಗಳ ನಾಶಕ್ಕೆ ಕೆಲವು ಔಷಧಿಗಳು ಇವೆಯಾದರೂ ಸಂಪೂರ್ಣವಾಗಿ ಅವುಗಳನ್ನು ನಿವಾರಿಸಲು ಕಷ್ಟವಾಗುತ್ತದೆ.

ವಿದೇಶಗಳಲ್ಲಿ ಮನೆ ಒಳಗೆ ಒಂದು ಜಿರಳೆಯ ಪ್ರವೇಶವಾದರೂ ಅದರ ನಿರ್ಮೂಲನೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಜಿರಳೆಗಳೇ ಇರದ ಮನೆಗಳು ಬೆರಳೆಣಿಕೆಯ ಪ್ರಮಾಣದಲ್ಲಿ ಸಿಗಬಹುದಷ್ಟೆ. ಬಹುತೇಕ ಮನೆಗಳಲ್ಲಿ ಜಿರಳೆಗಳ ಆವಾಸ ಇದ್ದೇ ಇರುತ್ತದೆ.

ಜಿರಳೆ ಹಲ್ಲಿಗಳನ್ನು ಮನೆಯಿಂದ ಓಡಿಸಬೇಕೆ? ಇಲ್ಲಿದೆ ನೋಡಿ ಟಿಪ್ಸ್

ಇವು ನಾವು ಸೇವಿಸುವ ಆಹಾರವನ್ನು ಮುಟದ್ಟುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳ ನಿವಾರಣೆಗೆ ಒಂದಿಷ್ಟು ಹಣವನ್ನು ವ್ಯಯಿಸಬೇಕೆಂದೇನೂ ಇಲ್ಲ. ಬದಲಿಗೆ ಕೆಲವು ಸಲಹೆಗಳನ್ನು ಅಥವಾ ವಿಧಾನಗಳನ್ನು ಅನುಸರಿಸಬೇಕು ಅಷ್ಟೆ. ಹಾಗಾದರೆ ಜಿರಳೆಗಳನ್ನು ಓಡಿಸಲು ಸಹಾಯ ಮಾಡುವ ಪರಿಗಳು ಯಾವವು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಮುಂದಿನ ವಿವರಣೆಯನ್ನು ಓದಿ... ನಿಮ್ಮ ಮನೆಯಲ್ಲಿರುವ ಜಿರಳೆಗಳನ್ನು ಬಹುಬೇಗ ಓಡಿಸಿ...

ಸ್ವಚ್ಛತೆ ಮುಖ್ಯ

ಸ್ವಚ್ಛತೆ ಮುಖ್ಯ

ಮನೆಯ ಒಳಗೆ ಆದಷ್ಟು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಧೂಳು ಹಾಗೂ ಗಲೀಜುಗಳಿರುವ ಪ್ರದೇಶದಲ್ಲಿ ಜಿರಳೆ ಬಹುಬೇಗ ಹುಟ್ಟನ್ನು ಅಥವಾ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಮೇಜಿನ ಮೇಲೆ ತಿಂಡಿ ಅಥವಾ ಊಟ ಮಾಡಿರುವ ಬಟ್ಟಲನ್ನು ಹಾಗೆಯೇ ಬಿಟ್ಟು ಹೋಗಿದ್ದರೆ, ಅದನ್ನು ಒಮ್ಮೆ ಜಿರಳೆಗಳು ಆಗಮಿಸಿ ಸವಿದರೆ ಅವು ಅಲ್ಲಿಯೇ ವಾಸವನ್ನು ಮಾಡುತ್ತವೆ. ಅವುಗಳಿಗೆ ಆಹಾರದ ಕೊರತೆ ಇದೆ ಎಂದಾದರೆ ಅವು ಬಹುಬೇಗ ಮನೆಯಿಂದ ಹೊರಗೆ ನಡೆಯುತ್ತವೆ.

ಜಿರಳೆ ಔಷಧಗಳು

ಜಿರಳೆ ಔಷಧಗಳು

ಜಿರಳೆಗಳು ಒಮ್ಮೆ ಮನೆಯ ಒಳಗೆ ಪ್ರವೇಶಿಸಿ, ಅವುಗಳಿಗೆ ಹಿತವಾದಂತಹ ಪರಿಸರ ಅಥವಾ ಸ್ಥಳಗಳು ದೊರೆಯಿತು ಎಂದಾದರೆ ಬಹುಬೇಗ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಅವು ರಾತ್ರಿಯ ವೇಳೆ ನಾವು ತಿನ್ನುವ ಆಹಾರ ಪಾರ್ಥಗಳ ಮೇಲೆ ದಾಳಿ ಮಾಡುವುದರ ಮೂಲಕ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಇವುಗಳನ್ನು ಓಡಿಸುವ ಇನ್ನೊಂದು ಪರಿ ಎಂದರೆ ಜಿರಳೆ ಔಷಧಿಗಳ ಬಳಕೆ. ಜಿರಳೆ ನಿವಾರಣೆಗೆ ಇರುವ ಸ್ಪ್ರೇ, ಮಾತ್ರೆ, ಅಗರಬತ್ತಿ ಗಳಂತಹ ಔಷಧಗಳನ್ನು ಬಳಸಬಹುದು. ಇವುಗಳ ನಿಯಮಿತ ಬಳಕೆಯಿಂದ ಬಹುಬೇಗ ನಿವಾರಣೆ ಕಾಣುವುದು.

ನೀರಿನಂಶವನ್ನು ಕಡಿಮೆ ಮಾಡಿ

ನೀರಿನಂಶವನ್ನು ಕಡಿಮೆ ಮಾಡಿ

ಜಿರಳೆಗಳು 7 ದಿನಗಳಿಗಿಂತ ಹೆಚ್ಚಿನ ಕಾಲ ನೀರಿಲ್ಲದೆ ಬದುಕಲಾರವು. ಹೀಗಾಗಿ ಮನೆಯಲ್ಲಿ ತೇವದ ಪ್ರಮಾಣವನ್ನು ತಗ್ಗಿಸುವುದು ಮತ್ತು ಪ್ರಚಲಿತದಲ್ಲಿರುವ ನೀರಿನ ಸೋರಿಕೆಯನ್ನು ಸರಿಪಡಿಸುವುದು ಅವರ ಸಾವಿಗೆ ಕಾರಣವಾಗುತ್ತದೆ. ಮನೆಯಲ್ಲಿ ಚೆನ್ನಾಗಿ ಗಾಳಿ ಆಡಬೇಕು, ಸೂರ್ಯನ ಬೆಳಕು ಮನೆಯೊಳಗೆ ಬರಬೇಕು. ಮನೆ ಸ್ವಚ್ಛ ಮತ್ತು ಶುಷ್ಕವಾದ ವಾತಾವರಣದಿಂದ ಕೂಡಿರಬೇಕು.

ಬಲವಾದ ಸುಗಂಧವನ್ನು ಬಳಸಿ

ಬಲವಾದ ಸುಗಂಧವನ್ನು ಬಳಸಿ

ನೆಲದ ಬಲವಾದ ಪರಿಮಳಯುಕ್ತ ದ್ರವದಂತಹ ಸಿಟ್ರೋನೆಲ್ಲಾ ಎಣ್ಣೆ ಅಥವಾ ಯಾವುದೇ ಔಷಧೀಯ ಫಿನೈಲ್ ಗಳೊಂದಿಗೆ ನಿಯಮಿತವಾಗಿ ಸ್ವಚ್ಛಗೊಳಿಸಿ. ಬಲವಾದ ಸುಗಂಧವು ಆಹಾರಕ್ಕಾಗಿ ಹುಡುಕುತ್ತಾ ಬರುವ ಜಿರಳೆಗಳನ್ನು ಹೊರಹಾಕುತ್ತದೆ. ನೆಲ ಶುಚಿಗೊಳಿಸಿದ ನಂತರ ಹೆಚ್ಚಿನ ನೀರಿನಂಶ ಹಾಗೆಯೇ ಉಳಿದುಕೊಳ್ಳಲು ಬಿಡದಿರಿ. ಆದಷ್ಟು ಶುಷ್ಕವಾಗಿಡಲು ಪ್ರಯತ್ನಿಸಿ.

ಬೋರಿಕ್ ಆಮ್ಲ

ಬೋರಿಕ್ ಆಮ್ಲ

ಬೋರಿಕ್ ಆಮ್ಲ ಜಿರಳೆಗಳ ನಿವಾರಣೆಗೆ ಉತ್ತಮ ಬಹು ಸಹಕಾರಿ. ನೆಲವನ್ನು ಬೋರಿಕ್ ಆಮ್ಲಗಳಿಂದ ಸ್ವಚ್ಛಗೊಳಿಸಿದರೆ ಜಿರಳೆಗಳು ಆಕಡೆ ತಲೆ ಹಾಕದು. ಇದನ್ನು ಸಿಂಪಡಿಸುವ ವಿಧಾನ ಅಥವಾ ಬಳಕೆಯು ಬಹು ಸರಳವಾಗಿರುತ್ತದೆ.

ಬೇ ಎಲೆಗಳು

ಬೇ ಎಲೆಗಳು

ಬೇ ಎಲೆಗಳು ಅತ್ಯಂತ ಪ್ರಬಲವಾದ ಪರಿಮಳವನ್ನು ಹೊಂದಿರುತ್ತವೆ. ಇವುಗಳ ಪರಿಮಳಕ್ಕೆ ಜಿರಳೆಗಳು ಹತ್ತಿರ ಬರಲಾರವು. ಜಿರಳೆಗಳು ಅತ್ಯಂತ ಪರಿಮಳವನ್ನು ಸಹಿಸಲಾರವು. ಜಿರಳೆಗಳು ಬರುವಂತಹ ಪ್ರದೇಶದಲ್ಲಿ ಈ ಎಲೆಯನ್ನು ಇಟ್ಟರೆ ಅವು ಪ್ರವೇಶ ಪಡೆಯಲಾರವು. ಈ ಎಲೆಯನ್ನು ಒಣಗಿಸಿ, ಪುಡಿಮಾಡಿ. ನಂತರ ಪುಡಿಯನ್ನು ಬೇಕೆಂದ ಜಾಗದಲ್ಲಿ ಹರಡುವುದರಿಂದ ಜಿರಳೆಯನ್ನು ತಡೆಯಬಹುದು.

ಮನೆಯನ್ನು ತಂಪಾಗಿರಿಸಿ

ಮನೆಯನ್ನು ತಂಪಾಗಿರಿಸಿ

ಕೋಣೆ ಅಥವಾ ಮನೆಗಳು ತಂಪಾಗಿದ್ದರೆ ಜಿರಳೆಗಳು ಪ್ರವೇಶ ಪಡೆಯಲಾರವು. ಜಿರಳೆಗಳು ಸಾಮಾನ್ಯವಾಗಿ ತಂಪಾದ ಪ್ರದೇಶದಲ್ಲಿ ಬದುಕುಳಿಯಲಾರವು. ಅವು ಹೆಚ್ಚು ಉಷ್ಣತೆ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಇರುತ್ತವೆ. ಬಿಸಿ ಹೆಚ್ಚಿದಂತಹ ವಾತಾವರಣದಲ್ಲಿಯೇ ರೆಕ್ಕೆಗಳನ್ನು ಪಡೆದುಕೊಳ್ಳುತ್ತವೆ. ಮನೆಯು ತಂಪಾಗಿದ್ದರೆ ಅವುಗಳಿಗೆ ಮನೆಯೊಳಗೆ ಹೆಚ್ಚುಕಾಲ ಉಳಿಯಲು ಸಾಧ್ಯವಾಗದು.

English summary

Quick Solutions To Get Rid Of Cockroaches Forever

Household cockroaches are the biggest enemy when it comes to domestic pest control. These tiny insects have been in existence from 320 million years ago and have evolved over time in such a way that they rule the house more than its owners do. These cockroaches are the potential carriers of bacteria to the food that is being consumed in home and it can lead to serious food poisoning. Some methods to get rid of these cockroaches forever are provided below. Take a look.
X
Desktop Bottom Promotion