For Quick Alerts
ALLOW NOTIFICATIONS  
For Daily Alerts

ಟೂತ್‌ಪೇಸ್ಟ್ ಬಳಸಿ ಹಲ್ಲನ್ನು ಮಾತ್ರವಲ್ಲದೆ ಮನೆಯನ್ನು ಝಗಮಗವಾಗಿಸಿ

|

ಮನೆಯನ್ನು ಝಗಮಗಿಸುವಂತೆ ಮಾಡುವುದು ಗೃಹಿಣಿಯ, ಮನೆಯೊಡತಿಯ ಮುಖ್ಯ ಕೆಲಸವಾಗಿರುತ್ತದೆ. ದುಡಿಯುವ ಮಹಿಳೆಯಾದರೆ ಆಕೆ ವಾರಕ್ಕೊಮ್ಮೆಯಾದರೂ ಮನೆಯನ್ನು ಅಂದಗೊಳಿಸುವ ಕಾರ್ಯದಲ್ಲಿ ಗಮನವನ್ನು ನೀಡುತ್ತಾರೆ. ಇನ್ನು ಮನೆಯಲ್ಲಿರುವ ಮಹಿಳೆಯರು ನಿತ್ಯವೂ ಒಂದಿಲ್ಲೊಂದು ಕೆಲಸಗಳನ್ನು ಮಾಡುತ್ತಾ ಮನೆಯನ್ನು ಸ್ವಚ್ಛವಾಗಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಅದಾಗ್ಯೂ ಮನೆಯನ್ನು ಶುಚಿಯಾಗಿಸುವ ಕಾರ್ಯವೆಂದರೆ ಕೊಂಚ ಪ್ರಯಾಸವೇ ಸರಿ. ಇನ್ನು ಮನೆಗೆಲಸವರು ಇದ್ದರೂ ಅವರು ಸರಿಯಾಗಿ ಸ್ವಚ್ಛ ಮಾಡಿದ್ದಾರೋ ಇಲ್ಲವೋ ಎಂಬುದನ್ನು ನೀವು ಗಮನವಿಟ್ಟು ಪರಿಶೀಲಿಸ ಬೇಕಾಗುತ್ತದೆ. ಸುಂದರ ಹಾಗೂ ಸ್ವಚ್ಛ ಮನೆ ಎಲ್ಲರಿಗೂ ಇಷ್ಟ. ಮನೆ ಸ್ವಚ್ಛವಾಗಿದ್ದರೆ, ಮನಸ್ಸೂ ಸ್ವಚ್ಛವಾಗಿರುತ್ತದೆ. ಇದಲ್ಲದೇ ನಿಮ್ಮ ಸುತ್ತಮುತ್ತಲಿನ ಸಕಾರತ್ಮಕ ಶಕ್ತಿ ಕೂಡಾ ಹೆಚ್ಚುತ್ತದೆ. ಮನೆಗೆಲಸದ ಚಟುವಟಿಕೆಯನ್ನು ದಿನವೂ ಚಾಚೂ ತಪ್ಪದೆ ಮಾಡುವುದು ಸುಲಭವಲ್ಲ ಎಂಬುದು ಕೂಡಾ ನಿಜ,

ಕೆಲವೊಮ್ಮೆ ಉದಾಸೀನತೆ ಮಿತಿ ಮೀರಿ " ಅಯ್ಯೋ ಇದು ಯಾವಾಗಲೂ ಇದ್ದಿದ್ದೆ, ನಾಳೆ ಮಾಡಿದರಾಯಿತು" ಎಂದು ಮೈ ಮುರಿದದ್ದು ಇರಬಹುದಲ್ವಾ? ಯಾಕೆ ಹೀಗೆ? ಮನೆ ಕೆಲಸ ತುಂಬಾ ಹೊತ್ತು ಹಿಡಿಯುವ ಕೆಲಸ ಎಂದೇ? ಅಥವಾ, 'ಸ್ವಲ್ಪ ಹೊತ್ತು ಆರಾಮವಾಗಿ ಕೂರೋಣ' ಇಲ್ಲಾಂದ್ರೆ ಇಡೀ ದಿನ ಮನೆ ಕ್ಲೀನ್ ಮಾಡೋದರಲ್ಲೆ ಮುಗಿದು ಹೋಗುತ್ತೆ ಅಂತಾನೋ?. ಕಡಿಮೆ ಸಮಯದಲ್ಲಿ ಕ್ಲೀನಿಂಗ್ ಕೆಲಸಗಳನ್ನು ಮಾಡಿಮುಗಿಸುವುದು ಹೇಗೆ? ತಿಳಿಯಲು ಮುಂದೆ ಓದಿ. ಕೇವಲ ನಿಮ್ಮ ಮನೆಯನ್ನು ಸ್ವಚ್ಛವಾಗಿರಿಸುವುದು ಮುಖ್ಯವಲ್ಲ, ಆದರೆ ಈ ಕೆಲಸ ನಿಮ್ಮ ಎಲ್ಲಾ ಸಮಯವನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ.

diy toothpaste tricks

ಇದರಲ್ಲೂ ಯಾವುದಾದರೂ ಕಲೆಯನ್ನು ತೊಲಗಿಸಬೇಕು ಎಂದಾದಲ್ಲಿ ಅದೇ ಕೆಲಸದಲ್ಲೇ ದಿನವೆಲ್ಲಾ ಮುಗಿದೇ ಹೋಗುತ್ತದೆ. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಟೂತ್‌ಪೇಸ್ಟ್ ಅನ್ನು ಬಳಸಿಕೊಂಡು ಮನೆಯ ಸ್ವಚ್ಛತೆಯನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ನಿಮ್ಮ ಹಲ್ಲನ್ನು ಬೆಳ್ಳಗಾಗಿಸುವ ಈ ಟೂತ್‌ಪೇಸ್ಟ್ ಮನೆಯನ್ನು ಕೂಡ ಅಷ್ಟೇ ಝಗಮಗಗೊಳಿಸುತ್ತದೆ. ನಿಮ್ಮ ಅಡುಗೆ ಮನೆಯಿಂದ ಹಿಡಿದು ಲಿವಿಂಗ್ ರೂಮ್ ಹಾಗೂ ಇನ್ನೂ ಮೊದಲಾದ ಮನೆಯ ಕೊಠಡಿಗಳನ್ನು ಈ ಟೂತ್‌ಪೇಸ್ಟ್ ಸ್ವಚ್ಛಗೊಳಿಸುತ್ತದೆ. ಇದರಲ್ಲಿರುವ ಮೃದುವಾದ ಸೋಡಾವು ಕೊಳೆಯನ್ನು ತೊಲಗಿಸುವಲ್ಲಿ ಎತ್ತಿದ ಕೈಯಾಗಿದೆ. ಹಾಗಿದ್ದರೆ ನಮ್ಮ ಇಂದಿನ ಲೇಖನದಲ್ಲಿ ಟೂತ್‌ಪೇಸ್ಟ್ ಅನ್ನು ಬಳಸಿಕೊಂಡು ಕೊಳೆಯನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಬಿಳಿ ಬಟ್ಟೆಯಿಂದ ಲಿಪ್‌ಸ್ಟಿಕ್ ಕಲೆಯನ್ನು ಹೋಗಲಾಡಿಸುತ್ತದೆ

ನಿಮ್ಮ ಬಿಳಿಯ ಉಡುಪಿನಲ್ಲಿ ಲಿಪ್‌ಸ್ಟಿಕ್ ಕಲೆಯಾಗಿದೆ ಎಂದಾದಲ್ಲಿ ಟೂತ್‌ಪೇಸ್ಟ್ ಬಳಸಿಕೊಂಡು ಅದನ್ನು ನಿರಾಯಾಸವಾಗಿ ತೊಲಗಿಸಬಹುದಾಗಿದೆ. ಇಂಕು ಇಲ್ಲವೇ ಲಿಪ್‌ಸ್ಟಿಕ್ ಕಲೆಯಾಗಿರುವ ಭಾಗದಲ್ಲಿ ಟೂತ್‌ಪೇಸ್ಟ್ ಅನ್ನು ಹಚ್ಚಿ ಮತ್ತು ಅದನ್ನು ಚೆನ್ನಾಗಿ ತಿಕ್ಕಿ. ನಂತರ ಸಾಮಾನ್ಯವಾಗಿ ಬಟ್ಟೆಯನ್ನು ತೊಳೆಯಿರಿ. ಈ ಕಲೆ ಸಂಪೂರ್ಣವಾಗಿ ತೊಲಗುತ್ತದೆ.

ಕೀಟಗಳ ಕಡಿತದಿಂದ ಮುಕ್ತಿ

ಋತುಮಾನಗಳು ಬದಲಾಗುತ್ತಿದ್ದಂತೆ ಕೀಟಗಳ ಹಾವಳಿ ವಿಪರೀತವಾಗಿರುತ್ತದೆ. ಯಾವುದಾದರೂ ಜಂತು ನಿಮ್ಮನ್ನು ಕಚ್ಚಿದೆ ಎಂದಾದಲ್ಲಿ ಅಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಕಚ್ಚಿದ ಜಾಗದಲ್ಲಿ ಟೂತ್‌ಪೇಸ್ಟ್ ಅನ್ನು ಹಚ್ಚಿ. ಇದು ನವೆಯನ್ನು ಕಡಿಮೆ ಮಾಡುತ್ತದೆ ಮತ್ತು ತುರಿತವನ್ನು ನಿವಾರಿಸುತ್ತದೆ. ಹಾಗೂ ತ್ವಚೆ ಕೆಂಪಗಾಗಿರುವುದನ್ನು ಕಡಿಮೆ ಮಾಡುತ್ತದೆ.

ನಿಮ್ಮ ಫೋನ್‌ನ ಸ್ಕ್ರಾಚ್‌ಗಳನ್ನು ನಿವಾರಿಸುತ್ತದೆ

ನಮ್ಮ ಫೋನ್‌ಗಳೆಂದರೆ ನಮ್ಮ ಜೀವಾಳವಾಗಿದೆ. ಅದರಲ್ಲಿ ಯಾವುದೇ ತರಚು ಇಲ್ಲವೇ ಗೀಟುಗಳು ಉಂಟಾಗುವುದನ್ನು ನಮಗೆ ತಡೆದುಕೊಳ್ಳಲೂ ಆಗುವುದಿಲ್ಲ. ಆದರೆ ಸಣ್ಣ ಗೀಟುಗಳು ಇಲ್ಲವೇ ಕಲೆಗಳನ್ನು ಟೂತ್‌ಪೇಸ್ಟ್ ಬಳಸಿಕೊಂಡು ನಿವಾರಿಸಿಕೊಳ್ಳಬಹುದಾಗಿದೆ. ಸ್ಕ್ರೀನ್ ಮೇಲೆ ಟೂತ್‌ಪೇಸ್ಟ್ ಅನ್ನು ಹಚ್ಚಿ ಮತ್ತು ತಿಕ್ಕಿ. ನಂತರ ಸ್ವಚ್ಛ ಬಟ್ಟೆಯಿಂದ ಸ್ಕ್ರೀನ್ ಅನ್ನು ಒರೆಸಿ. ಈ ಕಲೆಗಳು ಕೂಡಲೇ ಮಾಯವಾಗುತ್ತವೆ.

ವಾಸನೆ ಕೈಗಳಿಂದ ಮುಕ್ತಿ

ಮನೆಯವರಿಗಾಗಿ ಅಡುಗೆಯನ್ನು ಮುಗಿಸಿದ ನಂತರ ಕೈಗಳ ವಾಸನೆ ಇನ್ನೂ ಹೋಗಿಲ್ಲವೇ? ಅದರಲ್ಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆ ಸುಲಭದಲ್ಲಿ ನಿವಾರಣೆಯಾಗುವುದಿಲ್ಲ. ಪರಿಮಳಯುಕ್ತ ಹ್ಯಾಂಡ್‌ವಾಶ್ ಬಳಕೆಯನ್ನು ನೀವು ಮಾಡಿದರೂ ಈ ವಾಸನೆ ಹೋಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವುದು ಟೂತ್‌ಪೇಸ್ಟ್ ಆಗಿದೆ. ನಿಮ್ಮ ವಾಸನೆಯ ಕೈಗಳಿಗೆ ಟೂತ್‌ಪೇಸ್ಟ್ ಅನ್ನು ಹಚ್ಚಿ ಮತ್ತು ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.

ನಿಮ್ಮ ಹೇರ್ ಸ್ಟೈಲಿಂಗ್ ಪರಿಕರಗಳ ಸ್ವಚ್ಛತೆ

ಮನೆ ಬಿಡುವ ಮುನ್ನ ಸುಂದರವಾಗಿ ಕೇಶ ಅಲಂಕಾರವನ್ನು ಮಾಡಿಕೊಂಡು ಹೊರಹೋಗುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ ನಿಮ್ಮ ಕೇಶ ಪರಿಕರಗಳು ಒಮ್ಮೆಮ್ಮೊ ಕೊಳೆಯಾಗಿದ್ದರೆ ಇಲ್ಲವೇ ಜಿಡ್ಡಿನಿಂದ ಕೂಡಿದ್ದರೆ ಕೇಶ ಶೃಂಗಾರಕ್ಕೆ ಇದು ಅನುಕೂಲಕರವಾಗಿರುವುದಿಲ್ಲ. ಆದರೆ ಟೂತ್‌ಪೇಸ್ಟ್ ಬಳಸಿಕೊಂಡು ಈ ಪರಿಕರವನ್ನು ನೀವು ಸ್ವಚ್ಛಮಾಡಿಕೊಳ್ಳಬಹುದಾಗಿದೆ. ಕಬ್ಬಿಣದ ಮೇಲ್ಮೈಗೆ ಟೂತ್‌ಪೇಸ್ಟ್ ಅನ್ನು ಹಚ್ಚಿ ಸ್ವಲ್ಪ ಕಾಲ ಹಾಗೆಯೇ ಬಿಡಿ. ನಂತರ ಒಣಗಿದ ಬಟ್ಟೆಯಿಂದ ಒರೆಸಿ ಮತ್ತು ನಿಮ್ಮ ಪ್ರಸಾಧನ ಸಾಮಾಗ್ರಿ ಹೊಳೆಯುವುದನ್ನು ನೀವು ನೋಡುತ್ತೀರಿ.

ಗೋಡೆಗಳಿಂದ ಕ್ರಯಾನ್ ಕಲೆಗಳನ್ನು ನಿವಾರಿಸುವುದು

ಮಕ್ಕಳಿರುವ ಮನೆಯಲ್ಲಿ ಗೋಡೆಗಳ ಮೇಲೆ ಕಲೆಗಳು ಸರ್ವೇ ಸಾಮಾನ್ಯವಾಗಿದೆ. ಗೋಡೆಗಳಲ್ಲಿ ಬರೆಯವುದೆಂದರೆ ಮಕ್ಕಳಿಗೆ ಏನೋ ಪ್ರೀತಿ. ನೀವು ಅವರಿಗೆ ಸಾಕಷ್ಟು ಪುಸ್ತಕಗಳನ್ನು ಬರೆಯವುದಕ್ಕಾಗಿ ಒದಗಿಸಿದ್ದರೂ ಅವರುಗಳು ಗೋಡೆಗಳ ಮೇಲೆ ಬರೆಯವುದನ್ನು ಮಾತ್ರ ಬಿಡುವುದಿಲ್ಲ. ಈ ಅಂದಗೆಟ್ಟ ಗೋಡೆಗಳನ್ನು ಪುನಃ ಮೊದಲಿನಂತೆ ಮಾಡಲು ಟೂತ್‌ಪೇಸ್ಟ್ ಬಳಕೆಯನ್ನು ನೀವು ಮಾಡಬಹುದಾಗಿದೆ. ಕ್ರಯಾನ್ ಗುರುತುಗಳ ಮೇಲೆ ಟೂತ್‌ಪೇಸ್ಟ್ ಅನ್ನು ಹಚ್ಚಿ ನಂತರ ಒರೆಸಿ ಕಲೆಗಳು ಮಾಯವಾಗಿಬಿಡುತ್ತವೆ.

ಮಕ್ಕಳ ಬಾಟಲಿಗಳ ಸ್ವಚ್ಛತೆ

ಮಗುವಿನ ಹಾಲಿನ ಬಾಟಲಿ ಒಮ್ಮೊಮ್ಮೆ ವಾಸನೆಯನ್ನು ಬೀರುತ್ತಿರುತ್ತದೆ. ಸೋಪಿನ ದ್ರಾವಣ ಬಳಸಿ ನಿಮ್ಮ ಬಾಟಲಿಯನ್ನು ನೀವು ತೊಳೆದರೂ ಕೂಡ ವಾಸನೆ ಮಾಯವಾಗುವುದಿಲ್ಲ. ಟೂತ್‌ಪೇಸ್ಟ್ ಬಳಸಿಕೊಂಡು ಬಾಟಲಿಯಿಂದ ಬರುತ್ತಿರುವ ವಾಸನೆಯನ್ನು ನಿವಾರಿಸಬಹುದಾಗಿದೆ. ಟೂತ್‌ಪೇಸ್ಟ್ ಬಳಸಿಕೊಂಡು ಬಾಟಲಿಯನ್ನು ತೊಳೆಯಿರಿ. ನಂತರ ನೀರು ಬಳಸಿ ಬಾಟಲಿಯನ್ನು ಸ್ವಚ್ಛ ಮಾಡಿ.

ಹಲ್ಲುಜ್ಜುವ ಪೇಸ್ಟ್‌ನಿಂದ ಸೌಂದರ್ಯವನ್ನು ಮರಳಿ ಪಡೆಯಬಹುದೇ?

ಟೂತ್ ಪೇಸ್ಟ್‌ನಿಂದಾಗುವ ಇನ್ನಷ್ಟು ಪ್ರಯೋಜನಗಳು

*ಬೆಳ್ಳಿ ಮತ್ತು ಚಿನ್ನ ಆಭರಣಗಳನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು. ಟೂತ್ ಪೇಸ್ಟ್ ಅನ್ನು ಬ್ರೆಷ್ ನಲ್ಲಿ ಹಾಕಿ ಆಭರಣಗಳನ್ನು ಉಜ್ಜಿದರೆ ಆಭರಣದ ಹೊಳಪು ಹೆಚ್ಚುವುದು.
*ಲೆದರ್ ಶೂ ನಲ್ಲಿ ಕಲೆಯಾಗಿದ್ದರೆ ಆ ಭಾಗಕ್ಕೆ ಟೂತ್ ಪೇಸ್ಟ್ ಹಾಕಿ ಉಜ್ಜಿ ಹೋಗಲಾಡಿಸಬಹುದು.
*ದಿನಾವೂ ಟೆನ್ನೀಸ್ ಆಡುವವರ ಶೂ ಕೊಳೆಯಾಗಿದ್ದರೆ ಈ ಟೂತ್ ಪೇಸ್ಟ್ ಬಳಸಿ ಶುಚಿಗೊಳಿಸಬಹುದು.
*ಟೂತ್ ಪೇಸ್ಟ್ ಹಾಕಿ ಅದರಿಂದ ವಜ್ರದ ಆಭರಣಗಳನ್ನು ತಿಕ್ಕಿದರೆ ಆಭರಣದ ಹೊಳಪು ಹೆಚ್ಚುವುದು.
*ಚೈನ್ ವಾಚ್ ನಲ್ಲಿ ಕೊಳೆಯಾಗಿದ್ದರೆ ಚಿಕ್ಕ ಹತ್ತಿಬಟ್ಟೆ ತುಂಡನ್ನು ನೀರಿಗೆ ಅದ್ದಿ ಅದಕ್ಕೆ ಟೂತ್ ಪೇಸ್ಟ್ ಹಾಕಿ ವಾಚ್ ಅನ್ನು ಉಜ್ಜಬೇಕು. ನಂತರ ಶುದ್ಧವಾದ ಬಟ್ಟೆಯಿಂದ ಒರೆಸಬೇಕು.
*ಹಾಲಿನ ಬಾಟಲಿಯನ್ನು ಶುಚಿಗೊಳಿಸಲು ಟೂತ್ ಪೇಸ್ಟ್ ಬಳಸಬಹುದು.

English summary

DIY Toothpaste Tricks To Keep Your House Clean

Many of us have already used the regular white toothpaste to dry out a nasty zit at the time of emergencies. It is also common to find some of your friends using it to clean their chrome in the kitchen. We at Boldsky, have listed a few other uses of a toothpaste that will just make you want to grab a tube and get on with trying them immediately. Here are some amazing uses of a toothpaste, which will definitely make your cleaning day a lot less hectic.
Story first published: Wednesday, June 13, 2018, 13:22 [IST]
X
Desktop Bottom Promotion