ಬಿರುಬೇಸಿಗೆಯಲ್ಲಿ ಮನೆಯನ್ನು ತಂಪಾಗಿಸುವ ಸಸ್ಯ ಸಂಪತ್ತು

By: Jaya subramanya
Subscribe to Boldsky

ಅಯ್ಯೋ! ಬೇಸಿಗೆ ಬಂತೆಂದರೆ ಎಲ್ಲರ ಬಾಯಲ್ಲೂ ನಿಟ್ಟಿಸಿರು, ಹಿಡಿಶಾಪ ಹಾಕುವುದನ್ನೇ ನಾವು ಕೇಳುವುದು ಸಹಜವಾಗಿದೆ. ಗಾಳಿ ಬೀಸಿದರೂ ಅದು ಬಿಸಿಯಾಗಿಯೇ ಇರುತ್ತದೆ. ಒಂದು ಹತ್ತು ಹೆಜ್ಜೆ ನಡೆದರೂ ಕಿತ್ತುಕೊಂಡು ಬರುವ ಬೆವರು, ದೇಹದ ದುರ್ಗಂಧ, ಬೆವರು ಸಾಲೆಯ ಕಿರಿಕಿರಿ, ದಾಹ, ಆಯಾಸ ಅಬ್ಬಾಬ್ಬಾ ಬೇಸಿಗೆ ಬೇಡವೇ ಬೇಡ ಎಂಬ ಮಾತನ್ನೂ ಎಲ್ಲರೂ ನಿಡುಸುಯ್ಯುತ್ತಾರೆ.

ಹೊರಗೆ ಬಂದರೆ ಬಿರುಬೇಸಿಲು ಎಂದು ಮನೆಯೊಳಗೆ ಕೂತರೆ ಅದು ಇನ್ನಷ್ಟು ನರಕಮಯವಾಗಿರುತ್ತದೆ. ಮನೆಯೊಳಗೆ ಕೂಲರ್, ಹವಾನಿಯಂತ್ರಿತ ಉಪಕರಣಗಳು ಇದ್ದರೆ ಚಿಂತೆ ಇಲ್ಲದೇ ಇದ್ದರೂ ಅದನ್ನು ಅತ್ಯಧಿಕವಾಗಿ ಬಳಸುವುದರಿಂದ ಕರೆಂಟ್ ಬಿಲ್ಲು ನಿಮ್ಮನ್ನು ಕಾಡುವುದು ಖಂಡಿತ. ಅದರಲ್ಲೂ ನಿಸರ್ಗದ ತಂಪು ಗಾಳಿಯನ್ನು ನೀವು ಈ ಯಂತ್ರಗಳಲ್ಲಿ ಕಂಡುಕೊಳ್ಳುವ ಮಾತೇ ಇಲ್ಲ.

ಹಿಂದೆ ಹಂಚಿನ ಮನೆಗಳು ಇದ್ದಂತಹ ಸಂದರ್ಭದಲ್ಲಿ ಹೊರಗೆ ಬಿಸಿಲಾದರೂ ಮನೆಯೊಳಗೆ ತಣ್ಣಗಿನ ವಾತಾವರಣ ಇರುತ್ತಿತ್ತು. ಇಂದಿನ ತಾರಸಿ ಮನೆಗಳಲ್ಲಿ ಈ ತಂಪು ದೊರಕುವುದು ಅಸಾಧ್ಯದ ಮಾತಾಗಿದೆ. ಅದರಲ್ಲೂ ತಾರಸಿ ಮನೆಯ ಛಾವಣಿಯಲ್ಲಿ ನೀವು ತಣ್ಣಗಿನ ವಸ್ತುಗಳನ್ನು ಇರಿಸುವ ಸೌಲಭ್ಯಗಳನ್ನು ಮಾಡಿದರೆ ಮಾತ್ರವೇ ಮನೆಯೊಳಗೆ ತಣ್ಣಗೆ ಇರುತ್ತದೆ. ಇಲ್ಲದಿದ್ದಲ್ಲಿ ನೀವು ಹೊರಗಿನ ಬಿಸಿಲನ್ನು ಮನೆಯೊಳಗೆ ಅನುಭವಿಸುವುದು ಸಾಮಾನ್ಯವಾಗಿರುತ್ತದೆ.   ಅದೃಷ್ಟ ತರುವ ಗಿಡಗಳಿವು! ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ

ಆದರೆ ನೀವು ಮನಸ್ಸು ಮಾಡಿದಲ್ಲಿ ನಿಮ್ಮ ಮನೆಯೊಳಗಿನ ಬಿಸಿಯ ವಾತಾವರಣವನ್ನೇ ಬದಲಾಯಿಸಿ ತಣ್ಣಗಿನ ಅನುಭವವನ್ನು ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದು ನಿಮ್ಮ ತಲೆ ಕೊರೆಯುತ್ತಿದ್ದರೆ ಇಂದಿನ ಲೇಖನದಲ್ಲಿ ನೀವು ಅದನ್ನು ಅರಿತುಕೊಳ್ಳಬಹುದಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ. ತಂಪು ನೀಡುವ ಸಸ್ಯಗಳನ್ನು ಹೂಕುಂಡದಲ್ಲಿ ಬೆಳೆಸಿಕೊಂಡರಾಯಿತು. ಇಂತಹ ಸಸ್ಯಗಳನ್ನು ನೀವು ಮನೆಯೊಳಗೂ ಬೆಳೆಸಿಕೊಳ್ಳಬಹುದಾಗಿದೆ. ಕಡಿಮೆ ನೀರು ಮತ್ತು ಬೆಳಕಿನೊಂದಿಗೆ ಈ ಸಸ್ಯವನ್ನು ಬೆಳೆಸಿಕೊಳ್ಳಬಹುದಾಗಿದ್ದು ಆ ಸಸ್ಯಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ....  

ಅಲೋವೆರಾ ಸಸ್ಯ

ಅಲೋವೆರಾ ಸಸ್ಯ

ನಿಮ್ಮ ಮನೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಈ ಸಸ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ. ಗಾಳಿಯಲ್ಲಿರುವ ಸೋಂಕನ್ನು ನಿವಾರಿಸಿ ಮನೆಯೊಳಗೆ ತಣ್ಣಗೆ ಮಾಡುವ ನೈಸರ್ಗಿಕ ಶೀತಕ ಇದಾಗಿದೆ. ಅಂತೆಯೇ ಅಲೋವೆರಾ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಪಡವಲಕಾಯಿ

ಪಡವಲಕಾಯಿ

ರಾತ್ರಿಯಲ್ಲಿ ಆಮ್ಲಜನಕವನ್ನು ಹೊರಹಾಕುವ ಈ ಸಸ್ಯ ಇತರ ಸಸ್ಯಗಳಿಗಿಂತ ಭಿನ್ನವಾಗಿದೆ. ಇದು ವಾತಾವರಣವನ್ನು ಇನ್ನಷ್ಟು ತಂಪಾಗಿರಿಸುತ್ತದೆ. ಇದು ವಾತಾವರಣದಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಗಾಳಿಯನ್ನು ಶುದ್ಧಗೊಳಿಸುತ್ತದೆ.

ತಲೆಕೂದಲಿನ ರಕ್ಷಣೆಗೆ ಪಡವಲಕಾಯಿ ಪವರ್ ಫುಲ್ ಮ್ಯಾಜಿಕ್

ಅರೆಕಾ ಪಾಮ್ ಟ್ರೀ

ಅರೆಕಾ ಪಾಮ್ ಟ್ರೀ

ವಾತಾವರಣವನ್ನು ತಂಪಾಗಿಸುವ ಅತ್ಯದ್ಭುತ ಸಸ್ಯ ಸಂಪತ್ತಿಗಾಗಿ ನೀವು ಹುಡುಕಾಡುತ್ತಿದ್ದೀರಾ ಎಂದಾದಲ್ಲಿ ಅರೆಕಾ ಪಾಮ್ ಟ್ರೀಯನ್ನು ನಾವು ಸಲಹೆ ಮಾಡುತ್ತಿದ್ದೇವೆ. ಇದು ನಿಮ್ಮ ಮನೆಯನ್ನು ಸುತ್ತಲಿನ ಪರಿಸರವನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಗಾಳಿಯಲ್ಲಿರುವ ಹಾನಿಕಾರಕ ಅಂಶಗಳನ್ನು ಇದು ಹೊರಹಾಕುತ್ತದೆ.

ಫಿಕಸ್ ಟ್ರೀ

ಫಿಕಸ್ ಟ್ರೀ

ವೀಪಿಂಗ್ ಫಿಗ್ ಎಂಬ ಇನ್ನೊಂದು ಹೆಸರೂ ಇದಕ್ಕಿದೆ. ನಿಮ್ಮ ಕೋಣೆಯ ಬಿಸಿಗಾಳಿಯನ್ನು ಇದು ತಂಪಾಗಿ ಪರಿವರ್ತಿಸುತ್ತದೆ. ಕಡಿಮೆ ಸೂರ್ಯನ ಬೆಳಕಿನಲ್ಲೂ ಇದು ಬಾಳುತ್ತದೆ ಮತ್ತು ಕಡಿಮೆ ನೀರು ಇದ್ದರೂ ಸಾಕು. ಇದು ಗಾಳಿಯಲ್ಲಿರುವ ಹಾನಿಕಾರಕ ಅಂಶವನ್ನು ಹೊರಹಾಕಿ ಶುದ್ಧತೆಯನ್ನು ಕಾಪಾಡುತ್ತದೆ.

ಸಣ್ಣ ರಬ್ಬರ್ ಸಸ್ಯ

ಸಣ್ಣ ರಬ್ಬರ್ ಸಸ್ಯ

ಮನೆಯೊಳಗೆ ಬೆಳೆಸಬಹುದಾದ ಸಸ್ಯ ಇದಾಗಿದ್ದು ಇದು ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಶುದ್ಧೀಕರಿಸಿ ತಾಜಾ ಮತ್ತು ತಣ್ಣಗಿನ ಗಾಳಿಯನ್ನು ನಿಮಗೆ ನೀಡುತ್ತದೆ. ಇದಕ್ಕೆ ಉತ್ತಮ ಮಣ್ಣು ಬೇಕಾಗಿದ್ದು, ಬೆಳಕು ಮಧ್ಯಮವಾಗಿರಬೇಕು.

ಫೆರ್ನ್

ಫೆರ್ನ್

ನಾಸಾದ ಪ್ರಕಾರ, ಫೆರ್ನ್ ಒಂದು ಉತ್ತಮ ಸ್ವಚ್ಛಕ ಮತ್ತು ತಂಪನ್ನು ನೀಡುವ ಸಸ್ಯವಾಗಿದೆ. ನಿಮ್ಮ ಕೊಠಡಿಯ ಗಾಳಿಯನ್ನು ಶುದ್ಧೀಕರಿಸಿ ತಂಪನ್ನು ನೀಡುವುದರ ಜೊತೆಗೆ ಇದು ಬಿಸಿಯನ್ನು ನಿಯಂತ್ರಿಸುತ್ತದೆ. ನಿಮ್ಮ ಬಾಲ್ಕನಿಯಲ್ಲಿ ಈ ಸಸ್ಯವಿದ್ದರೆ ಅದರ ಸೊಬಗೇ ಬೇರೆ.

ಗೋಲ್ಡನ್ ಪೋಥಸ್

ಗೋಲ್ಡನ್ ಪೋಥಸ್

ಸಿಲ್ವರ್ ವೈನ್ ಅಥವಾ ಡೆವಿಲ್ಸ್ ಇವಿ ಎಂಬ ಬೇರೆ ಹೆಸರೂ ಈ ಸಸ್ಯಕ್ಕೆ ಇದೆ. ನಿಮ್ಮ ಕೋಣೆಯನ್ನು ಅಂದಗೊಳಿಸುವುದರ ಜೊತೆಗೆ ವಾಯುಮಾಲಿನ್ಯವನ್ನು ಇದು ದೂರಮಾಡುತ್ತದೆ. ನಿಮ್ಮ ಮನೆಯನ್ನು ತಂಪಗಾಗಿಸುವ ಅದ್ವಿತೀಯ ಗುಣವನ್ನು ಈ ಸಸ್ಯವು ಹೊಂದಿದೆ. ಇದಕ್ಕೆ ಹೆಚ್ಚು ನೀರು ಬೇಕಾಗಿಲ್ಲ, ಅಂತೆಯೇ ಬೆಳೆಸಲು ಸುಲಭ.

English summary

Plants That Can Keep Your House Cool During Summer

These plants on beautiful pots also enhance the beauty of your room. If you have a plant of jasmine at your balcony, the refreshing aroma will surely uplift your mood after a tiring day. There are lots of such plants which have multiple uses and it is best to keep these plants in your house, which can keep your house cool in the summer.
Story first published: Sunday, May 21, 2017, 9:01 [IST]
Subscribe Newsletter