ಗ್ಯಾಸ್ ಸಿಲಿಂಡರ್ ಬಳಕೆ ಸುಲಭವಲ್ಲ, ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ

By: Divya
Subscribe to Boldsky

ದ್ರವೀಕೃತ ಪೆಟ್ರೋಲಿಯಂ ಅನಿಲ ಅರ್ಥಾತ್ LPG ಈಗ ಬಹುತೇಕ ಪ್ರತಿಯೊಬ್ಬರ ಅಡುಗೆ ಮನೆಯನ್ನು ಅಲಂಕರಿಸಿದೆ. ಆದರೆ ಇದನ್ನು ಬಳಸುವುದನ್ನು ಕಲಿತಿರುವ ಜನ ಇದರ ಕುರಿತು ಮುನ್ನೆಚ್ಚರಿಕೆಯನ್ನು ಸಹ ಹೊಂದಿದ್ದಾರೆಯೇ ಎಂಬುದೇ ಪ್ರಶ್ನೆ. ಏಕೆಂದರೆ ಇದು ಮನೆಯಲ್ಲಿನ ಅತ್ಯಂತ ಅಪಾಯಕಾರಿ ವಸ್ತುಗಳಲ್ಲಿ ಒಂದಾಗಿರುತ್ತದೆ. ಇದನ್ನು ಸುರಕ್ಷಿತವಾಗಿ ಬಳಸದಿದ್ದಲ್ಲಿ, ಅಪಾಯ ಕಟ್ಟಿಟ್ಟ ಬುತ್ತಿ.

ಇನ್ನು ಗ್ಯಾಸ್ ಸಿಲಿಂಡರ್ ಖರೀದಿಸುವಾಗಲೇ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡೆ ಖರೀದಿಸಿದರೆ ಉತ್ತಮ. ನಂತರ ಅದರಲ್ಲಿ ಅಡುಗೆ ಮಾಡುವಾಗ ಮತ್ತು ಅದರ ನಿರ್ವಹಣೆಯನ್ನು ಮಾಡುವಾಗಲೂ ಸಹ ಸುರಕ್ಷತೆಗೆ ಮಣೆ ಹಾಕಬೇಕು. ಇದಕ್ಕೆ ಸಂಬಂಧಪಟ್ಟಂತೆ ವಾಲ್ವ್‌ಗಳು ಮತ್ತು ಪೈಪ್‌ಗಳ ಸಂಪರ್ಕವಿರುತ್ತದೆ.  

ಗ್ಯಾಸ್ ಸಿಲಿಂಡರ್ ಸುರಕ್ಷತಾ ಕ್ರಮ ಹೀಗಿರಲಿ

ಇವುಗಳಲ್ಲಿ ಹಲವಾರು ತೊಡಕುಗಳು ಮತ್ತು ಸುರಕ್ಷತೆಯ ಅಪಾಯಗಳು ಇರುತ್ತವೆ. ಅದಕ್ಕಾಗಿ ಇದನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕಾದ ಜವಾಬ್ದಾರಿ ಇರುತ್ತದೆ. ಅದಕ್ಕಾಗಿ ಯಾವಾಗಲು ಅಧಿಕೃತ ಮಾರಾಟಗಾರರ ಬಳಿ ಮಾತ್ರ ಸಿಲಿಂಡರ್ ಖರೀದಿಸಿ. ಅಷ್ಟೇ ಅಲ್ಲದೆ ಗ್ಯಾಸ್ ಸಿಲೆಂಡರ್‌ಗಳನ್ನು ಅಧಿಕೃತ ಮಾರಾಟಗಾರರ ಬಳಿಯೇ ಖರೀದಿಸಬೇಕು. ಅವುಗಳ ಮೇಲೆ ಕಂಪನಿ (ಸಂಸ್ಥೆ)ಹೆಸರು, ದಿನಾಂಕ ಹಾಗೂ ಸೀಲ್ ಆಗಿದೆಯೇ ಎನ್ನುವುದನ್ನು ತಪ್ಪದೆ ಪರೀಕ್ಷಿಸಬೇಕು. ಇಲ್ಲವಾದರೆ ಒಂದು ಚಿಕ್ಕ ಲೀಕೇಜ್ ಇದ್ದರೂ ದೊಡ್ಡ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.... 

ಯಾವುದೇ ಕಾರಣಕ್ಕೂ ಸಿಲಿಂಡರು ಬಿದ್ದು ಹೋಗುವಂತೆ ಇಡಬೇಡಿ!

ಯಾವುದೇ ಕಾರಣಕ್ಕೂ ಸಿಲಿಂಡರು ಬಿದ್ದು ಹೋಗುವಂತೆ ಇಡಬೇಡಿ!

ಯಾವಾಗಲು ಸಿಲಿಂಡರನ್ನು ಮೇಲ್ಮುಖವಾಗಿ ಇರಿಸಿಕೊಳ್ಳಿ. ಒಂದು ವೇಳೆ ಸಿಲಿಂಡರನ್ನು ಬೇರೆ ರೀತಿಯಲ್ಲಿ ಇಡುವಂತೆ ವಿನ್ಯಾಸಗೊಳಿಸಿದ್ದರೆ, ಆ ವಿನ್ಯಾಸಕ್ಕೆ ಹೊಂದುವಂತೆ ಅದನ್ನು ಇಡಿ. ಯಾವುದೇ ಕಾರಣಕ್ಕೂ ಸಿಲಿಂಡರು ಬಿದ್ದು ಹೋಗುವಂತೆ ಇಡಬೇಡಿ. ಇದನ್ನು ಬೀಳುವಂತೆ ಇಡುವುದು, ಗುಡುಗಿಸುವುದು ಅಥವಾ ಎಳೆದುಕೊಂಡು ಹೋಗುವುದು ನಿಷಿದ್ಧ. ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಕೊಂಡುಕೊಂಡಾಗ ಅದನ್ನು ಸಮರ್ಪಕ ಉದ್ದೇಶಕ್ಕೆ ಬಳಸಬಹುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಈ ರೀತಿ ನಿಮ್ಮ ಗ್ಯಾಸ್ ಸ್ಟವ್ ಅನ್ನು ಫಳಫಳ ಹೊಳೆಯಿಸಿ!

ಎಲ್‍ಪಿಜಿ ಬಳಕೆ

ಎಲ್‍ಪಿಜಿ ಬಳಕೆ

ಗ್ಯಾಸ್ ಸಿಲಿಂಡರ್‍ಅನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕೆಯನ್ನು ವಹಿಸಬೇಕು. ಗ್ಯಾಸ್ ಬಳಕೆ ಮಾಡುವ ಜಾಗದಲ್ಲಿ ಸೂಕ್ತ ರೀತಿಯಲ್ಲಿ ಗಾಳಿಯಾಡುವುದೇ ಎನ್ನುವುದನ್ನು ನೋಡಬೇಕು. ಕಿಟಕಿಗಳು ತೆರೆದಿಡಬಹುದಾದಂತಹ ಸ್ಥಳವಾಗಿರಬೇಕು. ಸ್ಟೋವ್ ಮತ್ತು ಸಿಲಿಂಡರ್ ಬಳಿ ಪ್ಲಾಸ್ಟಿಕ್ ವಸ್ತುಗಳನ್ನು ಇಡಬಾರದು. ಗ್ಯಾಸ್ ಅಗತ್ಯವಿಲ್ಲದಿರುವಾಗ ರೆಗ್ಯುಲೇಟರ್ (ಮುಖ್ಯ ನಿಯಂತ್ರಕ) ಆಫ್‍ಮಾಡಿ ಇಡಬೇಕು.

ಸಿಲಿಂಡರ್ ಸಾಗಣೆ

ಸಿಲಿಂಡರ್ ಸಾಗಣೆ

ಗ್ಯಾಸ್ ಸಿಲಿಂಡರ್‍ ಅನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸುವಾಗ ಸಿಲಿಂಡರ್‍ಅನ್ನು ಲಂಭಕೋನದ ಸ್ಥಿತಿಯಲ್ಲಿಯೇ ಇಟ್ಟಿರಬೇಕು. ಮಲಗಿಸಿರುವ ರೀತಿಯಲ್ಲಿ ಇಡಬಾರದು. ಸಿಲಿಂಡರ್‌ನ ಎಲ್ಲಾ ಕ್ಯಾಪ್‍ಗಳು ಸರಿಯಾಗಿ ಹಾಕಿದೆಯೇ ಎನ್ನುವುದನ್ನು ಪರಿಶೀಲಿಸಬೇಕು.

ಸಂಗ್ರಹಣೆ

ಸಂಗ್ರಹಣೆ

ಸಿಲಿಂಡರ್‍ಅನ್ನು ಶೇಖರಿಸಿಡಲು ಉತ್ತಮವಾದ ಶುಷ್ಕ ಮತ್ತು ಸುರಕ್ಷಿತ ಸ್ಥಳವಾಗಿರಬೇಕು. ಆ ಸ್ಥಳದಲ್ಲಿ ಉತ್ತಮವಾಗಿ ಗಾಳಿಯಾಡುವ ಸ್ಥಳವಾಗಿರಬೇಕು. ಹೆಚ್ಚು ಶಾಖ ಇರುವಂತಹ ಪ್ರದೇಶದಲ್ಲಿ ಇಡಬಾರದು.

ಟ್ಯೂಬ್ ಮತ್ತು ನಿಯಂತ್ರಕಗಳು

ಟ್ಯೂಬ್ ಮತ್ತು ನಿಯಂತ್ರಕಗಳು

ಟ್ಯೂಬ್ ಮತ್ತು ರೆಗ್ಯೂಲೇಟರ್‌ಗಳಿಗೆ ಯಾವಾಗಲು ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ನೀಡಬೇಕು. ಏಕೆಂದರೆ ಇವು ಯಾವಾಗಲು ಸೋರಿಕೆಯಾಗುವಂತಹ ಅಪಾಯವನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತವೆ. ಹಾಗಾಗಿ ಕಾಲಕಾಲಕ್ಕೆ ಇದನ್ನು ನಿರ್ವಹಣೆ ಮಾಡುತ್ತಲೆ ಇರಬೇಕು.

ಟ್ಯೂಬ್ ಮತ್ತು ನಿಯಂತ್ರಕಗಳು

ಟ್ಯೂಬ್ ಮತ್ತು ನಿಯಂತ್ರಕಗಳು

ಗ್ಯಾಸ್ ಸಿಲಿಂಡರ್ ಬಳಸುವವರು ಟ್ಯೂಬ್‌ಗಳನ್ನು ನಿಯಮಿತವಾಗಿ ಬದಲಾಯಿಸುತ್ತ ಇದ್ದರೆ ಸೋರಿಕೆಯನ್ನು ತಪ್ಪಿಸಬಹುದು. ಹಳೆಯ ಟ್ಯೂಬ್‍ಗಳನ್ನು ರಿಪೇರಿ ಮಾಡಿ ಬಳಸುವ ಬದಲು, ಅದನ್ನು ಬದಲಾಯಿಸಿ. ಈ ನಿಟ್ಟಿನಲ್ಲಿ ನಿಮ್ಮ ಸಿಲಿಂಡರ್ ಪೂರೈಸುವವರ ಅಥವಾ ವೃತ್ತಿಪರ ಮೆಕಾನಿಕ್‌ನ ಸಹಾಯವನ್ನು ಪಡೆಯುವುದು ಉತ್ತಮ.

English summary

Here are a few gas cylinder precautions you should consider

It is important to ensure that you are using gas cylinders safely. For this, you should know all the precautions of handling gas cylinders. The precautions for gas cylinder handling can be divided into three categories. Always remember to buy cylinders from authorized franchises. Also, these should come with the company seal and the cap of the cylinder should be intact. The date on the cylinder should also be noted. You have every right to reject the cylinder if the date has expired and if the seal is broken.
Subscribe Newsletter