For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರ: ನೀವು ತಿಳಿಯಬೇಕಾದ ದಿಕ್ಕಿನ ಪ್ರಾಮುಖ್ಯತೆ

By Manu
|

ಮನೆಯಲ್ಲಿ ಗೊತ್ತಿಲ್ಲದೇ ಆಗಿರುವ ವಾಸ್ತು ದೋಷಗಳ ಕಾರಣ ಹಲವು ರೀತಿಯ ಪ್ರಭಾವಗಳನ್ನು ಕಾಣಬಹುದು. ಪ್ರಮುಖವಾಗಿ ಮನೆಗೆ ಆಗಮಿಸುವ ಸಂಪತ್ತು ಸತತ ಮತ್ತು ಸುಗಮವಾಗಿರಲು ಕೆಲವು ವಾಸ್ತುದೋಶಗಳನ್ನು ಸರಿಪಡಿಸುವುದು ಅಗತ್ಯವಾಗಿದೆ. ಎಷ್ಟೋ ಸಲ ವಾಣಿಜ್ಯ ವಹಿವಾಟುಗಳೂ ವಾಸ್ತುದೋಷದಿಂದ ಬಳಲುತ್ತವೆ. ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

ಧನದ ಒಡೆಯ ಕುಬೇರನನ್ನು ಒಲಿಸಿಕೊಳ್ಳಲು ಕೆಲವು ವಾಸ್ತು ವಿಷಯಗಳನ್ನು ಕೆಳಗೆ ವಿವರಿಸಲಾಗಿದ್ದು ಇದರಿಂದ ಕುಬೇರನು ಸಂಪ್ರೀತನಾಗಿ ಅನಿಯಮಿತ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾನೆ ಎಂದು ವಾಸ್ತುತಜ್ಞರು ಅಭಿಪ್ರಾಯ ಪಡುತ್ತಾರೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು

ಮನೆಯಲ್ಲಿ ಕನ್ನಡಿಯನ್ನು ಇಡುವ ಸ್ಥಾನ...

ಮನೆಯಲ್ಲಿ ಕನ್ನಡಿಯನ್ನು ಇಡುವ ಸ್ಥಾನ...

ನಿಲುವುಗನ್ನಡಿಯಲ್ಲಿ ನೋಡಿದಾಗ ನಿಮ್ಮ ತಿಜೋರಿ ಅಥವಾ ಗಲ್ಲಾಪೆಟ್ಟಿಗೆ ಕಾಣುವಂತಿರಬಾರದು.

ಗಲ್ಲಾಪೆಟ್ಟಿಗೆ...

ಗಲ್ಲಾಪೆಟ್ಟಿಗೆ...

ಗಲ್ಲಾಪೆಟ್ಟಿಗೆ ಇರುವಲ್ಲಿ ಮೇಲೆ ಕಟ್ಟಡದ ಕಮಾನು ಇರಬಾರದು, ಅಲ್ಲದೇ ಮೇಲಿನಿಂದ ಯಾವುದೇ ಪ್ರಖರ ದೀಪದ ಬೆಳಕು ನೇರವಾಗಿ ಇದರ ಮೇಲೆ ಬೀಳುವಂತಿರಬಾರದು. ಇದರಿಂದ ಧನದ ಆಗಮನಕ್ಕೆ ತಡೆಯುಂಟಾಗುತ್ತದೆ.

ತಿಜೋರಿಯ ದಿಕ್ಕು....

ತಿಜೋರಿಯ ದಿಕ್ಕು....

ತಿಜೋರಿ ಸದಾ ಉತ್ತರದ ಕಡೆಗೇ ಇರುವಂತೆ ಸ್ಥಾಪಿಸಬೇಕು.

ಅಮೂಲ್ಯ ವಸ್ತುಗಳನ್ನು ಪಶ್ಚಿಮಾಭಿಮುಖ ಗೋಡೆಯಲ್ಲಿಡಬೇಕು...

ಅಮೂಲ್ಯ ವಸ್ತುಗಳನ್ನು ಪಶ್ಚಿಮಾಭಿಮುಖ ಗೋಡೆಯಲ್ಲಿಡಬೇಕು...

ಅಮೂಲ್ಯ ಆಭರಣ, ಚಿನ್ನ ಬೆಳ್ಳಿ, ನಗದು ಹಣವನ್ನು ಇಡುವ ಆಲ್ಮೇರಾವನ್ನು ಮನೆಯ ಪಶ್ಚಿಮಾಭಿಮುಖ ಗೋಡೆಗೆ ಆನಿಸಿಡಬೇಕು. ಅಂದರೆ ಆಲ್ಮೇರಾವನ್ನು ತೆರೆದರೆ ಇದು ಪೂರ್ವದಿಕ್ಕಿಗೆ ತೆರೆಯುವಂತಿರಬೇಕು. ಇದು ಸಾಧ್ಯವಾಗದಿದ್ದರೆ ನೈಋತ್ಯ ದಿಕ್ಕಿನಲ್ಲಿಟ್ಟು ತೆರೆದಾಗ ಉತ್ತರ ಅಥವಾ ಪೂರ್ವ ದಿಕ್ಕಿಗೆ ತೆರೆಯುವಂತಿರಬೇಕು. ಇದೂ ಸಾಧ್ಯವಾಗದಿದ್ದರೆ ದಕ್ಷಿಣಾಭಿಮುಖವಾಗಿ ಇರಿಸಿ ಉತ್ತರ ದಿಕ್ಕಿನತ್ತ ಬಾಗಿಲು ತೆರೆಯುವಂತಿರಬೇಕು. ಇದರಿಂದ ಸಮೃದ್ದಿ ಮತ್ತು ನೆಮ್ಮದಿ ನೆಲೆಸುತ್ತದೆ.

ಮೀನಿನ ಅಕ್ವೇರಿಯಂ ಮೂಲಕ ಧನಾತ್ಮಕ ಶಕ್ತಿ ದೊರಕುತ್ತದೆ..

ಮೀನಿನ ಅಕ್ವೇರಿಯಂ ಮೂಲಕ ಧನಾತ್ಮಕ ಶಕ್ತಿ ದೊರಕುತ್ತದೆ..

ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದು ಸಮೃದ್ದಿ ವೃದ್ದಿಗೆ ಸಹಕಾರಿಯಾಗಿದೆ. ಇದರಲ್ಲಿ ಸದಾ ಉತ್ತಮ ಆರೋಗ್ಯವಿರುವ ಮೀನುಗಳು ಇರುವಂತೆ ನೋಡಿಕೊಳ್ಳುವುದು ಅಗತ್ಯ.

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯಲ್ಲಿ ಅಥವಾ ವಾಣಿಜ್ಯ ಸ್ಥಳಗಳಲ್ಲಿರುವ ಯಾವುದೇ ನಲ್ಲಿಯಿಂದ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಅಗತ್ಯ. ಯಾವಾಗ ತೊಟ್ಟಿಕ್ಕುವುದು ಕಂಡುಬಂದಿತೋ ತಕ್ಷಣವೇ ಇದನ್ನು ರಿಪೇರಿ ಮಾಡಿಸಬೇಕು. ನೀರು ಪೋಲಾಗುವುದು ಹಣ ಪೋಲಾದಂತೆ ಎಂದು ವಾಸ್ತು ತಿಳಿಸುತ್ತದೆ.

ನೇರಳೆ ಬಣ್ಣದ ಹೂಕುಂಡದಲ್ಲಿ ಮನಿ ಪ್ಲಾಂಟ್ ಇರಿಸಿ

ನೇರಳೆ ಬಣ್ಣದ ಹೂಕುಂಡದಲ್ಲಿ ಮನಿ ಪ್ಲಾಂಟ್ ಇರಿಸಿ

ಧನವನ್ನು ನೇರಳ ಬಣ್ಣ ಪ್ರತಿನಿಧಿಸುವ ಕಾರಣ ನೇರಳೆ ಬಣ್ಣದ ಹೂಕುಂಡದಲ್ಲಿ ಮನಿ ಪ್ಲಾಂಟ್ ಬೆಳೆಸಿ ಮನೆಯಲ್ಲಿರಿಸಿದರೆ ಸಂಪತ್ತು ವೃದ್ದಿಸುತ್ತದೆ. ನೇರಳೆ ಬಣ್ಣದ ಎಲೆ ಅಥವಾ ಹೂವು ಬಿಡುವ ಒಳಾಂಗಣ ಸಸ್ಯಗಳು ಇನ್ನಷ್ಟು ಉತ್ತಮ. ಆದರೆ ಇದನ್ನು ಮನೆಯ ಡ್ರಾವಿಂಗ್ ರೂಂ ಅಥವಾ ಹಾಲ್‍ನಲ್ಲಿ ಆಗ್ನೇಯ ದಿಕ್ಕಿನಲ್ಲಿರಿಸುವುದು ಮಾತ್ರ ತುಂಬಾ ಅಗತ್ಯ.

ಹಣಕಾಸಿನ ಸಮಸ್ಯೆ ಇದ್ದರೆ

ಹಣಕಾಸಿನ ಸಮಸ್ಯೆ ಇದ್ದರೆ

ಒಂದು ವೇಳೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಅಥವಾ ಈಗಿರುವುದಕ್ಕಿಂತಲೂ ಹೆಚ್ಚಿನ ವರಮಾನವನ್ನು ಬಯಸುವುದಾದರೆ ನಿಮ್ಮ ಮನೆಯ ಆವರಣದಲ್ಲಿ ಆಗ್ನೇಯ ದಿಕ್ಕಿನಲ್ಲೊಂದು ಕಿತ್ತಳೆ ಗಿಡ ನೆಟ್ಟು ಚೆನ್ನಾಗಿ ಪೋಷಿಸಿ.

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು.

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

English summary

Tips to ensure Vaastu Shastra compliance in your home

Correct Vastu in a house ensures that your finances flow smoothly and it does not dwindle or stagnate anytime. A business which is not running successfully can also turn profitable with the power of Vastu. Given below are a few Vastu guidelines to please the lord of wealth, Lord Kuber so that you are blessed with unlimited wealth and prosperity in life
X
Desktop Bottom Promotion