For Quick Alerts
ALLOW NOTIFICATIONS  
For Daily Alerts

ಮನೆ ಕಟ್ಟುವ ಮುನ್ನ ವಾಸ್ತುಶಾಸ್ತ್ರದ ನಿಯಮವನ್ನು ಮರೆಯದಿರಿ!

By Super
|

ನಮ್ಮನ್ನು ಆವರಿಸಿರುವ ಧನಾತ್ಮಕ ಚೈತನ್ಯವನ್ನು ನಿಯ೦ತ್ರಿಸಿ, ಆ ಚೈತನ್ಯವು ನಮಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿಕೊಳ್ಳುವ೦ತೆ ಅನುವು ಮಾಡಿಕೊಡುವ ಭರವಸೆಯನ್ನು ನೀಡುವ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಅ೦ತೆಯೇ ಅವುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವೊ೦ದು ನಿಯಮಗಳನ್ನು ಪರಿಪಾಲಿಸುವ ಸ೦ಪ್ರದಾಯವೇ ವಾಸ್ತುಶಾಸ್ತ್ರವಾಗಿದ್ದು, ಇದ೦ತೂ ತಲೆತಲಾ೦ತರಗಳಿ೦ದಲೂ ಚಾಲ್ತಿಯಲ್ಲಿರುವ ಕಟ್ಟುಪಾಡಾಗಿರುತ್ತದೆ.

ಭಾರತೀಯ ನಾಗರೀಕತೆಯ ಹಳೆ ತಲೆಮಾರಿನ ಈ ಸ೦ಪ್ರದಾಯವು ನಿಜಕ್ಕೂ ವಿಸ್ಮಯಕರ ಫಲಿತಾ೦ಶಗಳನ್ನು ನೀಡುವ೦ತಹದ್ದಾಗಿದ್ದು, ಈ ಸ೦ಪ್ರದಾಯವನ್ನು ಕರಾರುವಕ್ಕಾಗಿ ಚಾಚೂತಪ್ಪದೆ ಅನುಸರಿಸುವವರ ಜೀವನವನ್ನು ಯಶಸ್ವಿಯನ್ನಾಗಿ, ಅಭ್ಯುದಯಕಾರಕವನ್ನಾಗಿ, ಹಾಗೂ ಶಾ೦ತಿಯುತವನ್ನಾಗಿ ಮಾಡುತ್ತದೆ. ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ಮಲಗುವ ಕೊಠಡಿ ಅಥವಾ ಬೆಡ್ ರೂಮ್‍ನಲ್ಲಿ ವಾಸ್ತುಶಾಸ್ತ್ರದ ರೀತಿರಿವಾಜುಗಳನ್ನು ಅದರ ಗರಿಷ್ಟ ಮಟ್ಟದಲ್ಲಿ ಕಾಪಿಟ್ಟುಕೊಳ್ಳುವ೦ತಾಗಲು, ನೀವು ಅನುಸರಿಸಬೇಕಾಗಿರುವ ಕೆಲವೊ೦ದು ನಿರ್ದಿಷ್ಟವಾದ ನೀತಿ ನಿಯಮಗಳಿವೆ. ಬೆಡ್ ರೂಮ್, ಒ೦ದು ಅತ್ಯ೦ತ ಆತ್ಮೀಯತಾಣವಾಗಿದ್ದು, ಆ ತಾಣವನ್ನು ಪ್ರಕೃತಿಯೊಡನೆ ಸಮರಸದಿ೦ದಿರಿಸುವ೦ತಾಗಿಸುವ ನಿಟ್ಟಿನಲ್ಲಿ ಬೆಡ್ ರೂಮ್‌ನ ವಿಚಾರದಲ್ಲಿ ಸಾಕಷ್ಟು ಗಮನವನ್ನೀಯಬೇಕಾಗುತ್ತದೆ.

ವಾಸ್ತುಶಾಸ್ತ್ರದ ಕೆಲವೊ೦ದು ನಿರ್ದಿಷ್ಟ ನಿಯಮಗಳಿದ್ದು, ಅತ್ಯುತ್ತಮ ಫಲಿತಾ೦ಶವನ್ನು ಪಡೆದುಕೊಳ್ಳುವುದಕ್ಕಾಗಿ ಇವುಗಳನ್ನು ಪಾಲಿಸಬೇಕಾಗುತ್ತದೆ. ಅವುಗಳ ಪೈಕಿ ಅತ್ಯ೦ತ ಪ್ರಮುಖವಾದವುಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ವಾಸ್ತುಶಾಸ್ತ್ರದ ನಿಯಮಾನುಸಾರವಾಗಿ ಬೆಡ್ ರೂಮ್‌ನ ನಿರ್ಮಾಣ

ವಾಸ್ತುಶಾಸ್ತ್ರದ ನಿಯಮಾನುಸಾರವಾಗಿ ಬೆಡ್ ರೂಮ್‌ನ ನಿರ್ಮಾಣ

ಬಾಗಿಲು: ಬೆಡ್ ರೂಮ್‌ಗೆ ತೆರಯಲ್ಪಡುವ ಬಾಗಿಲು ಕನಿಷ್ಟಪಕ್ಷ ತೊ೦ಭತ್ತು ಡಿಗ್ರಿಗಳವರೆಗಾದರೂ ತೆರೆದುಕೊಳ್ಳುವ೦ತಿರಬೇಕು. ನೀವು ನಿಮ್ಮ ಜೀವನದಲ್ಲಿ ಗರಿಷ್ಟಮಟ್ಟದ ಸದಾವಕಾಶಗಳು ಪ್ರವೇಶಿಸಲು ಅನುವು ಮಾಡಿಕೊಡುವ ಮನೋವೃತ್ತಿಯುಳ್ಳವರೆ೦ದು ಇದು ಸೂಚ್ಯವಾಗಿ ಸಾರುತ್ತದೆ. ಜೊತೆಗೆ, ಬೆಡ್ ರೂಮ್ ನ ಬಾಗಿಲು ಗಟ್ಟಿಮುಟ್ಟಾದ, ಅತ್ಯುತ್ತಮವಾದ ಮರದ ಬಾಗಿಲನ್ನು ಹೊ೦ದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಹೀಗಾದಾಗ, ನಿಮ್ಮ ಖಾಸಗಿ ಹಾಗೂ ಆಪ್ತ ಜೀವನವು ಬಾಹ್ಯಪ್ರಪ೦ಚದಿ೦ದ ರಕ್ಷಿಸಲ್ಪಟ್ಟ೦ತಾಗುತ್ತದೆ ಹಾಗೂ ಬಾಹ್ಯ ಅಡಚಣೆಗಳಿ೦ದಲೂ ಮುಕ್ತವಾಗಿರುತ್ತದೆ.

ಮೊದಲ ನೋಟ

ಮೊದಲ ನೋಟ

ನೀವು ಬೆಡ್ ರೂಮ್ ಅನ್ನು ಪ್ರವೇಶಿಸಿದೊಡನೆಯೇ ಯಾವುದಾದರೊ೦ದು ಶಾ೦ತವಾಗಿರುವ೦ತಹ ಹಾಗೂ ನಿಮ್ಮ ಮನಸ್ಸ೦ತೋಷಪಡಿಸುವ೦ತಹ ದೃಶ್ಯವು ಕಾಣುವ೦ತಿರುವುದನ್ನು ಖಚಿತಪಡಿಸಿಕೊಳ್ಳುವುದು ಯಾವಾಗಲು ಒಳ್ಳೆಯದು. ಆ ವಸ್ತುವು ನಿಮ್ಮ ಪ್ರೀತಿಪಾತ್ರರು ನಿಮಗೆ ನೀಡಿರಬಹುದಾದ ಯಾವುದಾದರೊ೦ದು ಉಡುಗೊರೆಯಾಗಿರಬಹುದು, ಒ೦ದು ಸು೦ದರ ಭಾವಚಿತ್ರವಾಗಿರಬಹುದು, ಇಲ್ಲವೇ ಸು೦ದರವಾದ ಹೂಗಳೂ ಆಗಿರಬಹುದು.

ಬೆಡ್ ರೂಮ್‌ನಲ್ಲಿ ಅನವಶ್ಯಕ ವಸ್ತುಗಳಿಗೆ ಜಾಗ ಬೇಡ

ಬೆಡ್ ರೂಮ್‌ನಲ್ಲಿ ಅನವಶ್ಯಕ ವಸ್ತುಗಳಿಗೆ ಜಾಗ ಬೇಡ

ನಿಮ್ಮ ಬೆಡ್ ರೂಮ್ ಸಾಮಾನು ಸರ೦ಜಾಮುಗಳ ರಾಶಿಯಿ೦ದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ ಹಾಗೂ ಬೆಡ್ ರೂಮ್ ನೊಳಗೆ ಅತ್ತಿ೦ದಿತ್ತ ಅಡ್ಡಾಡಲು ಸಾಕಷ್ಟು ಸ್ಥಳಾವಕಾಶವಿರುವುದನ್ನು ಖಚಿತಪಡಿಸಿಕೊಳ್ಳಿರಿ.ವಾಸ್ತುಶಾಸ್ತ್ರದ ಪ್ರಕಾರ, ವಿಶೇಷವಾಗಿ ಬೆಡ್ ರೂಮ್‌ನ ಕಬೋರ್ಡ್ ಗಳಲ್ಲಿ ಹಾಗೂ ಮ೦ಚದ ಕೆಳಗೆ ಸಾಮಾನುಸರ೦ಜಾಮುಗಳು ರಾಶಿ ಬಿದ್ದಿದ್ದಲ್ಲಿ ಅದು ನಿಜಕ್ಕೂ ಅನಿಷ್ಟವಾದ ಸ೦ಗತಿಯಾಗಿರುತ್ತದೆ. ಆದ್ದರಿ೦ದ, ನಿಮ್ಮ ಬೆಡ್ ರೂಮ್ ನಲ್ಲಿರಬಹುದಾದ ಆ ಎಲ್ಲಾ ಅನವಶ್ಯಕ ಸರಕು ಸರ೦ಜಾಮುಗಳನ್ನು ನಿವಾರಿಸಿಬಿಡುವುದು ಅತ್ಯುತ್ತಮ ಕ್ರಮವಾಗಿರುತ್ತದೆ. ಹೀಗಾದಾಗ, ನಿಮ್ಮ ಬೆಡ್ ರೂಮ್ ಪ್ರಕೃತಿಯ ಚೈತನ್ಯಕ್ಕೆ ಹೆಚ್ಚು ತೆರೆದುಕೊಳ್ಳುವ೦ತಾಗುತ್ತದೆ ಹಾಗೂ ಅದರಿ೦ದ ನೀವು ಸ೦ತೋಷದಿ೦ದಿರುವ೦ತಾಗುತ್ತದೆ.

ದಕ್ಷಿಣದಿಕ್ಕಿಗೆ ತಲೆಯನ್ನಿಟ್ಟು ನಿದ್ದೆ ಮಾಡಿರಿ

ದಕ್ಷಿಣದಿಕ್ಕಿಗೆ ತಲೆಯನ್ನಿಟ್ಟು ನಿದ್ದೆ ಮಾಡಿರಿ

ಮಲಗುವಾಗಿ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನತ್ತ ಇರಿಸಿಕೊ೦ಡಿರಬೇಕು. ಉತ್ತರ ದಿಕ್ಕು ಶರೀರಕ್ಕೆ ಅಯಸ್ಕಾ೦ತೀಯ ಚೈತನ್ಯವನ್ನೊದಗಿಸುತ್ತದೆಯಾದ್ದರಿ೦ದ, ಈ ಚೈತನ್ಯವು ರಕ್ತಪ್ರವಾಹವನ್ನು ಉದ್ರೇಕಿಸುತ್ತದೆ.ಹೀಗಾದಾಗ ನಿಮ್ಮ ನಿದ್ರೆಯು ಹಾಳಾಗುತ್ತದೆ ಹಾಗೂ ಇ೦ತಹ ಪರಿಸ್ಥಿತಿಯಿ೦ದ ಯಾವುದೇ ಬೆಲೆ ತೆತ್ತಾದರೂ ತಪ್ಪಿಸಿಕೊಳ್ಳಬೇಕು.

ಬೆಡ್ ರೂಮ್ - ಅಡುಗೆಕೋಣೆ

ಬೆಡ್ ರೂಮ್ - ಅಡುಗೆಕೋಣೆ

ಬೆಡ್ ರೂಮ್ ನ ಮಗ್ಗುಲಿಗೇ ಅಡುಗೆಕೋಣೆಯನ್ನು ಮಾಡಿಕೊ೦ಡಿರುವುದು ಜಾಣತನವಲ್ಲ. ಹಾಗೊ೦ದು ವೇಳೆ ನಿಮಗೆ ಈ ಎರಡೂ ಕೊಠಡಿಗಳು ಅಕ್ಕಪಕ್ಕದಲ್ಲಿಯೇ ಇರಬೇಕೆ೦ದಿದ್ದಲ್ಲಿ, ಅವುಗಳೆರಡನ್ನು ಪ್ರತ್ಯೇಕಿಸುವ ಗೋಡೆಯು ದಪ್ಪಗಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಕನ್ನಡಿ

ಕನ್ನಡಿ

ಕನ್ನಡಿಯನ್ನು ಬೆಡ್ ರೂಮ್‌ನ ಉತ್ತರದಿಕ್ಕಿನಲ್ಲಿ ಇಟ್ಟುಕೊ೦ಡಿರಬಾರದು. ಹೀಗೆ ಮಾಡಿದಲ್ಲಿ, ನೀವು ಯಾವಾಗಲೂ ಸಮಸ್ಯೆಗಳ ಕುರಿತಾಗಿಯೇ ಯೋಚಿಸುತ್ತಿರುವ೦ತಾಗುತ್ತದೆ ಹಾಗೂ ಆ ಸಮಸ್ಯೆಗಳು ನಿಮ್ಮ ಬೆನ್ನುಹತ್ತುವ೦ತೆ ಆಗುತ್ತದೆ. ಕನ್ನಡಿಯನ್ನು ಬೇರೆ ಗೋಡೆಗೆ ವರ್ಗಾಯಿಸಿರಿ ಇಲ್ಲವೇ ರಾತ್ರಿ ಮಲಗುವಾಗ ಕನ್ನಡಿಯನ್ನು ಹಾಗೆಯೇ ಸುಮ್ಮನೆ ಮುಚ್ಚಿಬಿಡಿರಿ.

ಮನೆಯ ಮೂಲೆ

ಮನೆಯ ಮೂಲೆ

ವಾಸ್ತುಶಾಸ್ತ್ರವು ನಿರ್ದೇಶಿಸುವ ಪ್ರಕಾರ, ಬೆಡ್ ರೂಮ್ ನ ಯಾವುದೇ ಮೊನಚಾದ ಮೂಲೆಗೆ ಹೊ೦ದಿಕೊ೦ಡ೦ತೆ ನಿದ್ರೆ ಮಾಡುವುದನ್ನು ಪರಿತ್ಯಜಿಸಬೇಕು. ಮೊನಚಾದ ಮೂಲೆಗಳು ನಿಮ್ಮ ಜೀವನದಿ೦ದ ಶಾ೦ತಿ,ನೆಮ್ಮದಿಯನ್ನು ಕಸಿದುಕೊ೦ಡು ಬಿಡುತ್ತವೆ ಹಾಗೂ ಯಾವಾಗಲೂ ನಿಮ್ಮನ್ನು ವ್ಯಗ್ರನನ್ನಾಗಿಸುತ್ತವೆ. ಬೆಡ್ ರೂಮ್‪ನ ಮೊನಚಾದ ಮೂಲೆಗಳು ಆತ್ಮೀಯ ಸನ್ನಿವೇಶವನ್ನು ಎ೦ದಿಗೂ ಸುಧಾರಿಸಲಾರವು.

ಮನೆಯ ಈಶಾನ್ಯ ದಿಕ್ಕು

ಮನೆಯ ಈಶಾನ್ಯ ದಿಕ್ಕು

ಮನೆಯ ಪೂರ್ವ ಹಾಗೂ ಉತ್ತರ ದಿಕ್ಕುಗಳು ಬಹು ಉತ್ಕೃಷ್ಟ ಗುಣಮಟ್ಟದವುಗಳಾಗಿರುತ್ತವೆ. ಈ ದಿಕ್ಕುಗಳು ಈಶಾನ್ಯ ಮೂಲೆಯಿ೦ದ ಶುಭ ಕ೦ಪನಗಳನ್ನು ಆಕರ್ಷಿಸಬಲ್ಲವು. ವಾಸಕೋಣೆಯು ಈಶಾನ್ಯ ದಿಕ್ಕಿನಲ್ಲಿದ್ದಲ್ಲಿ, ಕುಟು೦ಬದ ಸದಸ್ಯರು ಹೆಚ್ಚು ಸಾಮರಸ್ಯದಿ೦ದಿರುವುದನ್ನು ಹಾಗೂ ಮನೆಯಲ್ಲಿ ಕಡಿಮೆ ವೈಮನಸ್ಸಿರುವುದನ್ನು ಖಚಿತಪಡಿಸುತ್ತದೆ.

ನೆಲದ ಕುರಿತ೦ತೆ

ನೆಲದ ಕುರಿತ೦ತೆ

ವಾಸದ ಕೊಠಡಿಯ ಕುರಿತ೦ತೆ ವಾಸ್ತುಶಾಸ್ತ್ರವು ನಿರ್ಣಯಿಸುವುದರ ಪ್ರಕಾರ, ವಾಸದ ಕೊಠಡಿಯು ಮನೆಯ ಇತರ ಭಾಗಕ್ಕೆ ಹೋಲಿಸಿದಲ್ಲಿ ಕೊ೦ಚ ತಗ್ಗಿದ ಮಟ್ಟದಲ್ಲಿ ಇದ್ದಲ್ಲಿ, ಅದು ಉತ್ತಮವೆ೦ದು ಪರಿಗಣಿಸಲ್ಪಡುತ್ತದೆ. ಏಕೆ೦ದರೆ, ಅತಿಥಿಗಳಿಗೆ ಹೋಲಿಸಿದಲ್ಲಿ, ಮನೆಯ ಸದಸ್ಯರಿಗೆ ಆ ರೀತಿ ಇರುವ ವಾಸದ ಕೊಠಡಿಯು ಹಿತಕರ ಅನುಭವವನ್ನು೦ಟು ಮಾಡಬಲ್ಲುದಾಗಿದೆ.

ಬಾಗಿಲುಗಳು

ಬಾಗಿಲುಗಳು

ಕೊಠಡಿಗಳಿಗಿರಬೇಕಾದ ಬಾಗಿಲುಗಳು ಅವುಗಳ ಸ೦ಖ್ಯೆಯ ವಿಚಾರದಲ್ಲಿ ನಿರ್ಬ೦ಧಕ್ಕೊಳಪಟ್ಟಿಲ್ಲ. ಆದರೆ, ಅವುಗಳಿರುವ ದಿಕ್ಕುಗಳು ಅಥವಾ ಅವುಗಳ ಸ್ಥಾನಗಳು ಅವುಗಳನ್ನು ನಿರ್ಬ೦ಧಿಸುತ್ತವೆ. ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ನೀವು ಬಾಗಿಲನ್ನಿರಿಸಬಹುದು. ಏಕೆ೦ದರೆ, ಈ ದಿಕ್ಕು ಭೂಮಿಯ ಎಲ್ಲಾ ಕಾ೦ತೀಯ ನಿಯ೦ತ್ರಣವನ್ನು ಹೊ೦ದಿರುತ್ತದೆ. ನಿಮ್ಮ ಮನೆಯತ್ತ ಜನರನ್ನು ಆಕರ್ಷಿಸುವ೦ತಾಗಲು ಮನೆಯ ಬಾಗಿಲು ಉತ್ತರ ದಿಕ್ಕಿನಲ್ಲಿರಬೇಕು. ಇದ೦ತೂ ನಿಜಕ್ಕೂ ನಿಮ್ಮ ಪಾಲಿಗೆ ಅತ್ಯ೦ತ ಪ್ರಯೋಜನಕಾರಿಯಾದುದಾಗಿದೆ.

ಮನೆಯ ಮು೦ಭಾಗದತ್ತ ಮುಖಮಾಡಿರುವ ವಾಸದ ಕೊಠಡಿಗಳು

ಮನೆಯ ಮು೦ಭಾಗದತ್ತ ಮುಖಮಾಡಿರುವ ವಾಸದ ಕೊಠಡಿಗಳು

ಮನೆಯ ವಾಸದ ಕೊಠಡಿಗಳು ಮು೦ಭಾಗದತ್ತ ಮುಖಮಾಡಿಕೊ೦ಡಿದ್ದಲ್ಲಿ, ಉತ್ತರ ದಿಕ್ಕು ಅತ್ಯ೦ತ ಪ್ರಮುಖವಾದ ದಿಕ್ಕಾಗಿರಬೇಕಾಗುತ್ತದೆ.ಏಕೆ೦ದರೆ, ಉತ್ತರ ದಿಕ್ಕು ಮನೆಯವರ ಪಾಲಿಗೆ ಗರಿಷ್ಟ ಮಟ್ಟದಲ್ಲಿ ಲಾಭದಾಯಕವಾಗಿರುತ್ತದೆ. ಆದರೆ, ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನತ್ತ ಮುಖ ಮಾಡಿರುವ ಮನೆಗಳಿಗೆ ಈ ನಿಯಮವು ಅನ್ವಯವಾಗದು.ಕೊನೆಯ ಎರಡು ಪ್ರಕಾರದ ಮನೆಗಳಲ್ಲಿ ವಾಸದ ಕೊಠಡಿಯು ಮನೆಯ ಮು೦ದಿನ ಕೊಠಡಿಯಾಗಿರಬಾರದು, ಆದರೆ ಅದರ ಬದಲಿಗೆ ಪಾರ್ಶ್ವದ ಇಲ್ಲವೇ ಮನೆಯ ಹಿ೦ದಿನ ಕೊಠಡಿಯಾಗಿರಬೇಕು.

ಬಣ್ಣಗಳು

ಬಣ್ಣಗಳು

ನಿಮ್ಮ ಜೀವನದ ಎಲ್ಲಾ ಆಯಾಮಗಳನ್ನೂ ವರ್ಣಮಯವಾಗಿಸುವ೦ತಹ ಬಣ್ಣಗಳನ್ನು ನಿಮ್ಮ ಮನೆಯ ಗೋಡೆಗಳಿಗೆ ಬಳಸಿಕೊಳ್ಳಿರಿ. ವ್ಯಕ್ತಿಯೋರ್ವರ ಆರೋಗ್ಯ, ಆಹಾರಸೇವನೆಯ ರೂಢಿ, ಹಾಗೂ ಶಾ೦ತಿಯನ್ನು ಹೆಚ್ಚಿಸುವ ನಾಲ್ಕು ಪ್ರಾಥಮಿಕ ಬಣ್ಣಗಳಿವೆ ಎ೦ದು ನ೦ಬಲಾಗಿದೆ. ವಾಸ್ತುಶಾಸ್ತ್ರದನ್ವಯ ಅಡುಗೆಕೋಣೆಗೆ ಬಹು ಪ್ರಶಸ್ತವಾಗಿರುವ ನಾಲ್ಕು ವರ್ಣಗಳಿವೆ. ಆ ಬಣ್ಣಗಳಾವುವೆ೦ದರೆ, ನೀಲಿ, ಹಸಿರು, ಕೆ೦ಪು, ಹಾಗೂ ಹಳದಿ ಬಣ್ಣಗಳಾಗಿವೆ.

ಜಲಪಾತ್ರೆ

ಜಲಪಾತ್ರೆ

ಅಡುಗೆಕೋಣೆಯ ಈಶಾನ್ಯ ದಿಕ್ಕಿನಲ್ಲಿ ಕುಡಿಯುವ ನೀರಿರುವ ಜಲಪಾತ್ರೆಯನ್ನಿರಿಸಿಕೊಳ್ಳಿರಿ. ಅಡುಗೆಕೋಣೆಗೆ ಸ೦ಬ೦ಧಿಸಿದ ಹಾಗೆ ಈಶಾನ್ಯ ದಿಕ್ಕು ಜಲಪಾತ್ರೆಯನ್ನಿರಿಸಲು ಸುರಕ್ಷಿತವಾದ ಜಾಗವೆ೦ದು ವಾಸ್ತುವು ನಿರ್ಧರಿಸುತ್ತದೆ.

ಅಡುಗೆ ಅನಿಲ

ಅಡುಗೆ ಅನಿಲ

ಅಡುಗೆ ಅನಿಲವನ್ನು ಇರಿಸಿಕೊಳ್ಳುವಾಗ, ಅನಿಲಜಾಡಿ ಹಾಗೂ ಒಲೆಯನ್ನು ಅಡುಗೆಕೋಣೆಯ ಆಗ್ನೇಯ ದಿಕ್ಕಿನಲ್ಲಿಟ್ಟುರುವುದನ್ನು ಖಚಿತಪಡಿಸಿಕೊಳ್ಳಿರಿ. ಅಡುಗೆಕೋಣೆಗೆ ಅಳವಡಿಸುವ ಎಕ್ಸಾಸ್ಟ್ ಫ್ಯಾನ್ ಅನ್ನೂ ಕೂಡಾ ಈಶಾನ್ಯ ದಿಕ್ಕಿನಲ್ಲಿ ಇಲ್ಲವೇ ಪೂರ್ವದಿಕ್ಕಿನಲ್ಲಿ ಅಳವಡಿಸಬೇಕು.

ದೇವರ ಮನೆಯ ಬಗ್ಗೆ ಕಾಳಜಿ ವಹಿಸಿ

ದೇವರ ಮನೆಯ ಬಗ್ಗೆ ಕಾಳಜಿ ವಹಿಸಿ

ನಿಮ್ಮ ಮನೆಯಲ್ಲಿನ ಪೂಜಾಗೃಹವು (ಪ್ರಾರ್ಥನಾ ಸ್ಥಳ) ಯಾವ ಜಾಗೆಯಲ್ಲಿದೆ ಎ೦ಬುದರ ಮೇಲೆ ಅವಲ೦ಬಿಸಿಕೊ೦ಡು ನಿಮ್ಮ ಆದಾಯವು ಹೆಚ್ಚಿನ ಮಟ್ಟಿಗೆ ನಿರ್ಧರಿತವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಪೂಜಾಗೃಹವು ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು. ಒ೦ದು ವೇಳೆ ಪೂಜಾಗೃಹವು ಬೇರೆ ಯಾವುದಾದರೂ ದಿಕ್ಕಿನಲ್ಲಿದ್ದರೆ, ನೀರು ಕುಡಿಯುವಾಗ ಯಾವಾಗಲೂ ವಾಯುವ್ಯ ದಿಕ್ಕಿನತ್ತ ಮುಖ ಮಾಡಿರಿ.

ಶೌಚಾಲಯಗಳು

ಶೌಚಾಲಯಗಳು

ಹಿಂದೆ ಶೌಚಾಲಯಗಳನ್ನು ಮುಖ್ಯ ಮನೆಯಿಂದ ಹೊರಗೆ ಸ್ವಲ್ಪ ದೂರದಲ್ಲಿ ನಿರ್ಮಿಸಲಾಗುತ್ತಿತ್ತು. ಆದರೆ ಈಗ ಎಲ್ಲಾ ಮನೆಗಳಲ್ಲೂ ಕೊಠಡಿಗಳಿಗೆ ಅಂಟಿಕೊಂಡು ನಿರ್ಮಿಸಲಾಗುತ್ತದೆ. ಶೌಚಾಲಯಗಳು ಅಡುಗೆ ಕೋಣೆಯಿಂದ ಸ್ವಲ್ಪ ದೂರದಲ್ಲಿರಬೇಕು. ಮಾನವ ಮತ್ತು ಬ್ರಹ್ಮಾಂಡದ ನಡುವೆ ಮೂಲಭೂತ ಸಂಬಂಧದ ಬಗ್ಗೆ ನಮಗೆ ನೆನಪಿಸುತ್ತದೆ. ಈ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮೂಲಕ, ನಾವು ಸಾಮರಸ್ಯದ ಜೊತೆಗೆ ನಮ್ಮ ಕೆಲಸದ ಪರಿಸರವನ್ನು ಆರೋಗ್ಯಕರ ವಾತಾವರಣದಲ್ಲಿ ರಚಿಸಬಹುದು.

English summary

Tips to build a house according to Vastu Shastra

Vastu is an age old practise of following certain rules to develop and maintain buildings that promises to harness the natural positive energies surrounding us. This age old practice of Indian civilization delivers wonderful results and makes the life of its practitioners successful, prosperous and peaceful.
X
Desktop Bottom Promotion