For Quick Alerts
ALLOW NOTIFICATIONS  
For Daily Alerts

ಗ್ಯಾಸ್ ಸಿಲಿಂಡರ್ ಸುರಕ್ಷತೆ: ತಪ್ಪದೇ ಇಂತಹ ಸೂಚನೆಗಳನ್ನು ಪಾಲಿಸಿ!

|

ದ್ರವೀಕೃತ ಪೆಟ್ರೋಲಿಯಂ ಅನಿಲ ಅರ್ಥಾತ್ LPG ಈಗ ಬಹುತೇಕ ಪ್ರತಿಯೊಬ್ಬರ ಅಡುಗೆ ಮನೆಯನ್ನು ಅಲಂಕರಿಸಿದೆ. ಆದರೆ ಇದನ್ನು ಬಳಸುವುದನ್ನು ಕಲಿತಿರುವ ಜನ ಇದರ ಕುರಿತು ಮುನ್ನೆಚ್ಚರಿಕೆಯನ್ನು ಸಹ ಹೊಂದಿದ್ದಾರೆಯೇ ಎಂಬುದೇ ಪ್ರಶ್ನೆ. ಏಕೆಂದರೆ ಇದು ಮನೆಯಲ್ಲಿನ ಅತ್ಯಂತ ಅಪಾಯಕಾರಿ ವಸ್ತುಗಳಲ್ಲಿ ಒಂದಾಗಿರುತ್ತದೆ. ಇದನ್ನು ಸುರಕ್ಷಿತವಾಗಿ ಬಳಸದಿದ್ದಲ್ಲಿ, ಅಪಾಯ ಕಟ್ಟಿಟ್ಟ ಬುತ್ತಿ.

ಗ್ಯಾಸ್ ಸಿಲಿಂಡರ್ ಸುರಕ್ಷತೆಯನ್ನು ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು. LPG ಖರೀದಿಸುವಾಗಲೇ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡೆ ಖರೀದಿಸಿದರೆ ಉತ್ತಮ. ನಂತರ ಅದರಲ್ಲಿ ಅಡುಗೆ ಮಾಡುವಾಗ ಮತ್ತು ಅದರ ನಿರ್ವಹಣೆಯನ್ನು ಮಾಡುವಾಗಲೂ ಸಹ ಸುರಕ್ಷತೆಗೆ ಮಣೆ ಹಾಕಬೇಕು. ಇದಕ್ಕೆ ಸಂಬಂಧಪಟ್ಟಂತೆ ವಾಲ್ವ್‌ಗಳು ಮತ್ತು ಪೈಪ್‌ಗಳ ಸಂಪರ್ಕವಿರುತ್ತದೆ.

5 Important Precautions When Using Gas Cylinders

ಇವುಗಳಲ್ಲಿ ಹಲವಾರು ತೊಡಕುಗಳು ಮತ್ತು ಸುರಕ್ಷತೆಯ ಅಪಾಯಗಳು ಇರುತ್ತವೆ. ಅದಕ್ಕಾಗಿ ಇದನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕಾದ ಜವಾಬ್ದಾರಿ ಇರುತ್ತದೆ. ಅದಕ್ಕಾಗಿ ಯಾವಾಗಲು ಅಧಿಕೃತ ಮಾರಾಟಗಾರರ ಬಳಿ ಮಾತ್ರ ಸಿಲಿಂಡರ್ ಖರೀದಿಸಿ. ಹಾಗೆಯೇ ಕಂಪನಿಯಿಂದ ಬಂದ ಸಿಲಿಂಡರಿನಲ್ಲಿ ಸೀಲ್ ಮತ್ತು ಕ್ಯಾಪ್ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಸಿಲಿಂಡರ್ ಮೇಲೆ ಇರುವ ದಿನಾಂಕವನ್ನು ಸಹ ಪರಿಗಣಿಸಿ. ಒಂದು ವೇಳೆ ಸಿಲಿಂಡರ್ ಅವಧಿ ಮೀರಿದ್ದರೆ, ಅದನ್ನು ನಿರಾಕರಿಸುವ ಹಕ್ಕು ನಿಮಗಿದೆ ಎಂಬುದನ್ನು ಮರೆಯಬೇಡಿ.

ಒಂದು ಸಣ್ಣ ಅಜಾಗರೂಕತೆಯು ಸಹ ನಿಮ್ಮ ಮತ್ತು ನಿಮ್ಮ ಮನೆಯವರ ಜೀವವನ್ನು ಅಪಾಯಕ್ಕೆ ದೂಡುತ್ತದೆ ಎಂಬುದನ್ನು ಮರೆಯಬೇಡಿ. ಬನ್ನಿ ಸಿಲಿಂಡರ್ ಕುರಿತಾಗಿ ನಾವು ವಹಿಸಬೇಕಾದ ಮುಂಜಾಗರೂಕತೆ ಕ್ರಮಗಳ ಕುರಿತು ಮುಂದೆ ತಿಳಿದುಕೊಳ್ಳೋಣ. ತಿಗಣೆಗಳ ಕಾಟದಿಂದ ಮುಕ್ತಿ ಹೊಂದಲು 11 ಮನೆಮದ್ದುಗಳು

ನಿರ್ವಹಣೆ
ಯಾವಾಗಲು ಸಿಲಿಂಡರನ್ನು ಮೇಲ್ಮುಖವಾಗಿ ಇರಿಸಿಕೊಳ್ಳಿ. ಒಂದು ವೇಳೆ ಸಿಲಿಂಡರನ್ನು ಬೇರೆ ರೀತಿಯಲ್ಲಿ ಇಡುವಂತೆ ವಿನ್ಯಾಸಗೊಳಿಸಿದ್ದಾರೆ, ಆ ವಿನ್ಯಾಸಕ್ಕೆ ಹೊಂದುವಂತೆ ಅದನ್ನು ಇಡಿ. ಯಾವುದೇ ಕಾರಣಕ್ಕು ಸಿಲಿಂಡರು ಬಿದ್ದು ಹೋಗುವಂತೆ ಇಡಬೇಡಿ. ಇದನ್ನು ಬೀಳುವಂತೆ ಇಡುವುದು, ಗುಡುಗಿಸುವುದು ಅಥವಾ ಎಳೆದುಕೊಂಡು ಹೋಗುವುದು ನಿಷಿದ್ಧ. ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಕೊಂಡುಕೊಂಡಾಗ ಅದನ್ನು ಸಮರ್ಪಕ ಉದ್ದೇಶಕ್ಕೆ ಬಳಸಬಹುದೇ ಎಂಬುದನ್ನು
ಖಾತ್ರಿಪಡಿಸಿಕೊಳ್ಳಿ.

LPG ಯನ್ನು ಬಳಸುವ ಬಗೆ
ಗ್ಯಾಸ್ ಸಿಲಿಂಡರ್ ಸುರಕ್ಷತೆಯು ಮಾಡಬೇಕಾದ ಮತ್ತು ಮಾಡಬಾರದಾದ ಒಂದು ದೊಡ್ಡ ಪಟ್ಟಿಯನ್ನು ಹೊಂದಿದೆ. ಅಡುಗೆ ಮನೆಯಲ್ಲಿ ಇದನ್ನು ಬಳಸುವಾಗ, ಅಲ್ಲಿ ಸಮರ್ಪಕವಾಗಿ ಗಾಳಿಯಾಡುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಉರಿಯ ಪಕ್ಕದಲ್ಲಿ ಪ್ಲಾಸ್ಟಿಕ್ ಮತ್ತು ಇನ್ನಿತರ ದಹನವಾಗುವ ವಸ್ತುಗಳನ್ನು ಇಡಲು ಹೋಗಲೇ ಬೇಡಿ. ಸಿಲಿಂಡರ್ ಬಳಸದಿದ್ದಾಗ ರೆಗ್ಯೂಲೇಟರನ್ನು ಕಡ್ಡಾಯವಾಗಿ ಆಫ್ ಮಾಡಿ.

ಗ್ಯಾಸ್ ಸಿಲಿಂಡರನ್ನು ಸಾಗಿಸುವುದು
ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ಗ್ಯಾಸ್ ಸಿಲಿಂಡರನ್ನು ಸಾಗಿಸಬೇಕಾಗಿ ಬರುತ್ತದೆ. ಹೀಗೆ ಸಾಗಿಸುವಾಗ ಸಿಲಿಂಡರಿನ ಸುರಕ್ಷತೆಯ ದೃಷ್ಟಿಯಿಂದ ಕೆಲವೊಂದು ಅಗತ್ಯ ಕ್ರಮಾಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ ಸಿಲಿಂಡರಿಗೆ ಅಗತ್ಯವಾದ ಎಲ್ಲಾ ಕ್ಯಾಪ್‌ಗಳನ್ನು ಮತ್ತು ಕವರ್‌ಗಳನ್ನು ಹಾಕಿ ನಂತರ ಸಾಗಿಸಿ. ಹೀಗೆ ಮಾಡುವುದರಿಂದ ಗ್ಯಾಸ್ ಸಿಲಿಂಡರಿನಲ್ಲಿ ವಾಲ್ವ್‌ನಲ್ಲಿ ಕೊಳೆ ಮತ್ತು ಧೂಳು ಸಂಗ್ರಹವಾಗುವುದನ್ನು ತಪ್ಪಿಸಬಹುದು. ಸುದ್ದಿ ಪತ್ರಿಕೆಯ ಸದ್ವಿನಿಯೋಗ ಮಾಡಿಕೊಳ್ಳುವುದು ಹೇಗೆ?

ಸಂಗ್ರಹಣೆ
ಯಾವಾಗಲು ನಿಮಗೆ ಅಗತ್ಯವಾದಷ್ಟು ಸಿಲಿಂಡರನ್ನು ಮಾತ್ರ ಮನೆಯಲ್ಲಿ ಸಂಗ್ರಹಿಸಿಡಿ. ಒಣಗಿದ ಮತ್ತು ಗಾಳಿಯಾಡುವ ಮನೆಯ ಸ್ಥಳವು ಸಿಲಿಂಡರ್ ಸಂಗ್ರಹಿಸಿಡಲು ಸುರಕ್ಷಿತವಾದ ಸ್ಥಳವಾಗಿರುತ್ತದೆ. ಈ ಗ್ಯಾಸ್ ಸಿಲಿಂಡರ್‌ಗಳು ಹೊರಗಿನ ಶಾಖಕ್ಕೆ ಸಿಲುಕದಿರುವಂತಹ ಸ್ಥಳದಲ್ಲಿಡಿ. ಈ ಮೇಲಿನವುಗಳು ಗ್ಯಾಸ್ ಸಿಲಿಂಡರಿನ ಸುರಕ್ಷತೆಯ ಸಲಹೆಗಳಾಗಿವೆ.

ಟ್ಯೂಬ್ ಮತ್ತು ರೆಗ್ಯೂಲೇಟರ್‌ಗಳು
ಟ್ಯೂಬ್ ಮತ್ತು ರೆಗ್ಯೂಲೇಟರ್‌ಗಳಿಗೆ ಯಾವಾಗಲು ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ನೀಡಬೇಕು. ಏಕೆಂದರೆ ಇವು ಯಾವಾಗಲು ಸೋರಿಕೆಯಾಗುವಂತಹ ಅಪಾಯವನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತವೆ. ಹಾಗಾಗಿ ಕಾಲಕಾಲಕ್ಕೆ ಇದನ್ನು ನಿರ್ವಹಣೆ ಮಾಡುತ್ತಲೆ ಇರಬೇಕು. ಗ್ಯಾಸ್ ಸಿಲಿಂಡರ್ ಬಳಸುವವರು ಟ್ಯೂಬ್‌ಗಳನ್ನು ನಿಯಮಿತವಾಗಿ ಬದಲಾಯಿಸುತ್ತ ಇದ್ದರೆ ಸೋರಿಕೆಯನ್ನು ತಪ್ಪಿಸಬಹುದು. ಹಳೆಯ ಟ್ಯೂಬ್‍ಗಳನ್ನು ರಿಪೇರಿ ಮಾಡಿ ಬಳಸುವ ಬದಲು, ಅದನ್ನು ಬದಲಾಯಿಸಿ. ಈ ನಿಟ್ಟಿನಲ್ಲಿ ನಿಮ್ಮ ಸಿಲಿಂಡರ್ ಪೂರೈಸುವವರ ಅಥವಾ ವೃತ್ತಿಪರ ಮೆಕಾನಿಕ್‌ನ ಸಹಾಯವನ್ನು ಪಡೆಯುವುದು ಉತ್ತಮ.

English summary

5 Important Precautions When Using Gas Cylinders

Liquefied petroleum gas is used in almost every household. It is the most important and dangerous part of cooking requirements. It is important to ensure that you are using gas cylinders safely. For this, you should know all the precautions of handling gas cylinders. The precautions for gas cylinder handling can be divided into three categories.
X
Desktop Bottom Promotion