For Quick Alerts
ALLOW NOTIFICATIONS  
For Daily Alerts

ಕೀಟಗಳ ನಿವಾರಣೆಗೆ ನೈಸರ್ಗಿಕ ದಾರಿಗಳು

By poornima heggade
|

ಮನೆ ಎಂದ ಮೇಲೆ ಎಲ್ಲಾ ಕೋಣೆಗಳೂ ಪ್ರಮುಖವೇ. ಎಲ್ಲಾ ಕೋಣೆಗಳ ಅಲಂಕಾರ ಹಾಗೂ ವಸ್ತುಗಳ ಆಯೋಜನೆ ವಿಭಿನ್ನ ಇದು ಮನೆಯಿಂದ ಮನೆಗೂ ವಿಭಿನ್ನವಾಗಿರುತ್ತದೆ. ಎಲ್ಲರೂ ಹೆಚ್ಚಾಗಿ ನೋಡದ ಹಾಗೂ ನೀಟಾಗಿ ನಿಭಾಯಿಸಲು ಬಹಳ ಕಷ್ಟಕರವಾದ ಮನೆಯ ಒಂದು ಕೋಣೆ ಎಂದರೆ ಅಡುಗೆ ಮನೆ. ಇದಕ್ಕೆ ಕೇವಲ ಅಡುಗೆ ಮನೆಯ ಅಂದ ಅಥವಾ ಪಾತ್ರೆಗಳ ಜೋಡಣೆ ಕಾರಣವಲ್ಲ. ಅಡುಗೆ ಮನೆ ಎಂದರೆ ಕೀಟಗಳ ಪಾಲಿಗೆ ಸ್ವರ್ಗ. ಇಲ್ಲಿ ಕೀಟಗಳ ಹಾವಳಿ ನಿಮ್ಮ ಮನೆಯ ಬಾಕಿ ಯಾವುದೇ ಕೋಣೆಗಳಿಗೆ ಹೋಲಿಸಿದರೆ ಹೆಚ್ಚು.

ಇದು ಮನೆಯ ಅತ್ಯಂತ ಪ್ರಮುಖ ಭಾಗವಾಗಿದೆ. ನಿಮ್ಮ ಮನೆಯ ಹಾಲ್ ಹಲವು ದಿನಗಳು ಯಾರೇ ಬಳಸದೇ ಇರಬಹುದು, ಮನೆಯ ತಾರಸಿಯ ಮೇಲೆ ನೀವು ಹೋಗದೇ ವಾರಗಳೇ ಆಗಬಹುದು ಆದರೆ ಮನೆಯ ಅಡುಗೆ ಮನೆಗೆ ಹೋಗದೇ ಇರಲು ಸಾಧ್ಯವಿಲ್ಲ. ಆದ್ದರಿಂದ ಅಡುಗೆ ಮನೆಯನ್ನು ಅಂದಕಾಣಿಸಲು ಕಷ್ಟ ಮತ್ತು ಅದರ ಸ್ವಚ್ಛತೆ ಅಷ್ಟೇ ಮುಖ್ಯ. ಹೊಸ ಹೊಸ ಮಾದರಿಯ ಪಾತ್ರೆಗಳನ್ನು ಮತ್ತು ಶೇಲ್ಫ್ ಗಳನ್ನು ತರುವುದರಿಂದ ಆರಂಭಗೊಂಡು ಯಾವುದೇ ರೀತಿಯ ಕೀಟಗಳಿಲ್ಲದಂತೆ ನೋಡಿಕೊಳ್ಳಬೇಕು. ಹೀಗಾಗಿ ಕೀಟನಾಶಕಗಳ ಬಳಕೆಯೂ ಬಹಳ ಮುಖ್ಯವಾಗುತ್ತದೆ. ಇದಕ್ಕೆ ನೀವು ಕೆಲವು ಬಾರಿ ಬಹಳಷ್ಟು ಖರ್ಚು ಮಾಡಬೇಕಾಗಿಯೂ ಬರಬಹುದು. ಕೀಟಾಣುಗಳು ಎಷ್ಟು ಹಾನಿಕಾರಕವೋ ಅದರ ನಿವಾರಣೆಗೆ ಬಳಸುವ ಕೀಟನಾಶಕಗಳೂ ಅಷ್ಟೇ ಹಾನಿಕಾರಕವಾಗಿ ಪರಿಣಮಿಸಬಲ್ಲವು. ಹೀಗಾಗಿ ಕೆಲವು ಸುಲಭದ ಹಾಗೂ ಪರಿಣಾಮಕಾರಿಯಾದ ಕೆಲವು ನೈಸರ್ಗಿಕ ದಾರಿಗಳನ್ನು ಕೀಟಗಳ ನಿವಾರಣೆಗೆ ಬಳಸಬಹುದು. ಅವುಗಳೆಂದರೆ:

Natural Ways to Get Rid of Your Kitchen Bugs

ಜೋಳದ ಹಿಟ್ಟು
ಜೋಳದ ಹಿಟ್ಟು ಬಹಳಷ್ಟು ಪದಾರ್ಥಗಳನ್ನು ಮಾಡಲು ಬಳಸುವ ಕಾರಣ ಇದು ನಿಮ್ಮ ಅಡುಗೆ ಮನೆಯಲ್ಲಂತೂ ಇದ್ದೇ ಇರುತ್ತದೆ. ಇದನ್ನು ಸೂಪ್, ಗ್ರೇವಿಗಳು ಹಾಗೂ ಇನ್ನಿತರ ತಿನಿಸುಗಳನ್ನು ತಯಾರಿಸಲು ಹೆಚ್ಚಾಗಿ ಬಳಸುತ್ತಾರೆ. ಆದರೆ ಇದು ಇರುವೆಗಳನ್ನು ಕೊಲ್ಲುತ್ತಾರೆ ಎಂಬುದು ನಿಮಗೆ ಗೊತ್ತಿತ್ತೇ? ಇದರ ಸಿಹಿಯಾದ ರುಚಿ ಮತ್ತು ಪರಿಮಳ ಇರುವೆಗಳನ್ನು ತನ್ನತ್ತ ಸೆಳೆಯುತ್ತದೆ. ಆದರೆ ಇರುವೆಗಳ ಜೀರ್ಣಾಂಗ ವ್ಯವಸ್ಥೆ ಇದನ್ನು ಜೀರ್ಣಮಾಡುವುದಿಲ್ಲ. ಇರುವೆಗಳು ಹೆಚ್ಚಾಗಿ ದಾಳಿ ಮಾಡುವಲ್ಲಿ ನೀವು ಜೋಳದ ಹಿಟ್ಟನ್ನು ಸಿಂಪಡನೆ ಮಾಡಿ, ಇದನ್ನು ಸೇವಿಸಿದ ಇರುವೆಗಳು ಮತ್ತೊಮ್ಮೆ ಬರಲಾರವು.

ಬೆಳ್ಳುಳ್ಳಿ
ಅಡುಗೆಯಲ್ಲಿ ಸುವಾಸನೆಯ ಹೆಸರು ಬಂದಾಗ ಬೆಳ್ಳುಳ್ಳಿಯ ಹೆಸರು ಖಂಡಿತ ಬಂದೇ ಬರುತ್ತದೆ. ಇದರಿಂದ ನಮ್ಮ ಆರೋಗ್ಯಕ್ಕೂ ಬಹಳ ಪ್ರಯೋಜನವಿದೆ ಜೊತೆಗೆ ನಮ್ಮ ರಕ್ತ ಹೀರುವ ಜೀವಿಗಳ ನಿವಾರಣೆಯೂ ಸಾಧ್ಯ. ಇದು ಇರುವೆ ಮತ್ತು ಜಿರಳೆಗಳ ಮೇಲೆ ರಾಮಬಾಣವಾಗಿದೆ. ಅಡುಗೆ ಮನೆಯ ಮೂಲೆಗಳಲ್ಲಿ ಬೆಳ್ಳುಳ್ಳಿಯನ್ನು ಇಡುವ ಮೂಲಕ ಇದರ ನಿವಾರಣೆ ಸಾಧ್ಯ. ಹೀಗೆ ಇಟ್ಟ ಬೆಳ್ಳುಳ್ಳಿಯನ್ನು ಹಾಗೆಯೇ ಇಡಬೇಡಿ. ಕೆಲವು ದಿನಗಳಾದ ಮೇಲೆ ಅದರ ಪ್ರಭಾವ ಕಡಿಮೆಯಾಗುತ್ತದೆ ಹೀಗೆ ಬದಲಾಯಿಸುತ್ತಾ ಬೆಳ್ಳುಳ್ಳಿಯನ್ನು ಇಡುತ್ತಾ ಇರಿ ಪ್ರಭಾವ ಮತ್ತು ಪರಿಣಾಮ ನೀವೇ ನೋಡಿ. ಇದನ್ನು ಸಿಂಪಡನೆಯ ರೀತಿಯಲೂ ಬಳಸಬಹುದು. ಸ್ವಲ್ಪ ಎಣ್ಣೆ, ಮಾರ್ಜಕ, ಮತ್ತು ನೀರಿನ ಜೊತೆಗೆ ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿ ಸಿಂಪಡನೆಯನ್ನು ತಯಾರಾಗಿಟ್ಟುಕೊಳ್ಳಿ. ಇದು ಎಂದಿಗೂ ಬಹಳ ಪ್ರಭಾವಶಾಲಿ.

ನೀಲಗಿರಿ ಎಣ್ಣೆ
ನೀಲಗಿರಿ ಮರದಿಂದ ತೆಗೆದ ಎಣ್ಣೆ ಅತ್ಯಂತ ಆಕರ್ಷಕ ಮತ್ತು ಬಹಳಷ್ಟು ಮಂದಿಯ ಮೆಚ್ಚಿನ ಸುವಾಸನೆಯಾಗಿದೆ. ಇದನ್ನು ಒಮ್ಮೆ ಕೀಟಗಳ ನಿಯಂತ್ರಣಕ್ಕೆ ಬಳಸಿ ನೋಡಿ, ಇದು ನಿಮ್ಮ ನೆಚ್ಚಿನ ಕೀಟನಾಶಕವೂ ಆಗಬಹುದು. ಇದನ್ನು ಸ್ವಲ್ಪ ನೀರಿನೊಂದಿಗೆ ಬಳಸಿ ತೆಗೆದಿಡಿ. ಇದನ್ನು ಜಿರಳೆಗಳು, ಜೇಡಗಳು ಮತ್ತಿತರ ಕೀಟಗಳ ಮೇಲೆ ಸಿಂಪಡನೆ ಮಾಡಿದರೆ ನಿಮ್ಮ ಅಡುಗೆ ಮನೆ ಈ ಎಲ್ಲಾ ಕೀಟಗಳಿಂದ ಕೂಡಲೆ ಮುಕ್ತಿ ಪಡೆಯುತ್ತದೆ.

ಬೋರಿಕ್ ಆಸಿಡ್
ಬೋರಿಕ್ ಆಸಿಡ್ ಕೂಡ ಬಹಳ ಪ್ರಭಾವಶಾಲಿ ಕೀಟನಾಶಕ. ಬೋರಿಕ್ ಆಸಿಡ್ ಅನ್ನು ಹಿಟ್ಟಿನೊಂದಿಗೆ ಮಿಶ್ರಣ ಮಾಡಿ ಅದನ್ನು ಕೀಟಗಳ ಮೇಲೆ ಸಿಂಪಡನೆ ಮಾಡಿದರೆ ಕೀಟಗಳನ್ನು ಕೂಡಲೆ ಮತ್ತು ಬಹಳ ಪ್ರಭಾವಶಾಲಿಯಾಗಿ ನಿಯಂತ್ರಣ ಮಾಡಬಹುದು. ಬೋರಿಕ್ ಆಸಿಡ ಔಷಧ ಅಂಗಡಿಗಳಲ್ಲಿ ದೊರೆಯುತ್ತದೆ ಒಂದು ವೇಳೆ ನಿಮ್ಮ ಸಮೀಪದ ಔಷಧ ಅಂಗಡಿಯಲ್ಲಿ ಬೋರಿಕ್ ಆಸಿಡ್ ದೊರೆಯದೇ ಇದ್ದಲ್ಲಿ ಬೊರಾಕ್ಸ್ ಮಾರ್ಜಕವನ್ನೂ ಇದೇ ಉದ್ದೇಶಕ್ಕಾಗಿ ಬಳಸಬಹುದು. ಬೋರಿಕ್ ಹುಡಿಯನ್ನಷ್ಟೇ ಬಳಸಬಹುದು ಅಥವಾ ಬೋರಿಕ್ ಹುಡಿಯನ್ನು ಸಕ್ಕರೆ ಮತ್ತು ನೀರಿನ ಜೊತೆಗೆ ಮಿಶ್ರಣ ಮಾಡಿಯೂ ಬಳಸಬಹುದು. ಇದರಿಂದ ಇರುವಗೆಳ ಆಕರ್ಷಣೆ ಹೆಚ್ಚಾಗುತ್ತದೆ.

English summary

Natural Ways to Get Rid of Your Kitchen Bugs

The kitchen is one of the most important elements of a house. Your guest room can stay vacant for a few weeks, you might not climb up to your terrace for days when it’s too cold but nobody can skip getting into the kitchen. That’s the reason why kitchen should also look and be as classy as rest of your house.
Story first published: Friday, January 3, 2014, 14:32 [IST]
X
Desktop Bottom Promotion