For Quick Alerts
ALLOW NOTIFICATIONS  
For Daily Alerts

ನೇಲ್ ಪಾಲಿಷ್ ರಿಮೋವರ್ ನ ಇತರ ಪ್ರಯೋಜನಗಳು

|

ನೇಲ್ ಪಾಲಿಷ್ ರಿಮೋವರ್ ಅನ್ನು ಉಗುರಿನಲ್ಲಿರುವ ಬಣ್ಣ ತೆಗೆಯಲು ಮಾತ್ರವಲ್ಲ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಕ್ಲೀನ್ ಮಾಡಲೂ ಬಳಸಬಹುದು. ಬಟ್ಟೆ ಕಲೆಯಾದರೆ ಕೆಲವೊಮ್ಮೆ ಎಷ್ಟು ಉಜ್ಜಿದರೂ ಹೋಗುವುದಿಲ್ಲ, ಆದರೆ ಸ್ವಲ್ಪ ಅಸಿಟೋನ್ ಹಾಕಿದರೆ ಸಾಕು ತಕ್ಷಣ ಕಲೆ ಮಾಯವಾಗುವುದು.

ನೇಲ್ ಪಾಲಿಷ್ ರಿಮೋವರ್ ಅಥವಾ ಅಸಿಟೋನ್ ಅನ್ನು ಉಗುರಿನಿಂದ ಬಣ್ಣ ತೆಗೆಯುವುದು ಮಾತ್ರವಲ್ಲದೆ ಹೇಗಲ್ಲಾ ಉಪಯೋಗಿಸಬಹುದೆಂದು ನೋಡೋಣ ಬನ್ನಿ:

Uses Of A Nail Polish Remover

ಗಮ್ ಕೈಗೆ ಅಂಟಿದರೆ: ಏನಾದರೂ ಅಂಟಿಸಲು ಗಮ್ ಬಳಸಿದರೆ ಗಮ್ ಕೈ ಬೆರಳಿಗಳಿಗೂ ಅಂಟುಕೊಂಡುಬಿಡುತ್ತದೆ. ಈ ರೀತಿ ಅಂಟಿದರೆ ಕೀಳಕ್ಕೆ ಹೋಗಬೇಡಿ, ಈ ರೀತಿ ಮಾಡಿದರೆ ತ್ವಚೆ ಕಿತ್ತು ಬರುವುದು. ಅದರ ಬದಲು ಸ್ವಲ್ಪ ಹತ್ತಿಯನ್ನು ಅಸಿಟೋನ್ ನಲ್ಲಿ ಅದ್ದಿ ಕೈಗೆ ಉಜ್ಜಿದರೆ ಸಾಕು ಗಮ್ ಎದ್ದು ಬರುತ್ತದೆ.

ಮಣ್ಣಿನ ವಸ್ತುಗಳ ಶುಚಿಗೆ: ನಿಮ್ಮ ಮನೆಯಲ್ಲಿ ಮಣ್ಣಿನಿಂದ ತಯಾರಿಸಿ ವಸ್ತುಗಳು ಅಥವಾ ಪಾತ್ರೆಗಳು ಇದ್ದರೆ ಅವುಗಳಲ್ಲಿ ಅರಿಶಿಣದ ಕಲೆ ಅಂಟಿಕೊಂಡಿದ್ದರೆ ಆ ಭಾಗಕ್ಕೆ ಅಸಿಟೋನ್ ಹಾಕಿ ಉಜ್ಜಿದರೆ ಸಾಕು ಪಾತ್ರೆ ಹೊಸ ಪಾತ್ರೆಯಂತಾಗುವುದು.

ಟೈಲ್ಸ್ ಶುದ್ಧ ಮಾಡಲು:
ಮನೆಯ ಟೈಲ್ಸ್ ನಲ್ಲಿ ಪೇಯಿಂಟ್ ಏನಾದರೂ ಬಿದ್ದು ಕಲೆಯಾಗಿದ್ದು ಅದನ್ನು ಒರೆಸಿದರು ಹೋಗದಿದ್ದರೆ ಅಸಿಟೋನ್ ಹಾಕಿ ಉಜ್ಜಿದರೆ ಸಾಕು ಟೈಲ್ಸ್ ಸ್ವಚ್ಛವಾಗುವುದು.

ಇಂಕ್ ಕಲೆ ತೆಗೆಯಲು: ಬಟ್ಟೆಯಲ್ಲಿ ಇಂಕ್ ಕಲೆಯಿದ್ದರೆ ರಿಮೋವರ್ ಹಾಕಿದರೆ ಸಾಕು ಸುಲಭವಾಗಿ ಹೋಗಲಾಡಿಸಬಹುದು.

ತುಕ್ಕು ಹೋಗಲಾಡಿಸಲು: ಕಬ್ಬಿಣದ ವಸ್ತುಗಳಿಂದ ತುಕ್ಕು ಹಿಡಿದಿದ್ದರೆ ಸ್ವಲ್ಪ ಅಸಿಟೋನ್ ಹಾಕಿ ಉಜ್ಜಿ ತುಕ್ಕನ್ನು ಹೋಗಲಾಡಿಸಬಹುದು.

English summary

Uses Of A Nail Polish Remover | Tips For Home Improvements | ಮನೆಯಲ್ಲಿ ನೇಲ್ ಪಾಲಿಷ್ ರಿಮೋವರ್ ನ ಉಪಯೋಗಗಳು | ಮನೆ ಅಭಿವೃದ್ಧಿಗೆ ಕೆಲ ಸಲಹೆಗಳು

Nail polish remover is also known as a glue remover as it can remove the strong glue from sticky hands, stickers from glass or utensils easily. This handy acetone bottles can be use for cleaning. Want to find out the uses of nail polish remover. Read on...
X
Desktop Bottom Promotion