For Quick Alerts
ALLOW NOTIFICATIONS  
For Daily Alerts

ಆಲೂಗೆಡ್ಡೆಯಿಂದ ಮನೆ ಕ್ಲೀನಿಂಗ್ ಹೇಗೆ?

|
Uses Of Potatoes In Cleaning
ಆಲೂಗೆಡ್ಡೆಯನ್ನು ಅಡುಗೆಗೆ ಬಳಸುತ್ತೇವೆ ಆದರೆ ಅದನ್ನು ಮನೆ ಕ್ಲೀನಿಂಗ್ ನಲ್ಲಿ ಬಳಸಿದರೆ ಅನೇಕ ಪ್ರಯೋಜನಗಳನ್ನು ಪಡೆಯುಬಹುದೆಂಬ ವಿಷಯ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಹಸಿ ಆಲೂಗೆಡ್ಡೆ ಮನೆ ಕ್ಲೀನಿಂಗ್ ನಲ್ಲಿ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ ಬನ್ನಿ:

ಮನೆ ಶುಚಿಯಲ್ಲಿ ಆಲೂಗೆಡ್ಡೆಯ ಬಳಕೆ:

ತುಕ್ಕು ಹೋಗಲಾಡಿಸಲು: ಕಬ್ಬಿಣದ ವಸ್ತುಗಳಿಗೆ ಬೇಗನೆ ತುಕ್ಕು ಹಿಡಿಯುತ್ತದೆ. ಈ ರೀತಿ ತುಕ್ಕು ಹಿಡಿದರೆ ಕಬ್ಬಿಣದ ವಸ್ತುಗಳು ಹಾಳಾಗುವುದು. ಈ ತುಕ್ಕನ್ನು ಹೋಗಲಾಡಿಸಲು ಆಲೂಗೆಡ್ಡೆಯನ್ನು ಬಳಸಿ. ಆಲೂಗೆಡ್ಡೆಯಲ್ಲಿ ಆಕ್ಸಾಲಿಕ್ ಆಸಿಡ್ ಇದ್ದು ಈ ಆಸಿಡ್ ತುಕ್ಕನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ. ತುಕ್ಕು ಹಿಡಿದಿರುವ ವಸ್ತುವಿಗೆ ಆಲೂಗೆಡ್ಡೆಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಉಜ್ಜಿ ತುಕ್ಕನ್ನು ಹೋಗಲಾಡಿಸಬಹುದು.

ಕಿಟಕಿಯ ಗ್ಲಾಸ್ ಗಳನ್ನು ಶುಚಿ ಮಾಡಲು: ಕಿಟಕಿಯ ಗ್ಲಾಸ್ ಕೊಳೆಯಾಗಿದ್ದರೆ ಹಸಿ ಆಲೂಗೆಡ್ಡೆಯನ್ನು ಗ್ಲಾಸ್ ಗೆ ಹಾಕಿ ಉಜ್ಜಿ, ನಂತರ ಹತ್ತಿಯ ಬಟ್ಟೆಯಿಂದ ಒರೆಸಿದರೆ ಕಿಟಕಿಯ ಗಾಜು ಸ್ವಚ್ಛವಾಗಿ ಕಾಣುವುದು.

ಒಡೆದ ಗ್ಲಾಸ್ ಚೂರುಗಳನ್ನು ತೆಗೆಯಲು: ಗ್ಲಾಸ್ ಬಿದ್ದು ಒಡೆದರೆ ಅದರ ಚಿಕ್ಕಚೂರುಗಳನ್ನು ಹೆಕ್ಕುವುದು ಕಷ್ಟ. ಆ ಸಮಯದಲ್ಲಿ ಆಲೂಗೆಡ್ಡೆಯನ್ನು ಸಮ ಅರ್ಧ ಮಾಡಿ ಅದರಿಂದ ನೆಲ ಒರೆಸಿದೆರೆ ಚಿಕ್ಕ ಗಾಜಿನ ಚೂರುಗಳು ಆಲೂಗೆಡ್ಡೆಗೆ ಅಂಟಿಕೊಳ್ಳುತ್ತದೆ.

ಹೂ ಗುಚ್ಛದಲ್ಲಿ ಹೂ ಚುಚ್ಚಿಡಲು ಬಳಸಬಹುದು: ಹೂಗಳು ನೇರವಾಗಿ ನಿಲ್ಲಲು ಫ್ಲವರ್ ಫಾಮ್ ಬಳಸಲಾಗುವುದು. ಅದರ ಬದಲು ಆಲೂಗೆಡ್ಡೆಯನ್ನು ಕತ್ತರಿಸಿದರೆ ಅದರಲ್ಲಿ ಹೂಗಳನ್ನು ಚುಚ್ಚಿ ನಿಲ್ಲಿಸಬಹುದು.

ಬೆಳ್ಳಿಯ ವಸ್ತುಗಳ ಶುಚಿತ್ವಕ್ಕೆ: ಬೆಳ್ಳಿಯ ವಸ್ತುಗಳನ್ನು ಟೂತ್ ಪೇಸ್ಟ್, ನಿಂಬೆರಸ, ಟೀ ಪುಡಿ, ಅಡುಗೆ ಸೋಡಾ ಇವುಗಳನ್ನು ಸಾಮಾನ್ಯವಾಗಿ ಬಳಸುತ್ತೇವೆ. ಬೆಳ್ಳಿಯ ವಸ್ತುಗಳಿಗೆ ಹಸಿ ಆಲೂಗೆಡ್ಡೆಯಿಂದ ಉಜ್ಜಿ ನಂತರ ತೊಳೆದರೆ ಬೆಳ್ಳಿ ವಸ್ತುಗಳು ಹೊಳಪನ್ನು ಪಡೆಯುತ್ತದೆ.

English summary

Uses Of Potatoes In Cleaning | Tips For Home Cleaning | ಮನೆ ಶುಚಿಯಲ್ಲಿ ಬಳಸಿ ಆಲೂಗೆಡ್ಡೆ | ಮನೆ ಶುಚಿತ್ವದಲ್ಲಿ ಪಾಲಿಸಲು ಕೆಲ ಸಲಹೆಗಳು

Did you know the potatoes can also have some other uses apart from this? Think ahead of cooking and try to use potatoes for cleaning.Here are few surprising uses of potatoes and their association with cleaning.
X
Desktop Bottom Promotion