For Quick Alerts
ALLOW NOTIFICATIONS  
For Daily Alerts

ವಸ್ತುಗಳ ಶುಚಿಗೂ ಬಳಸಬಹುದಾದ ಬೆಣ್ಣೆಯಿದು!

By Reena
|
Peanut Butter For Things Cleaning
ಪೀನಟ್ ಬಟರ್ (ನೆಲಗಡಲೆಯಿಂದ ತಯಾರಿಸುವ ಬೆಣ್ಣೆ) ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಪೀನಟ್ ಬಟರ್ ಅನ್ನು ತಿನ್ನಲು ಮಾತ್ರವಲ್ಲ ಮನೆ ಬಳಕೆಯಲ್ಲೂ ಬಳಸಬಹುದು. ಮನೆ ಬಳಕೆಯಲ್ಲಿ ಇದನ್ನು ಬಳಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

ಲೇಬಲ್ ತೆಗೆಯಲು: ಕೆಲವೊಂದು ವಸ್ತು ತಂದಿರುತ್ತೇವೆ. ಅದರ ಮೇಲೆ ಇರುವ ಲೇಬಲ್ ತೆಗೆಯಬೇಕೆಂದು ಬಯಸಿ ಅದನ್ನು ತೆಗೆಯಲು ಪ್ರಯತ್ನಿಸಿದರೆ ಅರ್ಧ ಭಾಗ ಕಿತ್ತು ಬಂದು ಉಳಿದ ಭಾಗ ಅಲ್ಲೇ ಉಳಿದರೆ ಚೆಂದ ಕಾಣುವುದಿಲ್ಲ. ಲೇಬಲ್ ಅನ್ನು ಸರಿಯಾದ ರೀತಿಯಲ್ಲಿ ತೆಗೆಯಲು ಪೀನಟ್ ಬಟರ್ ಅನ್ನು ಲೇಬಲ್ ಮೇಲೆ ಹಚ್ಚಿ 15 ನಿಮಿಷ ಬಿಟ್ಟು ಕಿತ್ತರೆ ಸುಲಭವಾಗಿ ಕಿತ್ತು ಬರುವುದು.

ಮೆಷಿನ್ ಸರಿಪಡಿಸಲು: ಮನೆಯಲ್ಲಿ ಯಾವುದಾದರು ಮೆಷಿನ್ ಇದ್ದರೆ ಅದು ತುಕ್ಕು ಹಿಡಿದಂತಾಗಿ ಸರಿಯಾಗಿ ಕೆಲಸ ಮಾಡದಿದ್ದರೆ ಎಣ್ಣೆ ಅಥವಾ ಗ್ರೀಸ್ ಬಳಸುವ ರೀತಿ ಇದನ್ನು ಬಸಬಹುದು.

ಲೆದರ್ ಸ್ವಚ್ಚ ಮಾಡಲು: ಲೆದರ್ ಕ್ಲೀನರ್ ಗೆ ಅಧಿಕ ದುಡ್ಡು ಕೊಡಬೇಕಾಗುತ್ತದೆ. ಆದರೆ ಕಡಿಮೆ ಬೆಲೆಯಲ್ಲಿ ಸಿಗುವ ಪೀನಟ್ ಬಟರ್ ತಂದರೆ ಲೆದರ್ ಕ್ಲೀನರ್ ಬಳಸಿ ಶುಚಿಗೊಳಿಸುವ ರೀತಿ ಇದರಿಂದ ಶುಚಿಗೊಳಿಸಬಹುದು.

ಸಿಡಿ, ಡಿವಿಡಿಗಳನ್ನು ಸರಿಪಡಿಸಲು: ಮನೆಯಲ್ಲಿರುವ ಸಿಡಿ, ಡಿವಿಡಿ ಮೇಲೆ ಸ್ಕ್ರಾಚ್ ಬಿದ್ದು ಅದು ಸರಿಯಾಗಿ ಪ್ಲೇ ಆಗದಿದ್ದರೆ ಪೀನಟ್ ಬಟರ್ ಅನ್ನು ಅದರ ಮೇಲೆ ಸವರಿ ನಂತರ ಮೃದುವಾದ ಬಟ್ಟೆಯಿಂದ ಒರೆಸಿ ನಂತರ ಹಾಕಿದರೆ ಅದು ಪ್ಲೇ ಆಗುತ್ತದೆ.

ಗಮ್ ತೆಗೆಯಲು: ಮಕ್ಕಳು ಚ್ಯೂಯಿಂಗ್ ಗಮ್ ತಿಂದು ಟೇಬಲ್, ಬೆಂಚ್ , ಶೂನಲ್ಲಿ ಅಂಟಿಸಿದ್ದರೆ ಅದನ್ನು ತೆಗೆಯಲು ಅದರ ಮೇಲೆ ಸ್ವಲ್ಪ ಪೀನಟ್ ಬಟರ್ ಹಾಕಿ ಸ್ವಲ್ಪ ಹೊತ್ತಿನ ಬಳಿಕ ಕಿತ್ತರೆ ಅವುಗಳು ನೀಟಾಗಿ ಎದ್ದು ಬರುತ್ತವೆ.

English summary

Peanut Butter For Things Cleaning | Tips For House Keeping | ಪೀನಟ್ ನಿಂದ ವಸ್ತುಗಳ ಶುಚಿತ್ವ | ಮನೆ ಶುದ್ಧತೆಗೆ ಕೆಲ ಸಲಹೆಗಳು

There are many easy and cheap ways for convenient and easy home improvement. Here are some easy home improvement tips that you can comfortably put to practice by knowing these butter uses.
Story first published: Monday, September 10, 2012, 16:50 [IST]
X
Desktop Bottom Promotion