For Quick Alerts
ALLOW NOTIFICATIONS  
For Daily Alerts

ಹೈಡ್ರೋಜನ್ ಪೆರಾಕ್ಸೈಡ್ ನ 10 ಪ್ರಯೋಜನಗಳು

|
Hydrogen Peroxide Benefit
ಈ ಹಿಂದೆ ಪ್ರಕಟಿಸಿದ ಲೇಖನದಲ್ಲಿ ಅಲರ್ಜಿಯಿಂದ ತಲೆನೋವು ಉಂಟಾಗಿದ್ದರೆ , ಗಂಟಲಿನಲ್ಲಿ ಕೆರತ, ಮುಟ್ಟಿನ ತೊಂದರೆ ಈ ಸಮಸ್ಯೆಗಳ ನಿವಾರಣೆಗೆ ಹೈಡ್ರೋಜನ್ ಪೆರಾಕ್ಸೈಡ್ ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಮನೆಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಇಟ್ಟುಕೊಳ್ಳುವುದು ಒಳ್ಳೆಯದು ಎಂಬ ಸಲಹೆಯನ್ನು ನೀಡಿದ್ದೆವು. ಹೈಡ್ರೋಜನ್ ಪೆರಾಕ್ಸೈಡ್ ಮನೆಯಲ್ಲಿದ್ದರೆ ಈ ಕೆಳಗಿನ ಮುಖ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಸಲಹೆ: ಹೈಡ್ರೋಜನ್ ಪೆರಾಕ್ಸೈಡ್ ಮೆಡಿಕಲ್ ಶಾಪ್ ಗಳಲ್ಲಿ ಲಭ್ಯವಿದ್ದು ಕೊಳ್ಳುವಾಗ 3% ಹೈಡ್ರೋಜನ್ ಪೆರಾಕ್ಸೈಡ್ ಅಂತ ಸಿಗುತ್ತದೆ, ಅದನ್ನು ಕೊಂಡು ಸ್ಪ್ರೇ ಬಾಟಲಿನಲ್ಲಿ ಹಾಕಿಟ್ಟುಕೊಳ್ಳುವುದು ಒಳ್ಳೆಯದು. ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇದನ್ನು ಇಡುವುದು ಒಳ್ಳೆಯದು.

ಹೈಡ್ರೋಜನ್ ಪೆರಾಕ್ಸೈಡ್ ನ ಪ್ರಯೋಜನಗಳು:

1. ಬಿಳಿ ಬಟ್ಟೆಯ ಶುಭ್ರತೆ ಹೆಚ್ಚಿಸಲು: ಬಿಳಿ ಬಟ್ಟೆ ಒಗೆಯುವಾಗ ಅದು ತುಂಬಾ ಶುಭ್ರವಾಗಿ ಕಾಣಲು ಕ್ಲೋರಿನ್ ಬ್ಲೀಚ್ ಬಳಸುವ ಬದಲು, ಹೈಡ್ರೋಜನ್ ಪೆರಾಕ್ಸೈಡ್ ಬಳಸುವುದು ಒಳ್ಳೆಯದು. ಇದನ್ನು ನೇರವಾಗಿ ಬಟ್ಟೆಗೆ ಹಾಕದೆ ಅರ್ಧ ಬಕೆಟ್ ನೀರಿಗೆ ಒಂದು ಮುಚ್ಚಳ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಅದರಲ್ಲಿ ಬಟ್ಟೆಯನ್ನು ನೆನೆ ಹಾಕಿ ನಂತರ ಒಗೆದರೆ ಬಟ್ಟೆ ತುಂಬಾ ಶುಭ್ರವಾಗಿ ಕಾಣುವುದು. ಬಟ್ಟೆಗೆ ನೇರವಾಗಿ ಹಾಕಿದರೆ ಬಟ್ಟೆ ಹಾಳಾಗುವುದು.

2. ಕಲೆ ಹೋಗಲಾಡಿಸಲು: ರಕ್ತ ಕಲೆಯಾಗಿದ್ದರೆ ಅಥವಾ ಬೆವರಿನಿಂದ ಬಿಳಿ ಬಟ್ಟೆಯ ಕೈ ಕೆಳಗೆ ಹಳದಿ ಬಣ್ಣ ಉಂಟಾಗಿದ್ದರೆ ಆ ಭಾಗಕ್ಕೆ ಹೈಡ್ರೋನ್ ಪೆರಾಕ್ಸೈಡ್ ಹಾಕಿ ಕೆಲ ಗಂಟೆಗಳ ಕಾಲ ಬಿಡಬೇಕು. ನಂತರ ತೊಳೆದರೆ ಕಲೆಮುಕ್ತ ಬಿಳಿ ಬಟ್ಟೆ ನಿಮ್ಮದಾಗುವುದು.

3. ಗಾಯವಾದರೆ: ಗಾಯಗಳು ಉಂಟಾದರೆ ನಂಜು ಆಗಿ ಗಾಯ ಜಾಸ್ತಿಯಾಗುವುದನ್ನು ತಪ್ಪಿಸಲು ಹೈಡ್ರೋಜನ್ ಪೆರಾಕ್ಸೈಡ್ ಬಳಸುವುದು ಒಳ್ಳೆಯದು, ಇದನ್ನು ಹಾಕಿದರೆ ಕ್ರಿಮಿಗಳು, ಬ್ಯಾಕ್ಟೀರಿಯಾಗಳಿಂದ ರಕ್ಷಣೆಯನ್ನು ಕೊಡುತ್ತದೆ.

4. ಬಾಯಿ ತೊಳೆಯಲು: ಗಂಟಲು ಕೆರತ, ಬಾಯಿ ದುರ್ನಾತ ತಪ್ಪಿಸಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೀರಿನಲ್ಲಿ ಮಿಶ್ರ ಮಾಡಿ ಅದರಿಂದ ಬಾಯಿ ಮುಕ್ಕಳಿಸುವುದು ಒಳ್ಳೆಯದು.

5. ಟೂತ್ ಪೇಸ್ಟ್: ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಪರೂಪಕ್ಕೆ ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಮಿಶ್ರ ಮಾಡಿ ಅದರಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಬಿಳಿಯಾಗುತ್ತವೆ.

6. ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುತ್ತದೆ: ತರಕಾರಿ ಕತ್ತರಿಸುವ ಹಲಗೆ ಮತ್ತು ಹಲ್ಲುಜ್ಜುವ ಬ್ರೆಷ್ ಇಡುವ ಸ್ಥಳ ಇವುಗಳೆಲ್ಲಿ ಬ್ಯಾಕ್ಟೀರಿಯಾಗಳು ಕೂರದಂತೆ ತಡೆಯಲು ಮೊದಲು ವಿನಿಗರ್ ಅನ್ನು ಚಿಮುಕಿಸಿ ನಂತರ ಹೈಡ್ರೋಜನ್ ಪೆರಾಕ್ಸೈಡ್ ಚಿಮುಕಿಸಿದರೆ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಕೂರುವುದಿಲ್ಲ.

7. ಗಿಡಗಳ ಆರೈಕೆಗೆ: ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಬಟ್ಟೆ ನೆನೆ ಹಾಕಿದ ನೀರನ್ನು ಬಿಸಾಡದೆ ಅದನ್ನು ಗಿಡಗಳಿಗೆ ಹಾಕಿದರೆ, ಗಿಡ ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

8. ಸ್ನಾನದ ನಂತರ: ಸ್ನಾನದ ನಂತರ ಹೈಡ್ರೋಜನ್ ಪೆರಾಕ್ಸೈಡ್ ನಿಂದ ಸ್ಪ್ರೇ ಮಾಡಿದರೆ ಕೀಟಾಣುಗಳಿಂದ ಮುಕ್ತಿಯನ್ನು ಪಡೆಯಬಹುದು.

9.ಟಾಯ್ಲೆಟ್ ಶುಚಿಗೆ: ಟಾಯ್ಲೆಟ್ ಗೆ ಅರ್ಧ ಚಮಚದಷ್ಟು ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಅರ್ಧ ಗಂಟೆ ಬಿಟ್ಟು ಚೆನ್ನಾಗಿ ಉಜ್ಜಿ ತೊಳೆದರೆ ಟಾಯ್ಲೆಟ್ ನಲ್ಲಿರುವ ಕೀಟಾಣುಗಳು ನಾಶವಾಗುತ್ತದೆ.

10. ಹಣ್ಣು ತರಕಾರಿಗಳನ್ನು ಶುಚಿಗೊಳಿಸಲು: ಹಣ್ಣು ತರಕಾರಿಗಳನ್ನು ನೀರಿನಲ್ಲಿ ಹಾಕಿ, ಆ ನೀರಿಗೆ ಒಂದು ಚಮಚದಷ್ಟು ಹೈಡ್ರೋಜನ್ ಪೆರಾಕ್ಸೈಡ್ ಹಾಕಿದರೆ ಆ ಹಣ್ಣು ತರಕಾರಿಯಲ್ಲಿ ಕೀಟಾಣುಗಳಿದ್ದರೆ ಅವುಗಳು ನಾಶವಾಗುತ್ತದೆ.

English summary

10 Benefit Of Hydrogen Peroxide | Tips For Home Improvement | ಹೈಡ್ರೋಜನ್ ಪೆರಾಕ್ಸೈಡ್ ನ 10 ಪ್ರಯೋಜನಗಳು | ಮನೆ ಅಭಿವೃದ್ಧಿಗೆ ಕೆಲ ಸಲಹೆಗಳು

Hydrogen Peroxide is so versatile that it can also be used for many tasks in your home. Here are 10 awesome uses for Hydrogen Peroxide
Story first published: Wednesday, July 4, 2012, 13:02 [IST]
X
Desktop Bottom Promotion