For Quick Alerts
ALLOW NOTIFICATIONS  
For Daily Alerts

ಮನೆ ಸ್ವಚ್ಛ ಮಾಡುವ ವಸ್ತುಗಳೇ ಅಪಾಯಕರವಾದರೆ?

|

ಆಧುನಿಕ ತಂತ್ರಜ್ಞಾನ ಬೆಳದಂತೆ ರಾಸಾಯನಿಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಅರೋಗ್ಯವಾಗಿರಲು ಮನೆ ಮತ್ತು ಅದರ ಸುತ್ತ-ಮುತ್ತದ ಪ್ರದೇಶವನ್ನು ಸ್ವಚ್ಛವಾಗಿಡಲು ಕೆಲವು ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಈ ರಾಸಾಯನಿಕಗಳು ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ! ಮನೆ ಬಳಕೆಗೆ ಅಂತ ಬಳಸುವ ರಾಸಾಯನಿಕ ವಸ್ತುಗಳ ಪಟ್ಟಿ ಇಲ್ಲಿ ನೀಡಲಾಗಿದೆ.

ಅವುಗಳನ್ನು ಸಾಮಾನ್ಯವಾಗಿ ಮನೆ ಸ್ವಚ್ಛ ಮಾಡಲು ಬಳಸುತ್ತವೆ. ಚೋದ್ಯವೆಂದರೆ ಆ ವಸ್ತುಗಳು ಮನೆಯನ್ನು ಶುದ್ಧ ಮಾಡುವ ಬದಲು ಮತ್ತಷ್ಟು ಮಾಲಿನ್ಯ ಮಾಡುತ್ತವೆ.

House Cleaning Product

1. ಶೌಚಾಲಯ ಶುಚಿಗೊಳಿಸಲು ಬಳಸುವ ರಾಸಾಯನಿಕಗಳು: ಸ್ನಾನದ ಕೋಣೆ ಮತ್ತು ಶೌಚಾಲಯಗಳನ್ನು ಶುಚಿಗೊಳಿಸಲು ಬಳಸುವ ಲಿಕ್ವಿಡ್‌ಗಳಲ್ಲಿ ಹೈಡ್ರೋಕ್ಲೋರಿಕ್ ಆಸಿಡ್, ಸಲ್ಫೂರಿಕ್ ಅಸಿಡ್ ಮುಂತಾದ ರಾಸಾಯನಕಗಳಿರುತ್ವೆ. ಈ ರಾಸಾಯನಿಕಗಳು ಅಸ್ತಮಾ ಮತ್ತು ಕರಳು ಸಂಬಂಧಿ ರೋಗಗಳನ್ನು ತರುವುದು.
ಪರಿಹಾರ: ಸ್ನಾನದ ಕೋಣೆ ಮತ್ತು ಶೌಚಾಲಯಗಳನ್ನು ವಿನಿಗರ್ ಅನ್ನು ನೀರಿನಲ್ಲಿ ಕಲೆಸಿ ಅಥವಾ ಅಡುಗೆ ಸೋಡಾವನ್ನು ನೀರಿನಲ್ಲಿ ಕಲೆಸಿ ಶುಚಿಗೊಳಿಸಬಹುದು.

2. ಸೋಂಕಾಣುಗಳ ವಿರುದ್ಧ ಹೋರಾಡುವ ಸೋಪ್: ಈ ರೀತಿಯ ಸೋಪಿನಲ್ಲಿರುವ ಟ್ರೈಕ್ಲೋಸಂ ಒಂದು ರೀತಿಯ ಡಯಾಕ್ಸಿನ್ ಆಗಿದ್ದು ಇದು ರೋಗ ನಿರೋಧಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಹಾರ್ಮೋನ್ ಗಳಲ್ಲಿ ವ್ಯತ್ಯಾಸ, ಬಂಜೆತನ ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಪರಿಹಾರ:ಸಾಮಾನ್ಯವಾಗಿ ಬಲಸುವ ಸೋಪುಗಳನ್ನು ಬಳಸಿದರೆ ಸಾಕು. ಈ ಸೋಪು ಶೇ. 99.4 ಬ್ಯಾಕ್ಟಿರೀಯಾಗಳನ್ನು ಕೊಂದರೆ ಸೋಂಕಾಣುಗಳ ವಿರುದ್ಧ ಹೋರಾಡುವ ಸೋಪ್ ಶೇ. 99.6 ರಷ್ಟು ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ.

3. ಏರ್ ಫ್ರೆಶ್: ಇದರಿಂದ ಅಲರ್ಜಿ ಉಂಟಾಗುತ್ತದೆ. ತಲೆನೋವು, ಖಿನ್ನತೆ, ಎದೆ ನೋವು, ತಲೆ ಸುತ್ತು, ಜೀರ್ಣಕ್ರಿಯೆಗೆ ಮುಂತಾದ ಸಮಸ್ಯೆಗಳನ್ನು ಈ ಏರ್ ಫ್ರೆಶ್ ತರುವುದು.
ಪರಿಹಾರ: ದೊಡ್ಡ ಕಿಟಕಿಗಳನ್ನು ಮಾಡಿ, ಕಿಟಕಿಗಳನ್ನು ತೆರೆದು ಇಟ್ಟರೆ ರೂಂನಲ್ಲಿ ದೂಳು ಅಥವಾ ಇತರ ಕೆಟ್ಟ ವಾಸನೆಯಿಲ್ಲದೆ ಶುದ್ಧವಾಗಿರುತ್ತದೆ.

4. ಪಾತ್ರೆಗಳನ್ನು ತೊಳೆಯುವ ಡಿಟರ್ಜೆಂಟ್:
ಈ ಡಿಟರ್ಜೆಂಟ್ ಗಳಲ್ಲಿ ಕ್ಲೋರಿನ್ ಮತ್ತು ರಂಜಕ ಇರುವುದರಿಂದ ತ್ವಚೆ ಅಲರ್ಜಿ ಉಂಟಾಗುತ್ತದೆ, ಕೈ ಉರಿ ಉಂಟಾಗುವುದು, ಅಂಗೈ ತ್ವಚೆ ಹಾಳಾಗುವುದು ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಪರಿಹಾರ: ಕ್ಲೋರಿನ್ ಮತ್ತು ರಂಜಕ ಇಲ್ಲದಿರುವ ಡಿಟರ್ಜೆಂಟ್ ಬಳಸಬೇಕು.

5. ರಗ್ ಮತ್ತು ಕಾರ್ಫೆಟ್ ತೊಎಯಲು ಬಳಸುವ ಶ್ಯಾಂಪೂ: ಇದರಲ್ಲಿ ಬಳಸಿರುವ ಪರ್ ಕ್ಲೋರೊ ಈಥೈಲ್ ಎಬ ರಾಸಾಯನಿಕ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ.
ಪರಿಹಾರ: ಹಣ್ಣು ಅಥವಾ ವೈನ್ ಕಲೆಯನ್ನು ಉಪ್ಪು ಹಾಕಿ ಹೋಗಲಾಡಿಸಬಹುದು, ಅಡುಗೆ ಸೋಡಾ ಬಳಸಿದರೆ ಚಿಕ್ಕ ಪುಟ್ಟ ಕಲೆಗಳನ್ನು ಹೋಗಲಾಡಿಸಬಹುದು. ಕ್ಲೀನ್ ಮಾಡಲು ಇತರ ಸಲ್ಯೂಷನ್ ಬಳಸುವುದಾದರೆ ಅದರಲ್ಲಿ ಹಸಿರು ಮುದ್ರೆ (Green Seal Certified) ಇರಬೇಕು .

English summary

Hidden Chemical In Home Cleaning | House Keeping | ಮನೆ ಸ್ವಚ್ಛತೆಯ ವಸ್ತುಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳು

Your home will be more toxic than you realize because of hidden chemicals in cleaning products. Here are five common cleaning products that may be polluting your home.
Story first published: Friday, May 4, 2012, 16:20 [IST]
X
Desktop Bottom Promotion