For Quick Alerts
ALLOW NOTIFICATIONS  
For Daily Alerts

ವಾಸ್ತುಶಾಸ್ತ್ರ: ಮನೆಯಲ್ಲಿ ಈ ಮೂರು ವಸ್ತುಗಳನ್ನು ಇಟ್ಟರೆ ಸಕಲವೂ ಶುಭವಂತೆ

|

ಮನೆಯ ವಾಸ್ತು ಚೆನ್ನಾಗಿದ್ದರೆ ಸುಖ, ಸಮೃದ್ಧಿ, ನೆಮ್ಮದಿ ಇರುತ್ತದೆ ಎಂಬುದು ಒಂದು ನಂಬಿಕೆ. ಈ ನಂಬಿಕೆಯಿಂದಾಗಿಯೇ ಮನೆ ಕಟ್ಟುವಾಗಲೇ ಮನೆಯ ವಾಸ್ತುವಿನ ಬಗ್ಗೆ ತುಂಬಾ ಗಮ್ಯ ನೀಡುತ್ತಾರೆ.

ಆದರೆ ಮನೆಯ ವಾಸ್ತು ಎಂದರ ಕೇವಲ ಗೋಡೆಗಳಿಗೆ ಮಾತ್ರ ಮೀಸಲಾ ಇಲ್ಲ, ವಾಸ್ತುಶಾಸ್ತ್ರ ತಜ್ಞರ ಪ್ರಕಾರ ಮನೆಯ ವಾಸ್ತು ಚೆನ್ನಾಗಿರಬೇಕೆಂದರೆ ಮನೆಯಲ್ಲಿ ಕಡ್ಡಾಯವಾಗಿ ಈ ಮೂರು ವಸ್ತುಗಳನ್ನು ಇಡಲೇಬೇಕಂತೆ. ಇದನ್ನು ಇಟ್ಟರೆ ಮನೆಯಲ್ಲಿ ಇಟ್ಟರೆ ಸುತ್ತಮುತ್ತಲಿನ ಪರಿಸರವನ್ನು ಸಕಾರಾತ್ಮಕ ರೀತಿಯಲ್ಲಿ ಪ್ರಭಾವಿಸುತ್ತದೆಯಂತೆ. ಯಾವ ವಸ್ತುಗಳು, ಎಲ್ಲಿ ಇಡಬೇಕು ಮತ್ತು ಏಕೆ ಮುಂದೆ ನೋಡೋಣ:

1. ಶಾಂತಿಗಾಗಿ ಆನೆ

1. ಶಾಂತಿಗಾಗಿ ಆನೆ

ವಾಸ್ತು ಶಾಸ್ತ್ರದಲ್ಲಿ ಆನೆಯನ್ನು ಐಶ್ವರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಆನೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿದೇವಿ ಸಹ ಮನೆಯಲ್ಲಿರುತ್ತಾಳೆ. ಮನೆಯಲ್ಲಿ ಹಣದ ವಿಚಾರದಲ್ಲಿ ಪ್ರತಿನಿತ್ಯ ಕಲಹ ಉಂಟಾಗಿ ಮನೆಯ ನೆಮ್ಮದಿ ಕೆಡುತ್ತಿದ್ದರೆ ಬೆಳ್ಳಿ ಅಥವಾ ಹಿತ್ತಾಳೆಯ ಆನೆಯ ವಿಗ್ರಹವನ್ನು ಮನೆಗೆ ತನ್ನಿ. ಇದರಿಂದ ಮನೆಗೆ ರಾಹು ದೋಷದ ಸಮಸ್ಯೆಯೂ ಪರಿಹಾರವಾಗುತ್ತದೆ.

2. ಸಮೃದ್ಧಿಗಾಗಿ ಆಮೆ

2. ಸಮೃದ್ಧಿಗಾಗಿ ಆಮೆ

ಆಮೆಯನ್ನು ಮನೆಯೊಳಗೆ ತಂದ ನಂತರ ಅದನ್ನು ಪೂರ್ವ ಅಥವಾ ಉತ್ತರದಲ್ಲಿ ಇಡಬೇಕು ಏಕೆಂದರೆ ಅದು ವಿಷ್ಣುವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನೀವು ಮನೆಗೆ ತರುವ ಪ್ರತಿಯೊಂದು ಆಮೆ ವಿಗ್ರಹವು ಕೆಲವು ಲೋಹವನ್ನು ಹೊಂದಿರಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಇದರ ಪರಿಣಾಮವಾಗಿ ಮನೆಯು ಪ್ರಶಾಂತತೆ ಮತ್ತು ಸಮೃದ್ಧಿಯಿಂದ ಇರುತ್ತದೆ.

3. ಪ್ರಗತಿಗಾಗಿ ಮೀನು

3. ಪ್ರಗತಿಗಾಗಿ ಮೀನು

ಹಿತ್ತಾಳೆ ಮೀನು ಅಥವಾ ಬೆಳ್ಳಿಯ ಮೀನುಗಳನ್ನು ಮನೆಯೊಳಗೆ ಇಟ್ಟುಕೊಳ್ಳುವುದು ಮನೆಗೆ ಪ್ರಗತಿಯನ್ನು ತರುತ್ತದೆ ಎಂದು ಸಲಹೆ ನೀಡಲಾಗುತ್ತದೆ. ನೀವು ಮೀನುಗಳನ್ನು ಒಳಗೆ ತಂದಾಗ ಯಾವಾಗಲೂ ಮನೆಯ ಈಶಾನ್ಯಕ್ಕೆ ಎದುರಾಗಿ ಇರಿಸಲು ಮರೆಯದಿರಿ. ಪರಿಣಾಮವಾಗಿ, ಕುಟುಂಬವು ಆದಾಯದ ಮೂಲವನ್ನು ಹೊಂದಿರುತ್ತದೆ ಮತ್ತು ತೃಪ್ತಿಯಲ್ಲಿ ಗಮನಾರ್ಹ ಏರಿಕೆಯನ್ನು ಅನುಭವಿಸುತ್ತದೆ.

English summary

Vastu Tips in kannada: Idols You Must Keep Around Your House For Good Luck And Prosperity

Here we are discussing about Vastu Tips in kannada: Idols You Must Keep Around Your House For Good Luck And Prosperity. Read more.
Story first published: Thursday, September 8, 2022, 12:36 [IST]
X
Desktop Bottom Promotion