For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಸ್ಯಾನಿಟೈಸರ್ ಮಾಡುವುದು ಹೇಗೆ?

|

ಕೊರೋನಾ ಬಂದ ಮೇಲೆ ಈ ಸ್ಯಾನಿಟೈಸರ್ ಅನ್ನೋ ವಸ್ತುವಿನ ಬಳಕೆ ಹೆಚ್ಚಾಗಿರೋದು ಅಂತ ಎಲ್ಲರಿಗೂ ಗೊತ್ತು. ಸೋಪ್ ಮತ್ತು ನೀರಿನಿಂದ ಕೈ ತೊಳೆಯುವುದು ರೋಗಾಣುಗಳ ಹರಡುವಿಕೆಯನ್ನು ತಡೆಯಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

Homemade Sanitizer

ಆದರೆ ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದಾಗ ಕನಿಷ್ಠ 60% ಆಲ್ಕೋಹಾಲ್ ಅಂಶವಿರುವ ಹ್ಯಾಂಡ್ ಸ್ಯಾನಿಟೈಜರ್ ಬಳಸಲು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಶಿಫಾರಸು ಮಾಡಿತ್ತು. ಅಂದಿನಿಂದ ಈ ಸ್ಯಾನಿಟೈಜರ್ ಎಂಬ ವಸ್ತು ಹೆಚ್ಚು ಬಳಕೆಯಾಗಲು ಶುರುವಾಯಿತು.

ಹೆಚ್ಚೆಚ್ಚು ಜನಮಾನಸಕ್ಕೆ ಬಂತು. ಇದರಿಂದ ವಿಧವಿಧವಾದ ಸ್ಯಾನಿಟೈಜರ್ಗಳು ಮಾರುಕಟ್ಟೆಗೆ ಪರಿಚಯವಾಯಿತು. ಆದರೆ ವಾಣಿಜ್ಯ ಸ್ಯಾನಿಟೈಜರ್‌ಗಳು ಪದೇಪದೇ ಬಳಕೆ ಮಾಡೋದ್ರಿಂದ ಕೈಗಳ ಚರ್ಮಕ್ಕೆ ಹಾನಿಯುಂಟಾಗುತ್ತದೆ. ಅಷ್ಟೇ ಅಲ್ಲ, ಒಳ್ಳೆ ಗುಣಮಟ್ಟದ ಸ್ಯಾನಿಟೈಜರ್‌ಗಳ ಬೆಲೆಯೂ ತುಸು ಜಾಸ್ತಿ. ಇದು ಸಾಕಷ್ಟು ಜನರಿಗೆ ಹೊರೆಯಾಗಿರುವುದು ಉಂಟು. ಇದನ್ನು ತಡೆಗಟ್ಟಲು ನೀವೇ ಮನೆಯಲ್ಲಿಯೇ ಸ್ಯಾನಿಟೈಜರ್ ತಯಾರಿಸಬಹುದು. ಅದನ್ನು ಹೇಗೆ ತಯಾರಿಸುವುದು ಅಂತ ಮುಂದೆ ತಿಳಿದುಕೊಳ್ಳೋಣ.

ಮನೆಯಲ್ಲಿ ಸ್ಯಾನಿಟೈಜರ್ ಮಾಡುವುದು ಹೇಗೆ?

ಮನೆಯಲ್ಲಿ ಸ್ಯಾನಿಟೈಜರ್ ಮಾಡುವುದು ಹೇಗೆ?

ಬೇಕಾಗುವ ಸಾಮಾಗ್ರಿಗಳು:

-1/3 ಭಾಗ ಅಲೋವೆರಾ ಜೆಲ್ ಅಥವಾ ಗ್ಲಿಸರಿನ್

- 91% ಸಾಂದ್ರತೆಯಿರುವ 2/3 ಭಾಗ ಐಸೊಪ್ರೊಪಿಲ್ ಆಲ್ಕೋಹಾಲ್ (ಉಜ್ಜುವ ಮದ್ಯ)

- ನಿಂಬೆ ಅಥವಾ ಲ್ಯಾವೆಂಡರ್‌ನAತಹ ಸಾರಭೂತ ತೈಲ (ಇದು ಪರಿಮಳಕ್ಕೆ ಐಚ್ಛಿಕ ಘಟಕಾಂಶವಾಗಿದೆ)

- ಮಿಶ್ರಣಕ್ಕಾಗಿ ಸ್ವಚ್ಛವಾದ ಪಾತ್ರೆಗಳು ಮತ್ತು ಶೇಖರಣೆಗಾಗಿ ಏರ್ ಟೈಟ್ ಕಂಟೈನರ್

-ಮಿಶ್ರಣಕ್ಕಾಗಿ ಚಮಚ

ಮಾಡುವ ವಿಧಾನ:

ಮಾಡುವ ವಿಧಾನ:

- ಅಲೋವೆರಾ ಜೆಲ್ ಅಥವಾ ಗ್ಲಿಸರಿನ್ ಅನ್ನು ಐಸೊಪ್ರೊಪಿಲ್ ಆಲ್ಕೋಹಾಲ್ನೊಂದಿಗೆ ಸ್ವಚ್ಛವಾದ ಪಾತ್ರೆಯಲ್ಲಿ ಸೇರಿಸಿ. ಒಂದು ಕಪ್ ಸ್ಯಾನಿಟೈಜರ್ ಪಡೆಯಲು, ⅓ ಕಪ್ ಜೆಲ್ ಅಥವಾ ಗ್ಲಿಸರಿನ್ ಅನ್ನು ⅔ ಕಪ್ ಐಸೊಪ್ರೊಪಿಲ್ ಆಲ್ಕೋಹಾಲ್ನೊಂದಿಗೆ ಸೇರಿಸಿ.

- ಅದನ್ನು ಒಂದು ಚಮಚದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇದರಿಂದ ಅಲೋವೆರಾ ಜೆಲ್ ಹಾಗೂ ಅಲ್ಕೋಹಾಲ್ ಸಮವಾಗಿ ಮಿಶ್ರಣವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.

- ನಿಮಗೆ ಪರಿಮಳ ಬೇಕೆಂದಿದ್ದರೆ ಸಾರಭೂತ ತೈಲದ 5 ಹನಿಗಳನ್ನು ಬೆರೆಸಿ.

- ಸ್ಯಾನಿಟೈಜರ್ ಅನ್ನು ಏರ್ ಟೈಟ್ ಆಗಿರುವ ಪಾತ್ರೆಯಲ್ಲಿ ಸಂಗ್ರಹಿಸಿ. ಇಲ್ಲವಾದಲ್ಲಿ ಗಾಳಿಗೆ ತೆರೆದುಕೊಂಡರೆ ಆಲ್ಕೋಹಾಲ್ ಆವಿಯಾಗುತ್ತದೆ. ಆದ್ದರಿಂದ ಏರ್ ಟೈಟ್ ಆದ ಕಂಟೈನರ್‌ನ್ನು ಬಳಸಿ. ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಕಂಟೈನರ್‌ಗೆ ಒಂದು ಪೈಪ್ ತರಹದ ಉಪಕರಣವನ್ನು ಅಳವಡಿಸಿ. ಇದ್ರಿಂದ ನೀವು ಸುಲಭವಾಗಿ ಸ್ಯಾನಿಟೈಜರ್‌ನ್ನು ಬಳಸಬಹುದು. ನೆನಪಿಡಿ, ಕಂಟೈನರ್ ಒಳಗೆ ಗಾಳಿ ಪ್ರವೇಶ ಆಗದಂತೆ ನೋಡಿಕೊಳ್ಳಿ ಹಾಗೂ ಎಚ್ಚರವಹಿಸಿ.

ನಿಮ್ಮ ಮನೆಯಲ್ಲಿ ತಯಾರಿಸಿದ ಸ್ಯಾನಿಟೈಜರ್‌ನ್ನು ಸರಿಯಾಗಿ ಬಳಸುವುದು ಹೇಗೆ ?

ನಿಮ್ಮ ಮನೆಯಲ್ಲಿ ತಯಾರಿಸಿದ ಸ್ಯಾನಿಟೈಜರ್‌ನ್ನು ಸರಿಯಾಗಿ ಬಳಸುವುದು ಹೇಗೆ ?

ಮನೆಯಲ್ಲಿ ತಯಾರಿಸಿದ ಸ್ಯಾನಿಟೈಜರ್ ಕಮರ್ಷಿಯಲ್ ಆಗಿ ತಯಾರಾದ ಸ್ಯಾನಿಟೈಜರ್‌ಗಿಂತ ಹೆಚ್ಚು ನೀರಿನಾಂಶ ಇರುತ್ತದೆ. ಅಥವಾ ದ್ರವೀಯವಾಗಿರುತ್ತದೆ. ಆದ್ದರಿಂದ ಬಳಸುವುದು ತುಸು ಕಷ್ಟ. ಆದ್ದರಿಂದ ನೀವು ಶೇಖರಣೆ ಮಾಡಲು ಪಂಪ್ ಕಂಟೈನರ್ ಬಳಸುವುದು ಸೂಕ್ತಿ. ಇದರಿಂದ ಸುಲಭವಾಗಿ ಸ್ಯಾನಿಟೈಜರ್ ಬಳಸಬಹುದು. ನಿಮ್ಮ ಕೈಗಳಿಗೆ ಸ್ಯಾನಿಟೈಜರ್ ಹಾಕಿಕೊಂಡು ಚೆನ್ನಾಗಿ ಉಜ್ಜಿ. ಇದು ಕೈಗಳ ಸಂಪೂರ್ಣ ಮೇಲ್ಮೆಯನ್ನು ಒಳಗೊಂಡಿರಬೇಕು. ನಿಮ್ಮ ಕೈಗಳು ಒಣಗುವವರೆಗೆ ಉಜ್ಜುವುದನ್ನು ಮುಂದುವರಿಸಿ, ಇದು ಸುಮಾರು 20 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ಮನೆಯಲ್ಲಿಯೇ ಮಾಡುವ ಸ್ಯಾನಿಟೈಜರ್ ಕೈಗಳಿಗೆ ಉತ್ತಮ:

ಮನೆಯಲ್ಲಿಯೇ ಮಾಡುವ ಸ್ಯಾನಿಟೈಜರ್ ಕೈಗಳಿಗೆ ಉತ್ತಮ:

ಹೌದು, ಕಮರ್ಷಿಯಲ್ ಆಗಿ ತಯಾರಾದ ಸ್ಯಾನಿಟೈಜರ್ ಬಳಕೆ ಮಾಡುವುದರಿಂದ ಕೈಗಳು ಕೋಮಲತೆ ಕಳೆದುಕೊಳ್ಳುತ್ತವೆ. ಪದೇ ಪದೇ ಬಳಕೆ ಮಾಡುವುದರಿಂದ ಸೂಕ್ಷ್ಮವಾದ ಕೈಗಳ ಚರ್ಮವು ಗಡಸಾಗಲು ಶುರುವಾಗುತ್ತವೆ. ಆದರೆ ಈ ಹೋಮ್ ಮೇಡ್ ಸ್ಯಾನಿಟೈಜರ್‌ನಲ್ಲಿ ಅಲೋವೆರಾ ಬಳಕೆ ಮಾಡಿರೋದ್ರಿಂದ ನಿಮ್ಮ ಕೈಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೈಗಳ ಕೋಮಲತೆಯನ್ನು ಕಾಪಾಡಿಕೊಂಡು, ವೈರಸ್‌ನ್ನು ನಾಶಪಡಿಸಲು ಉತ್ತಮ ಮಾರ್ಗ ಈ ಹೋಮ್ ಮೇಡ್ ಸ್ಯಾನಿಟೈಜರ್.

English summary

How To Make Sanitizer At Home in Kannada?

Now Sanitizer become part of our routine life, here is how to prepare sanitizer at home, have a look. q q
X
Desktop Bottom Promotion