For Quick Alerts
ALLOW NOTIFICATIONS  
For Daily Alerts

ಲಿವಿಂಗ್‌ ರೂಂನ ಅಂದ ಹೆಚ್ಚಲು ಈ 4 ಟಿಪ್ಸ್ ಸಹಕಾರಿ

|

ಮನೆಯ ಹಾಲ್‌ ನೋಡಿದಾಗ ಮನೆಯನ್ನು ಹೇಗೆ ಇಟ್ಟಿದ್ದೇವೆ ಎಂಬ ಐಡಿಯಾ ಮನೆಗೆ ಬಂದವರಿಗೆ ಸಿಗುತ್ತದೆ. ಮನೆಯ ಹಾಲ್‌ ದೊಡ್ಡದಿರಲಿ, ಚಿಕ್ಕದಿರಲಿ ಅದನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಆ ಹಾಲ್‌ನ ಅಂದ ಅಡಗಿರುತ್ತದೆ.

Living Room decoration idea

ಹಾಲ್‌ ಆಕರ್ಷಕವಾಗಿ ಕಾಣಬೇಕೆಂದರೆ ಅದಕ್ಕೆ ಇಂಟೀರಿಯರ್ ಡಿಸೈನರ್ ಬಂದು ಮನೆಯ ಅಂದ-ಚೆಂದ ಹೆಚ್ಚಿಸಬೇಕೆಂದೇನಿಲ್ಲ, ನಾವೇ ಮನೆಯ ಅಂದ ಹೆಚ್ಚಿಸಬಹುದು, ಅದಕ್ಕೆ ನೀವು ಈ 7 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಲ್‌ನ ಅಲಂಕಾರ ಮಾಡಿದರೆ ಮನೆ ನೋಡಲು ಸೂಪರ್ ಆಗಿರುತ್ತೆ:

1. ಮನೆಯ ಹಾಲ್‌ನ ಅಳತೆ ತೆಗೆದುಕೊಳ್ಳಿ

1. ಮನೆಯ ಹಾಲ್‌ನ ಅಳತೆ ತೆಗೆದುಕೊಳ್ಳಿ

ನಾವು ಹಾಲ್‌ಗೆ ಏನಾದರೂ ವಸ್ತುಗಳನ್ನು ಕೊಳ್ಳುವ ಮುನ್ನ ಹಾಲ್‌ನ ಅಳತೆ ಪರೀಕ್ಷಿಸುವುದು ಒಳ್ಳೆಯದು. ಹಾಲ್‌ ತುಂಬಿ ತುಳುಕುವಂತೆ ಇದ್ದರೂ ಚೆನ್ನಾಗಿರುವುದಿಲ್ಲ. ಓಡಾಡಲು ಸ್ವಲ್ಪ ಜಾಗ ಇರಬೇಕು. ಅದಕ್ಕೆ ತಕ್ಕ ಹಾಗೆ ಸೋಫಾ, ಚೇರ್‌, ಟೀಪಾಯಿ ತನ್ನಿ.

 2. ನಿಮ್ಮ ಉದ್ದೇಶವನ್ನು ವ್ಯಕ್ತಪಡಿಸಿ

2. ನಿಮ್ಮ ಉದ್ದೇಶವನ್ನು ವ್ಯಕ್ತಪಡಿಸಿ

ಮನೆಯ ಹಾಲ್‌ ಹೇಗಿರಬೇಕೆಂದರೆ ನಿಮ್ಮ ಹಾಲ್‌ ನಿಮ್ಮ ಇಷ್ಟಗಳನ್ನು ಪ್ರತಿನಿಧಿಸುವಂತಿರಬೇಕು. ಒಂದೊಳ್ಳೆ ಪೇಯಿಂಟಿಂಗ್‌ , ಕಲಾಕೃತಿ ಅಥವಾ ಕಪಾಟಿನಲ್ಲಿರುವ ಬುಕ್‌ ಇವೆಲ್ಲಾ ನಿಮ್ಮ ಅಭಿರುಚಿಗೆ ತಕ್ಕಂತೆ ಇರಬೇಕು. ಏಕೆಂದರೆ ನೀವು ಹಾಲ್‌ನಲ್ಲಿ ಕುಳಿತಾಗ ಅವುಗಳನ್ನು ನೋಡಿದಾಗ ನಿಮ್ಮ ಮನಸ್ಸಿಗೆ ಹಿತ ಅನಿಸುವಂತಿರಬೇಕು.

3. ಹಾಲ್‌ಗೆ ಸೂಕ್ತ ಅಲಂಕಾರಿಕ ವಸ್ತುಗಳನ್ನು ಖರೀದಿಸಿ

3. ಹಾಲ್‌ಗೆ ಸೂಕ್ತ ಅಲಂಕಾರಿಕ ವಸ್ತುಗಳನ್ನು ಖರೀದಿಸಿ

ಟೀಪಾಯಿ ಮೇಲಿಡುವ ಫ್ಲವರ್‌ ಪಾಟ್‌, ಸೋಫಾದ ಕವರ್, ಗೋಡೆಯಲ್ಲಿ ನೇತು ಹಾಕುವ ಅಲಂಕಾರಿಕ ವಸ್ತುಗಳು ಇವೆಲ್ಲವೂ ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಅಂಥ ವಸ್ತುಗಳನ್ನು ನೋಡಿಕೊಂಡು ಆಯ್ಕೆ ಮಾಡಿ. ಗೋಡೆಯ ಬಣ್ಣಕ್ಕೂ ಸೋಫಾ ಕವರ್‌ಗೆ ಮ್ಯಾಚ್‌ ಮಾಡಿ. ಮ್ಯಾಚಿಂಗ್‌ ಹೊಂದುವಂತೆ ವಸ್ತುಗಳನ್ನು ಬಳಸಿದರೆ ಮನೆಯ ಅಂದ ಮತ್ತಷ್ಟು ಹೆಚ್ಚುವುದು.

4. ಹಸಿರು ಮರೆಯದಿರಿ

4. ಹಸಿರು ಮರೆಯದಿರಿ

ಮನೆಯ ಹಾಲ್‌ನಲ್ಲಿ ಚಿಕ್ಕ ಗಿಡಗಳನ್ನು ಇಡಿ. ಇವು ಹಾಲ್‌ನ ಅಂದಕ್ಕೆ ಮ್ತತಷ್ಟು ಮೆರಗು ನೀಡುವುದು. ಅಲ್ಲದೆ ಮನೆಯೊಳಗಡೆ ಗಿಡಗಳಿದ್ದರೆ ಕೋಣೆಯ ಒಳಗಡೆಯ ಗಾಳಿಯನ್ನು ಕೂಡ ಶುದ್ಧವಾಗಿಡುತ್ತೆ. ಚಿಕ್ಕ-ಚಿಕ್ಕ ಹೂ ಗಿಡಗಳನ್ನು. ಮನಿ ಪ್ಲ್ಯಾಂಟ್‌ ಇಡಬಹುದು. ಇವೆಲ್ಲಾ ನಿಮ್ಮ ಹಾಲ್‌ನ ಲುಕ್‌ ಹೆಚ್ಚಿಸುವುದು.

ಇದು ನೆನಪಿರಲಿ

ಹಾಲ್‌ನಲ್ಲಿ ತುಂಬಾ ವಸ್ತುಗಳನ್ನು ತುಂಬಿದರೆ ಅದು ಹಾಲ್‌ನ ಅಂದ ಹೆಚ್ಚಿಸುವ ಬದಲಿಗೆ ಸ್ಥಳಾವಕಾಶ ಕಡಿಮೆ ಇದೆ ಎಂಬ ಭಾವನೆ ಮೂಡಿಸುವಂತೆ ಮಾಡುವುದು. ಆದಷ್ಟು ಸ್ಥಳಾವಕಾಶ ಇರುವಂತೆ ಮನೆಯ ಹಾಲ್‌ನಲ್ಲಿ ವಸ್ತುಗಳನ್ನು ಇಡಿ.

English summary

How To Decorate Your Living Room in Kannada

How to Decorate Your Living Room in Kannada, read on...
Story first published: Thursday, November 18, 2021, 18:52 [IST]
X
Desktop Bottom Promotion