For Quick Alerts
ALLOW NOTIFICATIONS  
For Daily Alerts

ಪಾತ್ರೆ ಉಜ್ಜುವ ಸೋಪ್‌ನಿಂದ ಈ ವಸ್ತುಗಳು ಹಾಗೂ ಸ್ಥಳಗಳನ್ನು ಸ್ವಚ್ಛ ಮಾಡಿ ನೋಡಿದ್ದೀರಾ?

|

ಪಾತ್ರೆ ಉಜ್ಜುವ ಸೋಪ್‌ ಅನ್ನು ಇತರ ವಸ್ತುಗಳನ್ನು ಕ್ಲೀನ್‌ ಮಾಡಲು ಬಳಸಿದ್ದೀರಾ, ಅದರಲ್ಲೂ ಅದನ್ನು ನಿಮ್ಮ ಮನೆಯ ಟಾಯ್ಲೆಟ್ ತೊಳೆಯಲು ಬಳಸಿದ್ದೀರಾ? ಬಳಸಿದ್ದೇ ಆದರೆ ಅದರ ಚಮತ್ಕಾರ ಖಂಡಿತ ನೋಡುವಿರಿ. ಪಾತ್ರೆಯನ್ನು ಪಳ-ಪಳ ಹೊಳೆಯುವಂತೆ ಮಾಡುವ ಡಿಶ್‌ ಸೋಪ್ ಟಾಯ್ಲೆಟ್‌ನ ಕಲೆ ತೆಗೆಯುತ್ತೆ, ಟೈಲ್ಸ್‌ನಲ್ಲಿ ಕೊಳೆಯಿದ್ದರೆ ಅದನ್ನು ತೆಗೆಯುತ್ತೆ, ನೀವು ಇದನ್ನು ಮನೆಯಲ್ಲಿ ನಾನಾ ಸ್ಥಳಗಳು ಹಾಗೂ ವಸ್ತುಗಳನ್ನು ಸ್ವಚ್ಛ ಮಾಡಲು ಬಳಸಬಹುದು.

toilet cleaning tips,

ಬನ್ನಿ ಯಾವೆಲ್ಲಾ ವಸ್ತುಗಳನ್ನು ಕ್ಲೀನ್ ಮಾಡಲು ಪಾತ್ರೆ ಉಜ್ಜುವ ಸೋಪ್‌ ಬಳಸಬಹುದು ಎಂದು ನೋಡೋಣ:

1. ಕಲೆಗಳನ್ನು ನಿವಾರಿಸಲು

1. ಕಲೆಗಳನ್ನು ನಿವಾರಿಸಲು

ನಿಮ್ಮ ಮನೆಯ ರತ್ನಗಂಬಳಿ, ಕಾರ್ಪೆಟ್ ಅಥವಾ ಬಟ್ಟೆಯ ಮೇಲೆ ಟೀ ಚೆಲ್ಲಿ ಕಲೆ ಉಂಟಾಗಿದೆಯೇ? ಅಥವಾ ಬಟ್ಟೆಯ ಸೋಫಾ ಕುರ್ಚಿಯ ಮೇಲೆ ಟೀ ಅಥವಾ ಇತರ ಆಹಾರ ಸಾಮಾಗ್ರಿಗಳು ಬಿದ್ದು ಕಲೆ ಎದ್ದು ಕಾಣುತ್ತಿದೆಯೇ? ಇದಕ್ಕಾಗಿ ಒಂದು ದೊಡ್ಡ ಚಮಚ ಡಿಶ್ ಸೋಪ್ ದ್ರಾವಣವನ್ನು ಎರಡು ಕಪ್ ಬಿಸಿನೀರಿನಲ್ಲಿ ಮಿಶ್ರಣಗೊಳಿಸಿ. ಈ ಮಿಶ್ರಣವನ್ನು ಸ್ವಚ್ಛಬಟ್ಟೆಯೊಂದರಲ್ಲಿ ಅದ್ದಿ ಈ ಬಟ್ಟೆಯನ್ನು ಬಳಸಿ ಕಲೆ ಇರುವ ಭಾಗದ ಮೇಲೆ ಚೆನ್ನಾಗಿ ಉಜ್ಜುತ್ತಾ ಹೋಗಿ. ಕಲೆ ಇಲ್ಲವಾಗುವವರೆಗೂ ಉಜ್ಜಬೇಕಾಗಿ ಬರಬಹುದು. ಬಳಿಕ ಸ್ವಚ್ಛ ಸ್ಪಂಜೊಂದನ್ನು ತಣ್ಣೀರಿನಲ್ಲಿ ಮುಳುಗಿಸಿ ಹಿಂಡಿ ನೀರು ಇರುವ ಭಾಗದ ಮೇಲೆ ಅದ್ದಿ ನೀರನ್ನು ಹೀರಿ ತೆಗೆಯಿರಿ. ಬಳಿಕ ಟೀ ಟವೆಲ್ ಅಥವಾ ಕಾಗದದ ಟಿಶ್ಯೂ ಗಳನ್ನು ಬಳಸಿ ಈ ಭಾಗವನ್ನು ಒಣಗಿಸಿ.

2. ಸಿರಾಮಿಕ್ ಟೈಲ್ ಗಳ ನೆಲ

2. ಸಿರಾಮಿಕ್ ಟೈಲ್ ಗಳ ನೆಲ

ಸಿರಾಮಿಕ್ ಟೈಲ್ಸ್, ವಿನೈಲ್ ಅಥವಾ ಲಿನೋಲಿಯಂ ಸಾಮಾಗ್ರಿಯಿಂದ ತಯಾರಿಸಿದ ಟೈಲುಗಳ ನೆಲದ ಮೇಲೆ ಕಲೆ ಬಿದ್ದಿದ್ದರೆ ಡಿಶ್ ಸೋಪ್ ದ್ರಾವಣ ಬಳಸಿ ಸ್ವಚ್ಛಗೊಳಿಸಬಹುದು. ಇದಕಾಗಿ, ಎರಡು ದೊಡ್ಡ ಚಮಚ ಡಿಶ್ ಸೋಪ್ ದ್ರಾವಣವನ್ನು ಒಂದು ಬಕೆಟ್ ಬಿಸಿನೀರಿನಲ್ಲಿ ಮಿಶ್ರಣ ಮಾಡಿ. ಈ ನೀರಿನಲ್ಲಿ ನೆಲ ಒರೆಸುವ ಮಾಪ್ ಅನ್ನು ಮುಳುಗಿಸಿ ನೆಲವನ್ನು ಸ್ವಚ್ಛಗೊಳಿಸಿ. ಆದರೆ, ಈ ವಿಧಾನ ಮರದ ವಿನ್ಯಾಸದ ನೆಲಕ್ಕೆ ಅನ್ವಯಿಸಬಾರದು. ಇದು ಮರದ ಹೊರಮೈ ಹೊಳಪಿಗೆ ಬಳಸಲಾಗಿರುವ ಪಾಲಿಶ್ ಅನ್ನು ಕರಗಿಸಿ ಇದರ ನೋಟವನ್ನೇ ಬದಲಿಸಿಬಿಡುತ್ತದೆ.

3. ಕಿಟಕಿಗಳಿಗೆ

3. ಕಿಟಕಿಗಳಿಗೆ

ಕಿಟಕಿಗಳ ಹೊರಭಾಗಕ್ಕೆ ಅಂಟಿಕೊಳ್ಳುವ ಧೂಳು ಮತ್ತು ಇತರ ಕಣಗಳು ಗಾಜನ್ನು ಮಸುಕಾಗಿಸುತ್ತವೆ. ಇದಕ್ಕಾಗಿ ಡಿಶ್ ಸೋಪ್ ಮತ್ತು ಬಿಸಿನೀರಿನ ಮಿಶ್ರಣವನ್ನು ಬಳಸಿ ಬಟ್ಟೆಯಿಂದ ಒರೆಸಿದರೆ ಸುಲಭವಾಗಿ ಸ್ವಚ್ಛಗೊಳ್ಳುತ್ತದೆ. ಬಳಿಕ ಗ್ಲಾಸ್ ಕ್ಲೀನರ್ ದ್ರಾವಣ ಬಳಸಿ ಹೊಳಪು ಮತ್ತು ಅಂತಿಮ ಸ್ವಚ್ಛತೆಯನ್ನು ನೀಡಿ.

4. ವಿವಿಧ ಮೇಲ್ಮೈಗಳಿಗೆ

4. ವಿವಿಧ ಮೇಲ್ಮೈಗಳಿಗೆ

ಅಡುಗೆ ಮನೆಯ ಉಪಕರಣಗಳು, ಕಿಟಕಿಗಳ ಅಂಚುಗಳು, ಆಹಾರ ಕತ್ತರಿಸಲು ಬಳಸುವ ಪರಿಕರಗಳು ಮೊದಲಾದವುಗಳನ್ನು ಸ್ವಚ್ಛಗೊಳಿಸಲು ಅಲ್ಪ ಪ್ರಾಬಲ್ಯದ ಡಿಶ್ ಸೋಪ್ ದ್ರಾವಣವನ್ನು ತಯಾರಿಸಿ. ನೀರು ಅತಿ ಬಿಸಿಯಾಗಿರಬಾರದು. ಈ ನೀರನ್ನು ಸಿಂಪಡಿಸುವ ಬಾಟಲಿಯಲ್ಲಿ ತುಂಬಿಸಿ ಈ ಭಾಗಗಳ ಮೇಲೆಲ್ಲಾ ಸಿಂಪಡಿಸಿ. ಬಳಿಕ ಒರೆಸುವ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ. ಇದೇ ದ್ರಾವಣವನ್ನು ಒಲೆಯ ಹಿಂಬದಿಯ ಗೋಡೆಯ ಮೇಲೆ ಅಂಟಿಕೊಂಡಿದ್ದ ಎಣ್ಣೆಯ ಕಲೆಗಳು ಹಾಗೂ ಇತರ ಇತರ ಚುಕ್ಕೆಗಳನ್ನು ನಿವಾರಿಸಲೂ ಬಳಸಬಹುದು. ನೀರು ಸಿಂಪಡಿಸಿದ ಬಳಿಕ ಕೊಂಚ ಹೊತ್ತು ಹಾಗೇ ಬಿಡಿ, ಬಳಿಕ ಸ್ವಚ್ಛಗೊಳಿಸಿ.

5. ಆಭರಣಗಳನ್ನು ಸ್ವಚ್ಛಗೊಳಿಸಲು

5. ಆಭರಣಗಳನ್ನು ಸ್ವಚ್ಛಗೊಳಿಸಲು

ಒಂದು ಬೋಗುಣಿ ಸ್ಪಾರ್ಕ್ಲಿಂಗ್ ನೀರಿಗೆ ಒಂದೇ ತೊಟ್ಟು ಡಿಶ್ ವಾಶ್ ದ್ರಾವಣ ಸಾಕು. ಈ ನೀರಿನಲ್ಲಿ ನಿಮ್ಮ ಕೊಳೆಯಾಗಿದ್ದ ಆಭರಗಣಗಳನ್ನು ಮುಳುಗಿಸಿ ಐದು ನಿಮಿಷ ಬಿಡಿ. ಬಳಿಕ ಮೃದುವಾದ ಹಳೆಯ ಹಲ್ಲುಜ್ಜುವ ಬ್ರಶ್ ಬಳಸಿ ಕೊಳೆಯನ್ನು ನಿವಾರಿಸಿ. ಬಳಿಕ ಕಾಗದದ ಟಿಶ್ಯೂ ಬಳಸಿ ನೀರನ್ನು ಹೀರಿ ಒಣಗಲು ಬಿಡಿ.

6. ಬಟ್ಟೆಯ ಮೇಲೆ ಬಿದ್ದ ಎಣ್ಣೆಯ ಕಲೆಗಳು

6. ಬಟ್ಟೆಯ ಮೇಲೆ ಬಿದ್ದ ಎಣ್ಣೆಯ ಕಲೆಗಳು

ಊಟದ ತುತ್ತು ಬಟ್ಟೆಯ ಬಿದ್ದು ಎಣ್ಣೆ ಹೀರಿಕೊಂಡು ಬಟ್ಟೆಯಲ್ಲಿ ಕಲೆಯಾಗಿದ್ದರೆ ಇದಕ್ಕೂ ಡಿಶ್ ವಾಶ್ ಬಳಸಬಹುದು. ಇದಕ್ಕಾಗಿ ಕಲೆ ಬಿದ್ದ ಭಾಗದ ಮೇಲೆ ಡಿಶ್ ವಾಶ್ ದ್ರಾವಣವನ್ನು ನೇರವಾಗಿ ಹಾಕಿ ಬೆರಳಿನಿಂದ ಆವರಿಸಿ. ಕೊಂಚ ಕಾಲ ಹಾಗೇ ಬಿಟ್ಟು ವಾಶಿಂಗ್ ಮೆಶೀನ್ ನಲ್ಲಿ ಸಾಧ್ಯವಾದಷ್ಟೂ ಹೆಚ್ಚಿನ ಬಿಸಿ ಇರುವ ನೀರಿನಲ್ಲಿ ಒಗೆಯಲು ಹಾಕಿ. ಒಂದು ವೇಳೆ ವಾಶಿಂಗ್ ಮೆಶೀನ್ ನಲ್ಲಿ ಒಗೆಯಲು ಸಾಧ್ಯವಾಗಲಾರದ ಬಟ್ಟೆಯಾದರೆ, (ಉದಾಹರಣೆಗೆ ರೇಶ್ಮೆ ಅಥವಾ ಉಣ್ಣೆ) ಕಲೆ ಇರುವ ಭಾಗದ ಮೇಲೆ ಡಿಶ್ ಸೋಪು ಹಾಕಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಈ ಭಾಗದ ಕೆಳಗೆ ಬೆರಳನ್ನಿರಿಸಿ ಬಟ್ಟೆಯನ್ನು ಕೈ ಆವರಿಸುವಂತೆ ಮಡಚಿ ಈ ಭಾಗವನ್ನು ತಣ್ಣೀರು ಅಥವಾ ಆ ಬಟ್ಟೆಗೆ ಸೂಕ್ತವಾದ ತಾಪಮಾನದ ನೀರಿನಲ್ಲಿ ಮುಳುಗಿಸಿ. ಕಲೆ ಇದ್ದಷ್ಟು ಭಾಗ ಮಾತ್ರವೇ ಮುಳುಗಿಸಿದರೆ ಸಾಕು. ಬಳಿಕ ಬೆರಳುಗಳಿಂದ ಅತಿ ಎಚ್ಚರಿಕೆ ವಹಿಸಿ ಕಲೆಯ ಭಾಗವನ್ನು ಉಜ್ಜಿ ಸ್ವಚ್ಛಗೊಳಿಸಿ. ಬಳಿಕ ಕಾಗದ ಅಥವಾ ಸ್ವಚ್ಛ ಬಟ್ಟೆಯನ್ನು ಬಳಸಿ ಒಣಗಿಸಿ.

7. ಅಡುಗೆ ಮನೆಯ ಕ್ಯಾಬಿನೆಟ್ಟುಗಳು

7. ಅಡುಗೆ ಮನೆಯ ಕ್ಯಾಬಿನೆಟ್ಟುಗಳು

ಅಡುಗೆ ಮನೆಯ ಕಪಾಟುಗಳು ಅಥವಾ ಅಡುಗೆ ಸಾಮಾಗ್ರಿಗಳನ್ನು ಇರಿಸುವ ಕ್ಯಾಬಿನೆಟ್ಟುಗಳಲ್ಲಿ ಕಾಲ ಕ್ರಮೇಣ ಎಣ್ಣೆಯ ಜಿಡ್ಡು, ಹೊಗೆ ಮತ್ತಿತರ ಕಣಗಳು ಅಂಟಿಕೊಳ್ಳುತ್ತವೆ. ಇದೊಂದು ಜಿಡ್ಡಿನ ಲೇಪವಾಗಿ ದಿನೇ ದಿನೇ ದಪ್ಪನಾಗುತ್ತಾ ಹೋಗುತ್ತದೆ. ಸಮಯಾಭಾವದಿಂದ ಹೆಚ್ಚಿನವರು ಇದನ್ನು ಸ್ವಚ್ಛಗೊಳಿಸಲು ಹೋಗುವುದಿಲ್ಲ. ಇದನ್ನು ಸುಲಭವಾಗಿ ನಿವಾರಿಸಲು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಡಿಶ್ ವಾಶ್ ದ್ರಾವಣವನ್ನು ಬೆರೆಸಿ ಇದನ್ನು ನೀರು ಸಿಂಪಡಿಸುವ ಬಾಟಲಿಯಲ್ಲಿ ತುಂಬಿಸಿ ಚೆನ್ನಾಗಿ ಸಿಂಪಡಿಸಿ. ಕೊಂಚ ಒಣಗಲು ಬಂದಾಕ್ಷಣ ಇನ್ನಷ್ಟು ನೀರನ್ನು ಸಿಂಪಡಿಸಿ. ಹೀಗೇ ನಾಲ್ಕಾರು ಬಾರಿ ಸಿಂಪಡಿಸಿದ ಬಳಿಕವೇ ದಪ್ಪನೆಯ ಬಟ್ಟೆ (ಗೋಣಿ ಚೀಲದ ತುಂಡು ಅತ್ಯುತ್ತಮ) ಬಳಸಿ ಕೊಂಚವೇ ಒತ್ತಡ ಹಾಕಿ ಒರೆಸಿದರೆ ಸುಲಭವಾಗಿ ನಿವಾರಣೆಯಾಗುತ್ತದೆ. ಬಳಿಕ ಕಾಗದ ಬಳಸಿ ಅಂತಿಮವಾಗಿ ಸ್ವಚ್ಛಗೊಳಿಸಿ.

8. ಕಿಟಕಿಯ ಪರದೆಗಳು ಅಥವಾ ಬಿಸಿಲುಪರದೆಗಳು

8. ಕಿಟಕಿಯ ಪರದೆಗಳು ಅಥವಾ ಬಿಸಿಲುಪರದೆಗಳು

ಪಟ್ಟಿಗಳ ರೂಪದಲ್ಲಿರುವ ಬಿಸಿಲು ಪರದೆಗಳು (ಬ್ಲೈಂಡ್ಸ್) ಸ್ವಚ್ಛಗೊಳಿಸಲು ತುಂಬಾ ಕಷ್ಟ. ಈ ಪರದೆಯನ್ನು ಇಳಿಸದೆಯೇ ಸ್ವಚ್ಛಗೊಳಿಸುವುದು ಹೆಚ್ಚು ತ್ರಾಸದಾಯಕ. ಹಾಗಾಗಿ ಒಮ್ಮೆ ಇವನ್ನು ಇಳಿಸಿ ಅಗಲವಾದ ಪಾತ್ರೆಯೊಂದರಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಡಿಶ್ ವಾಶ್ ದ್ರಾವಣ ಬೆರೆಸಿ ಮುಳುಗಿಸಿ ಒಂದೊಂದಾಗಿ ಮುಳುಗಿಸಿ ಸ್ವಚ್ಛಗೊಳಿಸಿ.

9. ಫ್ಯಾನುಗಳು

9. ಫ್ಯಾನುಗಳು

ಫ್ಯಾನು ತಿರುಗಿದಷ್ಟೂ ಗಾಳಿಗೆ ಎದುರಾಗುವ ಅಂಚಿನ ಭಾಗ ಗರಿಷ್ಟ ಕೊಳೆಯನ್ನು ಪಡೆಯುತ್ತದೆ. ಇದನ್ನು ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಲು ಎತ್ತರದಲ್ಲಿ ಫ್ಯಾನಿನ ಮಟ್ಟಿಗೆ ಕೊಂಚ ಕಷ್ಟ. ಇದಕ್ಕಾಗಿ ಉಗುರುಬೆಚ್ಚನೆಯ ನೀರಿನಲ್ಲಿ ಡಿಶ್ ವಾಶ್ ದ್ರಾವಣವನ್ನು ಬೆರೆಸಿ ಈ ನೀರನ್ನು ಫ್ಯಾನುಗಳ ರೆಕ್ಕೆಗಳಿಗೆ, ಮೇಲಿನಿಂದಲೂ ಕೆಳಗಿನಿಂದಲೂ ತಾಕುವಂತೆ ಸಿಂಪಡಿಸಿ ಕೊಂಚ ಹೊತ್ತು ಬಿಡಿ. ಹೀಗೇ ಕೆಲವಾರು ಬಾರಿ ಸಿಂಪಡಿಸಿ ದಪ್ಪ ಬಟ್ಟೆಯಿಂದ ಒರೆಸಿ ತೆಗೆಯಿರಿ. ಸಾಧ್ಯವಾದರೆ ಫ್ಯಾನ್ ರೆಕ್ಕೆಗಳನ್ನು ಬಿಚ್ಚಿ ನೆಲದ ಮೇಲಿಟ್ಟು ಸ್ವಚ್ಛಗೊಳಿಸಿದರೆ ಇನ್ನೂ ಒಳ್ಳೆಯದು. ಇಳಿಸಲು ಸಾಧ್ಯವಾದರೆ ಸೋಪು ನೀರಿನಲ್ಲಿ ರೆಕ್ಕೆಗಳನ್ನು ಮುಳುಗಿಸಿ ಹಳೆಯ ಟೂಥ್ ಬ್ರಶ್ ಬಳಸಿ ಸ್ವಚ್ಛಗೊಳಿಸಿ.

10. ಕಟ್ಟಿಕೊಂಡಿರುವ ಶೌಚಾಲಯ ಸ್ವಚ್ಛಗೊಳಿಸಲು:

10. ಕಟ್ಟಿಕೊಂಡಿರುವ ಶೌಚಾಲಯ ಸ್ವಚ್ಛಗೊಳಿಸಲು:

ಇಂದು ಕಟ್ಟಿಕೊಂಡಿರುವ ಶೌಚಾಲಯವನ್ನು ಸ್ವಚ್ಛಗೊಳಿಸಲೆಂದೇ ಹಲವಾರು ಉತ್ಪನ್ನಗಳು ಲಭ್ಯವಿದ್ದು ಚಕಮಕನೆ ಹೊಳೆಯುವಂತೆ ಮಾಡುವ ಅಬ್ಬರದ ಜಾಹೀರಾತುಗಳ ಮೂಲಕ ಮನ ಸೆಳೆಯುತ್ತವೆ. ಆದರೆ, ಇವೆಲ್ಲದರ ಅಗತ್ಯವೇ ಇಲ್ಲ ಹಾಗೂ ಅಷ್ಟೊಂದು ಫಲದಾಯಕವೂ ಅಲ್ಲ. ಇದರ ಬದಲಿಗೆ ಆಗ್ಗವೂ, ಪರಿಣಾಮಕಾರಿಯಾದ ಸ್ವಚ್ಛತೆಯನ್ನೂ ಪಡೆಯಲು ಸಾಧ್ಯವಾಗುವಂತೆ ಮಾಡುವ ಇನ್ನೊಂದು ವಿಧಾನವಿದೆ. ಅದೇ ಡಿಶ್ ಸೋಪು.

ಡಿಶ್ ಸೋಪು:

ಹೌದು, ಅಚ್ಚರಿಯಾದರೂ ಇದು ನಿಜ. ಕಟ್ಟಿಕೊಂಡಿರುವ ಶೌಚಾಲಯವನ್ನು ಸ್ವಚ್ಛಗೊಳಿಸಲು ಡಿಶ್ ಸೋಪು ಮತ್ತು ಬಿಸಿ ನೀರೇ ಸಾಕು. ಇದಕ್ಕಾಗಿ ಕೊಂಚ ಹೆಚ್ಚೇ ಎನಿಸುವಷ್ಟು ಡಿಶ್ ವಾಶ್ ದ್ರಾವಣವನ್ನು ನೇರವಾಗಿ ಮಾಡಿ ಶೌಚಾಲಯಲ್ಲಿ ಸುರಿಯಿರಿ. ಕೊಂಚವೇ ಹೊತ್ತಿನಲ್ಲಿ ಈ ದ್ರಾವಣ ನೀರಿನ ಅಡಿಭಾಗದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಈ ದ್ರಾವಣವಷ್ಟೂ ತಳದಲ್ಲಿ ಸಂಗ್ರಹವಾಗುವವರೆಗೆ ಕಾದು ಬಳಿಕ ಆದಷ್ಟೂ ಬಿಸಿನೀರನ್ನು ಅತಿ ನಿಧಾನವಾಗಿ ಸುರಿಯಿರಿ. (ಇದು ಕುದಿ ನೀರಾಗಬಾರದು, ಕುದಿ ನೀರು ಶೌಚಾಲಯದ ಒಳಗಿನ ಭಾಗಗಳಿಗೆ ಹಾನಿ ಉಂಟು ಮಾಡಬಹುದು). ಮುಂದಿನ ಇಪ್ಪತ್ತರಿಂದ ಮೂವತ್ತು ನಿಮಿಷಗಳಲ್ಲಿ ಬಿಸಿನೀರು ಮತ್ತು ಸೋಪಿನ ದ್ರಾವಣ ನಿಧಾನವಾಗಿ ಒಳಗೆ ಇಳಿಯುತ್ತಾ ಕಟ್ಟಿಕೊಂಡಿದ್ದ ಭಾಗವನ್ನು ಕರಗಿಸುತ್ತಾ ತೆರವುಗೊಳಿಸುತ್ತದೆ. ಕ್ರಮೇಣ ಈ ನೀರು ಪೂರ್ಣವಾಗಿ ಖಾಲಿಯಾಗುತ್ತದೆ. ಬಳಿಕ ಫ್ಲಶ್ ಮಾಡುವ ಜೊತೆಜೊತೆಗೇ ಒಂದು ಇಡಿಯ ಬಕೆಟ್ ನೀರನ್ನು ಪೂರ್ಣವಾಗಿ ರಭಸದಲ್ಲಿ ಸುರಿದು ಪೂರ್ಣವಾಗಿ ತೆರವುಗೊಳಿಸುವಂತೆ ಮಾಡಿ. ಅಷ್ಟೇ! ನಿಮ್ಮ ಶೌಚಾಲಯ ಮತ್ತೊಮ್ಮೆ ಸ್ವಚ್ಚ ಮತ್ತು ಕಟ್ಟಿಕೊಂಡಿರದೇ ಇರುವ ಶೌಚಾಲಯವಾಗಿ ಬಳಕೆಗೆ ಸಿದ್ಧವಾಗುತ್ತದೆ.

English summary

Common Household Uses for Cleaning With Dish Soap

Here are common household uses for cleaning with dish soap, read on....
Story first published: Saturday, April 17, 2021, 18:17 [IST]
X
Desktop Bottom Promotion