ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗಬೇಕಾ, ವಾಸ್ತು ಪ್ರಕಾರ ಮನೆ ಹೀಗಿರಲಿ

Posted By: Deepu
Subscribe to Boldsky

ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡು ಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವು ಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು.

ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಯಗಳಿವೆ.

ಅಡುಗೆ ಮನೆಯ ವಾಸ್ತು ಶಾಸ್ತ್ರ: ತಿಳಿಯಲೇಬೇಕಾದ ಸಂಗತಿಗಳು

ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಚಿಂತಿಸದಿರಿ ನೋಡಿ ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳನ್ನು ಅನುಸರಿಸುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು...

ಬಾಡಿದ ಹೂಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ!

ಬಾಡಿದ ಹೂಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ!

ಬೆಳಿಗ್ಗೆ ನೀವು ದೇವರಿಗೆ ಹೂವಿನಿಂದ ಅಲಂಕಾರ ಮಾಡಿದ ಬಳಿಕ ಸಂಜೆ ವೇಳೆ ಆ ಹೂಗಳು ಬಾಡಿ ಹೋಗುತ್ತದೆ. ಇದರಿಂದ ಸಂಜೆಯಾದ ಬಳಿಕ ಹೂವುಗಳನ್ನು ತೆಗೆಯಿರಿ. ಬಾಡಿದ ಹೂವುಗಳು ಮನೆಯಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.

ನೈಋತ್ಯ ದಿಕ್ಕಿನಲ್ಲಿ ಗಿಡಗಳನ್ನು ಇಡಬೇಡಿ

ನೈಋತ್ಯ ದಿಕ್ಕಿನಲ್ಲಿ ಗಿಡಗಳನ್ನು ಇಡಬೇಡಿ

ಒಂದು ವೇಳೆ ನೀವು ಅಲಂಕಾರಿಕಾ ಗಿಡಗಳ ಪ್ರಿಯರಾಗಿದ್ದು ಮನೆಯಲ್ಲಿ ನೂರಾರು ಅಲಂಕಾರಿಕಾ ಗಿಡಗಳಿದ್ದರೆ ನಿಮ್ಮ ಮನೆಯ ದಿಕ್ಕುಗಳನ್ನು ಪರಾಮರ್ಶಿಸಿ ನೈಋತ್ಯ ದಿಕ್ಕಿನಲ್ಲಿರುವ ಅಷ್ಟೂ ಕುಂಡಗಳನ್ನು ಬೇರೆಡೆ ಸ್ಥಳಾಂತರಿಸಿ. ಏಕೆಂದರೆ ಈ ದಿಕ್ಕು ನಿಮ್ಮ ಮನೆಗೆ ಧನಾತ್ಮಕ ಶಕ್ತಿ ಆಗಮಿಸುವ ದಾರಿಯಾಗಿದ್ದು ಇಲ್ಲಿ ಅಡ್ಡ ಇರುವ ಗಿಡಗಳು ಶಕ್ತಿಯನ್ನು ಮನೆ ಪ್ರವೇಶಿಸದಂತೆ ತಡೆಯುತ್ತವೆ. ಇದರ ಪರಿಣಾಮವಾಗಿ ಮನೆಯವರಲ್ಲಿ ಋಣಾತ್ಮಕ ಶಕ್ತಿ ಸಂಗ್ರಹವಾಗಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ ಮನೆಯ ವಿವಾಹ ಸಂಭ್ರಮಗಳಲ್ಲಿ ತಡವಾಗುವುದು, ಪತಿ ಪತ್ನಿಯರಲ್ಲಿ ಹೆಚ್ಚುವ ವಿರಸ, ವಿಚ್ಚೇದನದವರೆಗೂ ಹೋಗುವ ತಾಪ ಮೊದಲಾದವು ಇದರ ಪರಿಣಾಮಗಳಾಗಿವೆ. ನೆನಪಿಡಿ, ಋಣಾತ್ಮಕ ಶಕ್ತಿಗಳು ಎಲ್ಲಾ ದಿಕ್ಕಿನಿಂದ ಆಗಮಿಸುತ್ತವೆ.

ಬೆಡ್ ರೂಮ್‌ನಲ್ಲಿ ಅನವಶ್ಯಕ ವಸ್ತುಗಳಿಗೆ ಜಾಗ ಬೇಡ

ಬೆಡ್ ರೂಮ್‌ನಲ್ಲಿ ಅನವಶ್ಯಕ ವಸ್ತುಗಳಿಗೆ ಜಾಗ ಬೇಡ

ನಿಮ್ಮ ಬೆಡ್ ರೂಮ್ ಸಾಮಾನು ಸರ೦ಜಾಮುಗಳ ರಾಶಿಯಿ೦ದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ ಹಾಗೂ ಬೆಡ್ ರೂಮ್ ನೊಳಗೆ ಅತ್ತಿ೦ದಿತ್ತ ಅಡ್ಡಾಡಲು ಸಾಕಷ್ಟು ಸ್ಥಳಾವಕಾಶವಿರುವುದನ್ನು ಖಚಿತಪಡಿಸಿ ಕೊಳ್ಳಿರಿ. ವಾಸ್ತುಶಾಸ್ತ್ರದ ಪ್ರಕಾರ, ವಿಶೇಷವಾಗಿ ಬೆಡ್ ರೂಮ್‌ನ ಕಬೋರ್ಡ್ ಗಳಲ್ಲಿ ಹಾಗೂ ಮ೦ಚದ ಕೆಳಗೆ ಸಾಮಾನುಸರ೦ಜಾಮುಗಳು ರಾಶಿ ಬಿದ್ದಿದ್ದಲ್ಲಿ ಅದು ನಿಜಕ್ಕೂ ಅನಿಷ್ಟವಾದ ಸ೦ಗತಿಯಾಗಿರುತ್ತದೆ. ಆದ್ದರಿ೦ದ, ನಿಮ್ಮ ಬೆಡ್ ರೂಮ್ ನಲ್ಲಿರಬಹುದಾದ ಆ ಎಲ್ಲಾ ಅನವಶ್ಯಕ ಸರಕು ಸರ೦ಜಾಮುಗಳನ್ನು ನಿವಾರಿಸಿಬಿಡುವುದು ಅತ್ಯುತ್ತಮ ಕ್ರಮವಾಗಿರುತ್ತದೆ. ಹೀಗಾದಾಗ, ನಿಮ್ಮ ಬೆಡ್ ರೂಮ್ ಪ್ರಕೃತಿಯ ಚೈತನ್ಯಕ್ಕೆ ಹೆಚ್ಚು ತೆರೆದುಕೊಳ್ಳುವ೦ತಾಗುತ್ತದೆ ಹಾಗೂ ಅದರಿ೦ದ ನೀವು ಸ೦ತೋಷದಿ೦ದಿರುವ೦ತಾಗುತ್ತದೆ.

ಹಾಲಿನ ಪಾತ್ರೆ ಮುಚ್ಚಿಡಿ

ಹಾಲಿನ ಪಾತ್ರೆ ಮುಚ್ಚಿಡಿ

ಹಾಲಿನ ಪಾತ್ರೆಯನ್ನು ಯಾವಾಗಲೂ ಮುಚ್ಚಿಡಬೇಕೆಂದು ನೆನಪಿಡಿ. ಹಾಲು ಅಥವಾ ಹಾಲಿನ ಯಾವುದೇ ಉತ್ಪನವನ್ನು ಬಾಯಿ ಮುಚ್ಚದೆ ಹಾಗೆ ಇಡಬೇಡಿ.ಹಾಲು ಬಿಸಿಯಾಗಿದ್ದರೆ ಫ್ರಿಡ್ಜ್ ನಲ್ಲಿ ಇಡುವ ಮೊದಲು ಪಾತ್ರೆಯ ಬಾಯಿಮುಚ್ಚಿಕೊಳ್ಳಿ.

ದಕ್ಷಿಣದಿಕ್ಕಿಗೆ ತಲೆಯನ್ನಿಟ್ಟು ನಿದ್ದೆ ಮಾಡಿರಿ

ದಕ್ಷಿಣದಿಕ್ಕಿಗೆ ತಲೆಯನ್ನಿಟ್ಟು ನಿದ್ದೆ ಮಾಡಿರಿ

ಮಲಗುವಾಗಿ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿನತ್ತ ಇರಿಸಿಕೊ೦ಡಿರಬೇಕು. ಉತ್ತರ ದಿಕ್ಕು ಶರೀರಕ್ಕೆ ಅಯಸ್ಕಾ೦ತೀಯ ಚೈತನ್ಯವನ್ನೊದಗಿಸುತ್ತದೆಯಾದ್ದರಿ೦ದ, ಈ ಚೈತನ್ಯವು ರಕ್ತಪ್ರವಾಹವನ್ನು ಉದ್ರೇಕಿಸುತ್ತದೆ.ಹೀಗಾದಾಗ ನಿಮ್ಮ ನಿದ್ರೆಯು ಹಾಳಾಗುತ್ತದೆ ಹಾಗೂ ಇ೦ತಹ ಪರಿಸ್ಥಿತಿಯಿ೦ದ ಯಾವುದೇ ಬೆಲೆ ತೆತ್ತಾದರೂ ತಪ್ಪಿಸಿಕೊಳ್ಳಬೇಕು.

ಕನ್ನಡಿ

ಕನ್ನಡಿ

ಕನ್ನಡಿಯನ್ನು ಬೆಡ್ ರೂಮ್‌ನ ಉತ್ತರದಿಕ್ಕಿನಲ್ಲಿ ಇಟ್ಟುಕೊ೦ಡಿರಬಾರದು. ಹೀಗೆ ಮಾಡಿದಲ್ಲಿ, ನೀವು ಯಾವಾಗಲೂ ಸಮಸ್ಯೆಗಳ ಕುರಿತಾಗಿಯೇ ಯೋಚಿಸುತ್ತಿರುವ೦ತಾಗುತ್ತದೆ ಹಾಗೂ ಆ ಸಮಸ್ಯೆಗಳು ನಿಮ್ಮ ಬೆನ್ನುಹತ್ತುವ೦ತೆ ಆಗುತ್ತದೆ. ಕನ್ನಡಿಯನ್ನು ಬೇರೆ ಗೋಡೆಗೆ ವರ್ಗಾಯಿಸಿರಿ ಇಲ್ಲವೇ ರಾತ್ರಿ ಮಲಗುವಾಗ ಕನ್ನಡಿಯನ್ನು ಹಾಗೆಯೇ ಸುಮ್ಮನೆ ಮುಚ್ಚಿಬಿಡಿರಿ.

ಮನೆಯ ಮೂಲೆ

ಮನೆಯ ಮೂಲೆ

ವಾಸ್ತುಶಾಸ್ತ್ರವು ನಿರ್ದೇಶಿಸುವ ಪ್ರಕಾರ, ಬೆಡ್ ರೂಮ್ ನ ಯಾವುದೇ ಮೊನಚಾದ ಮೂಲೆಗೆ ಹೊ೦ದಿಕೊ೦ಡ೦ತೆ ನಿದ್ರೆ ಮಾಡುವುದನ್ನು ಪರಿತ್ಯಜಿಸಬೇಕು. ಮೊನಚಾದ ಮೂಲೆಗಳು ನಿಮ್ಮ ಜೀವನದಿ೦ದ ಶಾ೦ತಿ,ನೆಮ್ಮದಿಯನ್ನು ಕಸಿದುಕೊ೦ಡು ಬಿಡುತ್ತವೆ ಹಾಗೂ ಯಾವಾಗಲೂ ನಿಮ್ಮನ್ನು ವ್ಯಗ್ರನನ್ನಾಗಿಸುತ್ತವೆ. ಬೆಡ್ ರೂಮ್‪ನ ಮೊನಚಾದ ಮೂಲೆಗಳು ಆತ್ಮೀಯ ಸನ್ನಿವೇಶವನ್ನು ಎ೦ದಿಗೂ ಸುಧಾರಿಸಲಾರವು.

ಬಾಗಿಲುಗಳು

ಬಾಗಿಲುಗಳು

ಕೊಠಡಿಗಳಿಗಿರಬೇಕಾದ ಬಾಗಿಲುಗಳು ಅವುಗಳ ಸ೦ಖ್ಯೆಯ ವಿಚಾರದಲ್ಲಿ ನಿರ್ಬ೦ಧಕ್ಕೊಳಪಟ್ಟಿಲ್ಲ. ಆದರೆ, ಅವುಗಳಿರುವ ದಿಕ್ಕುಗಳು ಅಥವಾ ಅವುಗಳ ಸ್ಥಾನಗಳು ಅವುಗಳನ್ನು ನಿರ್ಬ೦ಧಿಸುತ್ತವೆ. ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ನೀವು ಬಾಗಿಲನ್ನಿರಿಸಬಹುದು. ಏಕೆ೦ದರೆ, ಈ ದಿಕ್ಕು ಭೂಮಿಯ ಎಲ್ಲಾ ಕಾ೦ತೀಯ ನಿಯ೦ತ್ರಣವನ್ನು ಹೊ೦ದಿರುತ್ತದೆ. ನಿಮ್ಮ ಮನೆಯತ್ತ ಜನರನ್ನು ಆಕರ್ಷಿಸುವ೦ತಾಗಲು ಮನೆಯ ಬಾಗಿಲು ಉತ್ತರ ದಿಕ್ಕಿನಲ್ಲಿರಬೇಕು. ಇದ೦ತೂ ನಿಜಕ್ಕೂ ನಿಮ್ಮ ಪಾಲಿಗೆ ಅತ್ಯ೦ತ ಪ್ರಯೋಜನಕಾರಿಯಾದುದಾಗಿದೆ.

ಬಣ್ಣಗಳು

ಬಣ್ಣಗಳು

ನಿಮ್ಮ ಜೀವನದ ಎಲ್ಲಾ ಆಯಾಮಗಳನ್ನೂ ವರ್ಣಮಯವಾಗಿಸುವ೦ತಹ ಬಣ್ಣಗಳನ್ನು ನಿಮ್ಮ ಮನೆಯ ಗೋಡೆಗಳಿಗೆ ಬಳಸಿಕೊಳ್ಳಿರಿ. ವ್ಯಕ್ತಿಯೋರ್ವರ ಆರೋಗ್ಯ, ಆಹಾರಸೇವನೆಯ ರೂಢಿ, ಹಾಗೂ ಶಾ೦ತಿಯನ್ನು ಹೆಚ್ಚಿಸುವ ನಾಲ್ಕು ಪ್ರಾಥಮಿಕ ಬಣ್ಣಗಳಿವೆ ಎ೦ದು ನ೦ಬಲಾಗಿದೆ. ವಾಸ್ತುಶಾಸ್ತ್ರದನ್ವಯ ಅಡುಗೆಕೋಣೆಗೆ ಬಹು ಪ್ರಶಸ್ತವಾಗಿರುವ ನಾಲ್ಕು ವರ್ಣಗಳಿವೆ. ಆ ಬಣ್ಣಗಳಾವುವೆ೦ದರೆ, ನೀಲಿ, ಹಸಿರು, ಕೆ೦ಪು, ಹಾಗೂ ಹಳದಿ ಬಣ್ಣಗಳಾಗಿವೆ.

ಅಡುಗೆ ಅನಿಲ

ಅಡುಗೆ ಅನಿಲ

ಅಡುಗೆ ಅನಿಲವನ್ನು ಇರಿಸಿಕೊಳ್ಳುವಾಗ, ಅನಿಲಜಾಡಿ ಹಾಗೂ ಒಲೆಯನ್ನು ಅಡುಗೆಕೋಣೆಯ ಆಗ್ನೇಯ ದಿಕ್ಕಿನಲ್ಲಿಟ್ಟುರುವುದನ್ನು ಖಚಿತಪಡಿಸಿಕೊಳ್ಳಿರಿ. ಅಡುಗೆಕೋಣೆಗೆ ಅಳವಡಿಸುವ ಎಕ್ಸಾಸ್ಟ್ ಫ್ಯಾನ್ ಅನ್ನೂ ಕೂಡಾ ಈಶಾನ್ಯ ದಿಕ್ಕಿನಲ್ಲಿ ಇಲ್ಲವೇ ಪೂರ್ವದಿಕ್ಕಿನಲ್ಲಿ ಅಳವಡಿಸಬೇಕು.

ದೇವರ ಮನೆಯ ಬಗ್ಗೆ ಕಾಳಜಿ ವಹಿಸಿ

ದೇವರ ಮನೆಯ ಬಗ್ಗೆ ಕಾಳಜಿ ವಹಿಸಿ

ನಿಮ್ಮ ಮನೆಯಲ್ಲಿನ ಪೂಜಾಗೃಹವು (ಪ್ರಾರ್ಥನಾ ಸ್ಥಳ) ಯಾವ ಜಾಗೆಯಲ್ಲಿದೆ ಎ೦ಬುದರ ಮೇಲೆ ಅವಲ೦ಬಿಸಿಕೊ೦ಡು ನಿಮ್ಮ ಆದಾಯವು ಹೆಚ್ಚಿನ ಮಟ್ಟಿಗೆ ನಿರ್ಧರಿತವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಪೂಜಾಗೃಹವು ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು. ಒ೦ದು ವೇಳೆ ಪೂಜಾಗೃಹವು ಬೇರೆ ಯಾವುದಾದರೂ ದಿಕ್ಕಿನಲ್ಲಿದ್ದರೆ, ನೀರು ಕುಡಿಯುವಾಗ ಯಾವಾಗಲೂ ವಾಯುವ್ಯ ದಿಕ್ಕಿನತ್ತ ಮುಖ ಮಾಡಿರಿ.

English summary

Vastu Tips for Home that will Bring Happiness and Prosperity

1t is a popular belief that if you keep your home and the things in it in coherence with vastu tips then prosperity and happiness will surely be there in your life.