For Quick Alerts
ALLOW NOTIFICATIONS  
For Daily Alerts

ಮನೆಯಂಗಳದಲ್ಲಿ ಹಾವುಗಳ ಕಾಟವೇ? ಈ ಗಿಡಗಳನ್ನು ನೆಡಿ, ಹಾವು ಬರುವುದಿಲ್ಲ

By Arshad
|

ಕೆಲವು ಗಿಡಗಳಿರುವಲ್ಲಿ ಹಾವುಗಳು ಬರುವುದಿಲ್ಲ. ಗೊಂಡೆಹೂವು, ಮಾಚಿಪತ್ರೆ, ಪಶ್ಚಿಮ ಭಾರತದ ಮಜ್ಜಿಗೆಹುಲ್ಲು, ಸರ್ಪಗಂಧ ಹಾಗೂ ಬೆಳ್ಳುಳ್ಳಿಯ ಗಿಡ ಬೆಳೆಯುವಲ್ಲಿ ಹಾವುಗಳು ಸುಳಿಯದಿರುವುದನ್ನು ಕೃಷಿಕರು ಗಮನಿಸಿದ್ದಾರೆ. ಇವುಗಳ ರುಚಿ ಹಾಗೂ ಪರಿಮಳದಲ್ಲಿ ಸರ್ಪಗಳನ್ನು ವಿಕರ್ಷಿಸುವ ಗುಣವಿದೆ.

ಅಲ್ಲದೇ ಈ ಗಿಡಗಳ ಮೂಲಕ ಹಾದು ಹೋಗುವಾಗ ಚರ್ಮ ಹರಿಯುವ ಅಥವಾ ದಿಕ್ಕು ತೋಚದಂತಾಗುವ ಕಾರಣ ಹಾವುಗಳು ಇವುಗಳಿಂದ ದೂರವೇ ಇರುತ್ತವೆ. ಈ ಗುಣದ ಸದುಪಯೋಗ ಪಡೆದುಕೊಳ್ಳಲು ಮನೆಯ ಸುತ್ತ ಒತ್ತೊತ್ತಾಗಿ ಇವುಗಳಲ್ಲಿ ಯಾವುದಾದರೊಂದು ಗಿಡವನ್ನು ಬೆಳೆಸುವ ಮೂಲಕ ಮನೆಯಲ್ಲಿ ಹಾವುಗಳು ನುಸುಳದಂತೆ ಕಾಪಾಡಬಹುದು.


ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಸಾಮಾನ್ಯವಾಗಿ ಹಾವುಗಳು ಪರಿಸರಸ್ನೇಹಿಯಾಗಿದ್ದು ಮನುಷ್ಯರಿಗೆ ಬೇಕೆಂದು ಎಂದಿಗೂ ಅಪಾಯಕಾರಿಯಾಗಿಲ್ಲ. ಬದಲಿಗೆ ಇಲಿಗಳನ್ನು ಹಿಡಿದು ನಮ್ಮ ಆಹಾರವನ್ನು ಕಾಪಾಡುತ್ತವೆ. ಆದರೆ ಇವುಗಳನ್ನು ಅಕಸ್ಮಾತ್ತಾಗಿ ತುಳಿದರೆ ಅಥವಾ ಕುಂಡಗಳನ್ನು ಎತ್ತಿ ಸ್ವಚ್ಛಗೊಳಿಸುವ ವೇಳೆ ಕಚ್ಚಬಹುದಾದ ಸಾಧ್ಯತೆ ಇದೆ.

ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ

ವಿಷಕಾರಿಯಲ್ಲದ ಹಾವುಗಳಲ್ಲಿಯೂ ನಂಜು ಹರಡಬಹುದಾದ ಮುಳ್ಳುಗಳಿದ್ದು ಇವುಗಳನ್ನು ಚುಚ್ಚುವ ಸಾಧ್ಯತೆ ಇದೆ. ಆದ್ದರಿಂದ ಹಾವುಗಳು ಮನೆಯ ಹೊರಗಿದ್ದೇ ರಕ್ಷಣೆ ಮಾಡಿದರೆ ಸಾಕು, ಮನೆಯ ಬೇಲಿ ದಾಟಿ ಒಳಗೆ ಬರುವುದು ಬೇಡ ಎಂಬುದೇ ಹೆಚ್ಚಿನವರ ಇಚ್ಛೆಯಾಗಿದ್ದು ಈ ಗಿಡಗಳನ್ನು ನೆಡುವ ಮೂಲಕ ಇದನ್ನು ಸಾಧಿಸಬಹುದು. ಹಾವುಗಳನ್ನು ಓಡಿಸುವ ಕೆಲವು ಉತ್ಪನ್ನಗಳೇನೋ ಮಾರುಕಟ್ಟೆಯಲ್ಲಿವೆ. ಆದರೆ ಇವು ಕೆಲವು ವಿಶಿಷ್ಟ ಜಾತಿಗಳ ಹಾವುಗಳನ್ನು ಮಾತ್ರವೇ ಮನೆಯಿಂದ ದೂರವಿರಿಸುವ ಕಾರಣ ಅಷ್ಟೊಂದು ಪ್ರಯೋಜನಕಾರಿಯಲ್ಲ. ಬದಲಿಗೆ ಈ ನೈಸರ್ಗಿಕ ಹೂವುಗಳೇ ಎಲ್ಲಾ ಬಗೆಯ ಹಾವುಗಳನ್ನು ದೂರವಿಡಬಲ್ಲುದು.....

ಗೊಂಡೆ ಹೂವು

ಗೊಂಡೆ ಹೂವು

ಚೆಂಡು ಹೂವು ಎಂದೂ ಕರೆಯಲ್ಪಡುವ ಈ ಗಾಢ ಹಳದಿ ಬಣ್ಣದ ಹೂವುಗಳ ವೈಜ್ಞಾನಿಕ ಹೆಸರು Calendula officinalis. ಈ ಹೂವುಗಳಿಗೆ ಬಹುತೇಕ ಎಲ್ಲಾ ಹಾವುಗಳ ಸಹಿತ ಇನ್ನಿತರ ಕ್ರಿಮಿಗಳನ್ನೂ ವಿಕರ್ಷಿಸುವ ಗುಣವಿದೆ. ಈ ಗಿಡದಲ್ಲಿರುವ ಒಂದು ವಿಶಿಷ್ಟ ಪರಿಮಳ ಹಾವುಗಳಿಗೆ ಸಹಿಸಲು ಅಸಾಧ್ಯವಾಗಿದೆ. ಅಷ್ಟೇ ಅಲ್ಲ, ಈ ಗಿಡಗಳ ಮೂಲಕ ಹಾದು ಹೋಗುವಾಗ ಗಿಡದ ಕಾಂಡದಿಂದ ಒಸರುವ ರಸ ಚರ್ಮಕ್ಕೆ ತಾಕಿದರೆ ಅಸಾಧ್ಯ ತುರಿಯುಂಟಾಗುತ್ತದೆ.

ಗೊಂಡೆ ಹೂವು

ಗೊಂಡೆ ಹೂವು

ಅಷ್ಟೇ ಅಲ್ಲ, ಈ ರಸ ರೆಪ್ಪೆಗಳೇ ಇಲ್ಲದಿರುವ ಹಾವಿನ ಕಣ್ಣಿಗೇನಾದರೂ ಬಿದ್ದರೆ ಇದು ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು. ಇವೆಲ್ಲಾ ಮಾಹಿತಿಗಳು ಹಾವುಗಳಿಗೆ ಜನ್ಮತಃ ತಿಳಿದೇ ಇರುವ ಕಾರಣ ಈ ಗಿಡದ ತಂಟೆಯೇ ಬೇಡವೆಂದು ದೂರವಿರುತ್ತವೆ. ಈ ಗಿಡವನ್ನು ಒತ್ತೊತ್ತಾಗಿ ಮನೆಯ ಸುತ್ತ ಒಂದು ಸಾಲು ನೆಟ್ಟರೆ ಇಡಿಯ ಮನೆ ಹಾವುಗಳಿಂದ ರಕ್ಷಣ ಪಡೆಯುತ್ತದೆ.

ಹಾವಿನ ಸಸ್ಯ (Variegated snake plant ಅಥವಾ Mother-in-law’s tongue)

ಹಾವಿನ ಸಸ್ಯ (Variegated snake plant ಅಥವಾ Mother-in-law’s tongue)

ನೋಡಲು ಹಾವಿನ ಮೇಲೆ ಲಟ್ಟಣಿಗೆ ಉರುಳಿಸಿ ಚಪ್ಪಟೆಯಾಗಿಸಿದಂತೆ ಇರುವ ಎಲೆಗಳ ಸಸ್ಯಕ್ಕೆ 'ಅತ್ತೆಯ ನಾಲಿಗೆ' ಎಂದೇಕೆ ಕರೆದರೋ ಗೊತ್ತಿಲ್ಲ, ಆದರೆ ಇವುಗಳ ಹತ್ತಿರ ಹಾವುಗಳು ಮಾತ್ರ ಬರದೇ ಇರುವುದು ಖಂಡಿತಾ ಗೊತ್ತು. ಸಾಮಾನ್ಯವಾಗಿ ಹಾವುಗಳು ಇವುಗಳ ಆಕಾರವನ್ನು ನೋಡಿ ತಮ್ಮ ವೈರಿ ಎಂದೇ ಪರಿಗಣಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ಗುಲಾಬಿ ಅಗಾಪಂಥಸ್

ಗುಲಾಬಿ ಅಗಾಪಂಥಸ್

ಈರುಳ್ಳಿಯ ಜಾತಿಗೆ ಸೇರಿದ ಈ ಸಸ್ಯ ವಿವಿಧ ಬಣ್ಣದ ಹೂವುಗಳನ್ನು ಬಿಡುತ್ತದೆ. ಹೆಚ್ಚಾಗಿ ನೀಲಿ, ನೇರಳೆ, ಬಿಳಿ ಹಾಗೂ ಗುಲಾಬಿ ಬಣ್ಣದ ಹೂವುಗಳನ್ನು ಈ ಗಿಡ ಬಿಡುತ್ತದೆ. ಇದರಲ್ಲಿ ಗುಲಾಬಿ ಬಣ್ಣದ ಹೂವು ಬಿಡುವ Zulus plant ಎಂಬ ಸಸ್ಯಕ್ಕೆ ಹಾವುಗಳನ್ನು ವಿಕರ್ಷಿಸುವ ಗುಣವಿದೆ.

Image Courtesy

ಸರ್ಪಗಂಧ

ಸರ್ಪಗಂಧ

ಇಂಡಿಯನ್ ಸ್ನೇಕ್ ರೂಟ್, ಇನ್ಸೇನಿಟಿ ಹರ್ಬ್ ಎಂಬ ಅನ್ವರ್ಥನಾಮಗಳಿರುವ ಈ ಗಿಡಕ್ಕೂ ಹಾವುಗಳನ್ನು ವಿಕರ್ಷಿಸುವ ಗುಣವಿದೆ...

Image Courtesy

ಮಜ್ಜಿಗೆಹುಲ್ಲು (Cymbopogon citratus)

ಮಜ್ಜಿಗೆಹುಲ್ಲು (Cymbopogon citratus)

ಹುಲ್ಲಿನ ಕಟ್ಟೊಂದನ್ನು ನೆಲದ ಮೇಲೆ ಎಸೆದಿರುವಂತೆ ಬೆಳೆಯುವ ಈ ಹುಲ್ಲಿನ ಎಳೆಯಿಂದ ಬಿಡುಗಡೆಯಾಗುವ ಪರಿಮಳವನ್ನು ಹಾವುಗಳು ಇಷ್ಟಪಡುವುದಿಲ್ಲ. ಮಳೆಗಾಲ ಚಳಿಗಾಲದಲ್ಲಿ ಹಸಿರಾಗಿರುವ ಈ ಹುಲ್ಲು ಬೇಸಿಗೆಯಲ್ಲಿ ಒಣಗಿ ಕಂದುಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ಬಹುತೇಕ ಇಡಿಯವರ್ಷವೂ ಈ ಗಿಡ ಹಾವುಗಳಿಂದ ರಕ್ಷಣೆ ಒದಗಿಸುತ್ತದೆ. ಅಷ್ಟೇ ಅಲ್ಲ, ಇದರ ಪರಿಮಳವನ್ನು ದಾಟಿ ಸೊಳ್ಳೆಗಳೂ ಮನೆಯೊಳಗೆ ಬರುವುದಿಲ್ಲ.

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

ಇಂದಿನಷ್ಟು ಸೌಕರ್ಯಗಳಿಲ್ಲದ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರಿಗೂ ಹಾವುಗಳ ಕಾಟ ಇದ್ದೇ ಇತ್ತು. ಇವುಗಳನ್ನು ನಿಗ್ರಹಿಸಲು ಅನುಸರಿಸಲಾಗುತ್ತಿದ್ದ, ಆದರೆ ಫಲಕಾರಿಯಲ್ಲದ ಕೆಲವು ವಿಧಾನಗಳ ಪೈಕಿ ಪ್ರಮುಖವಾದವು ಇಲ್ಲಿವೆ:

1) ಮನೆಯ ಸುತ್ತ ಮುತ್ತ ಇಲಿಗಳು ತೋಡಿರುವ ಬಿಲಗಳನ್ನು ಮೊದಲು ಪತ್ತೆ ಹಚ್ಚಿ ಇದರಲ್ಲಿ ನೀರು ಬಿಡುವುದು. ಆದರೆ ಹಾವುಗಳು ನೀರಿನಲ್ಲಿಯೂ ಈಜಬಲ್ಲವಾದುದರಿಂದ ಈ ವಿಧಾನದಿಂದ ಹೆಚ್ಚೇನೂ ಪ್ರಯೋಜನವಿಲ್ಲ. ಆದರೆ ಇದರಿಂದ ಇಲಿಗಳು ದೂರ ಓಡುವುದರಿಂದ ಹಾವುಗಳೂ ಹೊರಹೋಗುತ್ತವೆ.

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

2) ಮನೆಯ ಸುತ್ತ ಡೀಸೆಲ್ ಅಥವಾ ಎಣ್ಣೆಯನ್ನು ಚೆಲ್ಲುವುದು. ಇದರಿಂದ ಕೊಂಚಕಾಲ ಹಾವುಗಳು ಬರದೇ ಹೋದರೂ, ಇದರ ಮೇಲೆ ಯಾರೋ ಬೀಡಿ ಸೇದಿ ಎಸೆದರೆ ಬೆಂಕಿ ತಗಲುವ ಸಾಧ್ಯತೆಯೇ ಹೆಚ್ಚು.

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

3) ಮನೆಯ ಬೇಲಿಯ ಕೆಳಭಾಗದಲ್ಲಿ ಒತ್ತೊತ್ತಾಗಿ ಹಗ್ಗವನ್ನು ಹೆಣೆಯುವುದು. ಆದರೆ ಹಾವುಗಳಿಗೆ ಈ ಹಗ್ಗವನ್ನು ಸೋಡುವಷ್ಟು ಕಣ್ಣುಗಳು ಚುರುಕಾಗಿಲ್ಲ.

ಈ ಊರಿನಲ್ಲಿ ಹಾವುಗಳೆಂದರೆ ಮನೆಯ ಸದಸ್ಯರಿದ್ದಂತೆ, ಯಾರೂ ಭಯಪಡಲ್ಲ!!

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

4) ಬೇಲಿಯ ಅಂಚಿನ ಕೆಳಗೆ ಹಂದಿಯ ಲದ್ದಿಯನ್ನು ಚೆಲ್ಲುವುದು. ಇದರ ಘಾಟು ಹಾವುಗಳಿಗೆ ಹಿಡಿಸುವುದಿಲ್ಲ ಆ ಕಾರಣದಿಂದ ಬರುವುದಿಲ್ಲ ಅನ್ನುವುದೇನೋ ಸರಿ. ಆದರೆ ಈ ಘಾಟು ಮನುಷ್ಯರೂ ಸಹಿಸಲಾಧ್ಯವಾಗಿರುತ್ತದಲ್ಲಾ!

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

ಮನೆಯ ಅಕ್ಕಪಕ್ಕ ಹಾವುಗಳು ಕಾಣಿಸಿಕೊಂಡಿದ್ದರೆ ಇವನ್ನು ಓಡಿಸಲು ಕೆಲವು ತಂತ್ರಗಳಿವೆ

5) ಹಳೆಯ ಟೈರುಗಳನ್ನು ಸುಡುವುದು: ಇದರ ಘಾಟಿನಿಂದ ಹಾವುಗಳು ಓಡುತ್ತವೆ ಎನ್ನುವುದು ಒಂದು ತಂತ್ರ. ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆಯೋ ಅತ್ತಕಡೆಯಿಂದ ಹಾವು ಬರುವುದಿಲ್ಲ ಎನ್ನುವುದೇನೋ ಸರಿ, ಆದರೆ ಇತ್ತ ಬದಿಯಿಂದ ಬರುವುದಿಲ್ಲ ಎನ್ನುವುದಕ್ಕೇನು ಖಾತರಿ?

English summary

Worried of snakes? These plants repels snakes from your garden

Certain plants like marigold, wormwood, West Indian lemon grass, Sarpgandha and garlic are natural repellent against snakes. These plants have bitter tastes and strong smells that cause discomfort and disorientation to snakes when they slither over them. They can be planted around homes and gardens to chase away serpents which cannot tolerate their strong odours. Snakes do not actually damage the garden -- in fact, common varieties prey on other pests such as slugs, mice, voles and beetles.
X
Desktop Bottom Promotion