For Quick Alerts
ALLOW NOTIFICATIONS  
For Daily Alerts

ತಿಗಣೆ ನಿವಾರಣೆಗೆ ಕೆಲವೊಂದು ವಿಧಾನಗಳು

By Hemanth P
|

ರಾತ್ರಿಯ ಕೀಟಗಳಾಗಿರುವ ಹಾಸಿಗೆಯ ತಿಗಣೆಗಳು ನಮಗೆ ರಾತ್ರಿಯಿಡಿ ನಿದ್ರೆಯಿಲ್ಲದಂತೆ ಮಾಡುತ್ತದೆ. ಇದು ಬೆಚ್ಚಗಿನ ಪ್ರದೇಶಗಳಲ್ಲಿ ಸಾಮಾನ್ಯ ಮತ್ತು ರಕ್ತದಿಂದಲೇ ಇದು ಜೀವಿಸುತ್ತದೆ. ಇವುಗಳು ನಿಮ್ಮ ಪೀಠೋಪಕರಣ ಮತ್ತು ಮ್ಯಾಟ್ ಗಳಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸುವ ಮೊದಲು ಅದನ್ನು ಕೊಲ್ಲುವುದು ತುಂಬಾ ಮುಖ್ಯ.

ಮ್ಯಾಟ್‌ಗಳು, ಹಾಸಿಗೆ ಕವರ್ ಇತ್ಯಾದಿಗಳಲ್ಲಿ ಈ ತಿಗಣೆಗಳು ಅಡಗಿಕೊಂಡಿರುತ್ತದೆ. ರಾತ್ರಿ ವೇಳೆ ಇವುಗಳು ಆಹಾರಕ್ಕಾಗಿ ಹೊರಗೆ ಬರುತ್ತದೆ. ಇದರಿಂದಾಗಿ ಇವುಗಳನ್ನು ನಾಶ ಮಾಡುವುದು ದೊಡ್ಡ ಸವಾಲು.ತಿಗಣೆಗಳನ್ನು ನಿವಾರಿಸುವ ಕೆಲವೊಂದು ವಿಧಾನಗಳು

7 Home Remedies to Combat Bed Bugs

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲಾಂಡ್ರಿ ಸುಲಭವಾಗಿಸುವ ವಿಧಾನಗಳು

1. ವ್ಯಾಕ್ಯೂಮಿಂಗ್
ಪ್ರತಿಯೊಂದು ವಸ್ತುವನ್ನು ವ್ಯಾಕ್ಯೂಮ್ ಮಾಡಿ. ಇದರಿಂದ ಎಲ್ಲಾ ತಿಗಣಿಗಳು ಅಲ್ಲದಿದ್ದರೂ ಸ್ವಲ್ಪವಾದರೂ ಸಾಯುತ್ತದೆ. ಪೀಠೋಪಕರಣ, ಮ್ಯಾಟ್, ಕಾರ್ಪೆಟ್, ಕರ್ಟೆನ್ ಇತ್ಯಾದಿಗಳನ್ನು ಸರಿಯಾಗಿ ವ್ಯಾಕ್ಯೂಮ್ ಮಾಡಿ.

2. ಒಗೆಯುವುದು
ಬಿಸಿನೀರಿನಲ್ಲಿ ಒಗೆಯಬಹುದಾದ ಪ್ರತಿಯೊಂದು ವಸ್ತುಗಳನ್ನು ಒಗೆಯಿರಿ. ನಾನು ಸಲಹೆ ಮಾಡುವುದೆಂದರೆ ಬೆಡ್ ಶೀಟ್, ಕುಷನ್, ಮೃದುವಾದ ಆಟಿಕೆ ಇತ್ಯಾದಿ. ಇವುಗಳನ್ನು ನೇರವಾಗಿ ಬಿಸಿನೀರಿಗೆ ಹಾಕಿ, ಬಳಿಕ ಒಗೆಯಿರಿ. ಇದು ಮ್ಯಾಟ್ ಗಳು ಅಥವಾ ಇತರ ದೊಡ್ಡ ವಸ್ತುಗಳಿಗೆ ಅನ್ವಯಿಸುವುದಿಲ್ಲ. ಇದಕ್ಕಾಗಿ ಮುಂದಿನ ಟಿಪ್ಸ್ ಪಾಲಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾತ್ ರೂಂನಲ್ಲಿ ಅವಶ್ಯಕವಾಗಿ ಇರಬೇಕಾದ ವಸ್ತುಗಳು

3. ಸೂರ್ಯನ ಬೆಳಕು
ಹವಾಮಾನ ನಿಮಗೆ ಅನುಕೂಲವಾಗಿದ್ದರೆ ತಿಗಣಿಗಳ ನಿವಾರಣೆಗೆ ಸೂರ್ಯನ ಬೆಳಕು ತುಂಬಾ ನೆರವಾಗುತ್ತದೆ. ಅವುಗಳು ಬಿಸಿಯನ್ನು ತಡೆದುಕೊಳ್ಳುತ್ತದೆ. ಅದಕ್ಕೆ ಹೆಚ್ಚಿನ ಉಷ್ಣತೆ ಬೇಕಾಗಿದೆ. 60ರಿಂದ 80 ಡಿಗ್ರಿ ಉಷ್ಣಾಂಶವಿರಬೇಕು. ಮ್ಯಾಟ್ ಗಳನ್ನು ನೇರವಾಗಿ ಸೂರ್ಯನ ಬೆಳಕಿಗೆ ಹಾಕಿ ನಿಮ್ಮ ಮನೆಯ ಟೆರೇಸ್ ಅಥವಾ ಮನೆಯ ಹಿಂಭಾಗದಲ್ಲಿ ಹಾಕಿ. ಇದರಿಂದ ನೇರ ಸೂರ್ಯನ ಬೆಳಕು ಬೀಳುತ್ತದೆ.

4. ಡ್ರೈಯರ್
ಈ ಎಲ್ಲವನ್ನು ಮಾಡಿದ ಬಳಿಕವೂ ತಿಗಣೆಗಳು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಯಾಕೆಂದರೆ ಅವುಗಳು ಅಡಗಿಕೊಂಡಿರುತ್ತದೆ. ಎಲ್ಲಾ ಬಟ್ಟೆಗಳನ್ನು ಡ್ರೈಯರ್ ನಲ್ಲಿ ಹಾಕಿ. ತುಂಬಾ ಬಿಸಿಯಾದ ಡ್ರೈ ತುಂಬಾ ಪರಿಣಾಮಕಾರಿಯಾಗಿ ಅವುಗಳನ್ನು ಕೊಲ್ಲಬಹುದು.

5. ನೈಸರ್ಗಿಕ ಕೀಟನಾಶಕ
ಯಾವುದಾದರೂ ನೈಸರ್ಗಿಕ ಕೀಟನಾಶಕ ಬಳಸಿ. ಇದು ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಇದು ತುಂಬಾ ಸುರಕ್ಷಿತ. ತಿಗಣೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಪ್ರೇ ಮತ್ತು ಪೌಡರ್ ಗಳು ಲಭ್ಯವಿದೆ. ಡಿಡಿಟಿ ಪೌಡರ್ ಬಳಸಬೇಡಿ. ಯಾಕೆಂದರೆ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

6. ದಾಲ್ಚಿನ್ನಿ ತೈಲ / ಲ್ಯಾವೆಂಡರ್ ಎಣ್ಣೆ
ದಾಲ್ಚಿನ್ನಿ ತೈಲದಿಂದ ತಿಗಣೆ ಕೊಲ್ಲಬಹುದು. ಇದು ತಿಗಣಿ ನಿವಾರಣೆಗೆ ಒಳ್ಳೆಯ ಮಾರ್ಗ. ಸ್ಪ್ರೇ ಬಾಟಲಿಯೊಳಗೆ ದಾಲ್ಚಿನ್ನಿ ಎಣ್ಣೆ ಹಾಕಿ ಪರಿಣಾಮಕಾರಿಯಾಗಿ ತಿಗಣೆ ಕೊಲ್ಲಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಾಷಿಂಗ್ ಮೆಷಿನ್ ಶುದ್ಧತೆಗೆ 5 ಟಿಪ್ಸ್

ಲ್ಯಾವೆಂಡರ್ ಎಣ್ಣೆಯನ್ನು ತಿಗಣೆಗಳಿಗೆ ಸಹಿಸಲು ಸಾಧ್ಯವಿಲ್ಲ. ಇದರ ವಾಸನೆ ತಿಗಣೆಗಳಿಗೆ ಅಲರ್ಜಿ. ಇದರಿಂದ ಲ್ಯಾವೆಂಡರ್ ಎಣ್ಣೆಯ ಸ್ಪ್ರೇ ತಿಗಣೆ ನಿವಾರಣೆಯಲ್ಲಿ ನೆರವಾಗಬಹುದು. ಲ್ಯಾವೆಂಡರ್ ಎಣ್ಣೆ ಒಳ್ಳೆಯ ಸುವಾಸನೆ ಬೀರುವುದರಿಂದ ನಿಮಗೆ ಒಳ್ಳೆಯದು. ಆದರೆ ತಿಗಣೆಗಳಿಗಲ್ಲ.

English summary

7 Home Remedies to Combat Bed Bugs

Have you ever noticed small red boils all over your back and hands as soon as you get up? This could be because of the tiny little devil called bed bugs. Bed bugs are a terror if spread all over your house
Story first published: Monday, February 17, 2014, 9:37 [IST]
X
Desktop Bottom Promotion