For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಮನೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರಗಳನ್ನು ಹೀಗೆಯೇ ಇಡಬೇಕು

|

ವಾಸ್ತು ಎಲ್ಲದಕ್ಕೂ ಮುಖ್ಯ. ಅದರಲ್ಲೂ ಮನೆಯ ವಿಚಾರದಲ್ಲಿ ವಾಸ್ತು ಬಹುಮುಖ್ಯ ಪಾತ್ರ ವಹಿಸುವುದು. ಅದಕ್ಕೆ ಮನೆಯನ್ನು ವಾಸ್ತು ಪ್ರಕಾರ, ನೋಡಿ ಕಟ್ಟುವುದು. ಆದರೆ, ಮನೆಯಲ್ಲಿ ನೆಲೆಸುವ ಅಥವಾ ಆರಾಧಿಸುವ ದೇವರಿಗೂ ವಾಸ್ತು ಮುಖ್ಯ ಎಂಬುದು ನಿಮಗೆ ತಿಳಿದಿದೆಯೇ?.

Gods idol

ಹೌದು, ಮನೆಯಲ್ಲಿ ದೇವರನ್ನು ಹೇಗೆ ಇಡಬೇಕು, ಎಲ್ಲೆಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ, ಇವೆಲ್ಲವೂ ನಿಮ್ಮ ಮನೆಯ ಹಾಗೂ ಮನೆಯಲ್ಲಿರುವ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ, ಮನೆಯ ದೇವರು ಕೋಣೆ ಯಾವ ದಿಕ್ಕಿಗಿರಬೇಕು? ವಿಗ್ರಹ ಅಥವಾ ಚಿತ್ರ ಹೇಗಿರಬೇಕು? ಅವುಗಳನ್ನು ಹೇಗಿಬೇಕು ಎಂಬುದನ್ನು ಇಲ್ಲಿ ನೋಡೋಣ.

ದೇವರ ವಿಗ್ರಹ ಹಾಗೂ ಚಿತ್ರಗಳಿಗೆ ಸಂಬಂಧಿಸಿದಂತೆ ವಾಸ್ತು ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ದೇವರ ಬೆನ್ನು ನೋಡಬೇಡಿ

ದೇವರ ಬೆನ್ನು ನೋಡಬೇಡಿ

ಮನೆಯ ದೇವರು ಕೋಣೆಯಲ್ಲಿ, ದೇವರ ಚಿತ್ರ ಮತ್ತು ವಿಗ್ರಹವನ್ನು ಎಂದಿಗೂ ಅದರ ಹಿಂಭಾಗ ಅಥವಾ ಬೆನ್ನು ಕಾಣಿಸುವ ರೀತಿಯಲ್ಲಿ ಇಡಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುವುದು. ಇದರಿಂದ ನಿಮಗೆ ಯಾವುದೇ ಒಳ್ಳೆಯದು ಆಗದು, ಜೊತೆಗೆ ಯಾವುದೇ ಪ್ರಯೋಜನವೂ ಸಿಗದು. ಆದ್ದರಿಂದ, ನೀವು ಎಂದಿಗೂ ದೇವರ ಬೆನ್ನನ್ನು ನೋಡಬಾರದು ಎಂಬುದನ್ನು ನೆನಪಿನಲ್ಲಿಡಿ.

ಎರಡಕ್ಕಿಂತ ಹೆಚ್ಚು ವಿಗ್ರಹಗಳು ಅಥವಾ ಫೋಟೋಗಳನ್ನು ಇಡಬೇಡಿ

ಎರಡಕ್ಕಿಂತ ಹೆಚ್ಚು ವಿಗ್ರಹಗಳು ಅಥವಾ ಫೋಟೋಗಳನ್ನು ಇಡಬೇಡಿ

ನಮ್ಮಲ್ಲಿ ಹೆಚ್ಚಿನವರಿಗೆ ದೇವರ ಮನೆ ತುಂಬಾ ಹಲವಾರು ಫೋಟೋಗಳು, ವಿಗ್ರಹಗಳನ್ನು ಇಟ್ಟು ಪೂಜಿಸುವ ಅಭ್ಯಾಸವಿದೆ. ಆದರೆ ಇದು ಸರಿಯಲ್ಲ. ನಿಮ್ಮ ದೇವರ ಮನೆಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಗಣೇಶನ ವಿಗ್ರಹಗಳನ್ನು ಅಥವಾ ಚಿತ್ರಗಳನ್ನು ಇಡದಂತೆ ವಿಶೇಷ ಕಾಳಜಿ ವಹಿಸಿ. ಇದನ್ನು ಅಶುಭವೆಂದು ಪರಿಗಣಿಸಲಾಗುವುದು. ಅಷ್ಟೇ ಅಲ್ಲ, ಒಂದೇ ದೇವರ ಎರಡು ಚಿತ್ರಗಳನ್ನು ಎರಡು ವಿಭಿನ್ನ ಸ್ಥಳಗಳಲ್ಲಿ ಇಡಬಾರದು. ಇದು ಸಹ ವಾಸ್ತುವಿನ ಪ್ರಕಾರ, ಅಶುಭದ ಸಂಕೇತ ಎನ್ನಲಾಗುವುದು.

ಭಯಂಕರವಾದ ರೂಪವನ್ನು ಪ್ರತಿಷ್ಠಾಪಿಸಬೇಡಿ

ಭಯಂಕರವಾದ ರೂಪವನ್ನು ಪ್ರತಿಷ್ಠಾಪಿಸಬೇಡಿ

ಯುದ್ಧದ ಸಂದರ್ಭವನ್ನು ತೋರಿಸುವ ಅಥವಾ ಯುದ್ಧದ ವೇಳೆ ದೇವರ ರೂಪವು ಗೋಚರವಾಗುವಂತಹ ವಿಗ್ರಹ ಅಥವಾ ಚಿತ್ರವನ್ನು ದೇವರಕೋಣೆಯಲ್ಲಿ ಇಡದಂತೆ, ಸಂಪೂರ್ಣ ಕಾಳಜಿ ವಹಿಸಬೇಕು. ಇದು ಮನೆಯಲ್ಲಿ ಗದ್ದಲ ಅಥವಾ ಯುದ್ಧದ ಸನ್ನಿವೇಶವನ್ನು ಸೃಷ್ಟಿಸಬಹುದು. ಆದ್ದರಿಂದ ಮನೆಯಲ್ಲಿ ಸದಾಕಾಲ ಸಕಾರಾತ್ಮಕ ಶಕ್ತಿ ಉಳಿಯುವಂತೆ ಮಾಡುವಂತಹ ಶಾಂತ ರೂಪದ ದೇವರ ವಿಗ್ರಹಗಳನ್ನು ಇಡಿ.

ಈ ದಿಕ್ಕಿನಲ್ಲಿ ಫೋಟೋ ಇಡಬೇಡಿ

ಈ ದಿಕ್ಕಿನಲ್ಲಿ ಫೋಟೋ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಪೂಜೆಯ ಕೋಣೆಯ ಪೂರ್ವ ಅಥವಾ ಉತ್ತರ ಭಾಗದ ಗೋಡೆಯ ಮೇಲೆ ಯಾವುದೇ ದೇವರ ವಿಗ್ರಹ ಮತ್ತು ಚಿತ್ರವನ್ನು ಇಡುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಉತ್ತರದ ಕಡೆಗೆ ದೇವರ ವಿಗ್ರಹ ಅಥವಾ ಚಿತ್ರವನ್ನು ಎಂದಿಗೂ ಇಡಬೇಡಿ. ಇದರಿಂದ ಆರಾಧಕರು ದಕ್ಷಿಣದ ಕಡೆಗೆ ಮುಖ ಮಾಡಬೇಕಾಗುತ್ತದೆ. ಇದು ಒಳ್ಳೆಯದಲ್ಲ. ಜೊತೆಗೆ ದಕ್ಷಿಣ ದಿಕ್ಕಿನಲ್ಲಿ ಪೂಜೆಯ ಕೋನೆಯನ್ನು ಎಂದಿಗೂ ನಿರ್ಮಿಸಬೇಡಿ.

English summary

Vastu Tips: Know in which direction you should place God's idol or picture in your house in kannada

Here we talking about Vastu Tips: Know in which direction you should place God's idol or picture in your house in kannada, read on
Story first published: Monday, September 26, 2022, 10:34 [IST]
X
Desktop Bottom Promotion