ಅಮ್ಮಂದಿರ ದಿನ ವಿಶೇಷ: ಪ್ರೀತಿಯ ಅಮ್ಮನಿಗೆ ಏನು ಗಿಫ್ಟ್ ಕೊಡಲಿ?

By: Jaya subramanya
Subscribe to Boldsky

ಮೇ 14 ಓಡೋಡಿ ನಮ್ಮನ್ನು ಸಮೀಪಿಸುತ್ತಿದೆ. ಈ ದಿನದ ವಿಶೇಷತೆಯೇ ಅಮ್ಮಂದಿರ ದಿನವಾಗಿದೆ. ಅಮ್ಮನಿಗಾಗಿ ವಿಶೇಷ ದಿನ ಬೇಕಾಗಿಲ್ಲದಿದ್ದರೂ ತಮ್ಮ ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಅಮ್ಮನೊಡನೆ ಸಮಯ ಕಳೆಯಲು ಸಾಧ್ಯವಿಲ್ಲದವರಿಗೆ ಈ ದಿನ ಬೇಕೇ ಬೇಕು. ಅಂದಾದರೂ ಅವರುಗಳು ತಮ್ಮ ಅಮ್ಮನನ್ನು ನೆನಪಿಸಿಕೊಳ್ಳಲಿ ಮತ್ತು ಅವರೊಂದಿಗೆ ತಮ್ಮ ಸಮಯವನ್ನು ಕಳೆಯಲು ಎಂದಾಗಿಯೇ ಈ ವಿಶೇಷ ದಿನ. ಅಮ್ಮಾ ಊರು ಏನೇ ಅಂದರೂ ನೀನು ನನ್ನ ದೇವರು...

ದೇವರು ಅಮ್ಮನನ್ನು ಸೃಷ್ಟಿಸಿರುವುದೇ ತನ್ನ ಕೆಲಸವನ್ನು ಪೂರೈಸಲು ತಮ್ಮ ಮಕ್ಕಳನ್ನು ಕಾಪಾಡಲು ಎಂಬುದು ಹಳೆಯ ನಾಣ್ಣುಡಿಯಾಗಿದೆ. ದೇವರಿಗೆ ಸದಾ ಕಾಲವೂ ತನ್ನ ಪ್ರೀತಿ ಪಾತ್ರರೊಂದಿಗೆ ಇರಲು ಅವರನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದಾಗಿಯೇ ಅಮ್ಮನನ್ನು ಸೃಷ್ಟಿಸಿರುವುದು ಎಂಬ ಮಾತೊಂದಿದೆ. ಆದರೆ ಅಮ್ಮ ಹಗಲು ರಾತ್ರಿ ಎನ್ನದೆ ಪ್ರತಿ ನಿತ್ಯವೂ ತನ್ನ ಮಕ್ಕಳಿಗಾಗಿ ದುಡಿಯುತ್ತಾಳೆ ಮತ್ತು ಅವರ ಸಂತಸದಲ್ಲಿಯೇ ತಮ್ಮ ಖುಷಿಯನ್ನು ಕಂಡುಕೊಳ್ಳುತ್ತಾರೆ.  ಅಮ್ಮಂದಿರ ದಿನಾಚರಣೆಗೆ ಮಾವಿನ ಹಣ್ಣಿನ ಲಡ್ಡು ರೆಸಿಪಿ!

ಮೇ 14 ರಂದು ನಿಮ್ಮ ಅಮ್ಮನನ್ನು ಖುಷಿಪಡಿಸಲು ನೀವು ಕಾತರರಾಗಿದ್ದೀರಿ ಎಂದಾದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನಿಮಗಾಗಿ ನೀಡಲು ಬಯಸುತ್ತಿದ್ದೇವೆ. ಅವರಿಗೆ ಖುಷಿ ನೀಡುವ ಆಶ್ಚರ್ಯಕರ ಕೊಡುಗೆಗಳನ್ನು ನೀಡಿ ಅವರನ್ನು ಖುಷಿ ಪಡಿಸಬಹುದು. ಮತ್ತು ಅವರು ಇದನ್ನು ಹೆಚ್ಚು ಇಷ್ಟಪಡುತ್ತಾರೆ ಕೂಡ. ಬೆಲೆಬಾಳುವ ವಸ್ತುಗಳಿಗಿಂತಲೂ ಆಕೆ ಮಿಗಿಲಾದವರಾದ್ದರಿಂದ ಆಕೆಗೆ ಸಂತಸ ನೀಡುವ ಮತ್ತು ಬಳಸಲು ಉಪಯುಕ್ತವಾಗಿರುವ ವಸ್ತುಗಳನ್ನೇ ಅವರಿಗೆ ನೀಡಿ ಅವರ ಮುಖದಲ್ಲಿನ ಮಂದಹಾಸಕ್ಕೆ ನೀವು ಕಾರಣರಾಗಿ...

ಅವರಿಗಾಗಿ ಸಣ್ಣ ಪರ್ಸ್!

ಅವರಿಗಾಗಿ ಸಣ್ಣ ಪರ್ಸ್!

ನಮ್ಮ ಕುಟುಂಬದ ಸೂಪರ್ ಹೀರೋ ಅಮ್ಮ. ಯಾವುದೇ ಪರಿಸ್ಥಿತಿಯನ್ನು ಚತುರತೆಯಿಂದ ನಿಭಾಯಿಸುವ ಸಾಮರ್ಥ್ಯ ಆಕೆಗಿದೆ. ಆದ್ದರಿಂದಲೇ ಆಕೆ ಕೆಲವೊಂದು ಕೆಲಸಗಳನ್ನು ಸುಲಭವಾಗಿ ಮುಗಿಸುತ್ತಾರೆ. ಅವರಿಗಾಗಿ ನೀವು ಸಣ್ಣ ಪರ್ಸ್ ಅನ್ನು ಉಡುಗೊರೆಯಾಗಿ ನೀಡಿ ಅವರನ್ನು ಖುಷಿಪಡಿಸಬಹುದಾಗಿದೆ.

ಮರದ ಮೆನು ಕಾರ್ಡ್

ಮರದ ಮೆನು ಕಾರ್ಡ್

ಮಕ್ಕಳಿಗೆ ರುಚಿ ರುಚಿಯಾದ ಆಹಾರವನ್ನು ಸಿದ್ಧಪಡಿಸಿ ನೀಡುವುದೆಂದರೆ ಆಕೆಗೆ ಎಲ್ಲಿಲ್ಲದ ಸಂತಸವಾಗಿರುತ್ತದೆ. ಅಡುಗೆ ಮನೆಯಲ್ಲಿ ಮೆನು ಕಾರ್ಡ್ ಅನ್ನು ಸಿದ್ಧಪಡಿಸಿ ಇಡಿ ಮತ್ತು ನಿಮಗಾಗಿ ಆಕೆ ಇದನ್ನು ಖಂಡಿತ ಸಿದ್ಧಪಡಿಸಿ ನೀಡುತ್ತಾರೆ.

ಫೋಟೋ ಫ್ರೇಮ್

ಫೋಟೋ ಫ್ರೇಮ್

ಹೊಸದಾಗಿ ಫೋಟೋ ಫ್ರೇಮ್ ಅನ್ನು ಖರೀದಿಸುವುದಕ್ಕಿಂತ ನೀವೇ ಸ್ವತಃ ಒಂದು ಫೋಟೋ ಫ್ರೇಮ್ ತಯಾರಿಸಿ ಆಕೆಗೆ ನೀಡಬಹುದಾಗಿದೆ. ಹಳೆಯ ಫೋಟೋ ಫ್ರೇಮ್ ಇದ್ದಲ್ಲಿ ಅದನ್ನು ಹೊಸದಾಗಿ ಸಿದ್ಧಪಡಿಸಿ. ನಿಮ್ಮ ಮತ್ತು ನಿಮ್ಮ ಅಮ್ಮನ ಜತೆಗಿರುವ ಸುಂದರ ಫೋಟೋವನ್ನು ಸಿದ್ಧಪಡಿಸಿ ಆಕೆಗೆ ಉಡುಗೊರೆಯಾಗಿ ನೀಡಿ.

ಮನೆಯಲ್ಲೇ ತಯಾರಿಸಿದ ಕಾರ್ಡ್‌ಗಳು

ಮನೆಯಲ್ಲೇ ತಯಾರಿಸಿದ ಕಾರ್ಡ್‌ಗಳು

ನಿಮ್ಮ ಕುಟುಂಬ ಫೋಟೋಗಳನ್ನು ಬಳಸಿಕೊಂಡು ಕೊಲೇಜ್ ಸಿದ್ಧಪಡಿಸಿ ಮತ್ತು ಆಕೆಗೆ ಉಡುಗೊರೆಯಾಗಿ ನೀಡಿ. ಇನ್ನಷ್ಟು ಸುಂದರ ಅಲಂಕಾರಿಕ ಕಾರ್ಡ್‌ಗಳನ್ನು ಸಿದ್ಧಪಡಿಸಿ ಈ ಬಾರಿಯ ಅಮ್ಮಂದಿರ ದಿನವನ್ನು ವಿಶೇಷವಾಗಿಸಿ.

ಮನೆಯಲ್ಲೇ ತಯಾರಿಸಿದ ಕ್ಯಾಂಡಲ್‌ಗಳು

ಮನೆಯಲ್ಲೇ ತಯಾರಿಸಿದ ಕ್ಯಾಂಡಲ್‌ಗಳು

ಸುಗಂಧಿತ ಕ್ಯಾಂಡಲ್‌ಗಳನ್ನು ತಯಾರಿಸುವ ವಿಚಾರ ನಿಮ್ಮ ಮನಸ್ಸಿನಲ್ಲಿದ್ದರೆ, ಇದು ಇನ್ನಷ್ಟು ಉತ್ತಮವಾಗಿದೆ. ಮನೆಯಲ್ಲೇ ಸಾಧಾರಣ ಮೇಣದ ಬತ್ತಿಗಳನ್ನು ನಿಮಗೆ ತಯಾರಿಸಬಹುದಾಗಿದೆ. ದ್ರಾವಣದ ವ್ಯಾಕ್ಸ್ ಅನ್ನು ಕರಗಿಸಿ ಅದನ್ನು ಮೋಲ್ಡ್‌ಗಳಿಗೆ ಸುರಿಯಿರಿ. ಅದು ತಣ್ಣಗಾದ ನಂತರ ಸುಂದರ ಕ್ಯಾಂಡಲ್‌ಗಳು ನಿಮಗೆ ದೊರೆಯುತ್ತದೆ.

ಸುಗಂಧಿತ ಸೋಪು

ಸುಗಂಧಿತ ಸೋಪು

ಅಮ್ಮನಿಗೆ ಕೈತುಂಬಾ ಕೆಲಸ ಇರುವುದರಿಂದ ತಮ್ಮನ್ನು ನೋಡಿಕೊಳ್ಳಲು ಆಕೆಗೆ ಸಮಯ ಇರುವುದಿಲ್ಲ. ಈ ಸಮಯದಲ್ಲಿ ಆಕೆಗೆ ಮೆಚ್ಚುಗೆಯಾಗುವ ಸುಗಂಧಿತ ಸೋಪುಗಳನ್ನು ತಯಾರಿಸಿ ಅವರಿಗೆ ಉಡುಗೊರೆಯಾಗಿ ನೀಡಿ. ಮನೆಯಲ್ಲೇ ಸೋಪು ತಯಾರಿಸುವುದು ಹೇಗೆ ಎಂಬುದರ ಕುರಿತಾದ ವೀಡಿಯೊವನ್ನು ನೋಡಿಕೊಂಡು ಇದನ್ನು ತಯಾರಿಸಿಕೊಳ್ಳಿ. ನಿಮ್ಮ ಪ್ರಯತ್ನಕ್ಕೆ ಇದು ಖಂಡಿತ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮೇಲೆ ತಿಳಿಸಿರುವ ಎಲ್ಲಾ ಉಡುಗೊರೆಗಳನ್ನು ನೀವು ಅಮ್ಮಂದಿರ ದಿನದಂದು ಆಕೆಗೆ ನೀಡಬಹುದಾಗಿದೆ.

English summary

Brilliant Gift Ideas For Mother's Day

If you are looking for certain gift ideas for your mom, look no further, as that is what we're here to help you with. We have suggested below some of the best personalized gifts that you could make for your mommy dearest and surprise her. Take a look.
Subscribe Newsletter