For Quick Alerts
ALLOW NOTIFICATIONS  
For Daily Alerts

ಮನೆಯ ಕಿಟಕಿಯನ್ನು ಅಲಂಕರಿಸಲು ನವೀನ ಸಲಹೆಗಳು

|

ಮನೆ ಎಂದ ಮೇಲೆ ಬಾಗಿಲು-ಕಿಟಕಿ ಇರಲೇಬೇಕು, ನೈಸರ್ಗಿಕ ಗಾಳಿ, ಬೆಳಕು ನೇರವಾಗಿ ಮನೆಯೊಳಗೆ ಸುಳಿದಾಡಲು ಮುಕ್ತ ಅವಕಾಶವಿಲ್ಲದೇ ಇದ್ದರೆ ಏನು ಪ್ರಯೋಜನ ಅಲ್ಲವೇ? ಹಾಗಾಗಿ ಮನೆಯ ಗಾತ್ರ, ರೂಪರೇಷೆಗಳು, ವಿನ್ಯಾಸ, ಅಲ್ಲದೆ ವಾಸ್ತುಪ್ರಕಾರದ ತಕ್ಕಂತೆ ಮನೆಯ ಕಿಟಕಿಗಳ ಆಕಾರ, ಗಾತ್ರ ಲೆಕ್ಕಾಚಾರ ರೂಪುಗೊಳ್ಳುತ್ತದೆ.

ಇತ್ತೀಚೆಗೆ ಅಂತೂ ಮನೆಗಳಲ್ಲಿ ಅತ್ಯಂತ ನವೀನವಾದ ಸ್ಟೈಲಿಷ್ ವಿನ್ಯಾಸದಲ್ಲಿ ಕಿಟಕಿಗಳು ಗುರುತಿಸಿಕೊಂಡಿದೆ. ಮನೆಯ ಹೊರಗೆ ಮತ್ತು ಒಳಗೆ ದೊಡ್ಡದಾದ ಕಿಟಕಿ ಎದ್ದು ಕಾಣುವ ಭಾಗವಾಗಿರುತ್ತದೆ. ಹಾಗಾಗಿ ಇಂತಹ ಕಿಟಕಿಯನ್ನು ಚೆನ್ನಾಗಿ ಅಲಂಕರಿಸಿದರೆ ಮನೆಯ ಸೊಬಗು ಮತ್ತಷ್ಟು ಹೆಚ್ಚುತ್ತದೆ.

ಮನೆಯ ದೊಡ್ಡ ಕಿಟಕಿಯ ಪ್ರಾಮುಖ್ಯತೆ ಏನೆಂದರೆ, ಇದು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ, ಮನೆ ಒಳಗೆ ಬರುವ ಬೆಳಕನ್ನು ಸಹ ಹೆಚ್ಚಿಸುತ್ತದೆ. ಮನೆಯ ಹೊರಗಿನ ಭಾಗ ಸ್ವಲ್ಪ ಹೆಚ್ಚಾಗಿ ಕಾಣಲು ಇದು ನೆರವು ನೀಡುತ್ತದೆ. ಹೀಗಾಗಿ ನೀವು ಮನೆಯ ಒಳಗಿನಿಂದಲೆ ಹೊರಗಿನ ಪರಿಸರವನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಈಗ ಜನರು ಹಲವಾರು ವಾಸ್ತುಶಿಲ್ಪದ ಆಲೋಚನೆಗಳನ್ನು ಪ್ರಯೋಗಕ್ಕೆ ತರಲು ಮನಸ್ಸು ಮಾಡುತ್ತಿದ್ದಾರೆ.

Innovative Ideas To Decorate Bay Window

ಅದರಲ್ಲಿ ಮನೆಯ ದೊಡ್ಡ ಕಿಟಕಿ ಹೊರಗಿನ ಪರಿಸರವನ್ನು ಸಹ ನಿಮ್ಮ ಮನೆಯ ಅಂದಕ್ಕಾಗಿ ಬಳಸಿಕೊಳ್ಳುವ ಅವಕಾಶವನ್ನು ಒದಗಿಸಿಕೊಡುತ್ತದೆ. ಮನೆಯ ಕಿಟಕಿಗಳು ವೃತ್ತಾಕಾರವಾಗಿ, ಆಯಾತಾಕಾರವಾಗಿ, ಪಂಚ ಭುಜದಾಕಾರಾವಾಗಿ ಹೀಗೆ ನಾನಾ ಬಗೆಯಲ್ಲಿ ರೂಪುಗೊಳ್ಳುತ್ತದೆ. ನಿಮಗೆ ಬೇಕಾದ ವಿನ್ಯಾಸವನ್ನು ಇದಕ್ಕೆ ಅಳವಡಿಸಿಕೊಳ್ಳಬಹುದು. ಅದು ಇದರ ಹೆಚ್ಚುಗಾರಿಕೆ! ಅದನ್ನು ವಿನ್ಯಾಸ ಮಾಡಲು ಎಷ್ಟು ಬಗೆಗಳಿವೆಯೋ, ಅದರ ದುಪ್ಪಟ್ಟು ಬಗೆಯಲ್ಲಿ ಅದನ್ನು ಅಲಂಕರಿಸಲು ಮಾರ್ಗಗಳಿವೆ. ಆಧುನಿಕ ಒಳಾಂಗಣ ವಿನ್ಯಾಸಕ್ಕೆ ಇದು ಸುಂದರವಾಗಿ ಒಪ್ಪುತ್ತದೆ.

ಮನೆಯ ದೊಡ್ಡದಾದ ಕಿಟಕಿಯ ಬಳಿಯಿರುವ ಸ್ಥಳವನ್ನು ನೀವು ಸೃಜನಶೀಲತೆಯಿಂದ ಬಳಸಿಕೊಳ್ಳಬಹುದು. ಅಲ್ಲಿ ನೀವು ಓದಬಹುದು, ವಿಶ್ರಾಂತಿ ಪಡೆಯಬಹುದು, ಪರಿಸರವನ್ನು ಆಸ್ವಾದಿಸಲು ಸಹ ಇದು ಒಳ್ಳೆಯ ಸ್ಥಳವಾಗಿರುತ್ತದೆ. ಅದನ್ನು ಅಲಂಕರಿಸಲು ನಾವು ಇಲ್ಲಿ ಕೆಲವೊಂದು ಸಣ್ಣ ಸಲಹೆಗಳನ್ನು ನೀಡಿದ್ದೇವೆ. ಇವು ಈ ಕಿಟಕಿಗಳನ್ನು ಪರಿಣಾಮಕಾರಿಯಾಗಿ ಕಾಣುವಂತೆ ಮಾಡುತ್ತವೆ.

ವಿಂಡೋ ಸೀಟ್ ಅನ್ನು ಕಟ್ಟಿ
ಅಷ್ಟೇನು ದುಬಾರಿಯಲ್ಲದ ವಿಂಡೋ ಸೀಟಿಂಗ್ ಅನ್ನು ಈ ಇಂತಹ ಕಿಟಕಿಗಳ ಸ್ಥಳದಲ್ಲಿ ಹಾಕಿ. ಇದು ಈ ಸ್ಥಳಕ್ಕೆ ನಾಟಕೀಯ ಸ್ಪರ್ಷವನ್ನು ಒದಗಿಸಿ, ಅದರ ಮೂಲಕ ಮನೆಯ ಒಳಾಂಗಣದ ಸೊಬಗನ್ನು ಹೆಚ್ಚಿಸುತ್ತದೆ. ಈ ಸೀಟಿಂಗ್ ಮೇಲೆ, ಅಲಂಕಾರಿಕ ಪಿಲ್ಲೋಗಳನ್ನು ಮತ್ತು ಕುಷನ್‌ಗಳನ್ನು ಹಾಕಿ. ಈ ಸೀಟಿಂಗ್ ನಿಮಗೆ ಕುಳಿತುಕೊಳ್ಳಲು ಮತ್ತು ನ್ಯೂಸ್ ಪೇಪರ್ ಬುಕ್ ಸಂಗ್ರಹಿಸಿಟ್ಟುಕೊಳ್ಳುವ ಸ್ಥಳಗಳಾಗಿ ಉಪಯೋಗಕ್ಕೆ ಬರುತ್ತವೆ.

ಕೆಫೆ ವಿಂಡೋ ಪ್ಯಾನೆಲ್ ಬಳಸಿ
ಪ್ಯಾನೆಲ್ ಬಾರ್ ಅನ್ನು ಕಿಟಕಿಯ ಅರ್ಧ ಭಾಗಕ್ಕೆ ಬರುವಂತೆ ನೇತು ಹಾಕಿ, ಇದರ ಜೊತೆಗೆ ಆಕರ್ಷಕವಾದ ಕರ್ಟೆನ್ ಪ್ಯಾನೆಲ್ ಅಳವಡಿಸಿ. ಇವು ಸ್ವಾಭಾವಿಕ ಬೆಳಕು ಮನೆಗೆ ಬರಲು ಅವಕಾಶ ಮಾಡಿಕೊಡುತ್ತವೆ. ಜೊತೆಗೆ ಕಿಟಕಿಯ ಈ ಸ್ಥಳ ನಿಮಗೆ ಅಗತ್ಯವಾದ ಖಾಸಗಿತನವನ್ನು ಸಹ ನೀಡುತ್ತವೆ. ಇಲ್ಲಿ ಸ್ವೂಪಿಂಗ್ ವಾಲೆನ್ಸ್‌‌ಗಳು ಮತ್ತು ಭಾರವಾದ, ಗೌಡಿ ಕರ್ಟೇನ್‌ಗಳನ್ನು ಹಾಕಬೇಡಿ. ಏಕೆಂದರೆ ಇವು ಈ ಸ್ಥಳಕ್ಕೆ ಸಾಮಾನ್ಯವಾದ ಲುಕ್ ಅನ್ನೆ ನೀಡುತ್ತವೆ.

ಉತ್ತಮ ಅಲಂಕಾರಿಕ ಪೀಠೋಪಕರಣಗಳನ್ನು ಬಳಸಿ
ಕಿಟಕಿಯನ್ನು ಟ್ರೆಂಡಿ ಮತ್ತು ಸ್ಟೈಲಿಷ್ ಆದ ಪೀಠೋಪಕರಣಗಳಿಂದ ಅಲಂಕರಿಸುವುದು ಒಳ್ಳೆಯದು. ಇದನ್ನು ಅಲಂಕರಿಸಲು ಸರಳ ಮತ್ತು ಸುಂದರವಾದ ಪೀಠೋಪಕರಣಗಳನ್ನು ಬಳಸಿಕೊಳ್ಳಿ. ಇದರಿಂದ ಜಾಗ ಉಳಿಯುತ್ತದೆ ಮತ್ತು ಆಕರ್ಷಣೆಯು ಹೆಚ್ಚುತ್ತದೆ. ಇದರ ಪಕ್ಕ ಬುಕ್ ಶೆಲ್ಫ್ ಅನ್ನು ಇಟ್ಟುಕೊಳ್ಳಿ. ನಿಮಗೆ ಬೇಕಾದಾಗ ಇವು ನೆರವಿಗೆ ಬರಬಹುದು. ಒಂದು ವೇಳೆ ಇದು ಅಡುಗೆ ಮನೆಗೆ ಹತ್ತಿರವಿದ್ದಲ್ಲಿ, ಇಲ್ಲಿ ಉಪಾಹಾರವನ್ನು ಮಾಡುವ ವ್ಯವಸ್ಥೆಯನ್ನು ಸಹ ನೀವು ಮಾಡಿಕೊಳ್ಳಬಹುದು.

ಒಳಾಂಗಣ ಗಿಡಗಳನ್ನು ಬೆಳೆಸಿ
ಕಿಟಕಿಯ ಸುತ್ತ ಒಳಾಂಗಣ ಗಿಡಗಳಿಂದ ಅಲಂಕರಿಸಿದರೆ, ಮನಸ್ಸಿಗೆ ಮುದ ಹಾಗು ಮನೆಯ ಒಳಗಿನ ಪರಿಸರವು ಶುದ್ಧ ಗಾಳಿಯನ್ನು ಪಡೆಯುತ್ತದೆ. ಒಳಾಂಗಣದಲ್ಲಿ ಬೆಳೆಯುವ ಗಿಡಗಳು ಮನೆಯ ಬಣ್ಣಗಳನ್ನು ಹೆಚ್ಚಿಸುತ್ತವೆ. ಜೊತೆಗೆ ಇವು ಸ್ವಾಭಾವಿಕ ಅಲಂಕಾರಿಕ ಸಾಮಗ್ರಿಗಳಾಗಿರುತ್ತವೆ. ಆದಷ್ಟು ದೊಡ್ಡ ಗಿಡಗಳನ್ನು ಇಲ್ಲಿ ಇಡಬೇಡಿ. ಇವು ಮನೆಗೆ ಬೆಳಕನ್ನು ಬರುವುದನ್ನು ತಡೆಯುತ್ತವೆ. ಸರಳವಾದ ಮತ್ತು ಆಕರ್ಷಕ ಗಿಡಗಳನ್ನು ಮಾತ್ರ ಇಲ್ಲಿ ಬಳಸಿ.

English summary

Innovative Ideas To Decorate Bay Window

A bay window is a window space that projects from the main wall of a room and creates a unique shaped bay on the inside. Bay windows are usually used in contemporary homes as a part of innovative and stylish home decor ideas.
Story first published: Wednesday, April 29, 2015, 19:11 [IST]
X
Desktop Bottom Promotion