For Quick Alerts
ALLOW NOTIFICATIONS  
For Daily Alerts

ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು

|

ಈಗ ಎಲ್ಲೆಡೆ ಭೂಮಿಗಾಗಿ ಹಾಹಕಾರವೆದ್ದಿದೆ. ಮನೆಯನ್ನು ಚದರ ಅಡಿಗಳಾಗಿ ವಿಭಾಗಿಸಿ ಕಟ್ಟಲಾಗುತ್ತದೆ. ಅಂತಹ ಮನೆಯಲ್ಲಿ ವಿಶಾಲತೆಯನ್ನು ಬಯಸುವುದು ನಮ್ಮ ಹಂಬಲವಾದರು, ಅದಕ್ಕೆ ಸ್ಥಳವೆಲ್ಲಿಂದ ತರುವುದು. ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದು ವಿಶಾಲವಾಗಿ ಕಾಣಿಸದೆ, ಇಕ್ಕಟ್ಟಾಗಿ ಕಾಣಿಸುತ್ತದೆ. ಇದಕ್ಕೆ ಕಾರಣ ನೀವು ಮನೆಯನ್ನು ಅಲಂಕರಿಸುವ ರೀತಿ. ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸುವ ಮೂಲಕ ವಿಶಾಲವಾಗಿ ಕಾಣಿಸುವಂತೆ ಮಾಡಬಹುದು.

ಇದಕ್ಕಾಗಿ ಹಲವಾರು ಮನೆಯನ್ನು ಸುಧಾರಿಸುವ ವಿಧಾನಗಳು ಲಭ್ಯವಿವೆ. ಇವುಗಳನ್ನು ಬಳಸಿಕೊಂಡು ಮನೆಯನ್ನು ವಿಶಾಲವಾಗಿ ಮತ್ತು ದೊಡ್ಡದಾಗಿ ಕಾಣಿಸುವಂತೆ ಮಾಡಬಹುದು. ಈ ವಿಧಾನಗಳು ಕೆಲವೊಂದು ಸಣ್ಣ ಸಣ್ಣ ಅಂಶಗಳಿಂದ ಕೂಡಿರುತ್ತವೆ ಎಂಬುದು ವಿಶೇಷ. ಇದಕ್ಕೆ ಬೇಕಾಗಿರುವುದು ಬಣ್ಣ, ಅಲಂಕಾರ, ಪೀಠೋಪಕರಣ ಮತ್ತು ಅವುಗಳನ್ನು ಜೋಡಿಸುವ ಕ್ರಮ ಅಷ್ಟೇ. ಇಲ್ಲಿ ನಾವು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವ ಕೆಲವೊಂದು ಕ್ರಮಗಳನ್ನು ತಿಳಿಸಿದ್ದೇವೆ ಓದಿ ನೋಡಿ ಕಲಿತುಕೊಳ್ಳಿ.

ವಿನೇಗರ್ ಬಳಸಿ ತರಕಾರಿಗಳನ್ನು ತೊಳೆಯುವುದು ಹೇಗೆ?

ದೀಪಗಳು

ದೀಪಗಳು

ನಿಮ್ಮ ಮನೆಗೆ ಸೂಕ್ತವೆನಿಸುವ ದೀಪಗಳನ್ನು ಬಳಸಿ ಮನೆಯನ್ನು ದೊಡ್ಡದರಂತೆ ಬಿಂಬಿಸಬಹುದು. ದೀಪಗಳು ಮನೆ ದೊಡ್ಡದಾಗಿ ಭಾಸವಾಗುವಂತೆ ಮಾಡುತ್ತವೆ. ಅದರಲ್ಲು ಪ್ರಖರವಾಗಿರುವ ದೀಪಗಳು ಈ ಕೆಲಸಕ್ಕೆ ಮತ್ತಷ್ಟು ಸೂಕ್ತವಾಗಿವೆ. ಏಕೆಂದರೆ ಬೆಳಕು ಮೂಲೆ ಮೂಲೆಯನ್ನು ತಲುಪುವುದರಿಂದ ಕೋಣೆಗಳು ವಿಶಾಲವಾಗಿ ಕಾಣಿಸುತ್ತವೆ. ಹಾಗಾಗಿ ಮಂದ ಬೆಳಕಿನ ದೀಪಗಳನ್ನು ಬಳಸಬೇಡಿ, ಇವು ಕೋಣೆಗಳನ್ನು ಚಿಕ್ಕದಾಗಿ ಮತ್ತು ಮಂಕಾಗಿ ಕಾಣುವಂತೆ ಮಾಡುತ್ತವೆ.

ಬಣ್ಣ

ಬಣ್ಣ

ಬಣ್ಣಗಳ ಮೂಲಕವು ಮನೆಯನ್ನು ವಿಶಾಲವಾಗಿ ಕಾಣುವಂತೆ ಮಾಡಬಹುದು. ಅದಕ್ಕಾಗಿ ಬಿಳಿ, ಅರೆ ಬಿಳಿ, ಮುಂತಾದ ತಿಳಿ ಬಣ್ಣಗಳನ್ನು ಬಳಸಿ, ಇವು ಮನೆಯನ್ನು ರಂಗುಗೊಳಿಸುವುದರ ಜೊತೆಗೆ ವಿಶಾಲವಾಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ಮುಂದಿನ ಬಾರಿ ನಿಮ್ಮ ಮನೆಗೆ ಬಣ್ಣ ಬಳಿಯುವಾಗ ಬಣ್ಣಗಳ ಆಯ್ಕೆಯಲ್ಲಿ ಈ ಬಣ್ಣಗಳಿರುವಂತೆ ನೋಡಿಕೊಳ್ಳಿ.

ಪೀಠೋಪಕರಣಗಳು

ಪೀಠೋಪಕರಣಗಳು

ಅವಶ್ಯಕತೆ ಇದ್ದಷ್ಟೇ ಪೀಠೋಪಕರಣಗಳನ್ನು ಖರೀದಿಸುವುದರ ಮೂಲಕ ಮನೆಯನ್ನು ವಿಶಾಲವಾಗಿರುವಂತೆ ಬಿಂಬಿಸಬಹುದು. ಮಡಿಚುವಂತಹ ಕುರ್ಚಿಗಳು, ಸೋಫಾ ಕಮ್ ಬೆಡ್‍ಗಳು ಹಾಗು ಮಡಿಚುವಂತಹ ಡಿನ್ನರ್ ಟೇಬಲ್‍ಗಳು ನಿಮ್ಮ ಮನೆಯಲ್ಲಿ ಸ್ಥಳವನ್ನು ಉಳಿಸುತ್ತವೆ ಹಾಗು ನಿಮ್ಮ ಮನೆಯನ್ನು ವಿಶಾಲವಾಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ಮನೆಗೆ ಪೀಠೋಪಕರಣಗಳನ್ನು ಖರೀದಿಸುವಾಗ ದೊಡ್ಡ ದೊಡ್ಡ ಪೀಠೋಪಕರಣಗಳನ್ನು ಖರೀದಿಸಬೇಡಿ. ಇದು ಮನೆಯ ನಿರ್ವಹಣೆಯಲ್ಲಿ ಅತಿ ಮುಖ್ಯ ಅಂಶವೆಂಬುದನ್ನು ಮರೆಯಬೇಡಿ.

ನಿರುಪಯುಕ್ತವಾದವುಗಳು

ನಿರುಪಯುಕ್ತವಾದವುಗಳು

ನಿಮ್ಮ ಮನೆಯಲ್ಲಿ ನಿರುಪಯುಕ್ತವಾದಂತಹ ವಸ್ತುಗಳು ಶೇಖರಣೆಯಾಗುವುದನ್ನು ತಡೆಯಿರಿ. ಅಂತಹ ವಸ್ತುಗಳನ್ನು ಅಂದರೆ, ಅನುಪಯುಕ್ತ ಪೀಠೋಪಕರಣಗಳು, ಬಟ್ಟೆಗಳು ಮತ್ತು ಇನ್ನಿತರ ಮನೆಯ ಸಾಮಗ್ರಿಗಳನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡಿ. ಆಗ ನಿಮ್ಮ ಮನೆ ವಿಶಾಲವಾಗಿ ಕಾಣುವುದರಲ್ಲಿ ಸಂಶಯವೆ ಇಲ್ಲ.

ಕನ್ನಡಿ

ಕನ್ನಡಿ

ಮನೆಯನ್ನು ವಿಶಾಲವಾಗಿ ಮಾಡಲು ಹಲವಾರು ಅಲಂಕಾರಿಕ ಆಲೋಚನೆಗಳು ಕಾಲ ಕಾಲಕ್ಕೆ ಬರುತ್ತಲೆ ಇರುತ್ತವೆ. ಆದರೆ ಅವುಗಳಲ್ಲಿ ತುಂಬಾ ಹಳೆಯದಾದ ವಿಧಾನ ಕನ್ನಡಿಗಳನ್ನು ಅಳವಡಿಸುವುದು. ಕನ್ನಡಿಗಳು ಇರುವ ಸ್ಥಳದ ದುಪ್ಪಟ್ಟು ಪ್ರತಿಬಿಂಬವನ್ನು ನಮಗೆ ತೋರಿಸುತ್ತವೆ. ಇವು ಸರಳ ಮತ್ತು ಸುಂದರತೆಯನ್ನು ಸಹ ಪ್ರತಿಬಿಂಬಿಸುವುದರ ಜೊತೆಗೆ ಮನೆಯನ್ನು ವಿಶಾಲವಾಗಿ ಬಿಂಬಿಸುತ್ತವೆ. ಹೀಗೆ

ಈ ಎಲ್ಲಾ ಸಲಹೆಗಳನ್ನು ಪಾಲಿಸಿ, ಆಗ ನಿಮ್ಮ ಮನೆಯು ವಿಶಾಲವಾಗಿ ಹೇಗೆ ಕಾಣಿಸುತ್ತದೆಯೋ ನೋಡಿ. ಆಗ ಬೆರಗಾಗುವ ಸರದಿ ನಿಮ್ಮದಾಗಿರುತ್ತದೆ. ಇನ್ನೇಕೆ ತಡ ನಿಮ್ಮ ಕನಸಿನ ಮನೆಯಲ್ಲಿ ಈ ಅಂಶಗಳನ್ನು ಈ ಕೂಡಲೇ ಜಾರಿಗೆ ತನ್ನಿ.

English summary

Top 5 tips to make your home look spacious

There are number of home improvement methods to make your house look bigger and spacious. These methods include several small thing like the room decor, paint, furniture and alignment of furniture in the room. A few tips for the rearrangement and home improvement to make your house look spacy are as follows
Story first published: Tuesday, July 8, 2014, 17:22 [IST]
X
Desktop Bottom Promotion