For Quick Alerts
ALLOW NOTIFICATIONS  
For Daily Alerts

ಮನೆಯ ಸೊಬಗನ್ನು ಹೆಚ್ಚಿಸುವ ರಂಗು ರಂಗಿನ ರಂಗೋಲಿ!

|

ಪ್ರತಿಯೊಂದು ಹಿಂದೂ ಹಬ್ಬಗಳ ಸಂದರ್ಭದಲ್ಲಿ, ಮನೆಯ ಮುಂದೆ, ಗೇಟಿನ ಮುಂಭಾಗದಲ್ಲಿ ನಾವು ತರಹೇವಾರಿ ಬಣ್ಣಗಳಿಂದ ಮತ್ತು ಹೂವುಗಳಿಂದ ಅಲಂಕರಿಸಲಾದ ರಂಗೋಲಿಗಳನ್ನು ನೋಡುತ್ತೇವೆ. ಈ ರಂಗೋಲಿಯ ವಿನ್ಯಾಸಗಳಿಗೆ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಹೆಸರುಗಳು ಚಾಲ್ತಿಯಲ್ಲಿವೆ. ರಂಗೋಲಿ, ಮುಗ್ಗು, ಪೂಕಳಂ ಮತ್ತು ಅಲ್ಪನ ಎಂಬ ಹೆಸರುಗಳಿಂದ ಇವುಗಳನ್ನು ವಿವಿಧೆಡೆ ಕರೆಯುತ್ತಾರೆ. ಪ್ರತಿ ಪ್ರಾಂತ್ಯದಲ್ಲಿ ತಮ್ಮದೇ ಆದ ವಿಶೇಷವಾದ ರಂಗೋಲಿ ವಿನ್ಯಾಸಗಳು ಕಂಡು ಬರುತ್ತವೆ.

ರಂಗೋಲಿಯು ಪ್ರಾಚೀನ ಕಾಲದಲ್ಲಿ ಒಂದು ಪ್ರಮುಖವಾದ ಅಲಂಕಾರಿಕ ವಿನ್ಯಾಸವಾಗಿತ್ತು. ಇಂದಿಗು ಸಹ ಇದು ತನ್ನ ವರ್ಚಸ್ಸನ್ನು ಹಾಗೆಯೇ ಕಾಪಾಡಿಕೊಂಡು ಬಂದಿದೆ. ಈ ಸಾಂಪ್ರದಾಯಿಕ ಅಲಂಕಾರಿಕ ವಿನ್ಯಾಸಗಳನ್ನು ಭಾರತದಲ್ಲಿ ಇಂದಿಗು ಹಬ್ಬ-ಹರಿದಿನಗಳ ಸಂದರ್ಭದಲ್ಲಿ, ಮದುವೆ, ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಬಿಡಿಸಲಾಗುತ್ತವೆ.

ರಾಸಾಯನಿಕ ಬಣ್ಣಗಳ ಬದಲಿಗೆ ಸ್ವಾಭಾವಿಕವಾದ ಬಣ್ಣಗಳನ್ನು ಬಳಸಿ ಅವುಗಳಿಗೆ ಬೇಕಾದ ವಿನ್ಯಾಸಗಳನ್ನು ನೀಡಲಾಗುತ್ತದೆ. ಆದಾಗಿಯೂ ರಂಗೋಲಿಯ ವಿನ್ಯಾಸಗಳು ತಮ್ಮ ಮೂಲ ಸ್ವರೂಪದಲ್ಲಿಯೇ ದೇಶದಾದ್ಯಂತ ಉಳಿದುಕೊಂಡು ಬಂದಿವೆ. ಬನ್ನಿ ಬೋಲ್ಡ್ ಸ್ಕೈ ಇಂದು ದೀಪಾವಳಿ ಹಬ್ಬಕ್ಕಾಗಿ ವಿಭಿನ್ನ ಶೈಲಿಯ ರಂಗೋಲಿಯನ್ನು ಪರಿಚಯಿಸಲಿದ್ದು ಇಲ್ಲಿ ಹೇಳಿದಂತೆ ರಂಗೋಲಿಯ ನಡುವೆ ಹಣತೆಗಳನ್ನು ಹಚ್ಚಿಟ್ಟರೆ ನಿಮ್ಮ ಮನೆ ಮತ್ತಷ್ಟು ಭವ್ಯವಾಗಿ ಕಾಣುವುದು.

ಶಂಖದ ರಂಗೋಲಿಗೆ ದೀಪದ ಮೆರುಗು

Super Idea For Deepavali Rangoli Design

ರಂಗೋಲಿಯನ್ನು ಶಂಖದ ರೀತಿಯಲ್ಲಿ ಹಾಕಿ ಅದರ ಸುತ್ತ ದೀಪ ಇಟ್ಟು ಚಿಕ್ಕ 2 ಬಟ್ಟಲಿನಲ್ಲಿ ಗುಲಾಬಿಯ ದಳಗಳನ್ನು ಹಾಕಿ ಪೂರ್ವ-ಪಶ್ಚಿಮವಾಗಿಟ್ಟರೆ ಆಕರ್ಷಕವಾಗಿ ಕಾಣುವುದು. ಈ ರಂಗೋಲಿಯನ್ನು ಮನೆ ಒಳಗೆ ಹಾಕಿ ಲಕ್ಷ್ಮೀ ದೇವಿಯನ್ನು ಸ್ವಾಗತಿಸಿ.

ತಾವರೆ ಹಣತೆಯ ಚೆಲುವು

ದೊಡ್ಡ ಬಣ್ಣದ ರಂಗೋಲಿ ಹಾಕಿ ಮಧ್ಯದಲ್ಲಿ ತಾವರೆಯ ರೀತಿಯಿರುವ ಹಣತೆಯನ್ನು ಇಟ್ಟು ದೀಪ ಹಚ್ಚಿದರೆ ಸುಂದರವಾಗಿ ಕಾಣುವುದು.

ಸುತ್ತ ಹಣತೆ ಮಧ್ಯದಲ್ಲಿ ಗುಲಾಬಿಯ ಚೆಲುವು

ರಂಗೋಲಿ ಹಾಕಿ ಸುತ್ತ ದೀಪ ಹಚ್ಚಿ ಮಧ್ಯದಲ್ಲಿ ಚಿತ್ರದಲ್ಲಿ ತೋರಿಸಿದಂತೆ ಗುಲಾಬಿ ಹೂಗಳಿಂದ ಅಲಂಕರಿಸಿದರೆ ಆಕರ್ಷಕವಾಗಿ ಕಾಣುವುದು.

ಗುಲಾಬಿ ಹಾಗೂ ಹಣತೆಗಳ ಮೆರುಗು

ರಂಗೋಲಿ ಹಾಕಿ ಮಧ್ಯದಲ್ಲಿ ಒಂದು ದೀಪ ಹಚ್ಚಿಟ್ಟು ಸುತ್ತ ಹಣತೆಗಳು ಹಾಗೂ ಕೆಂಪು ಗುಲಾಬಿ ಹೂಗಳಿಂದ ಅಲಂಕರಿಸಿ.

5 ಹಣತೆಗಳ ರಂಗೋಲಿ

ಬಣ್ಣದ ರಂಗೋಲಿ ಹಾಕಿ ಅದರಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಆಕರ್ಷಕ ಹಣತೆಗಳನ್ನು ಇಟ್ಟು ಅಲಂಕರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಹಣತೆಗಳು ಬಣ್ಣದಿಂದ ಕೂಡಿರಲಿ.

ರಂಗೋಲಿಯ ಮಧ್ಯ ದೀಪದ ಅಲಂಕಾರ

ಸರಳವಾಗಿ ರಂಗೋಲಿ ಹಾಕಿ ಅದರ ಮಧ್ಯದಲ್ಲಿ ಚಿಕ್ಕ-ಚಿಕ್ಕ ಹಣತೆಗಳನ್ನು ಇಟ್ಟು ಮಧ್ಯದಲ್ಲಿ ಒಂದು ಮಣ್ಣಿನ ಮಡಿಕೆ ಇಟ್ಟು ಅದರ ಮೇಲೆ ಒಂದು ಹಣತೆ ಇಟ್ಟರೆ ರಂಗೋಲಿ ಆಕರ್ಷಕವಾಗಿ ಕಾಣುವುದು.

English summary

Super Idea For Deepavali Rangoli Design

Get inspired from these traditional yet extremely artistic Rangoli designs for Diwali and decorate your courtyard on this auspicious Diwali Festival.
X
Desktop Bottom Promotion