For Quick Alerts
ALLOW NOTIFICATIONS  
For Daily Alerts

ಮನೆಯನ್ನು ಅಲಂಕರಿಸಲು ಇಲ್ಲಿವೆ ಕೆಲ ಐಡಿಯಾಗಳು...

By Super
|

ಕೆಲವರಿಗೆ ಮನೆಗಳನ್ನು ಕಟ್ಟುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರ ಇಷ್ಟವಾದರೆ ಮತ್ತೆ ಕೆಲವರಿಗೆ ಮನೆಯನ್ನು ಅಲಂಕರಿಸುವುದು ತುಂಬಾ ಇಷ್ಟ. ಅಲಂಕಾರ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಅಂದವಾಗಿ ಮನೆಯನ್ನು ಅಲಂಕರಿಸುವುದು ಒಂದು ಕಲೆ.

ಮನೆಯನ್ನ ಸಿಂಗರಿಸಲು ಯಾವಾಗ ಬೇಕಾದರೂ ನಿಮಗೆ ಸ್ಪೂರ್ತಿ ಬರಬಹುದು. ಸ್ಪೂರ್ತಿ ಎಂದೂ ಹೇಳಿ ಕೇಳಿ ಬರುವಂತದ್ದಲ್ಲ ಅಲ್ಲವೆ? ಇಲ್ಲಿದೆ ನೋಡಿ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ವಿಚಿತ್ರವೆನಿಸುವ ಆದರೆ ಇಂಟರೆಸ್ಟಿಂಗ್ ಆಗಿರುವ ಕೆಲವು ಐಡಿಯಾಗಳು. ಇವುಗಳನ್ನು ಕೇಳಿದರೆ ನಿಮಗೆ ತಮಾಷೆ ಅನ್ನಿಸಬಹುದು. ಆದರೆ ನಿಮ್ಮ ಕಲ್ಪನೆಯನ್ನು ಬೆರೆಸಿ ಈ ಐಡಿಯಾಗಳನ್ನು ಬಳಸಿ ನೋಡಿ ಮನೆ ನಿಮ್ಮ ಊಹೆಯನ್ನು ಮೀರಿ ಬೇರೆಯದೇ ಸ್ವರೂಪ ಪಡೆದುಬಿಡಬಹುದು! ಒಮ್ಮೆ ಪ್ರಯತ್ನಿಸಿ.

Unusual Home Decoration Ideas

ಟೆಕ್ಸ್ಚರ್ ಟಾಕ್/ ನಿಮ್ಮದೇ ಗೋಡೆ ನಿಮ್ಮದೇ ಬಣ್ಣ

ಇದು ನಿಮ್ಮ ಮನೆ ವಿಭಿನ್ನವಾಗಿ ಕಾಣುವಂತೆ ಮಾಡುವ ಸರಳವಾದ ಉಪಾಯ ಎಂದು ಒಳಾಂಗಣ ವಿನ್ಯಾಸಕರಾದ ಕೆಟ್ಕಿ ಪಾಸ್ಸಿ ಅವರ ಅಭಿಪ್ರಾಯ. ನೀವು ಮಾಡಬೇಕಾದ್ದು ಇಷ್ಟೇ ಮನೆಯ ಗೋಡೆಗಳಿಗೆ ನೀವು ಬಯಸಿದ ಬಣ್ಣವನ್ನು ನಿಮಗೆ ಹೇಗೆ ಬೇಕೋ ಹಾಗೆ ನೀವೇ ಹಚ್ಚಿ. ಅಂದರೆ ಗೋಡೆಯ ಬಣ್ಣಗಳನ್ನು ಕಲಾತ್ಮಕವಾಗಿ ವಿನ್ಯಾಸ ಮಾಡಿ ನೋಡಿ.

ಪ್ರೆಟಿ ಕಾಂಕ್ರೀಟ್

ಮನೆ ಕಟ್ಟಿದ ನಂತರ ಉಳಿದ ಕಾಂಕ್ರೀಟ್ ಪೈಪ್ಗಳನ್ನು ನಿಮ್ಮ ಮನೆಯಲ್ಲೊಂದು ವಿಚಿತ್ರವಾದ ಹೂದಾನಿಯಾಗಿ ಬಳಸಬಹುದು. ಈ ಪೈಪ್ಗಳನ್ನು ನಿಮ್ಮ ಮನೆಯ ಕಿಟಕಿಯಲ್ಲಿ ಹೂದಾನಿಯಾಗಿ ಇಟ್ಟು ನೋಡಿ. ಕೇಳಲು ತಮಾಷೆ ಅನ್ನಿಸುತ್ತಿದೆಯೇ? ಕೆಟ್ಕಿ ಹೇಳುತ್ತಾರೆ " ನಿಮ್ಮ ಕೋಣೆಗಳ ಮೂಲೆಗಳಲ್ಲಿ ಅಥವ ಪ್ರವೇಶದ್ವಾರದ ಸಮೀಪ ಈ ಪೈಪ್ಗಳನ್ನೇ ಕುಂಡಗಳನ್ನಾಗಿ ಬಳಸಿ ಬೊನ್ಸಾಯ್ ಗಿಡಗಳನ್ನು ಇಡಲು ಬಳಸಬಹುದು. ಈ ಹಸಿರು ಗಿಡಗಳು ಮನೆಯಲ್ಲಿ ತಾಜಾತನ ಮೂಡಿಸುತ್ತದೆ."

ಶಂಖದಲ್ಲೊಂದು ದೀಪದಮಲ್ಲಿ

ಕಳೆದ ಬೇಸಿಗೆ ರಜೆಯಲ್ಲಿ ಸಮುದ್ರತೀರಕ್ಕೆ ಹೋದಾಗ ಕಪ್ಪೆಚಿಪ್ಪು, ಶಂಖಗಳನ್ನು ಆರಿಸಿ ತಂದಿದ್ದಿರಿ ತಾನೆ? ಅದನ್ನೇ ಬಳಸಿ ಕ್ಯಾಂಡಲ್ ಬೆಳಕಿನೂಟಕ್ಕೆ ಸುಂದರ ಕ್ಯಾಂಡಲ್ ಸ್ಟ್ಯಾಂಡ್ ತಯಾರಿಸಿ. ಶಂಖದೊಳಗೆ ಸಣ್ಣ ದೀಪದಬತ್ತಿಯನ್ನು ತೂರಿಸಿ ಶಂಖದೊಳಗೆ ಕರಗಿಸಿದ ಮೇಣವನ್ನು ತುಂಬಿ. ಬತ್ತಿಯನ್ನು ಸರಾಗವಾಗಿ ಉರಿಯಲು ಸಾಧ್ಯವಾಗುವಂತೆ ಅಣಿಗೊಳಿಸಿ. ಅದನ್ನು ಒಣಗಲು ಬಿಡಿ. ನಿಮ್ಮ ಬೇಸಿಗೆ ರಜೆಯ ಸುಂದರ ನೆನಪಿನ ಸ್ಮಾರಕ ರೆಡಿ! ಒಳಾಂಗಣ ವಿನ್ಯಾಸಕಾರರಾದ ಮೋಹಿತ್ ಜಿ. ನಿಶಾರ್ ಹೇಳುತ್ತಾರೆ "ನೀವು ವಿವಿಧ ಬಣ್ಣ, ಗಂಧ ಮತ್ತು ವಿನ್ಯಾಸದ ಕ್ಯಾಂಡೆಲ್ಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು" ಇದನ್ನು ಬಳಸಿ ಕಲಾತ್ಮಕವಾದ ದೀಪದಮಲ್ಲಿಯನ್ನು ಅಣಿಗೊಳಿಸಿ.

ದೀಪಧ್ವಜ (ಶಾಂಡೇಲಿಯರ್)

ನಿಮ್ಮ ಊಟದ ಮೇಜಿನ ಬಲಭಾಗದಲ್ಲಿ ಒಂದು ಶಾಂಡೇಲಿಯರ್ ಅಥವ ದೀಪಧ್ವಜವನ್ನು ನೇತುಹಾಕಿ. ಇದರಿಂದ ನಿಮ್ಮ ಅತಿಥಿಗಳು ಊಟಕ್ಕೆ ಬಂದಾಗ ಎಷ್ಟುಬೇಕೋ ಅಷ್ಟು ಬೆಳಕನ್ನು ಮಾತ್ರ ಊಟದ ಮೇಜಿನ ಮೇಲೆ ಬೀಳುವಂತೆ ಮಾಡುತ್ತದೆ. ಹೆಚ್ಚು ಪ್ರಕಾಶಮಾನವಲ್ಲದ ಮಂದ ಬೆಳಕು ರಾತ್ರಿ ಊಟಕ್ಕೆ ಮೆರುಗನ್ನು ನೀಡುತ್ತದೆ. ನಿಮ್ಮ ಊಟದ ಕೋಣೆಯ ಅಂದವನ್ನು ಇದು ಹೆಚ್ಚಿಸುತ್ತದೆ.

ಊಟಕ್ಕೆ ಕೂರುವ ಮುನ್ನ

ಊಟದ ಮೇಜಿನ ಮೇಲೆ ನೀವು ತಯಾರಿಸಿದ ರುಚಿಕರವಾದ ತಿಂಡಿ ಪದಾರ್ಥಗಳನ್ನು ಜೋಡಿಸುವ ಮೊದಲು ಸಣ್ಣ ಸಣ್ಣ ಬಟ್ಟಲುಗಳಲ್ಲಿ ಒಂದಿಷ್ಟು ಸುಂಗಧಭರಿತ ಗಿಡಮೂಲಿಕೆಗಳನ್ನು ಇರಿಸಿ.

ಗಾಜಿನ ಅಂದವೇ ಅಂದ

ನೀವು ಗಾಜಿನ ಸಾಮಾನು ಪ್ರಿಯರಾಗಿದ್ದಲ್ಲಿ. ನಿಮ್ಮ ಹತ್ತಿರ ಅಪರೂಪದ ಗಾಜಿನ ವಸ್ತುಗಳ ಸಂಗ್ರಹವಿರಬೇಕಲ್ಲ. ಅದನ್ನು ಕಿಟಕಿಯ ಬಳಿ ಜೋಡಿಸಿ. ಹೊರಗಿನಿಂದ ಬರುವ ಬೆಳಕು ಈ ವಸ್ತುಗಳ ಮೇಲೆ ಬಿದ್ದಾಗ ಅದರ ಅಂದ ಇಮ್ಮಡಿಗೊಂಡು ನೋಡುವವರನ್ನು ಸೆಳೆಯುತ್ತದೆ. ಇದು ಕೋಣೆಯ ಬಣ್ಣದ ಮೆರುಗನ್ನು ಕೂಡ ಹೆಚ್ಚಿಸುತ್ತದೆ.

ಮೇಜಿಗೊಂದು ಸುಂದರ ಚೌಕಟ್ಟು

ಸಣ್ಣ ಸಣ್ಣ ಫ್ರೇಮುಗಳನ್ನು ಊಟದ ಮೇಜಿನ ಅಲಂಕಾರಕ್ಕೆ ಬಳಸಿಕೊಳ್ಳಬಹುದು. ಮೋಹಿತ್ ಹೇಳುತ್ತಾರೆ "ವಿವಿಧ ಆಕಾರದ ಕನ್ನಡಿಗಳನ್ನು ಈ ಫ್ರೇಮುಗಳೊಂದಿಗೆ ಬಳಸಿ ಮೇಜನ್ನು ಅಲಂಕರಿಸಬಹುದು" ಎಂದು.

ಗೋಡೆಗೊಂದು ಏಣಿ

ಬಚ್ಚಲುಮನೆಯ ಗೋಡೆಯ ಬಳಿ ಏಣಿಯೊಂದನ್ನು ಒರಗಿಸಿಬಿಡಿ. ಟವಲ್ಗಳನ್ನು ನೇತುಹಾಕಲು ಇದು ಸ್ಟ್ಯಾಂಡ್ ರೀತಿ ಇದ್ದು ನೋಡಲು ವಿಶೇಷವೆನಿಸುತ್ತದೆ.

ಹಳೆ ಟ್ರಂಕು ಹಳೆ ಸೂಟ್ಕೇಸ್ ಸೂಪರ್ ಕಣೊ ಹೋಯಿ..

ಮನೆಯೆಂದ ಮೇಲೆ ಹಳೆವಸ್ತುಗಳು ಇದ್ದೆ ಇರುತ್ತೆ ಅಲ್ವಾ. ಎಲ್ಲ ಹಳೆವಸ್ತುಗಳು ವ್ಯರ್ಥವಲ್ಲ. ಈಗ ನೋಡಿ ಮನೆಯಲ್ಲಿ ಹಳೆ ಟ್ರಂಕ್ ಅಥವ ಸೂಟ್ಕೇಸ್ ಅಟ್ಟದ ಮೇಲೆ ಕೂತು ಧೂಳು ತಿನ್ತಾ ಇರುತ್ತಲ್ಲ ಅದನ್ನ ಕೆಳಗಿಳಿಸಿ. ಒಂಚೂರು ಕ್ಲೀನ್ ಮಾಡಿ ಕಾಫಿ ಟೇಬಲ್ ತರಹ ಬಳಸಿ. ಒಂದು ರೂಪಾಯಿ ಕೂಡ ಖರ್ಚಿಲ್ಲದೆ ಕಾಫಿ ಟೇಬಲ್ ರೆಡಿ ಸ್ವಾಮಿ! ಏನಂತೀರಾ?

English summary

Unusual Home Decoration Ideas

These ideas can be unusual and fun to do. Just go all out and let your creative juices flow. You never know what all you come up with. Here are a few ideas to get you started.
X
Desktop Bottom Promotion