For Quick Alerts
ALLOW NOTIFICATIONS  
For Daily Alerts

ಒಣಗಿದ ಗುಲಾಬಿಯ ದಳದಿಂದ ಮನೆಯ ಅಲಂಕಾರ!

|

ಹೂ ತೋಟದಲ್ಲಿ ಅರಳಿದ ಗುಲಾಬಿ ದಳನ್ನು ನೋಡುವಾಗ ಅದರ ಅಂದ ಮನಸೂರೆಗೊಳ್ಳುತ್ತದೆ. ಈ ಹೂವಿನಿಂದ ಅಂದವಾದ ಹೂ ಗುಚ್ಛ ಮಾಡಲಾಗುವುದು, ಮನೆಯ ಅಲಂಕಾರ ಮಾಡಲಾಗುವುದು , ತಲೆಗೆ ಮುಡಿಯಲಾಗುವುದು.

ಈ ಹೂ ಹೆಚ್ಚೆಂದರೆ ಒಂದುವಾರ ಕಾಲ ಇಡಬಹುದು. ನಂತರ ಇದರ ದಳಗಳು ಒಣಗುತ್ತವೆ. ಆ ಒಣಗಿದ ದಳಗಳನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಆದರೆ ಈ ಒಣಗಿದ ದಳದಿಂದ ಈ ಕೆಳಗಿನಂತೆ ಮನೆ ಅಲಂಕಾರಕ್ಕೆ ಬಳಸಬಹುದು.

Uses Of Dry Rose Petals In Room

1. ಒಂದು ಗಾಜಿನ ಡಬ್ಬಿಯಲ್ಲಿ ವಿವಿಧ ಬಣ್ಣದ ಗುಲಾಬಿಗಳ ದಳಗಳನ್ನು ಹಾಕಿದರೆ ಆಕರ್ಷಕವಾದ ಶೋಪೀಸ್ ಆಗುತ್ತದೆ.

2. ಲವಂಗ, ಚಕ್ಕೆ, ಏಲಕ್ಕಿ, ಸ್ವಲ್ಪ ಗಂಧ, ರೋಸ್ ಮೆರಿ ಮತ್ತು ರೋಸ್ ನ ದಳಗಳನ್ನು ಒಂದು ಗಾಜಿನ ಬಟ್ಟಲಿನಲ್ಲಿ ಹಾಕಿ ರೂಮಿನಲ್ಲಿಟ್ಟರೆ ರೂಂ ಸುವಾಸನೆಯಿಮದ ಕೂಡಿರುತ್ತದೆ.

3. ಗಾಜಿನ ಮೇಜಿನಲ್ಲಿ ಫೋಟೊ ಇಡುವ ರೀತಿ ರೋಸ್ ದಳಗಳನ್ನು ಆಕರ್ಷಕವಾದ ವಿನ್ಯಾಸದಲ್ಲಿ ಹಾಕಿಡಬಹುದು.

4. ಒಣಗಿದ ರೋಸ್ ದಳಗಳ ಮೇಲೆ ಸುವಾಸನೆ ಇರುವ ಎಣ್ಣೆಯನ್ನು ಚಿಮುಕಿಸಿ ಆ ದಳಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ರೂಂನಲ್ಲಿ ಇಟ್ಟರೆ ರೂಂ ಸುಗಂಧ ದ್ರವ್ಯ ಹಾಕಿದ ರೀತಿಯಲ್ಲಿ ಸುವಾಸನೆಯಿಂದ ಕೂಡಿರುತ್ತದೆ.

5. ಮನೆಯ ಹಾಲ್ ನ ಮಧ್ಯದಲ್ಲಿ ಒಂದು ಗಾಜಿನ ಶೋಪೀಸ್ ಇಟ್ಟು ಅದರಲ್ಲಿ ರೋಸ್ ಹೂಗಳನ್ನು ಇಟ್ಟು ಒಣಗಿದ ದಳದಿಂದ ಅದರ ಕೆಳಭಾಗದಲ್ಲಿ ಅಲಂಕಾರ ಮಾಡಬಹುದು.

English summary

Uses Of Dry Rose Petals In Room | Tips For Home Decoration | ಒಣಗಿದ ಗುಲಾಬಿಯ ದಳದಿಂದ ಮನೆಯ ಅಲಂಕಾರ | ಮನೆಯ ಅಲಂಕಾರಕ್ಕಾಗಿ ಕೆಲ ಸಲಹೆಗಳು

When the rose petals dry, just use them for decorating your center table or decorate glass bowls with these petals
X
Desktop Bottom Promotion