Just In
- 2 hrs ago
ಮಕ್ಕಳನ್ನು 'ಅಮ್ಮ' (ದಡಾರ)ದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- 12 hrs ago
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 14 hrs ago
ಚರ್ಮದ ಕ್ಯಾನ್ಸರ್ ಯೌವನ ಪ್ರಾಯದವರಲ್ಲಿ ಹೆಚ್ಚು ಯಾಕೆ . .? ತಡೆಗಟ್ಟುವುದು ಹೇಗೆ?
- 15 hrs ago
30 ದಿನ ಸಕ್ಕರೆ ಸೇವಿಸದಿದ್ದರೆ ಇಷ್ಟೆಲ್ಲಾ ಲಾಭವಾಗುತ್ತಾ..? ವೈಟ್ಲಾಸ್ಗೆ ಇದೇ ಬೆಸ್ಟ್..!
Don't Miss
- Movies
ನಟ ಭಯಂಕರ ಮೊದಲ 3 ದಿನಗಳಲ್ಲಿ ಮಾಡಿದ ನಿಜವಾದ ಕಲೆಕ್ಷನ್ ಎಷ್ಟು?
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಂಗಳ ಗೌರಿ ವ್ರತಕ್ಕೆ ದೇವರ ಕೋಣೆಯ ಅಲಂಕಾರ
ಮಂಗಳ ಗೌರಿ ವ್ರತದಲ್ಲಿ ಮುತ್ತೈದೆಯರು ಗೌರಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ತುಂಬಾ ಜೋರಾಗಿ ಮಾಡಲಾಗುವುದು ಮನೆ ಮತ್ತು ದೇವರ ಕೋಣೆಯನ್ನು ಶುದ್ಧ ಮಾಡಿ, ದೇವರ ಕೋಣೆಯನ್ನು ಅಲಂಕರಿಸಲಾಗುವುದು. ಮಂಗಳ ಗೌರಿವ್ರತಕ್ಕೆ ಈ ಕೆಳಗಿನಂತೆ ದೇವರ ಕೋಣೆಯನ್ನು ಅಲಂಕರಿಸಲಾಗುವುದು.
ಈ ವ್ರತ ಮಾಡುವವರು ಮನೆಯನ್ನು ಶುದ್ಧ ಮಾಡಿ ದೇವರ ಕೋಣೆಯನ್ನುರಂಗೋಲಿ ಮತ್ತು ದೀಪ, ಹೂಗಳಿಂದ ಅಲಂಕರಿಸುತ್ತಾರೆ. ಗೌರಿ ಮೂರ್ತಿಗೆ ತುಂಬಾ ಅಲಂಕಾರ ಮಾಡಲಾಗುವುದು.
ದೇವರ ಕೋಣೆಯ ಮುಂದುಗಡೆ ರಂಗೋಲಿ ಹಾಕಿ ಅದರಲ್ಲಿ ಒಂದು ಮರದ ಹಲಗೆ ಇಟ್ಟು ಅದರ ಮೇಲೆ ಬ್ಲೌಸ್ ಪೀಸ್ ಇಟ್ಟು ಅದರಲ್ಲಿ ಅಕ್ಕಿ ಹಾಕಿ ಅದರ ಮೇಲೆ ಕಲಶ ಇಡಲಾಗುವುದು. ಕಲಶದಲ್ಲಿ ಅರ್ಧ ಭಾಗದಷ್ಟು ಶುದ್ಧ ನೀರು ತುಂಬಬೇಕು. ಅದರ ಸುತ್ತ ವೀಳ್ಯದೆಲೆಯಿಂದ ಅಲಂಕಾರ ಮಾಡಿರುತ್ತಾರೆ.
ಸಾಮಾನ್ಯವಾಗಿ 5 ವೀಳ್ಯದೆಲೆ ಇಡಲಾಗುವುದು. ನಂತರ ಒಂದು ತಟ್ಟೆಯಲ್ಲಿ ಅರಿಶಿಣ, ಕುಂಕುಮ, ತೇಯ್ದ ಗಂಧ ಇತರ ಪೂಜಾ ಸಾಮಾಗ್ರಿಗಳನ್ನು ಇಡಲಾಗುವುದು. ನಂತರ ಕಲಶದ ಬಾಯಿಯನ್ನು ತೆಂಗಿನ ಕಾಯಿಯನ್ನು ಕೆಂಪು ಬಟ್ಟೆಯಿಂದ ಸುತ್ತಿ ಅದನ್ನು ಕಲಶದ ಮೇಲೆ ಇಡಲಾಗುವುದು. ಹೂ, ಹಣ್ಣುಗಳು, ತೆಂಗಿನಕಾಯಿ ಮತ್ತು ಪಾಯಸವನ್ನು ತಯಾರಿಸಿ ಗೌರಿ ಮೂರ್ತಿ ಮುಂದೆ ಇಡಬೇಕು.
ಪೂಜೆ ಮಾಡುವಾಗ ತೇಯ್ದ ಗಂಧ, ಕೆಂಪು ಹೂ, ಅಗರಬತ್ತಿ ಮತ್ತು ದೀಪಗಳಿಂದ ಅಲಂಕರಿಸಲಾಗುವುದು. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಹಾಗೂ ಮದುವೆಯಾಗಿ ಐದು ವರ್ಷ ಆಗಿರದ ಮುತ್ತೈದೆಯರು ಸೇರಿ ಪೂಜೆ ಮಾಡಿ ಪೂಜೆಗೆ ಬಂದಂತಹ ಮುತ್ತೈದೆಯರಿಗೆ ಉಡುಗೊರೆ ಮತ್ತು ಅರಿಶಿಣ, ಕುಂಕುಮ ನೀಡಿ ಆರ್ಶೀವಾದ ಪಡೆಯುವುದು ಈ ವ್ರತದ ವಿಶೇಷ.