For Quick Alerts
ALLOW NOTIFICATIONS  
For Daily Alerts

ಬೆಡ್ ರೂಂನಲ್ಲಿ ಮಾಡುವ ಐದು ತಪ್ಪುಗಳು

|
5 Mistakes of Organising Bedroom
ಮನೆ ಕಟ್ಟುವಾಗ ಬೆಡ್ ರೂಂ ಗೆಂದೇ ವಿಶೇಷ ಕಾಳಜಿ ವಹಿಸಬೇಕು. ಬೆಡ್ ರೂಂ ವಿನ್ಯಾಸ ಅಭಿರುಚಿಯನ್ನು ಪ್ರದರ್ಶಿಸುವುದರಿಂದ ಹೆಚ್ಚೇ ಗಮನ ನೀಡಬೇಕು. ಅಡುಗೆ ಮನೆ, ಡೈನಿಂಗ್, ಲಿವಿಂಗ್ ರೂಂ ಗಿಂತ ಬೆಡ್ ರೂಂ ಸುಂದರವಾಗಿ ಕಾಣಿಸಬೇಕೆಂದರೆ ಕೆಲವು ವಿಧಾನವನ್ನು ಅಳವಡಿಸಬೇಕು. ಆದರೆ ಗೊತ್ತೇ ಆಗದಂತೆ ಬೆಡ್ ರೂಂ ವಿನ್ಯಾಸದಲ್ಲಿ ಕೆಲವು ತಪ್ಪುಗಳು ಆಗುತ್ತವೆ.

ಈಗೀಗ ಬೆಡ್ ರೂಂ ಗಳು ಕಂಪ್ಯೂಟರ್, ರೀಡಿಂಗ್ ರೂಂ, ವರ್ಕಿಂಗ್ ಮತ್ತು ಡ್ರೆಡಿಂಗ್ ರೂಂ ಕೂಡ ಆಗಿರುವುದರಿಂದ ಬೆಡ್ ರೂಮಿನ ವಿನ್ಯಾಸದಲ್ಲಿ ಕಾಳಜಿವಹಿಸಬೇಕು.

ಬೆಡ್ ರೂಂ ವಿನ್ಯಾಸದಲ್ಲಿ ಆಗುವ 5 ತಪ್ಪುಗಳು:

1.ಬೆಡ್ ಸ್ಥಳ: ಮಂಚ ಇಡುವ ಸ್ಥಳವನ್ನು ಕೆಲವರು ಕೋಣೆಯ ಮೂಲೆಯಲ್ಲಿ ಅಥವಾ ಕಬೋರ್ಡ್ ಬಳಿ ಇಡುತ್ತಾರೆ. ಆದರೆ ಮಂಚವನ್ನು ಯಾವಾಗಲೂ ರೂಂ ಮಧ್ಯದಲ್ಲಿ ಇಡುವುದೇ ಸರಿಯಾದ ವಿಧಾನ. ಕಬೋರ್ಡ್ ಹತ್ತಿರ ಇಟ್ಟರೆ ಬಟ್ಟೆಗಳನ್ನೂ ಅಲ್ಲೇ ಹರಡಿ ನೋಡಲು ಚೆನ್ನಾಗಿ ಕಾಣುವುದಿಲ್ಲ ಮತ್ತು ವಿನ್ಯಾಸವೂ ಆಕರ್ಷಿತವಾಗಿರುವುದಿಲ್ಲ.

2.ಡ್ರೆಸಿಂಗ್ ಟೇಬಲ್: ಬೆಡ್ ರೂಂ ವಿನ್ಯಾಸದಲ್ಲಿ ಡ್ರೆಸಿಂಗ್ ಟೇಬಲ್ ಇಡುವ ಸ್ಥಳ ತುಂಬಾ ಮುಖ್ಯ. ವಾಸ್ತು ಪ್ರಕಾರ ಕನ್ನಡಿ ಮಂಚದಿಂದ ಸ್ವಲ್ಪ ದೂರವೇ ಇರಬೇಕು, ಮಲಗುವಾಗ ಅದು ನಿಮ್ಮ ಎದುರು ಮುಖವಾಗಿರಬಾರದು. ಬೆಡ್ ಪಕ್ಕದಲ್ಲೇ ಕೆಲವೊಬ್ಬರು ಡ್ರೆಸಿಂಗ್ ಟೇಬಲ್ ಇಡುವುದರಿಂದ ಪೌಡರ್, ಪರ್ಫ್ಯೂಮ್, ಕೂದಲು, ಕಾಸ್ಮೆಟಿಕ್ ಕಲೆಗಳು ಬೆಡ್ ಮೇಲೆ ಬೀಳುತ್ತದೆ. ಇದು ಅಶಿಸ್ತನ್ನೂ ಪ್ರದರ್ಶಿಸುವುದರಿಂದ ಡ್ರೆಸಿಂಗ್ ಟೇಬಲನ್ನು ಮಂಚದ ಬಲ ಅಥವಾ ಎಡಗಡೆ ಇಡಬಹುದು.

3. ಸ್ವಿಚ್ ಬೋರ್ಡ್: ಸ್ವಿಚ್ ಬೋರ್ಡ್ ಗಳನ್ನು ಸಾಮಾನ್ಯವಾಗಿ ಅನುಕೂಲಕ್ಕೆಂದು ರೂಂ ಪ್ರವೇಶಿಸುವಾಗ ಹಾಕಿರುತ್ತಾರೆ. ಆದರೆ ತಕ್ಷಣವೇ ಪುಸ್ತಕ ಓದಬೇಕೆನಿಸಿದಾಗ ಅಥವಾ ಏನಾದರೂ ಹುಡುಕಬೇಕೆಂದಾಗ ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದ ಬೆಡ್ ಪಕ್ಕದಲ್ಲಿ ಸ್ವಿಚ್ ಬೋರ್ಡ್ ಗಳನ್ನು ಅಳವಡಿಸಿದರೆ ಆಯಿತು. ಅಥವಾ ಡಬಲ್ ಸ್ವಿಚ್ ಗಳನ್ನೂ ಅಳವಡಿಸಬಹುದು.

4. ಲೈಟಿಂಗ್: ಬೆಡ್ ರೂಮನ್ನು ಚೆನ್ನಾಗಿ ಸಿಂಗರಿಸಬೇಕೆಂದು ಅನೇಕ ತರಹದ, ಬಣ್ಣ ಬಣ್ಣದ ಲೈಟ್ ಗಳನ್ನು ಬಳಸಲಾಗುತ್ತೆ. ಆದರೆ ಹೆಚ್ಚು ಹೊಳಪಿನ ಲೈಟ್ ಬೆಡ್ ರೂಂಗೆ ಒಳ್ಳೆ ಲುಕ್ ನೀಡುವುದಿಲ್ಲ. ಆದ್ದರಿಂದ ಗಾಢವಲ್ಲದ ಲೈಟ್ ಸೂಕ್ತ, ನಿಮ್ಮ ಬೆಡ್ ರೂಂ ರೀಡಿಂಗ್ ರೂಂ ಕೂಡ ಆಗಿದ್ದರೆ ಟೇಬಲ್ ಲೈಟ್ ಇಟ್ಟುಕೊಳ್ಳಬಹುದು.

5. ನೆಲದ ವಿನ್ಯಾಸ: ಬೆಡ್ ರೂಂ ನೆಲಕ್ಕೆಂದು ಕೆಲವು ರೀತಿಯ ಫ್ಲೋರಿಂಗ್ ಇರುತ್ತದೆ. ಮಾರ್ಬಲ್, ಗ್ರಾನೈಟ್ ಫ್ಲೋರಿಂಗ್ ಬೇಸಿಗೆ ಕಾಲಕ್ಕೆ ಸೂಕ್ತ. ಮರ ಮತ್ತು ಗಾಜಿನಂತಹ ಟೈಲ್ಸ್ ಚಳಿಗಾಲಕ್ಕೆ ಸೂಕ್ತ. ಆದರೆ ಆಯ್ಕೆ ನಿಮಗೇ ಸೇರಿದ್ದು. ಒಳ್ಳೆಯ ವಿನ್ಯಾಸ, ಬಾಳಿಕೆ ಬರುವಂತಹ, ನಿಮ್ಮ ಅಭಿರುಚಿಗೆ ತಕ್ಕಂತಹ ಫ್ಲೋರಿಂಗ್ ಅನುಸರಿಸುವುದು ಒಳ್ಳೆಯದು. ಇನ್ನೂ ಚೆನ್ನಾಗಿ ಕಾಣಬೇಕೆಂದಿದ್ದರೆ ಕಾರ್ಪೆಟ್, ಮ್ಯಾಟ್ ಗಳನ್ನು ಹಾಕಬಹುದು.

English summary

5 Mistakes of Organising Bedroom | Designing Bedroom | ಬೆಡ್ ರೂಂ ವಿನ್ಯಾಸದಲ್ಲಿನ 5 ತಪ್ಪು | ಬೆಡ್ ರೂಂ ವಿನ್ಯಾಸ

Generally homemakers care least about organising bedrooms. Many feel that it is the room of freedom and doesn't needs to be bothered as much as the living, dining or the kitchen area but the thought is itself a mistake. Organising needs to be for self convenience and cleanliness and not for exhibition. Take a look to know the common mistakes that homemakers commit while decorating and organising bedrooms.
Story first published: Monday, December 12, 2011, 14:44 [IST]
X
Desktop Bottom Promotion