For Quick Alerts
ALLOW NOTIFICATIONS  
For Daily Alerts

ಈ ಕಾರಣಕ್ಕೆ ನೋಡಿ ನಿತ್ಯ ಅಶ್ವಗಂಧದ ಸೇವಿಸಬೇಕು

|

ಅಶ್ವಗಂಧ, ನಮ್ಮ ಭಾರತದಲ್ಲಿ ಸುಮಾರು 3000 ವರ್ಷಗಳ ಇತಿಹಾಸ ಹೊಂದಿರುವ ಮತ್ತು ಆಯುರ್ವೇದ ಪದ್ಧತಿಯಲ್ಲಿ ಹಲವಾರು ಬಗೆಯ ಕಾಯಿಲೆಗಳ ವಿರುದ್ಧ ಹೋರಾಡುವಂತಹ ಗುಣಲಕ್ಷಣ ಪಡೆದಿರುವ ಒಂದು ಗಿಡಮೂಲಿಕೆ ಸಸ್ಯ. ಹೆಚ್ಚಾಗಿ ಚಳಿಗಾಲದಲ್ಲಿ ಕಂಡುಬರುವ ಈ ಸಸ್ಯ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶದ ಕೆಲವು ಭಾಗಗಳಲ್ಲಿ ಸಹ ಬೆಳವಣಿಗೆ ಹೊಂದಿದೆ.

Why Ashwagandha Is Good For Health

ಅಶ್ವಗಂಧ ಗಿಡದ ಪ್ರತಿಯೊಂದು ಭಾಗವೂ ಆಯುರ್ವೇದ ಪದ್ಧತಿಯ ಬಳಕೆಯಲ್ಲಿ ಉಪಯೋಗವಾಗುತ್ತದೆ. ಅಶ್ವಗಂಧದ ಬೇರು ಕುದುರೆಯ ವಾಸನೆ ಬೀರುವುದರಿಂದ ಇದಕ್ಕೆ ಅಶ್ವಗಂಧ ಎಂಬ ಹೆಸರು ಬಂದಿತು ಎಂದು ತಿಳಿದವರು ಹೇಳುತ್ತಾರೆ.

ಹಲವಾರು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಮುಂಚೂಣಿಯಲ್ಲಿರುವ ಒಂದು ಗಿಡಮೂಲಿಕೆ ಎಂದರೆ ಅದು ಅಶ್ವಗಂಧ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಇದಕ್ಕೆ ಕಾರಣ ಅಶ್ವಗಂಧದಲ್ಲಿ ಕಂಡುಬರುವ ವಿಶೇಷ ಗುಣಲಕ್ಷಣಗಳು. ಅಶ್ವಗಂಧ ಸಿಗದೇ ಇರುವ ಸಾಕಷ್ಟು ಕಡೆಗಳಲ್ಲಿ ಈ ಗಿಡಮೂಲಿಕೆಗೆ ಬೇಡಿಕೆ ಬಹಳಷ್ಟಿದೆ.

ಆಂಗ್ಲ ಔಷಧಿಗಳು ಒಬ್ಬ ರೋಗಿಯ ಆರೋಗ್ಯದ ಮೇಲೆ ಮಾಡುವ ಚಮತ್ಕಾರಕ್ಕಿಂತ ಹೆಚ್ಚಾಗಿ ಅಶ್ವಗಂಧ ತನ್ನ ಪ್ರಭಾವ ಬೀರುತ್ತದೆ ಎಂದರೆ ನೀವು ನಂಬಲು ಆಶ್ಚರ್ಯ ಪಡುತ್ತೀರಿ. ಇದರಲ್ಲಿರುವ ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ಗುಣದಿಂದ ಇತ್ತೀಚೆಗಿನ ಕರೋನ ವೈರಸ್ ಸೋಂಕಿನ ವಿಚಾರದಲ್ಲಿ ಸಹ ಅಶ್ವಗಂಧ ಔಷಧಿಯಾಗಿ ಕೆಲಸ ಮಾಡಬಲ್ಲದೇ ಎಂಬುದರ ಬಗ್ಗೆ ಸಂಶೋಧನೆಗಳು ಮತ್ತು ಅಧ್ಯಯನಗಳು ಸಾಕಷ್ಟು ನಡೆದಿವೆ.

ಅಶ್ವಗಂಧದ ಇನ್ನಿತರ ಆರೋಗ್ಯ ಪ್ರಭಾವಗಳನ್ನು ನೋಡುವುದಾದರೆ............

 ಮಾನಸಿಕ ಒತ್ತಡ ಮತ್ತು ಆತಂಕ ನಿವಾರಕ

ಮಾನಸಿಕ ಒತ್ತಡ ಮತ್ತು ಆತಂಕ ನಿವಾರಕ

ಅಶ್ವಗಂಧ ನಮ್ಮ ಮನಸ್ಸಿನ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ ಇದಕ್ಕೆ ಸಾಕ್ಷಿಯೆಂದರೆ, ಅಶ್ವಗಂಧ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸಾಲ್ ಮಟ್ಟವನ್ನು ನಿಯಂತ್ರಣ ಮಾಡಿ ಅಡ್ರಿನಲ್ ಗ್ರಂಥಿಗಳ ಕಾರ್ಯಕ್ಷಮತೆಗೆ ಬೆಂಬಲಿಸುತ್ತದೆ. ಸಾಮಾನ್ಯವಾಗಿ ಅಡ್ರಿನಲ್ ಗ್ರಂಥಿಗಳು ಥೈರಾಯ್ಡ್ ಕಾರ್ಯಕ್ಷಮತೆಯ ಮೇಲೆ ನೇರವಾದ ಪರಿಣಾಮ ಬೀರುವುದರಿಂದ ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಬಿಡುಗಡೆಗೊಂಡು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರ ಆರೋಗ್ಯ ಸಹ ಉತ್ತಮಗೊಳ್ಳುತ್ತದೆ.

ಬಹಳಷ್ಟು ಹಿಂದಿನ ಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಅನೇಕ ರೋಗರುಜಿನಗಳಿಗೆ ಬಳಸಿಕೊಂಡು ಬರುತ್ತಿರುವ ಅಶ್ವಗಂಧ ಮನುಷ್ಯರ ರಕ್ತದ ಒತ್ತಡಕ್ಕೆ ಕಾರಣವಾಗುವ ಮಾನಸಿಕ ಆತಂಕ, ಮಾನಸಿಕ ಖಿನ್ನತೆ ಮತ್ತು ಮನಸ್ಸಿನ ಒತ್ತಡವನ್ನು ನಿವಾರಣೆ ಮಾಡುವಂತಹ ಅದ್ಭುತ ಶಕ್ತಿ ಪಡೆದಿದೆ. ಸಂಶೋಧನೆಗಳಲ್ಲಿ ಬಹಿರಂಗಗೊಂಡ ಕೆಲವು ವಿಚಾರಗಳು ಮಾನವನ ಇಂತಹ ಕೆಲವು ರೋಗ ಲಕ್ಷಣಗಳಿಗೆ ಅತ್ಯಂತ ಪ್ರಭಾವಶಾಲಿಯಾಗಿ ಪರಿಹಾರ ನೀಡುವಂತಹ ಶಕ್ತಿ ಅಶ್ವಗಂಧದಲ್ಲಿ ಇದೆಯೆಂದು ತಿಳಿಸಿವೆ.

ಶಕ್ತಿ, ಸಹಿಷ್ಣುತೆ ಹೆಚ್ಚಿಸುತ್ತದೆ

ಶಕ್ತಿ, ಸಹಿಷ್ಣುತೆ ಹೆಚ್ಚಿಸುತ್ತದೆ

ಮನುಷ್ಯನ ದೇಹದ ಅತಿ ಮುಖ್ಯ ಅಂಗಗಳಾದ ಹೃದಯ ಮತ್ತು ಶ್ವಾಸಕೋಶದ ಕಾರ್ಯವಿಧಾನದ ಮೇಲೆ ಅಶ್ವಗಂಧ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಮನುಷ್ಯನ ಪ್ರತಿ ದಿನದ ಚಟುವಟಿಕೆಗಳಲ್ಲಿ ಆತನಿಗೆ ಅಗತ್ಯವಾಗಿ ಬೇಕಾಗಿರುವ ಶಕ್ತಿ ಸಂಚಾರವನ್ನು ಒದಗಿಸಲು ಆತನ ಹೃದಯ ಮತ್ತು ಶ್ವಾಸಕೋಶ ಬಹಳಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಕೆಲವರಿಗೆ ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾಗಿ ವ್ಯಾಯಾಮ ಮಾಡಲು ಅಥವಾ ಇನ್ಯಾವುದೇ

ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕಷ್ಟವಾಗುತ್ತದೆ. ಅಂತಹ ಮಂದಿಗೆ ಅಶ್ವಗಂಧ ಒಂದು ವರದಾನವೇ ಸರಿ.

ಬ್ಲಡ್ ಶುಗರ್ ನಿಯಂತ್ರಣ

ಬ್ಲಡ್ ಶುಗರ್ ನಿಯಂತ್ರಣ

ಸಂಶೋಧನೆಗಳು ಹೇಳಿರುವಂತೆ ಅಶ್ವಗಂಧ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಿ ಇನ್ಸುಲಿನ್ ಪ್ರತಿರೋಧಕತೆಯ ಮೇಲೆ ತನ್ನ ಪ್ರಭಾವ ಬೀರಿ ಮಧುಮೇಹ ಹೊಂದಿದ ರೋಗಿಗಳಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ನಿಯಂತ್ರಣ ಮಾಡುತ್ತದೆ. ಆರೋಗ್ಯಕರ ವ್ಯಕ್ತಿಗಳಲ್ಲಿ ಮತ್ತು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚು ಅಥವಾ ಕಡಿಮೆ ಮಾಡುವಂತಹ ಗುಣ ಲಕ್ಷಣವನ್ನು ಅಶ್ವಗಂಧ ಪಡೆದಿದೆ. ಇದರಿಂದ ಮಧುಮೇಹಿಗಳಲ್ಲಿ ಮಾನಸಿಕ ಖಿನ್ನತೆ ಮತ್ತು ಡೆಮೆನ್ಶಿಯಾದಂತಹ ಸಮಸ್ಯೆಗಳು ಇಲ್ಲವಾಗುತ್ತವೆ ಎಂದು ಸಂಶೋಧನೆಗಳು ಹೇಳಿವೆ.

ಮೆದುಳಿನ ಕಾಯಿಲೆಗಳಿಗೆ ಪರಿಹಾರ

ಮೆದುಳಿನ ಕಾಯಿಲೆಗಳಿಗೆ ಪರಿಹಾರ

ವಯಸ್ಸಾದ ಮೇಲೆ ಮರೆವು ಸಾಮಾನ್ಯ. ಜೊತೆಗೆ ಅರಿವಿನ ಕೊರತೆ ಹೆಚ್ಚೂ ಕಡಿಮೆ ಎಲ್ಲರಲ್ಲೂ ಉಂಟಾಗುತ್ತದೆ. ಆದರೆ ಇತ್ತೀಚಿನ ವಿದ್ಯಮಾನಗಳಲ್ಲಿ ವಯಸ್ಕರು ಸಹ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿದ್ದಾರೆ. ಅಧ್ಯಯನಗಳಲ್ಲಿ ತಿಳಿದು ಬಂದಿರುವ ಹಾಗೆ ನಮ್ಮ ಭಾರತ ಸೇರಿದಂತೆ ಹೊರ ರಾಷ್ಟ್ರಗಳಲ್ಲಿ ಸಹ ಅಲ್ಜಿಮರ್ ಕಾಯಿಲೆಗೆ ಹಲವಾರು ಮಂದಿ ಒಳಗಾಗುತ್ತಿದ್ದಾರೆ.

ಇದು ಹೆಚ್ಚಾಗಿ ಅವರ ಮೆದುಳಿನ ಕೋಶಗಳು ಹಾನಿಯಾಗುತ್ತಿರುವುದನ್ನು ತೋರಿಸುತ್ತದೆ. ಅಶ್ವಗಂಧ ತನ್ನಲ್ಲಿನ ನೈಸರ್ಗಿಕ ಆಂಟಿ - ಆಕ್ಸಿಡೆಂಟ್ ಗಳ ಸಹಾಯದಿಂದ ಅಲ್ಜಿಮರ್ ಕಾಯಿಲೆಗೆ ಕಾರಣವಾಗುತ್ತಿರುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ಮೆದುಳಿನ ಕೋಶಗಳ ಹಾನಿಯನ್ನು ತಪ್ಪಿಸುತ್ತದೆ.

ರೋಗನಿರೋಧಕ ವ್ಯವಸ್ಥೆ ಮತ್ತು ಆಂಟಿ-ಇಂಪ್ಲಾಮೇಟರಿ ಗುಣಲಕ್ಷಣಗಳು

ರೋಗನಿರೋಧಕ ವ್ಯವಸ್ಥೆ ಮತ್ತು ಆಂಟಿ-ಇಂಪ್ಲಾಮೇಟರಿ ಗುಣಲಕ್ಷಣಗಳು

ಅಶ್ವಗಂಧ ಗಿಡಮೂಲಿಕೆಯಲ್ಲಿ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವ ಅಂತಹ ಮತ್ತು ಆಂಟಿ - ಇಂಪ್ಲಾಮೆಟರಿ ಗುಣಲಕ್ಷಣಗಳನ್ನು ಹೆಚ್ಚಿಸುವಂತಹ ಲಕ್ಷಣವಿದೆ ಎಂದು ಹೇಳುತ್ತಾರೆ. ಕೆಲವು ಮಂದಿಯ ಆರ್ಥ್ರೈಟಿಸ್ ಸಮಸ್ಯೆಗೆ ಉರಿಯೂತದ ಲಕ್ಷಣಗಳು ಕಾರಣವೆಂದು ತಿಳಿದುಬಂದಿದೆ.

ಅಶ್ವಗಂಧದಲ್ಲಿ ಆಂಟಿ - ಇಂಪ್ಲಾಮೆಟರಿ ಗುಣಲಕ್ಷಣಗಳು ಬಹಳಷ್ಟು ಹೆಚ್ಚಿರುವುದರಿಂದ ಜೊತೆಗೆ ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಇಂತಹ ದೀರ್ಘಕಾಲದ ನೋವುಗಳನ್ನು ಕ್ರಮೇಣವಾಗಿ ಇಲ್ಲವಾಗಿಸುವ ಸಾಧ್ಯತೆ ಹೆಚ್ಚಿರುತ್ತದೆ.

English summary

Ashwagandha: Health Benefits and Side Effects

Here we are discussing about these are the reasons Why Ashwagandha Is Good For Health. Ashwagandha is an evergreen shrub that grows in India, the Middle East, and parts of Africa. Read more.
X
Desktop Bottom Promotion