For Quick Alerts
ALLOW NOTIFICATIONS  
For Daily Alerts

ಕೊರೊನಾ ಲಸಿಕೆ ಯಾರು ತೆಗೆದುಕೊಳ್ಳಬಾರದು?

|

ಒಂದು ಕಡೆ ಕೊರೊನಾ ಎರಡನೇ ಅಲೆ ಶುರುವಾಗಿದೆ, ಮತ್ತೊಂದೆಡೆ ಅದನ್ನು ಮಣಿಸಲು ಕೊರೊನಾ ಲಸಿಕೆ ನೀಡುವುದು 3ನೇ ಹಂತಕ್ಕೆ ತಲುಪಿಸದೆ. ಮೊದಲನೇಯ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿತ್ತು. ಅದಾದ ಬಳಿಕ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವ 50 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿತ್ತು.

ಇದೀಗ ಮೂರನೇಯ ಹಂತದಲ್ಲಿ ಕೊರೊನಾ ಲಸಿಕೆ ನೀಡುತ್ತಿದ್ದು 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಸಂಕಷ್ಟ ಕಾಲದಲ್ಲಿ ಕೊರೊನಾ ಲಸಿಕೆ ಬಂದಿದ್ದು, ಅದು ಉಚಿತವಾಗಿ ದೊರೆಯುತ್ತಿರುವುದು ಜನರಿಗೆ ಸಹಾಯವಾಗುತ್ತಿದ್ದರೂ ಕೊರೊನಾ ಮಹಾಮಾರಿ ಸಂಪೂರ್ಣ ಇಲ್ಲವಾಗಿಸಲು ಎಲ್ಲಾ ಪ್ರಾಯದವರಿಗೆ ಲಸಿಕೆ ಲಭ್ಯವಾಗಬೇಕಾಗಿದೆ.

Covid-19

ಇದರ ಕುರಿತು ಅಧ್ಯಯನಗಳು ನಡೆಯುತ್ತಿದ್ದು ಇದೀಗ ಹಂತ-ಹಂತವಾಗಿ ಲಸಿಕೆಯನ್ನು ನೀಡಲಾಗುತ್ತಿದೆ. ಕೊರೊನಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಹೆಚ್ಚು ಬಾಧಿಸುತ್ತದೆ, ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಹಾಗಾಗಿ ಅವರಿಗೆ ಮೊದಲಿಗೆ ನೀಡಲಾಗುತ್ತಿದೆ, ಅಲ್ಲದೆ ಮಕ್ಕಳ ಮೇಲೆ ಇದರ ಪ್ರಭಾವ ಹೇಗಿರಲಿದೆ ಎಂಬುವುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ...ನಂತರವಷ್ಟೇ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾಗುವುದು.

ಆದರೆ ಈಗ ನೀಡುತ್ತಿರುವ ಕೊರೊನಾ ಲಸಿಕೆಯನ್ನು ಕೆಲವರು ಪಡೆಯುವಂತಿಲ್ಲ, ನಾವಿಲ್ಲ ಯಾರು ಕೊರೊನಾ ಲಸಿಕೆ ಪಡೆಯಬಾರದು ಎಂಬುವುದ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಕೊವಾಕ್ಸಿನ್ ಯಾರು ಪಡೆಯಬಾರದು?

ಕೊವಾಕ್ಸಿನ್ ಯಾರು ಪಡೆಯಬಾರದು?

* ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಲಸಿಕೆ ತೆಗೆದುಕೊಳ್ಳಬಾರದು.

* ಜ್ವರವಿದ್ದಾಗ ಈ ಲಸಿಕೆ ತೆಗೆದುಕೊಳ್ಳಬಾರದು.

* ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದರೆ ಕೊವಾಕ್ಸಿನ್ ತೆಗೆದುಕೊಳ್ಳಬಾರದು.

* ಏನಾದರೂ ಗಂಭೀರ ಆರೋಗ್ಯ ಸಮಸ್ಯೆಯಿದ್ದರೆ

 ಕೋವಿಶೀಲ್ಡ್ ಯಾರು ಪಡೆಯಬಾರದು?

ಕೋವಿಶೀಲ್ಡ್ ಯಾರು ಪಡೆಯಬಾರದು?

*ಮೊದಲ ಡೋಸ್ ಪಡೆದ ಬಳಿಕ ಗಂಭೀರ ಅಲರ್ಜಿ ಸಮಸ್ಯೆ ಉಂಟಾಗಿದ್ದರೆ

* ಲಸಿಕೆಯಲ್ಲಿರುವ ಯಾವುದೇ ಅಂಶ ನಿಮಗೆ ಅಲರ್ಜಿ ತರುವಂತಿದ್ದರೆ

* ನಿಮ್ಮ ವೈದ್ಯಾಧಿಕಾರಿ 'ಬೇಡ' ಎಂದು ಸಲಹೆ ನೀಡಿದ್ದರೆ ನೀವು ಲಸಿಕೆ ತೆಗೆದುಕೊಳ್ಳುವಂತಿಲ್ಲ.

ಇವರು ಕೂಡ ತೆಗೆದುಕೊಳ್ಳುವಂತಿಲ್ಲ

ಇವರು ಕೂಡ ತೆಗೆದುಕೊಳ್ಳುವಂತಿಲ್ಲ

* ರೋಗ ನಿರೋಧಕ ಶಕ್ತಿ ತುಂಬಾ ಕುಂದಿದ್ದರೆ (Immune compromised)

* ಔಷಧ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದಾದರೆ

* ಗರ್ಭಿಣಿಯರು

* ಎದೆಹಾಲುಣಿಸುವ ತಾಯಂದಿರು

* 18 ವರ್ಷದ ಕೆಳಗಿನವರು

 ಸೂಚನೆ:

ಸೂಚನೆ:

ನಿಮಗೆ ಈಗ ನೀಡುತ್ತಿರುವ ಕೊರೊನಾ ಲಸಿಕೆ ಪಡೆಯಲು ವಯಸ್ಸಿನ ಅರ್ಹತೆ ಇದ್ದರೂ ಬೇರೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

ಉಳಿದವರು ಈ ಲಸಿಕೆ ತೆಗೆದುಕೊಂಡು ನಿಮ್ಮನ್ನು, ನಿಮ್ಮ ಮನೆಯವರನ್ನು ಕೊರೊನಾದಿಂದ ಕಾಪಾಡಿ.

English summary

Who Should Not Take Covid 19 Vaccine In Kannada

who should not take covid 19 vaccine, read on...
X
Desktop Bottom Promotion