For Quick Alerts
ALLOW NOTIFICATIONS  
For Daily Alerts

ಎಚ್ಚರ! ಚಳಿಗಾಲದಲ್ಲಿ ಚರ್ಮದ ಕಾಳಜಿಯನ್ನು ಎಂದಿಗೂ ನಿರ್ಲಕ್ಷಿಸಬೇಡಿ

|

ವಿಂಡ್ ಬರ್ನ್ ಅಥವಾ ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮಗಳಾಗಿವೆ. ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಬನ್ನಿ, ಈ ಸ್ಥಿತಿ ಎದುರಾದರೆ ಯಾವ ಪರಿಹಾರ ಪಡೆಯಬಹುದು ಹಾಗೂ ಇದರಿಂದ ತಪ್ಪಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನೋಡೋಣ:

ಶೀತಾಘಾತದ ಲಕ್ಷಣಗಳು

ಶೀತಾಘಾತದ ಲಕ್ಷಣಗಳು

ಇವು ಸಾಮಾನ್ಯವಾಗಿ ಬಿಸಿಲಿನ ಆಘಾತಕ್ಕೆ ಒಳಗಾದ ತ್ವಚೆಯ ಪರಿಣಾಮದಂತೆಯೇ ಇರುತ್ತದೆ. ವಿಶೇಷವಾಗಿ ಮುಖದ ತ್ವಚೆ ಕೆಂಪಗಾಗಿ ಮುಟ್ಟಲೂ ಆಗದಷ್ಟು ಸೂಕ್ಷ್ಮ ಸಂವೇದಿಯಾಗುತ್ತದೆ. ಅಲ್ಲದೇ ಚರ್ಮ ಉರಿಯುತ್ತಿರುವಂತೆ ಭಾಸವಾಗಬಹುದು. ಕೆಂಪಗಾಗಿರುವುದು ಇಳಿಯುತ್ತಿದ್ದಂತೆಯೇ ಹೊರಚರ್ಮ ಒಣಗಿ ಪಕಳೆಯೇಳಲು ತೊಡಗಬಹುದು. ಈ ಲಕ್ಷಣಗಳು ಬಿಸಿಲಿನ ಆಘಾತದ ಲಕ್ಷಣಗಳನ್ನೇ ಹೋಲುತ್ತಿದ್ದರೂ ಅದಕ್ಕೂ ಹೆಚ್ಚು ಒಣಗುತ್ತದೆ ಮತ್ತು ಬಿಗಿಯಾಗಿರುತ್ತದೆ.

ಇದಕ್ಕೆ ಕಾರಣವೇನು?

ಇದಕ್ಕೆ ಕಾರಣವೇನು?

ಶೀತದ ಪ್ರಭಾವದಿಂದ ಇದು ಎದುರಾಗಿದ್ದರೂ ಇದಕ್ಕೂ ಸೂರ್ಯನ ಬೆಳಕಿಗೂ ಸಂಬಂಧವಿದೆ ಎಂದು ಊಹಿಸಲಾಗಿದೆ. ಕೆಲವು ಚರ್ಮತಜ್ಞರ ಪ್ರಕಾರ ಬಿಸಿಲಿಗೂ ಶೀತಕ್ಕೂ ಆಗುವ ಪರಿಣಾಮಗಳನ್ನು ವಿರುದ್ಧವಾಗಿ ಪರಿಗಣಿಸಬಹುದು. ಅಂದರೆ ಶೀತದಿಂದ ಆಘಾತ ಎದುರಾದಾಗ ಸನ್ ಸ್ಕ್ರೀನ್ ಬಳಸುವುದೇಕೆ? ಆದರೆ ತಜ್ಞರ ಪ್ರಕಾರ ಶೀತಲ ದಿನಗಳಲ್ಲೂ ಸೂರ್ಯನ ಕಿರಣಗಳು ಹಾನಿ ಎಸಗಬಹುದು. ಇದರ ಅತಿನೇರಳೆ ಕಿರಣಗಳು ಮೋಡದ ಮೂಲಕ ತೂರಿ ಬಂದು ತಣ್ಣನೆಯ, ನೆರಳಿನ ದಿನಗಳಲ್ಲಿಯೂ ಬಿಸಿಲಿನ ಆಘಾತ ಉಂಟುಮಾಡಬಹುದು.

ಸಾಮಾನ್ಯವಾಗಿ ಮಂಜು ಮತ್ತು ಮಂಜುಗಡ್ಡೆ ಸೂರ್ಯನ ಅತಿನೇರಳೆ ಕಿರಣಗಳನ್ನು ಶೇಕಡಾ 80ರಷ್ಟು ಪ್ರತಿಫಲಿಸುತ್ತವೆ. ಅಂದರೆ ತ್ವಚೆಗೆ ಎದುರಾಗುವ ಕಿರಣಗಳ ಪ್ರಮಾಣ ಹೆಚ್ಚೂ ಕಡಿಮೆ ದುಪ್ಪಟ್ಟಾಗುತ್ತದೆ. ಅಲ್ಲದೇ ಸ್ಥಳದ ಎತ್ತರ ಹೆಚ್ಚಿದಷ್ಟೂ ಅತಿನೇರಳೆ ಕಿರಣಗಳಿಗೆ ಒಡ್ಡುವ ಸಾಧ್ಯತೆಯೂ ಹೆಚ್ಚು.

ಆದರೂ, ಇತರ ತಜ್ಞರು ಶೀತಾಘಾತ ವಾಸ್ತವವಾಗಿ ತನ್ನದೇ ಆದ ಪ್ರತ್ಯೇಕ ಸ್ಥಿತಿ ಎಂದು ವಾದಿಸುತ್ತಾರೆ. ನಿಮ್ಮ ಚರ್ಮವು ತನ್ನ ನೈಸರ್ಗಿಕ ತೈಲಗಳನ್ನು ತೀವ್ರ ಶೀತ, ಶುಷ್ಕ ಗಾಳಿಯಿಂದ ಕಳೆದುಕೊಂಡಾಗ ಅದು ಸಂಭವಿಸುತ್ತದೆ. ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ, ಗಾಳಿಯು ಅತಿನೇರಳೆ ಕಿರಣಗಳ ವಿರುದ್ಧ ನಿಮ್ಮ ಚರ್ಮವು ಹೊಂದಿರುವ ನೈಸರ್ಗಿಕ ರಕ್ಷಣೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪ್ರತಿಯಾಗಿ, ಶೀತ, ಗಾಳಿಯ ದಿನದಲ್ಲಿ ನೀವು ಸೂರ್ಯನ ಕಿರಣಗಳ ಪ್ರಭಾವಕ್ಕೆ ಹೆಚ್ಚೇ ಒಳಗಾಗಬಹುದು.

ಚರ್ಮದಲ್ಲಿ ಈಗಾಗಲೇ ಇರುವ ಪರಿಸ್ಥಿತಿಗಳು ನಿಮ್ಮ ಶೀತಾಘಾತದ ಅಪಾಯವನ್ನು ಹೆಚ್ಚಿಸಬಹುದು. ಇವುಗಳಲ್ಲಿ ರೊಸಾಸಿಯಾ ಮತ್ತು ಎಕ್ಸಿಮಾ ಸೇರಿವೆ. ಡರ್ಮಬ್ರೇಶನ್ ಅಥವಾ ರಾಸಾಯನಿಕವಾಗಿ ಹೊರಚರ್ಮವನ್ನು ನಿವಾರಿಸುವ ಚರ್ಮರೋಗ ಪ್ರಕ್ರಿಯೆಯನ್ನು ನೀವು ಮಾಡಿಸಿಕೊಂಡಿದ್ದರೆ ನಿಮ್ಮ ಚರ್ಮವು ಗಾಳಿಗೆ ಸಹ ಹೆಚ್ಚು ಸೂಕ್ಷ್ಮವಾಗಿರಬಹುದು. ಏಕೆಂದರೆ ಇಂತಹ ಕಾರ್ಯವಿಧಾನಗಳು ನಿಮ್ಮ ಚರ್ಮದ ಹೊರ ಪದರವನ್ನು (ಎಪಿಡರ್ಮಿಸ್) ತೆಗೆದುಹಾಕುತ್ತವೆ.

ಶೀತಾಘಾತಕ್ಕೆ ಪರಿಹಾರಗಳು

ಶೀತಾಘಾತಕ್ಕೆ ಪರಿಹಾರಗಳು

ಶೀತಾಘಾತಕ್ಕೆ ಚಿಕಿತ್ಸೆಯು ನಿಮ್ಮ ಚರ್ಮದ ತೇವಾಂಶವನ್ನು ಪುನಃ ತುಂಬಿಸುವುದರ ಜೊತೆಗೆ ಈಗಾಗಲೇ ಇರುವ ಯಾವುದೇ ನೋವನ್ನೂ ಇಲ್ಲವಾಗಿಸುತ್ತದೆ.

* ಐಬುಪ್ರೊಫೇನ್ ನಂತಹ ಅತಿಯಾದ ನೋವು ನಿವಾರಕವು ಸೌಮ್ಯ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.

* ಉಗುರುಬೆಚ್ಚನೆಯ ನೀರು ಸಹ ಸುಡುವಿಕೆಯನ್ನು ಕಡಿಮೆ ಮಾಡುತ್ತದೆ. ನೀವು ಶೀತಾಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ಬಿಸಿನೀರನ್ನು ಬಳಸದಿರಿ. ಇದು ಚರ್ಮದಿಂದ ಇನ್ನಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಚೇತರಿಕೆಯ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ.

* ನಿಮ್ಮ ಚರ್ಮದ ತೇವಾಂಶವನ್ನು ಮರುತುಂಬಿಸುವುದು ನೋವು ನಿವಾರಣೆ ಮಾಡುವುದು ಮತ್ತು ಒಟ್ಟಾರೆ ಚೇತರಿಕೆ ಎರಡರಲ್ಲೂ ಮುಖ್ಯವಾಗಿದೆ. ಈಗಲೂ ನೀವು ನಿಮ್ಮ ಮುಖ ಮತ್ತು ದೇಹವನ್ನು ಸ್ವಚ್ಛಗೊಳಿಸಬಹುದು, ಆದರೆ ಕೆನೆಯಾಧಾರಿತ ಕ್ಲೆನ್ಸರ್ ಮೂಲಕ ಸ್ವಚ್ಛಗೊಳಿಸುತ್ತಿದ್ದರೆ ಮಾತ್ರ. ಜೆಲ್ ಮತ್ತು ನೀರು ಆಧಾರಿತ ಕ್ಲೆನ್ಸರ್ ಬಳಕೆಯಿಂದ ಶೀತಾಘಾತಕ್ಕೆ ಒಳಗಾದ ತ್ವಚೆ ಇನ್ನಷ್ಟು ಒಣಗಬಹುದು.

* ನಿಮ್ಮ ಚರ್ಮವು ಚೇತರಿಸಿಕೊಳ್ಳುವಾಗ ಅಗತ್ಯಕ್ಕೆ ತಕ್ಕಂತೆ ದಿನವಿಡೀ ತೇವಕಾರಕ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ನೀವು ದಪ್ಪ ಲೋಷನ್ ಬಳಸುತ್ತಿದ್ದರೆ, ನೀವು ಇದನ್ನು ದಿನಕ್ಕೆ ನಾಲ್ಕು ಬಾರಿ ಬಳಸಬಹುದು. ನಿಮ್ಮ ಚರ್ಮವು ಸಂಪೂರ್ಣವಾಗಿ ಗುಣವಾಗುವವರೆಗೆ ಯಾವುದೇ ಹೊರಚರ್ಮ ನಿವಾರಕ (ಎಕ್ಸ್‌ಫೋಲಿಯಂಟ್), ಟೋನರ್ ಗಳು ಮತ್ತು ಸಂಕೋಚಕಗಳ ಬಳಕೆಯನ್ನು ತಪ್ಪಿಸಿ.

* ಚೇತರಿಕೆಯ ಸಮಯದಲ್ಲಿ ಆದಷ್ಟೂ ಹೊರಾಂಗಣದಲ್ಲಿ ನಿಮ್ಮ ಸಮಯವನ್ನು ಮಿತಿಗೊಳಿಸಲು ಯತ್ನಿಸಿ. ನಿಮ್ಮ ಚರ್ಮವು ಇನ್ನಷ್ಟು ಒಣಗದಂತೆ ತಡೆಯಲು ನೀವು ಆರ್ದ್ರಕವನ್ನು ಬಳಸಿ.

* ಅಂತಿಮವಾಗಿ, ನೀವು ಸಾಕಷ್ಟು ನೀರು ಕುಡಿಯುತ್ತೀರಾ ಎಂದು ಖಚಿತಪಡಿಸಿಕೊಳ್ಳಿ. ನಿಮಗೆ ಅತಿಯಾದ ಬಾಯಾರಿಕೆಯಿಲ್ಲದಿದ್ದರೂ, ಶೀತಾಘಾತ ನಿಮ್ಮ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ದೇಹದ ಒಳಗಿನಿಂದ ತೇವಾಂಶವನ್ನು ಮರುತುಂಬಿಸಲು ನೀರು ಕುಡಿಯುವುದು ಒಂದು ಉತ್ತಮ ಮಾರ್ಗವಾಗಿದೆ.

ಶೀತಾಘಾತಕ್ಕೆ ಒಳಗಾದ ತುಟಿಗಳು

ಶೀತಾಘಾತಕ್ಕೆ ಒಳಗಾದ ತುಟಿಗಳು

ಬಾಯಿಯನ್ನು ತೆರೆಯುವಾಗ ಅತಿ ಹೆಚ್ಚು ವಿಸ್ತಾರಗೊಳ್ಳಬೇಕಾದ ಅವಶ್ಯಕತೆ ಇರುವ ಕಾರಣ ತುಟಿಯ ಹೊರಚರ್ಮ ಅತಿ ಹೆಚ್ಚು ವಿಸ್ತಾರ ಹೊಂದಿದ್ದು ಸಾಮಾನ್ಯ ಸ್ಥಿತಿಯಲ್ಲಿ ನೆರಿಗೆಯಾಗಿರುತ್ತದೆ ಹಾಗೂ ಅತಿ ತೆಳುವೂ ಆಗಿರುತ್ತದೆ. ಅಲ್ಲದೇ ತುಟಿಗಳನ್ನು ಮುಚ್ಚಿಕೊಳ್ಳುವುದು ಹೆಚ್ಚೂ ಕಡಿಮೆ ಅಸಾಧ್ಯವಾದುದರಿಂದ ಶೀತಾಘಾತದ ಪ್ರಭಾವಕ್ಕೆ ಅತಿ ಸುಲಭವಾಗಿ ಒಳಗಾಗುತ್ತದೆ. ಒಂದು ವೇಳೆ ತುಟಿಗಳಿಗೆ ಹೆಚ್ಚು ಆಘಾತ ಎದುರಾಗಿದ್ದರೆ ಹೀಗೆ ಮಾಡಿ:

* ಅತಿ ಹೆಚ್ಚು ನೀರು ಕುಡಿಯಿರಿ

* ಬಿಸಿ ಆಹಾರ/ ಪಾನೀಯಗಳನ್ನು ಸೇವಿಸದಿರಿ

* ಖಾರದ ಆಹಾರಗಳನ್ನೂ ಸೇವಿಸದಿರಿ.

* ಒಂದು ವೇಳೆ ತುಟಿಗಳ ಚರ್ಮ ಪಕಳೆಯೇಳುತ್ತಿದ್ದರೆ, ಇದನ್ನು ಸರ್ವಥಾ ಕೀಳಲು ಯತ್ನಿಸದಿರಿ. ಇವು ತಾವಾಗಿಯೇ ಉದುರಲಿ ತುಟಿಗೆ ಹಚ್ಚುವ ತೇವಕಾರಕವನ್ನು

* ಸದಾ ಬಳಿಯೇ ಇರಿಸಿ ಆಗಾಗ ಹಚ್ಚಿಕೊಳ್ಳುತ್ತಾ ಇರಿ. ಹೆಚ್ಚಿನ ರಕ್ಷಣೆಗಾಗಿ ಎಮೋಲ್ಲಿಯೆಂಟ್ ಕ್ರೀಮ್ ಅಥವಾ ವ್ಯಾಸೆಲಿನ್ ಹಚ್ಚಿಕೊಳ್ಳಿ.

* ನಿಮ್ಮ ಲಿಪ್ ಬಾಮ್ 15 ಎಸ್‌ಪಿಎಫ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಗುಣವಾಗಲು ಎಷ್ಟು ಸಮಯ ಬೇಕು?

ಗುಣವಾಗಲು ಎಷ್ಟು ಸಮಯ ಬೇಕು?

ಶೀತಾಘಾತದಿಂದ ಗುಣವಾಗಲು ತೆಗೆದುಕೊಳ್ಳುವ ಸಮಯವು ಚರ್ಮಕ್ಕೆ ಎದುರಾಗಿರುವ ತೀವ್ರತೆಯನ್ನು ಅವಲಂಬಿಸಿರುತ್ತದೆ. ಬಿಸಿಲಿನ ಬೇಗೆಯಂತೆಯೇ, ಒಂದೆರಡು ದಿನಗಳ ನಂತರ ನಿಮಗೆ ನೋವು ಮತ್ತು ಊತ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೆಲವು ದಿನಗಳ ನಂತರ ಕೆಂಪು ಬಣ್ಣವು ಹೋಗುತ್ತದೆ, ಮತ್ತು ನಂತರದ ದಿನಗಳಲ್ಲಿ ನಿಮ್ಮ ಚರ್ಮದ ಹೊರಪದರ ಸಿಪ್ಪೆಯೇಳತೊಡಗುತ್ತದೆ. ಹೆಚ್ಚು ತೀವ್ರವಾದ ಪ್ರಕರಣಗಳಲ್ಲಿ ಗುಳ್ಳೆಗಳು ದೊಡ್ಡದಾಗಿದ್ದು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು

ಶೀತಾಘಾತದಿಂದ ತಡೆಯಲು ಅತ್ಯುತ್ತಮ ಮಾರ್ಗವೆಂದರೆ ಹೊರಗೆ ಹೋಗದೇ ಇರುವುದು, ಆದರೆ ಇದು ಸಾಧ್ಯವಲ್ಲದ ವಿಷಯ. ಹಾಗಾಗಿ, ಶೀತಲ ಮಾರುತದ ಸಮಯದಲ್ಲಿ ಹೊರಹೋಗಬೇಕಾದಾಗ ಈ ಕ್ರಮಗಳನ್ನು ಅನುಸರಿಸಿ:

* ನಿಮ್ಮ ಮುಖವನ್ನು ಸ್ಕಾರ್ಫ್ ನಿಂದ ಮುಚ್ಚಿಕೊಳ್ಳಿ

* ತಂಪು ಕನ್ನಡಕ ಧರಿಸಿ

* ಟೋಪಿ ಮತ್ತು ಕೈಗವಸುಗಳನ್ನು ಬಳಸಿ

* ಉದ್ದನೆಯ ತೋಳಿರುವ ಅಂಗಿ ಮತ್ತು ಪ್ಯಾಂಟ್ ಧರಿಸಿ

* ಎರಡು ಅಥವಾ ಹೆಚ್ಚಿನ ಉಡುಪುಗಳನ್ನು ತೊಟ್ಟು ಬೆಚ್ಚಗಿರಿ

* ಶೀತಾಘಾತ ಉಂಟಾಗುವ ಸ್ಥಿತಿಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ನೀವು ಯಾವಾಗಲೂ ಸನ್‌ಸ್ಕ್ರೀನ್ ಧರಿಸಬೇಕು. ಕನಿಷ್ಠ 30 ಎಸ್‌ಪಿಎಫ್ ಹೊಂದಿರುವ ವಿಶಾಲ-ಸ್ಪೆಕ್ಟ್ರಮ್ ಇರುವ ಉತ್ಪನ್ನವನ್ನೇ ಆಯ್ದುಕೊಳ್ಳಿ.

ಶೀತಾಘಾತದ ಹಿಂದಿನ ವಿದ್ಯಮಾನಗಳು ಸುಮಾರು ಒಂದು ಶತಮಾನದಿಂದ ಚರ್ಮದ ತಜ್ಞರ ನಡುವೆ ಚರ್ಚೆಗೆ ಕಾರಣವಾಗಿವೆ, ಆದರೆ ಒಂದು ವಿಷಯ ಖಚಿತವಾಗಿದೆ: ಶೀತ ಮತ್ತು ಶುಷ್ಕ ದಿನದಂದು ಸಹ ಹೊರಗಡೆ ಇರುವುದು ನಿಮ್ಮ ಚರ್ಮವನ್ನು ಸುಡಲು ಕಾರಣವಾಗಬಹುದು. ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯ ಮತ್ತು ಇತರ ಅಂಶಗಳಿಂದ ರಕ್ಷಿಸುವುದು ಮುಖ್ಯ. ಕೆಲವು ದಿನಗಳ ನಂತರ ಶೀತಾಘಾತ ಅಥವಾ ಬಿಸಿಲಿನ ಲಕ್ಷಣಗಳು ಮುಂದುವರಿದರೆ ಅಥವಾ ಅವು ಉಲ್ಬಣಗೊಂಡರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

English summary

What Is Windburn? Treatment and Prevention

Windburn is a condition that refers to the burning and redness your skin might endure after spending time outdoors in the cold, windy air. Some experts argue that the windburn you get during cold, dry months is actually sunburn. Others address it as a separate condition entirely. Regardless, your skin is susceptible to burning, even if it’s dry, cold, and overcast. Learn the symptoms of windburn and how you can protect your skin.
Story first published: Tuesday, November 5, 2019, 18:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X