For Quick Alerts
ALLOW NOTIFICATIONS  
For Daily Alerts

Florona: ಏನಿದು ಫ್ಲೋರೋನಾ? ಇದು ಕೊರೊನಾದ ಮತ್ತೊಂದು ರೂಪಾಂತರವೇ?

|

ಕೊರೊನಾ ಒಮಿಕ್ರಾನ್, ಡೆಲ್ಮಿಕ್ರಾನ್‌ ಎಂದೆಲ್ಲಾ ರೂಪಾಂತರವಾಗಿದೆ, ಈಗ ಫ್ಲೋರೋನಾ ಹೆಸರು ಹೇಳಿ ಬರುತ್ತಿದೆ. ಫ್ಲೋರೋನಾ ಮೊದಲ ಕೇಸ್‌ ಇಸ್ರೇಲ್‌ನಲ್ಲಿ ಪತ್ತೆಯಾಗಿದೆ. ವರದಿ ಪ್ರಕಾರ ಇದು ಮನುಷ್ಯರ ದೇಹಕ್ಕೆ ಸೇರಿಸಿದರೆ ರೋಗ ನಿರೋಧಕ ಶಕ್ತಿಯನ್ನು ನಾಶ ಮಾಡುತ್ತದೆ. ಇನ್‌ಫ್ಲುಯೆಂಜಾ ವೈರಸ್ ಹಾಗೂ ಕೊರೊನಾ ವೈರಸ್‌ ವೈರಸ್‌ ಎರಡು ಒಂದೇ ಸಮಯದಲ್ಲಿ ಶರೀರವನ್ನು ಸೇರಿದಾಗ ಫ್ಲೋರೋನಾ ಉಂಟಾಗುವುದು.

ಇಸ್ರೇಲ್‌ನಲ್ಲಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆಯಲ್ಲಿಫ್ಲೋರೋನಾ ಪತ್ತೆಯಾಗಿದ್ದು ಈ ಮಹಿಳೆ ಕೊರೊನಾ ಲಸಿಕೆಯನ್ನು ಪಡೆದಿರಲಿಲ್ಲ.

ವೈದ್ಯರು ಹೇಳುವ ಪ್ರಕಾರ ಫ್ಲೋರೋನಾ ಎಂಬುವುದು ಮತ್ತೊಂದು ರೂಪಾಂತರವಲ್ಲ, ಪ್ಲೂ ಹಾಗೂ ಕೊರೊನಾವೈರಸ್‌ ಎರಡೂ ಒಟ್ಟಿಗೆ ತಗುಲಿದಾಗ ಫ್ಲೋರೋನಾ ಉಂಟಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ಫ್ಲೋರೋನಾ ಎಂದರೇನು?

ಫ್ಲೋರೋನಾ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎರಡು ಕಾಯಿಲೆಗಳು ಒಟ್ಟಿಗೆ ಬರುವ ಸಾಧ್ಯತೆ ಇದೆ. ಫ್ಲೂ ಹಾಗೂ ಕೋವಿಡ್ 19 ಒಟ್ಟಿಗೆ ಒಬ್ಬ ವ್ಯಕ್ತಿಗೆ ತಗುಲಿದಾಗ ಫ್ಲೋರೋನಾ ಕಂಡು ಬರುವುದು. ಕೋವಿಡ್‌ 19ಗೆ ಲಸಿಕೆ ಹಾಗೂ ಇನ್‌ಫ್ಲುಯೆಂಜಾ ಲಸಿಕೆ ಪಡೆಯುವುದರಿಂದ ಇದನ್ನು ತಡೆಗಟ್ಟಬಹುದು.

ಫ್ಲೋರೋನಾ ಹರಡುವುದು ಹೇಗೆ?

ಫ್ಲೋರೋನಾ ಹರಡುವುದು ಹೇಗೆ?

mayoclinic.org ಪ್ರಕಾರ ಕೋವಿಡ್ 19 ಹಾಗೂ ಫ್ಲೂ ವೈರಸ್‌ ಒಂದೇ ರೀತಿಯಲ್ಲಿ ಹರಡುವುದು. ಒಬ್ಬ ವ್ಯಕ್ತಿಗೆ ಫ್ಲೋರೋನಾ ಬಂದರೆ ಅವರ ಸಂಪರ್ಕಕ್ಕೆ ಬಂದ ಮತ್ತೊಂದು ವ್ಯಕ್ತಿಗೆ ಈ ಎರಡೂ ಹರಡಬಹುದು. ಈ ವೈರಸ್‌ಗಳು ಮಾತನಾಡುವಾಗ, ಸೀನಿದಾಗ, ಕೆಮ್ಮಿದಾಗ ಅವರ ಬಾಯಿಯ ಎಂಜಲಿನ ಹನಿ ಮತ್ತೊಬ್ಬರಿಗೆ ತಗುಲಿದರೆ ಅವರಲ್ಲಿ ಈ ಕಾಯಿಲೆಗಳು ಕಂಡು ಬರುವುದು. ಕಾಯಿಲೆ ಇರುವ ವ್ಯಕ್ತಿ ತನ್ನ ಬಾಯಿ, ಮೂಗು ಮುಟ್ಟಿ ವಸ್ತುಗಳನ್ನು ಮುಟ್ಟಿದರೆ ಅದರಲ್ಲಿ ವೈರಸ್‌ ಇರುತ್ತದೆ, ಆ ವಸ್ತುಗಳನ್ನು ಬೇರೆಯವರು ಮುಟ್ಟಿದಾಗ ವೈರಸ್ ಅವರಿಗೆ ಹರಡುವುದು.

ಫ್ಲೋರೋನಾ ಪ್ರಾಣಕ್ಕೆ ಅಪಾಯಕಾರಿಯೇ?

ಫ್ಲೋರೋನಾ ಪ್ರಾಣಕ್ಕೆ ಅಪಾಯಕಾರಿಯೇ?

ಎರಡು ವೈರಸ್‌ಗಳು ಒಟ್ಟಿಗೆ ತಗುಲಿದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆಯಾಗುವುದು. ಇದರಿಂದ ಬೇರೆ ಆರೊಗ್ಯ ಸಮಸ್ಯೆ ಕೂಡ ಉಂಟಾಗುವುದು, ಇದರಿಂದ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ. ನ್ಯುಮೋನಿಯಾ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ, ಹೃದಯಾಘಾತ, ಮೆದುಳಿನ ಉರಿಯೂತ, ಪಾರ್ಶ್ವವಾಯು ಮುಂತಾದ ಸಮಸ್ಯೆ ಕಂಡು ಬರಬಹುದು, ಸಾವು ಕೂಡ ಸಂಭವಿಸಬಹುದು, ಆದ್ದರಿಂದ ಪ್ಲೋರೋನಾ ಅಪಾಯಕಾರಿಯಾಗಿದೆ.

ಪತ್ತೆ ಹೇಗೆ?

ಪತ್ತೆ ಹೇಗೆ?

ಕೊರೊನಾ ವೈರಸ್‌ ಲಕ್ಷಣಗಳು ಕಂಡು ಬರಲು 2-14 ದಿನಗಳು ಬೇಕಾಗುವುದು. ಕೆಮ್ಮು, ಶೀತ, ಜ್ವರ, ಶೀತ ಇಂಥ ಲಕ್ಷಣಗಳು ಕಂಡು ಬಂದಾಗ PCR ಹಾಗೂ RNA ಪರೀಕ್ಷೆ ಮಾಡಬೇಕು. ಎರಡು ವೈರಸ್‌ಗಳು ಬೇರೆ-ಬೇರೆಯಾಗಿರುವುದರಿಂದ ಲ್ಯಾಬ್‌ ಪರೀಕ್ಷೆಯಲ್ಲಿ ಮಾತ್ರ ಕಂಡು ಹಿಡಿಯಲಾಗುವುದು.

ಫ್ಲೋರೋನಾ ತಡೆಗಟ್ಟುವುದು ಹೇಗೆ?

* ಕೋವಿಡ್‌ 19 ಲಸಿಕೆ ಹಾಗೂ ಇನ್‌ಫ್ಲುಯೆಂಜಾ ಲಸಿಕೆ ಪಡೆಯಬೇಕು

* ಕಾಯಿಲೆ ಇರುವ ವ್ಯಕ್ತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

* ಜನರು ಗುಂಪು ಸೇರಿರುವ ಸ್ಥಳಗಳಿಗೆ ಹೋಗಬೇಡಿ.

* ಮನೆಯ ಒಳಗಡೆ ಗಾಳಿಯಾಡುವಂತೆ ಇರಲಿ.

English summary

What is florona? double infection of COVID-19 and influenza: Symptoms, precautions in Kannada

Israel records first case of florona disease, a double infection of COVID19 and influenza. Know what is florona? it's symptoms and precuations in kannada,
X
Desktop Bottom Promotion