For Quick Alerts
ALLOW NOTIFICATIONS  
For Daily Alerts

ಟಾನ್ಸಿಲೈಟಿಸ್‌: ಕಾರಣಗಳು, ಲಕ್ಷಣಗಳು, ಮನೆಮದ್ದು

|

ಟಾನ್ಸಿಲೈಟಿಸ್ ಸಮಸ್ಯೆ ಇರುವವರಿಗೆ ಆಗಾಗ ಗಂಟಲು ನೋವು ಬರುತ್ತಿರುತ್ತದೆ. ಇನ್ನು ಕೆಲವರಿಗೆ ನೋವಿನಿಂದಾಗಿ ಜ್ವರ ಕೂಡ ಉಂಟಾಗುವುದು. ಮಕ್ಕಳಿಗೆ ಬಂದರೆ ಅವರ ಒದ್ದಾಟ ನೋಡುವುದಕ್ಕೆ ಪೋಷಕರಿಗೆ ಸಂಕಟವಾಗುತ್ತದೆ. ಟಾನ್ಸಿಲ್‌ ಸಮಸ್ಯೆ ಬ್ಯಾಕ್ಟಿರಿಯಾ ಸೋಂಕಿನಿಂದ ಉಂಟಾಗುತ್ತದೆ. ಈ ಸಮಸ್ಯೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಬರಬಹುದು. ಟಾನ್ಸಿಲ್‌ ಬಂದಾಗ ಕೆಲವರಿಗೆ ಔಷಧಿಯಲ್ಲಿ ಗುಣಮುಖವಾದರೆ, ಇನ್ನು ಕೆಲವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ. ಈ ಲೇಖನದಲ್ಲಿ ಟಾನ್ಸಿಲ್‌ ಸಮಸ್ಯೆಗೆ ಕಾರಣ, ಅದರ ವಿಧಗಳು, ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

Tonsillitis

ಟಾನ್ಸಿಲೈಟಿಸ್‌ಗೆ ಕಾರಣಗಳು

ಟಾನ್ಸಿಲ್‌ ಎಂಬುವುದು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುವ, ಕಿರುನಾ;ಗೆಯ ಸಮೀಪದಲ್ಲಿರುವ ಚೆಮಡಿನಂತಿರುವ ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟಿರಿಯಾ ಅಥವಾ ಸೋಂಕು ತಾಗಿದಾಗ ಅದನ್ನು ಟಾನ್ಸಿಲೈಟಿಸ್ ಎಂದು ಕರೆಯುತ್ತಾರೆ. ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತಿದ್ದು 5-15 ವರ್ಷ ವಯಸ್ಸಿನ ಮಕ್ಕಳಲ್ಲಿ ಕಂಡು ಬರುತ್ತದೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟಿರಿಯಾ ಸೊಂಕು ಟಾನ್ಸಿಲೈಟಿಸ್‌ಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಅಡಿನೊ ವೈರಸ್, ಹರ್ಪೀಸ್‌, ಇ.ಬಿ ವೈರಸ್, ಮೀಸಲ್ಸ್ ವೈರಸ್‌ ಕೂಡ ಟಾನ್ಸಿಲೈಟಿಸ್ ಸಮಸ್ಯೆಗೆ ಕಾರಣವಾಗಿದೆ.

ಟಾನ್ಸಿಲೈಟಿಸ್‌ ಬಗೆಗಳು

1. ಅಕ್ಯೂಟ್‌ ಟಾನ್ಸಿಲೈಟಿಸ್(ಇದ್ದಕ್ಕಿದ್ದಂತೆ ಬರುವುದು): ಈ ರೀತಿಯ ಟಾನ್ಸಿಲೈಟಿಸ್‌ ಸಮಸ್ಯೆ ಮಕ್ಕಳಲ್ಲಿ ಕಂಡು ಬರುವುದು ಸಹಜ. ಇದು 10 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಂಡು ಬರುತ್ತದೆ.

2. ದೀರ್ಘಕಾಲದ ಟಾನ್ಸಿಲೈಟಿಸ್: ಈ ಸಮಸ್ಯೆ ತುಂಬಾ ದೀರ್ಘಕಾಲದವರೆಗೆ ಕಾಡುತ್ತದೆ. ಈ ಸಮಸ್ಯೆ ಇರುವವರಲ್ಲಿ ಗಂಟಲಿನಲ್ಲಿ ಊತ, ಬಾಯಿ ದುರ್ವಾಸನೆ, ಗಂಟಲು ನೋವು ಮುಂತಾದ ಸಮಸ್ಯೆ ಉಂಟಾಗುವುದು.

3. ಆಗಾಗ ಕಾಡುವ ಟಾನ್ಸಿಲೈಟಿಸ್: ಈ ಟಾನ್ಸಿಲೈಟಿಸ್ ಪದೇ ಪದೇ ಕಾಡುತ್ತಿರುತ್ತದೆ. ವರ್ಷದಲ್ಲಿ 6-7 ಬಾರಿ ಈ ಸಮಸ್ಯೆ ಮರುಕಳಿಸುತ್ತದೆ.

ಟಾನ್ಸಿಲೈಟೀಸ್ ಲಕ್ಷಣಗಳು

* ಬಾಯಿ ದುರ್ವಾಸನೆ
* ತುಂಬಾ ಚಳಿಯಾಗುವುದು
* ಜ್ವರ
* ಗಂಟಲಿನಲ್ಲಿ ನೋವು
* ಆಹಾರ ನುಂಗಲು ಕಷ್ಟವಾಗುವುದು
* ಹೊಟ್ಟೆ ನೋವು
* ತಲೆ ನೋವು
* ಕುತ್ತಿಗೆ ಬಿಗಿಯಾಗುವುದು
* ಟಾನ್ಸಿಲ್‌ ಗ್ರಂಥಿಗಳು ಊದಿಕೊಳ್ಳುವುದು
* ಕಿವಿನೋವು
* ಕೆಮ್ಮು
* ಗಂಟಲು ಊದಿಕೊಳ್ಳುವುದು
* ಬಾಯಿ ಅಗಳಿಸಲು ಕಷ್ಟವಾಗುವುದು

ಯಾರಲ್ಲಿ ಟಾನ್ಸಿಲೈಟಿಸ್‌ ಹೆಚ್ಚಾಗಿ ಕಂಡು ಬರುತ್ತದೆ?

* ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಟಾನ್ಸಿಲೈಟಿಸ್ ಬಂದಾಗ ಅದಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಮುಂದೆ ತೊಂದರೆ ಉಂಟಾಗುತ್ತದೆ.
* ಆಗಾಗ ವೈರಸ್ ಹಾಗೂ ಬ್ಯಾಕ್ಟಿರಿಯಾ ಸೋಂಕು ತಗಲಿ ಟಾನ್ಸಿಲೈಟಿಸ್ ಸಮಸ್ಯೆ ಕಂಡು ಬರುತ್ತದೆ.

ಟಾನ್ಸಿಲೈಟಿಸ್‌ ಸಮಸ್ಯೆ ಹರಡುತ್ತದೆಯೇ?

* ಟಾನ್ಸಿಲೈಟಿಸ್‌ ಪೀಡಿತ ಮಕ್ಕಳಿಂದ ಸೋಂಕು ಇತರರಿಗೂ ಹರಡುವ ಸಾಧ್ಯತೆ ಇರುವುದರಿಂದ ಟಾನ್ಸಿಲೈಟಿಸ್‌ ಬಂದ ಮಕ್ಕಳನ್ನು ಗುಣಮುಖವಾಗುವವರೆಗೆ ಶಾಲೆಗೆ ಕಳುಹಿಸಬೇಡಿ. ಈ ಸಮಯದಲ್ಲಿ ಮಕ್ಕಳಿಗೆ ವಿಶ್ರಾಂತಿ ಅಗತ್ಯ.
* ಕಾಯಿಲೆಯಿಂದ ನರಳುತ್ತಿರುವ ಮಕ್ಕಳಿಗೆ ನುಂಗಲು ಸುಲಭವಾಗಿರುವ ಆಹಾರವನ್ನು ನೀಡಿ. ಗಂಜಿ ಮುಂತಾದ ದ್ರವ ಪದಾರ್ಥಗಳು, ಸೂಪ್, ಹಾಲು ಹಾಗೂ ಬೆಚ್ಚಗಿನ ನೀರನ್ನು ಕೊಡಿ.
* ಮಕ್ಕಳು ಕೆಮ್ಮುವಾಗ, ಸೀನುವಾಗ ಕೈವಸ್ತ್ರವನ್ನು ಅಡ್ಡ ಹಿಡಿಯಲು ಹೇಳಿ.
* ಮಕ್ಕಳ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

ಟಾನ್ಸಿಲೈಟಿಸ್‌ ಮನೆಮದ್ದುಗಳು

* ಉಪ್ಪು ನೀರು ಮುಕ್ಕಳಿಸುವುದು

ಟಾನ್ಸಿಲೈಟಿಸ್‌ ಅಥವಾ ಮತ್ತಿತರ ಗಂಟಲಿನ ಸಮಸ್ಯೆ ಕಾಣಿಸಿದಾಗ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಆಗಾಗ ಬಾಯಿ ಮುಕ್ಕಳಿಸುವುದರಿಂದ ನೋವು ಬೇಗನೆ ಕಡಿಮೆಯಾಗುವುದು.

* ಬಿಸಿ-ಬಿಸಿಯಾದ ಟೀಗೆ ಜೇನು ಹಾಕಿ ಕುಡಿಯುವುದು

ಜೇನಿನಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ ಅಂಶವಿರುವುದರಿಂದ ಬಿಸಿ ಬಿಸಿಯಾದ ಶುಂಠಿ ಟೀ ಮಾಡಿ ಅದಕ್ಕೆ ಜೇನು ಹಾಕಿ ಕುಡಿದರೆ ಟಾಮ್ಸಿಲೈಟಿಸ್‌ಗೆ ಕಾರಣವಾದ ಸೋಂಕಾಣುಗಳನ್ನು ಹೋಗಲಾಡಿಸಬಹುದು.

ವೈದ್ಯಕೀಯ ಚಿಕಿತ್ಸೆ

ಟಾನ್ಸಿಲೈಟಿಸ್‌ ಸಮಸ್ಯೆ ಅಷ್ಟೇನು ಗಂಭೀರ ಅಲ್ಲದಿದ್ದರೆ ವೈದ್ಯರು ಆ್ಯಂಟಿಬಯೋಟಿಕ್‌ ನೀಡಿ, ಅದನ್ನು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಅದೇ ಟಾನ್ಸಿಲೈಟಿಸ್ ದೀರ್ಘಕಾಲದಿಂದ ಇದ್ದರೆ ಟಾನ್ಸಿಲೆಕ್ಟಮಿ ಎಂಬ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಈ ಸಮಸ್ಯೆ ಇಲ್ಲವಾಗುವುದು.

English summary

Tonsillitis: Causes, Symptoms, Home Remedies And Treatment

Tonsillitis occurs when there is an inflammation in the tonsils and in most cases it is caused either by a virus or bacterial infection. In this article, we will explain the causes, symptoms and diagnosis of tonsillitis.
X
Desktop Bottom Promotion