For Quick Alerts
ALLOW NOTIFICATIONS  
For Daily Alerts

ಪಾರ್ಕಿನ್‌ಸನ್ಸ್ ಅಪಾಯವನ್ನು ಕಣ್ಣು ನೋಡಿ ಮೊದಲೇ ಅರಿಯಬಹುದು

|

ಪಾರ್ಕಿನ್‌ಸನ್ಸ್ ಎನ್ನುವುದು ಮೆದುಳಿನ ನರ ಮಂಡಲಗಳಿಗೆ ಸಂಬಂಧಿಸಿದ ಸಂಕೀರ್ಣ ಕಾಯಿಲೆಯಾಗಿದ್ದು ಇದು ವಯಸ್ಸಾದ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ. ಪಾರ್ಕಿಸನ್ಸ್ ಬಂದರೆ ದೇಹದ ಚಲನವಲನದಲ್ಲಿ ವ್ಯತ್ಯಾಸ ಉಂಟಾಗಿ, ನಡೆದಾಡುವಾಗ ದೇಹದ ಸಮತೋಲನ ತಪ್ಪುವುದು. ಈ ಕಾಯಿಲೆ ಬಂದವರಿಗೆ ಸರಿಯಾಗಿ ನಡೆದಾಡಲು ಸಾಧ್ಯವಾಗುವುದಿಲ್ಲ, ಮಾತನಾಡುವಾಗ ತೊದಲುವುದು, ದೇಹದಲ್ಲಿ ನಡುಕ ಮುಂತಾದ ತೊಂದರೆಗಳು ಉಂಟಾಗುತ್ತದೆ.

 Parkinsons Disease

ಈ ಪಾರ್ಕಿಸನ್ಸ್ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ(1.5 ಪಟ್ಟು) ಹೆಚ್ಚಾಗಿ ಕಂಡು ಬರುತ್ತದೆ, ಅದರಲ್ಲೂ 60 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಇನ್ನು ಕೆಲವರಲ್ಲಿ ವಂಶ ಪಾರಂಪರ್ಯವಾಗಿಯೂ ಕಂಡ ಬರಬಹುದು. ಮೆದುಳಿನಲ್ಲಿ ಉಂಟಾಗುವ ತೊಂದರೆಯಿಂದ ಉಂಟಾಗುತ್ತದೆ. ನಮ್ಮ ದೇಹದ ಚಲನವಲನಗಳನ್ನು ಸ್ನಾಯುಗಳು ಹಾಗೂ ನರಗಳು ನಿಯಂತ್ರಿಸುತ್ತವೆ. ನಮ್ಮ ದೇಹದಲ್ಲಿ ನರಕೋಶಗಳಿಗೆ ಸಹಾಯಕವಾಗಲು ಮೆದುಳಿನಲ್ಲಿ ಡೊಪಾಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಕೆಲವೊಮ್ಮೆ ಅನುವಂಶೀಯ ಕಾರಣದಿಂದ ಅಥವಾ ಜೀವಕೋಶಗಳ ವಿರುದ್ಧ ಪ್ರತಿರೋಧಗಳು ಉತ್ಪತ್ತಿಯಾಗಿ ಡೊಪಾಮೈನ್‌ ನಾಶ ಉಂಟಾಗುತ್ತದೆ, ಇದರಿಂದ ಪಾರ್ಕಿನ್‌ಸನ್ಸ್ ಉಂಟಾಗುತ್ತದೆ.

ಪಾರ್ಕಿನ್‌ಸನ್ಸ್ ಲಕ್ಷಣಗಳು

ಪಾರ್ಕಿನ್‌ಸನ್ಸ್ ಲಕ್ಷಣಗಳು

ಪಾರ್ಕಿನ್‌ಸನ್ಸ್ ಕಾಯಿಲೆಯನ್ನು ಈ ಕೆಳಗಿನ ಲಕ್ಷಣಗಳ ಮೂಲಕ ಮೊದಲೇ ಗುರುತಿಸಬಹುದಾಗಿದೆ.

* ದೇಹದ ಚಲನೆಯಲ್ಲಿ ಅಸಮತೋಲನೆ

* ಧ್ವನಿ

* ಮುಖದ ಭಾವ

* ನಿದ್ದೆ ಸಮಸ್ಯೆ

* ವಾಸನೆ ಗ್ರಹಿಕೆ ಸಮಸ್ಯೆ

ಈ ಲಕ್ಷಣಗಳ ಜತೆಗೆ ಕಣ್ಣಿನ ರೆಟಿನಾ ನೋಡಿ ಪಾರ್ಕಿನ್‌ಸನ್ಸ್ ಲಕ್ಷಣ ಕಂಡು ಹಿಡಿಯಬಹುದೆಂದು ಅಮೆರಿಕನ್ ಅಕಾಡೆಮಿ ಆಫ್‌ ನ್ಯೂರೋಲಜಿಯಲ್ಲಿ ಪ್ರಕಟವಾದ ನರಗಳಿಗೆ ಸಂಬಂಧಿಸಿದ ಅಧ್ಯಯನ ವರದಿ ಹೇಳಿದೆ.

ರೆಟಿನಾ ತೆಳ್ಳಗಾದರೆ ಅಪಾಯ

ರೆಟಿನಾ ತೆಳ್ಳಗಾದರೆ ಅಪಾಯ

ರೆಟಿನಾ ತೆಳು ಆಗುವುದಕ್ಕೂ ಹಾಗೂ ಪಾರ್ಕಿನ್‌ಸನ್ಸ್‌ ಕಾಯಿಲೆಗೂ ಸಂಬಂಧವಿದೆ ಎಂದು ನರಗಳ ಬಗ್ಗೆ ಅಧ್ಯಯನ ವರದಿ ಮಾಡಿದ ಲೇಖಕ ಜೀ ಯಂಗ್ ಲೀ ಹೇಳಿದ್ದಾರೆ. ಕಣ್ಣಿನ ರೆಟಿನಾ ತೆಳುವಾಗುತ್ತಿದೆ ಎಂದರೆ ಅದು ಪಾರ್ಕಿನ್‌ಸನ್ಸ್ ಉಂಟಾಗಲಿದೆ ಎಂಬುವುದರ ಲಕ್ಷಣವಾಗಿದೆ. ರೆಟಿನಾ ತೆಳುವಾದಂತೆ ಸಮಸ್ಯೆ ಪಾರ್ಕಿನ್‌ಸನ್ಸ್ ಅಪಾಯ ಹೆಚ್ಚು.

ಕಣ್ಣಿನ ರೆಟಿನಾ ಸ್ಕ್ಯಾನ್‌ ಮಾಡುವ ಮೂಲಕ ಪಾರ್ಕಿನ್‌ಸನ್ಸ್ ಬರುವ ಅಪಾಯವಿದೆಯೇ ಎಂದು ಎಂದು ತಿಳೀಯಬಹುದಾಗಿದೆ ಎನ್ನುತ್ತಾರೆ ನರ ರೋಗ ತಜ್ಞರಾದ ಡಾ. ಲೀ.

ಪಾರ್ಕಿನ್‌ಸನ್ಸ್ ಕಾಯಿಲೆ ಇರುವ 49 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರನ್ನು ಕಣ್ಣಿನ ಪರೀಕ್ಷಗೆ ಒಳ ಪಡಿಸಿದಾಗ ಅವರ ಕಣ್ಣಿನ ರೆಟಿನಾದಲ್ಲಿ 5 ಪೊರೆಗಳಿಗೆ ಬದಲು 2 ಪೊರೆಗಳಿರುವುದು ತಿಳಿದು ಬಂತು. ದೇಹದಲ್ಲಿ ಡೊಪಾಮೈನ್‌ ಕಡಿಮೆಯಾಗುತ್ತಿದ್ದಂತೆ ರೆಟಿನಾ ತೆಳುವಾಗುವುದು, ಇದರಿಂದ ಕಲಾಯಿಲೆಯ ತೀವ್ರತೆ ಹೆಚ್ಚಾಗುವುದು.

ಚಿಕಿತ್ಸೆ

ಚಿಕಿತ್ಸೆ

ಹಲವಾರು ಅಧ್ಯಯನಗಳು ಕೂಡ ಕಣ್ಣಿನ ರೆಟಿನಾ ತೆಳುವಾಗುವುದು ಪಾರ್ಕಿನ್‌ಸನ್ಸ್ ಲಕ್ಷಣವಾಗಿದೆ ಎಂದು ಹೇಳಿದೆ. ಕಾಯಿಲೆ ಬಂದು ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರುವುದಕ್ಕೆ ಮುನ್ನ ಮುನ್ನೆಚ್ಚರಿಕೆವಹಿಸುವುದು ಒಳ್ಳೆಯದು. ಪಾರ್ಕಿನ್‌ಸನ್ಸ್ ಅಪಾಯ ತಡೆಗಟ್ಟಲು ಕಣ್ಣಿನ ರೆಟಿನಾ ಆರೋಗ್ಯವಾಗಿದೆಯೇ ಎಂದು ತಿಳಿಯುವುದು ಒಳ್ಳೆಯದು.

ಪಾರ್ಕಿನ್‌ಸನ್ಸ್ ಅನ್ನು ದೇಹದಲ್ಲಿ ರೋಗದ ಲಕ್ಷಣಗಳನ್ನು ಅನುಸರಿಸ ನುರಿತ ವೈದ್ಯರು ಪತ್ತೆ ಹಚ್ಚುತ್ತಾರೆ. ಪಾರ್ಕಿನ್‌ಸನ್ಸ್‌ಗೆ ಸೂಕ್ತವಾದ ಚಿಕಿತ್ಸೆ ಇನ್ನೂ ಬಂದಿಲ್ಲ, ಆದರೆ ರೋಗದ ಲಕ್ಷಣಗಳು ಕಂಡು ಬಂದರೆ ನಿಯಂತ್ರಿಸಬಹುದಾಗಿದೆ. ಮೆದುಳಿನಲ್ಲಿ ಡೊಪಾಮೈನ್‌ ಪ್ರಮಾಣ ಹೆಚ್ಚಿಸಿ ರೋಗವನ್ನು ನಿಯಂತ್ರಸಿಬಹುದು. ಪಾರ್ಕಿನ್‌ಸನ್ಸ್ ಕಾಯಿಲೆಗೆ ಸ್ವಚಿಕಿತ್ಸೆ ಮಾಡಬೇಡಿ. ವೈದ್ಯರ ಅನುಮತಿ ಇಲ್ಲದೆ ಔಷಧಿಯನ್ನು ತೆಗೆದುಕೊಳ್ಳುವುದು ಆಗಲಿ ಬದಲಾಯಿಸುವುದು ಆಗಲಿ ಮಾಡಬಾರದು. ಕೆಲವೊಮ್ಮೆ ಔಷಧಿ ತೆಗೆದುಕೊಂಡಾಗ ಅಡ್ಡಪರಿಣಾಮ ಉಂಟಾಗಬಹುದು, ಆಗ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ಸ್ವಚಿಕಿತ್ಸೆ ಮಾಡುವುದರಿಂದ ಸಾವು ಕೂಡ ಸಂಭವಿಸಬಹುದು.

ಪಾರ್ಕಿನ್‌ಸನ್ಸ್ ತಡೆಗಟ್ಟುವುದು ಹೇಗೆ?

ಪಾರ್ಕಿನ್‌ಸನ್ಸ್ ತಡೆಗಟ್ಟುವುದು ಹೇಗೆ?

ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅತ್ಯಧಿಕವಾದ ಮಾನಸಿಕ ಒತ್ತಡವನ್ನು ಹೊರಹಾಹಬೇಕು ಹಾಗೂ ವ್ಯಾಯಾಮ ಮಾಡಬೇಕು. ದೇಹವನ್ನು ತುಂಬಾ ದಂಡಿಸುವ ವ್ಯಾಯಾಮ ಮಾಡಬಾರದು. ಸಮತೋಲನವಾದ ಆಹಾರವನ್ನು ಸೇವಿಸಬೇಕು. ವಿಟಮಿನ್ ಹಾಗೂ ಪ್ರೊಟೀನ್ ಇರುವ ಆಹಾರವನ್ನು ಸೇವಿಸಬೇಕು. ತಜ್ಞರ ಸಲಹೆ ಪಡೆದು ದೇಹಕ್ಕೆ ಪೂರಕವಾದ ಆಹಾರವನ್ನು ಸೇವಿಸಬೇಕಾಗುತ್ತದೆ.

English summary

Study: Thinning Of The Eye Is An Early Sign of Parkinson's

Certain neurons in the brain are responsible for producing dopamine, a neurotransmitter that plays a major role in sending messages to the part of the brain that controls movement and coordination.
Story first published: Monday, December 16, 2019, 15:10 [IST]
X
Desktop Bottom Promotion