For Quick Alerts
ALLOW NOTIFICATIONS  
For Daily Alerts

Strength Of Stories:ಕೊರೊನಾದ ಬಗ್ಗೆ ಡಾ. ರಾಜು ನೀಡಿರುವ ಉಪಯುಕ್ತ ಮಾಹಿತಿಗಳು

|

ಕೊರೊನಾ 2ನೇ ಅಲೆಯಲ್ಲಿ ಅನೇಕ ವೈದ್ಯರು ಸಾಮಾಜಿಕ ತಾಣಗಳಲ್ಲಿ ಉಪಯುಕ್ತ ಮಾಹಿತಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿ ಅಂಥ ಜನಪ್ರಿಯ ವೈದ್ಯರಗಳಲ್ಲೊಬ್ಬರು ರಾಜೂಸ್‌ ಹೆಲ್ತೀ ಇಂಡಿಯಾ ಕ್ಲೀನಿಕ್ ನಡೆಸುತ್ತಿರುವ ಡಾ. ರಾಜು.

ಕೊರೊನಾ ಬಂದ ಇವರ ಹೆಸರು ಬೆಂಗಳೂರಿಗರಿಗೆ ಮಾತ್ರವಲ್ಲ, ಬೆಂಗಳೂರಿನ ಹೊರಗಡೆ ಕೂಡ ತುಂಬಾ ಚಿರಪರಿಚಿತ. ಅದಕ್ಕೆ ಕಾರಣ ಇವರು ಸಾಮಾಜಿಕ ತಾಣಗಳಲ್ಲಿ ಲೈವ್‌ ಬಂದು ಜನರಲ್ಲಿ ತುಂಬುತ್ತಿದ್ದ ಧೈರ್ಯ ಹಾಗೂ ಕೊರೊನಾ ಸಮಯದಲ್ಲಿ ಏನು ಮಾಡಬೇಕು, ಮಾಡಬಾರದು ಎಂಬುವುದರ ಬಗ್ಗೆ ನೀಡುವ ಸಲಹೆಗಳು.

ನಮ್ಮ ಒನ್‌ ಇಂಡಿಯಾ ಕನ್ನಡ ತಂಡ ಡಾ. ರಾಜು ಅವರನ್ನು ಸಂಪರ್ಕಿಸಿದಾಗ ಕೊರೊನಾಗೆ ಸಂಬಂಧಿಸಿದಂತೆ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ನೋಡಿ:

ರೆಮಿಡಿಸಿವಿರ್ ಇಂಜೆಕ್ಷನ್ ಕೊರೊನಾ ರೋಗಿಗಳಿಗೆ ಕೊಡಬಾರದು ಏಕೆ?

ರೆಮಿಡಿಸಿವಿರ್ ಇಂಜೆಕ್ಷನ್ ಕೊರೊನಾ ರೋಗಿಗಳಿಗೆ ಕೊಡಬಾರದು ಏಕೆ?

ರೆಮಿಡಿಸಿವಿರ್‌ ಇಂಜೆಕ್ಷನ್‌ ನ್ನು ಎಂಬೋಲಾ ಬಂದಾಗ ಬಳಸುತ್ತಿದ್ದರು. ಈ ಔಷಧಿ ವೈರಸ್‌ ಕೊಲ್ಲಲ್ಲ ಹಾಗೂ ಸಾವಿನ ಸಂಖ್ಯೆ ಕೂಡ ತಗ್ಗಿಸುವುದಿಲ್ಲ, ಆಸ್ಪತ್ರೆಯಲ್ಲಿ 10 ದಿನ ಇರಬೇಕಾಗಿದ್ದರೆ 8 ದಿನಕ್ಕೇ ಡಿಸ್ಚಾರ್ಜ್ ಆಗಬಹುದು. ಅಲ್ಲದೆ ಈ ಇಂಜೆಕ್ಷನ್‌ ಬಳಸುವುದರಿಂದ ಲಿವರ್‌ಗೂ ಕೂಡ ಹಾನಿಯುಂಟಾಗುವುದು. ಆದ್ದರಿಂದ ಕೊರೊನಾ ಸೋಂಕಿತರಿಗೆ ಈ ಲಸಿಕೆ ನೀಡಬೇಕಾಗಿಲ್ಲ.

ಇದೀಗ WHO ಕೂಡ ಕೊರೊನಾಗೆ ರೆಮಿಡಿಸಿವಿರ್‌ ನೀಡುವುದರಿಂದ ಪ್ರಯೋಜನವಿಲ್ಲ ಎಂದಿದೆ.

ಹಳ್ಳಿಗಳಲ್ಲಿ ಕೊರೊನಾ, ಭಯ ಪಡಬೇಡಿ ಎಂದ ವೈದ್ಯರು

ಹಳ್ಳಿಗಳಲ್ಲಿ ಕೊರೊನಾ, ಭಯ ಪಡಬೇಡಿ ಎಂದ ವೈದ್ಯರು

ಇದೀಗ ಹಳ್ಳಿಗಳಲ್ಲಿ ಕೊರೊನಾ ಕೇಸ್‌ ಹೆಚ್ಚಾಗಿ ಕಂಡು ಬರುತ್ತಿದೆ, ಆದರೆ ಇದರ ಬಗ್ಗೆ ಏನೂ ಆತಂಕ ಪಡಬೇಕಾಗಿಲ್ಲ, ಹಳ್ಳಿಗಳಲ್ಲಿ ವಾತಾವರಣ ಚೆನ್ನಾಗಿರುತ್ತದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಚಿಕಿತ್ಸೆ ದೊರೆಯುವುದು, ಬೇಗನೆ ಚೇತರಿಸಿಕೊಳ್ಳಬಹುದು, ಏನೂ ಭಯ ಪಡಬೇಕಾಗಿಲ್ಲ ಎಂಬುವ ಮೂಲಕ ವೈದ್ಯರು ಧೈರ್ಯವನ್ನು ತುಂಬುತ್ತಿದ್ದಾರೆ.

3ನೇ ಅಲೆ ಬರಬಹುದೇ?

3ನೇ ಅಲೆ ಬರಬಹುದೇ?

ಮೊದಲಿದ್ದ ವೈರಸ್‌ ಮತ್ತೆ ಕಾಣಿಸಿದರೆ ಅದು 2ನೇ ಅಲೆ ಅನ್ನಬಹುದು. ಈಗ ಬಂದಿರುವುದು ರೂಪಾಂತರ ವೈರಸ್‌ ಆಗಿದೆ, ಆದ್ದರಿಂದ ಅದು 2ನೇ ಅಲೆ ಅಲ್ಲ, ಇನ್ನು 3ನೇ ಅಲೆ ಬರುವುದು ಅಂತಿದ್ದಾರೆ, ಆದರೆ ಬರುವ ಸಾಧ್ಯತೆ ಕಡಿಮೆ, ಬಂದರೂ ಈಗಾಗಲೇ ನಮ್ಮಲ್ಲಿ ಹರ್ಡ್ ಇಮ್ಯೂನಿಟಿ ಬೆಳೆದಿರುವುದರಿಂದ ಭಯ ಪಡಬೇಕಾಗಿಲ್ಲ ಎಂಬುವುದು ಡಾ. ರಾಜು ಅವರ ಅಭಿಪ್ರಾಯ.

ಕೊರೊನಾ ಲಸಿಕೆಗಳಲ್ಲಿ ಯಾವುದು ಪರಿಣಾಮಕಾರಿ?

ಕೊರೊನಾ ಲಸಿಕೆಗಳಲ್ಲಿ ಯಾವುದು ಪರಿಣಾಮಕಾರಿ?

ಲಸಿಕೆಯಲ್ಲಿ ಯಾವುದನ್ನಾದರೂ ಪಡೆಯಬಹುದು. ಶೇ.100ರಷ್ಟು ಅಡ್ಡಪರಿಣಾಮವಿಲ್ಲ ಎನ್ನುವ ಯಾವುದೇ ಲಸಿಕೆಯಿಲ್ಲ.

ಕಷಾಯದಿಂದ ಕೊರೊನಾವನ್ನು ಗುಣಪಡಿಸಬಹುದೇ?

ಕಷಾಯದಿಂದ ಕೊರೊನಾವನ್ನು ಗುಣಪಡಿಸಬಹುದೇ?

ಕೊರೊನಾವನ್ನು ಕೊಲ್ಲಲು ಆಯುರ್ವೇದಿಂದಾಗಲಿ, ಹೋಮಿಯೋಪತಿಯಿಂದಾಗಲಿ, ಅಲೋಪತಿಯಿಂದಾಗಲಿ ಸಾಧ್ಯವಿಲ್ಲ. ಆದರೆ ಕಷಾಯಗಳನ್ನು ತೆಗೆದುಕೊಂಡರೆ ಗಂಟಲು ಕರೆತ, ಕೆಮ್ಮು ಇವುಗಳನ್ನು ಕಡಿಮೆ ಮಾಡಲು ಸಹಯ ಮಾಡುತ್ತೆ.

ಪ್ರತೀದಿನ ಸ್ಟೀಮ್ ತೆಗೆಯಬಹುದೇ?

ಪ್ರತೀದಿನ ಸ್ಟೀಮ್ ತೆಗೆಯಬಹುದೇ?

ತಲೆಭಾರವಿದ್ದರೆ ಸ್ಟೀಮ್ ತೆಗೆಯಬಹುದು, ಆದರೆ ಪ್ರತೀದಿನ ಸ್ಟೀಮ್ ತೆಗೆದುಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ, ಇದರಿಂದ ವಾಸನೆ ಗ್ರಹಿಸುವ ಶಕ್ತಿ ಕೂಡ ಕುಂದುವುದು ಅಗ್ಯತವಿದ್ದಾಗ ಮಾತ್ರ ಸ್ಟೀಮ್ ತೆಗೆಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕೊರೊನಾ ಲಸಿಕೆ ಪಡೆದ ಬಳಿಕ ಮದ್ಯಪಾನ ಮಾಡಬಹುದೇ?

ಕೊರೊನಾ ಲಸಿಕೆ ಪಡೆದ ಬಳಿಕ ಮದ್ಯಪಾನ ಮಾಡಬಹುದೇ?

ಎಷ್ಟೋ ಜನ ಲಸಿಕೆ ಪಡೆದ ಬಳಿಕ ಮದ್ಯಪಾನ ಮಾಡಿರುವುದನ್ನು ನಾನು ನೋಡಿದ್ದೇನೆ, ಅವರಿಗೇನು ತೊಂದರೆಯಾಗಿಲ್ಲ. ಆದ್ದರಿಂದ ಮದ್ಯಪಾನಕ್ಕೂ, ಲಸಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಗ್ರಾಮೀಣ ಪ್ರದೇಶದವರಿಗೆ ವೈದ್ಯರ ಸಲಹೆ:

ಗ್ರಾಮೀಣ ಪ್ರದೇಶದವರಿಗೆ ವೈದ್ಯರ ಸಲಹೆ:

* ನಮ್ಮ ಊರಲ್ಲಿ ಕೇಸ್‌ ಅಧಿಕವಾಗುತ್ತಿದೆ ಎಂಬ ಆತಂಕ ಬೇಡ, ಧೈರ್ಯವಾಗಿರಿ.

* ಕೊರೊನಾ ಬಂದ್ರೆ ಔಷಧಿ ತೆಗೆದುಕೊಂಡು ಕಂಪ್ಲೀಟ್ ಬೆಡ್‌ ರೆಸ್ಟ್ ಮಾಡಿ.

* ಸೋಂಕು ತಗುಲಿದರೆ ಒಳ್ಳೆಯದೇ, ಇದರಿಂದ ಚೇತರಿಸಿಕೊಂಡರೆ 3ನೇ, 4ನೇ ಅಲೆ ಎಂಬ ಭಯವಿಲ್ಲ.

* ಸೋಂಕು ತಗುಲಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಆದ್ದರಿಂದ ಭಯಬೇಡ ಎಂದು ಸಲಹೆ ನೀಡಿದ್ದಾರೆ.

ಡಾ. ರಾಜು ಅವರ ಪ್ರಕಾರ ಕೊರೊನಾ ಎದುರಿಸುವ ಮದ್ದು ಎಂದರೆ ಧೈರ್ಯ. ಸೋಂಕು ಬರಲಿ, ಬಾರದಿರಲಿ ಧೈರ್ಯವಾಗಿರಿ, ಇದರಿಂದ ಸೋಂಕು ಗೆಲ್ಲಲು ಸಾಧ್ಯವಾಗುವುದು.

English summary

Strength Of Stories : Dr Raju Krishnamurthy Shares valuable tips on how to protect yourself from Covid-19

Strength Of Stories : Dr Raju Krishnamurthy Shares valuable tips on how to protect yourself from Covid-19, read on....
Story first published: Saturday, June 5, 2021, 16:08 [IST]
X
Desktop Bottom Promotion