Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ನಿಮ್ಮ ಮನಸ್ಸು ಬದಲಾವಣೆ ಬಯಸುತ್ತಿದೆ ಎಂದು ಹೇಳುವ ಸೂಚನೆಗಳಿವು
ನಮ್ಮ ಒತ್ತಡದ ಜೀವನದಲ್ಲಿ ಬಿಡುವಿಲ್ಲದೇ ದುಡಿಯುತ್ತಿರುತ್ತೇವೆ. ಹಗಲ ರಾತ್ರಿಯೆನ್ನದೇ ಸ್ವಲ್ಪವೂ ವಿರಾಮ ತೆಗೆದುಕೊಳ್ಳದೇ ಕೆಲಸ ಕಾರ್ಯದಲ್ಲಿ ತೊಡಗಿ ಕೊಂಡಿರುತ್ತಾರೆ. ಆದರೆ ಎಲ್ಲದಕ್ಕೂ ಒಂದು ಮಿತಿಯಿದೆ. ನಮ್ಮ ಅತಿಯಾದ ಕೆಲಸ ನಮ್ಮನ್ನು ಹಲವಾರು ದೈಹಿಕ-ಮಾನಸಿಕ ಸಮಸ್ಯೆಗಳಿಗೆ ತಳ್ಳುತ್ತದೆ. ಕೆಲವೊಮ್ಮೆ ನಮ್ಮ್ ದೇಹವೇ, ಕೆಲಸ ಮಾಡಿದ್ದು ಸಾಕು ಸ್ವಲ್ಪ ರೆಸ್ಟ್ ತೆಗೆದುಕೋ ಎಂದು ವಿಭಿನ್ನ ಸೂಚನೆಗಳ ಮೂಲಕ ಎಚ್ಚರಿಸಿರುತ್ತದೆ. ಅಂತಹ ಸೂಚನೆಗಳಾವುವು ಎಂಬುದನ್ನು ಈ ಲೇಖನದ ಮೂಲಕ ವಿವರಿಸಿದ್ದೇವೆ.
ನಿಮ್ಮ ಮನಸ್ಸು ಬದಲಾವಣೆ ಬಯಸುತ್ತಿದೆ ಎಂದು ಹೇಳುವ ಸೂಚನೆಗಳನ್ನ್ ಈ ಕೆಳಗೆ ನೀಡಲಾಗಿದೆ:

ಆಹಾರ ಪದ್ಧತಿಯಲ್ಲಿ ಬದಲಾವಣೆ:
ತಿನ್ನಲು ಹಿಂದೇಟು ಹಾಕುವುದು ಮಾನಸಿಕ ಒತ್ತಡ ಮತ್ತು ದಣಿವಿನ ಸಾಮಾನ್ಯ ಲಕ್ಷಣವಾಗಿದೆ. ಆರಾಮವಿಲ್ಲದೇ ದುಡಿದರೂ ಹಸಿವಾಗದೇ ಇರುವುದು ಕಂಡುಬಂದರೆ, ಅದು ದೀರ್ಘಕಾಲದವರೆಗೆ ನಿಲ್ಲದ-ಜೀವನಶೈಲಿಯಿಂದ ಉಂಟಾಗುವ ಮಾನಸಿಕ ಮತ್ತು ದೈಹಿಕ ಒತ್ತಡದ ಪರಿಣಾಮವಾಗಿದೆ. ನಿಮಗೆ ಹಸಿವಿಲ್ಲದಾಗ ತಿನ್ನುತ್ತೀರಿ, ಹಸಿವಾದಾಗ ತಿನ್ನಲು ಆಗುವುದಿಲ್ಲ ಇದು ಕೂಡ ಒಂದು ಸೂಚನೆಯಾಗಿದೆ. ಆಗ ನೀವು ರೆಸ್ಟ್ ತೆಗೆದುಕೊಳ್ಳಬೇಕು ಎಂದರ್ಥ.

ಚಡಪಡಿಕೆ:
ನಿಮ್ಮ ಮಲಗಿದ್ದೀರಿ ಆದರೆ ನಿಮ್ಮ ಮನಸ್ಸು ವಿಶ್ರಾಂತಿ ಪಡೆಯುತ್ತಿಲ್ಲವೇ? ಯಾವ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲವೇ? ಇದೆಲ್ಲವೂ ನೀವು ದಣಿದಿದ್ದೀರಿ ಎಂಬುದರ ಸೂಚನೆಯಾಗಿದೆ. ಇದಕ್ಕೆ ನೀವು ಪ್ರತಿದಿನ ವ್ಯಾಯಾಮ, ಯೋಗ ಧ್ಯಾನದಂತಹ ಮನಸ್ಸನ್ನು ಉಲ್ಲಾಸಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು.

ಪ್ರೇರಣೆಯ ಕೊರತೆ:
ಯಾವುದೇ ಕೆಲಸ ಮಾಡಲು ಆಗದಿರುವುದು, ಯಾವುದಕ್ಕೂ ಮನಸ್ಸಿಲ್ಲದಿರುವುದು ಇವೆಲ್ಲವೂ ದಣಿವಿನ ಚಿಹ್ನೆಯಾಗಿದೆ. ನಿಯಮಿತ ಕೆಲಸ ಮತ್ತು ದಿನಚರಿ ಸರಿಯಾಗಿ ಆಗದಾಗ ಸ್ವತಃ ನೀವೆ ನಿಮ್ಮನ್ನು ಆ ಕೆಲಸಗಳಿಗೆ ತಳ್ಳಿಕೊಳಬೇಕು. ಮತ್ತು ಇದು ಅತಿಯಾದ ಒತ್ತಡದ ಪರಿಣಾಮವಾಗಿದ್ದು, ಅದು ನಿಮಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಗೊಂದಲ ಉಂಟುಮಾಡುತ್ತದೆ.

ಕಡಿಮೆ ರೋಗನಿರೋಧಕ :
ನಿದ್ರಾಹೀನತೆ ಮತ್ತು ಆಗಾಗ್ಗೆ ಅನಾರೋಗ್ಯಕ್ಕೆ ಒತ್ತಡವು ಒಂದು ಸಾಮಾನ್ಯ ಕಾರಣವಾಗಿದೆ ಮತ್ತು ಇದು ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ವಿಶ್ರಾಂತಿ ಕೊರತೆಯು ಸೋಂಕುಗಳು ಮತ್ತು ರೋಗಗಳನ್ನು ಹೋರಾಡುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಅದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಿಮಗೆ ತಲುಪಿಸುತ್ತಿದೆ ಎಂಬುದನ್ನು ನೆನಪಿಸುತ್ತದೆ.

ಕೇಂದ್ರೀಕರಣದ ಸಮಸ್ಯೆ:
ಮರೆವು ಸಾಮಾನ್ಯವಾಗಿದ್ದರೂ ಸಹ, ಒತ್ತಡದಲ್ಲಿದ್ದಾಗ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮ ಕಾರಿನ ಕೀಗಳನ್ನು ನೀವು ಎಲ್ಲಿ ಇರಿಸಿದ್ದೀರಿ ಎಂಬುದನ್ನು ಮರೆತುಬಿಡುವುದು, ಅದೇ ಸಾಲುಗಳನ್ನು ಅರ್ಥಪೂರ್ಣವಾಗಿಸಲು ಮತ್ತೆ ಓದುವುದು ಅಥವಾ ಸುಲಭವಾಗಿ ವಿಚಲಿತರಾಗುವುದು ಹೀಗೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಧ್ಯಾನ ಮತ್ತು ಸರಿಯಾದ ಉಸಿರಾಟವು ಸಹಾಯಕವಾಗಿರುತ್ತದೆ ಮತ್ತು ನಿಮ್ಮ ದೈನಂದಿನ ಸಕಾರಾತ್ಮಕ ಅಭ್ಯಾಸಗಳ ಪಟ್ಟಿಯ ಭಾಗವಾಗಿ ಸೇರಿಸಿಕೊಳ್ಳಬೇಕು .



Click it and Unblock the Notifications