For Quick Alerts
ALLOW NOTIFICATIONS  
For Daily Alerts

ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ

|

ಆರು ಬೆರಳು ಇರುವವರನ್ನು ನೋಡಿರುತ್ತೇವೆ. ಹುಟ್ಟುವಾಗಲೇ ಸಾವಿರಕ್ಕೋ, ಏಳುನೂರಕ್ಕೋ ಒಂದು ಮಕ್ಕಳಲ್ಲಿ ಕಾಲು ಅಥವಾ ಕೈಗಳಲ್ಲಿ ಆರು ಬೆರಳುಗಳಿರುತ್ತವೆ. ಆರು ಬೆರಳು ಅದೃಷ್ಟವೆಂದು ಕೆಲವರು ಭಾವಿಸಿದರೆ, ಮತ್ತೆ ಕೆಲವರುಆರು ಬೆರಳುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಬೇಕೆಂದು ಯೋಚಿಸುತ್ತಾರೆ. ಕೈ ಕಾಲುಗಳಲ್ಲಿ ಆರು ಬೆರಳುಗಳಿದ್ದರೆ ವೈದ್ಯಕೀಯ ಭಾಷೆಯಲ್ಲಿ ಪಾಲಿಡ್ಯಾಕ್ಟಲಿ ಎಂದು ಕರೆಯುತ್ತಾರೆ. ಇದು ಗ್ರೀಕ್ ಭಾಷೆಯಿಂದ ಬಂದಂತಹ ಪದವಾಗಿದೆ. ಪಾಲಿ ಎಂದರೆ ತುಂಬಾ, ಡ್ಯಾಕ್ಟಲಿ ಎಂದರೆ ಬೆರಳುಗಳು ಅಂದರೆ ಸಾಮಾನ್ಯಕ್ಕಿಂತ ಅಧಿಕ ಬೆರಳಿಗಳಿದ್ದರೆ ಪಾಲಿಡ್ಯಾಕ್ಟಲಿ ಎಂದು ಕರೆಯುತ್ತಾರೆ.

Polydactyly

ಆರು ಬೆರಳುಗಳಿಗೆ ಕಾರಣವೇನು?

ಮಗು ಭ್ರೂಣದಲ್ಲಿ ಬೆಳೆಯುವಾಗ ಆರು ಅಥವಾ ಏಳನೇ ವಾರದಲ್ಲಿ ಕೈ ಕಾಲುಗಳು, ಬೆರಳುಗಳು ಮೂಡಲಾರಂಭಿಸುತ್ತದೆ. ಬೆರಳುಗಳು ಮೂಡುವ ಕಾರ್ಯದಲ್ಲಿ ಅಡಚಣೆ ಉಂಟಾದರೆ ಹೆಚ್ಚು ಬೆರಳುಗಳು ಬೆಳೆಯುತ್ತದೆ. ಕೆಲವರಿಗೆ ಕಿರು ಬೆರಳಿನ ನಂತರ ಚಿಕ್ಕದಾದ ಆರನೇ ಬೆರಳು ಮೂಡಿದರೆ, ಇನ್ನು ಕೆಲವರಿಗೆ ಕೈ ಬೆರಳುಗಳ ಮಧ್ಯದಲ್ಲಿ ಚಿಕ್ಕದಾದ ಬೆರಳು ಮೂಡುತ್ತದೆ. ಇನ್ನು ಕೆಲವರಲ್ಲಿ ವಮಶ ಪಾರಂಪರ್ಯವಾಗಿ ಕೂಡ ಈ ಸಮಸ್ಯೆ ಕಂಡು ಬರುವುದು.

ಸಾಮಾನ್ಯವಾಗಿ ಆರು ಬೆರಳು ಈ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ

* ಕಿರು ಬೆರಳಿನ ಸಮೀಪ ಆರನೇ ಬೆರಳು ಬೆಳೆದಿರುತ್ತದೆ, ಕೆಲವರಿಗೆ ಕಿರು ಬೆರಳಿಗೆ ಅಂಟಿಕೊಂಡಿದ್ದರೆ ಇನ್ನು ಕೆಲವರಲ್ಲಿ ಪ್ರತ್ಯೇಕ ಬೆರಳಿನಂತೆ ಚಿಕ್ಕಗಾತ್ರದಲ್ಲಿ ಬೆಳೆದಿರುತ್ತದೆ.

* ಹೆಬ್ಬರಳಿನ ಸಮೀಪ ಬೆಳೆದಿರುತ್ತದೆ.

* ಮಧ್ಯ ಬೆರಳಿನ ನಡುವೆ ಬೆಳೆದಿರುತ್ತದೆ.

ಕೆಲವರಲ್ಲಿ ಕೈ ಹಾಗೂ ಕಾಲುಗಳಲ್ಲಿ ಆರು ಬೆರಳಿಗಳಿರುತ್ತದೆ.

ಪತ್ತೆ ಹಾಗೂ ಚಿಕಿತ್ಸೆ

ಗರ್ಭದಲ್ಲಿಯೇ ಆರು ಬೆರಳು ಪತ್ತೆ ಹಚ್ಚಬಹುದು

ಗರ್ಭಿಣಿಯಾಗಿ ಮೂರು ತಿಂಗಳಿನಲ್ಲಿ ಅಲ್ಟ್ರಾಸೌಂಡ್‌ ಮಾಡಿದಾಗ ಆರು ಬೆರಳುಗಳಿದ್ದರೆ ಗೊತ್ತಾಗುತ್ತದೆ.

ಯಾವಾಗ ಆರನೇ ಬೆರಳು ತೆಗೆಯುವುದು ಕಷ್ಟ?

ಕಿರು ಬೆರಳು ಪಕ್ಕದಲ್ಲಿ ಆರನೇ ಬೆರಳು ಬೆಳದಿದ್ದರೆ ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯುವುದು ಸುಲಭ, ಅದೇ ಹೆಬ್ಬರಳಿನ ಪಕ್ಕದಲ್ಲಿ ಅಥವಾ ಹೆಬ್ಬರಳಿಗೆ ಅಂಟಿಕೊಂಡಂತೆ ಆರನೇ ಬೆರಳು ಬೆಳೆದಿದ್ದರೆ ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯುವುದಕ್ಕಿಂತ ತೆಗೆಯದಿದ್ದರೆ ಸೂಕ್ತ. ಏಕೆಂದರೆ ಬೆರಳುಗಳ ಸ್ವಾದೀನಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಹೆಬ್ಬರಳಿನ ಸಮೀಪದ ಆರನೇ ಬೆರಳು ತೆಗೆಯಲು ಶಸ್ತ್ರ ಚಿಕಿತ್ಸೆ ಇದ್ದರೂ, ಇದನ್ನು ಮಾಡಿಸುವುದಕ್ಕಿಂತ ಮಾಡಿಸದೇ ಇದ್ದರೆ ಒಳ್ಳೆಯದು. ಆರು ಬೆರಳು ಇರುವುದರಿಂದ ನಿಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ಒಂದು ವೇಳೆ ತೆಗೆದ ಮೇಲೆ ತೊಂದರೆ ಕಾಣಿಸಬಹುದು.

ಚಿಕಿತ್ಸೆ

ಆರು ಬೆರಳು ಯಾವ ಭಾಗದಲ್ಲಿ ಬೆಳೆದಿದೆ ಅದರ ಮೇಲೆ ಅದನ್ನು ತೆಗೆಯಬೇಕಾ, ಬೇಡ್ವಾ? ಎಂದು ನಿರ್ಧರಿಸಬಹುದು. ಕಿರು ಬೆರಳು ಹಾಗೂ ಹೆಬ್ಬರಳಿನ ಸಮೀಪ ಆರನೇ ಬೆರಳಿದ್ದರೆ ತೆಗೆಯುವ ಅಗ್ಯತವಿಲ್ಲ, ಮಧ್ಯ ಬೆರಳಿನ ಸಮೀಪ ಚಿಕ್ಕ ಆರನೇ ಬೆರಳಿದ್ದರೆ ಕೈ ಆಕರ್ಷಕವಾಗಿ ಕಾಣುವುದಿಲ್ಲ ಎಂದು ಬಯಸುವವರು ಮಾತ್ರ ತೆಗೆಯಬಹುದು. ಆರು ಬರಳಿದ್ದರೆ ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಇನ್ನು ಸೌಂದರ್ಯದ ದೃಷ್ಟಿಯಿಂದ ನೋಡುವುದಾದರೆ ಮಾತ್ರ ತೆಗಿಸಬಹುದು.

ಆರನೇ ಬೆರಳು ತೆಗೆಯಲು ಶಸ್ತ್ರಕ್ರಿಯೆಯಲ್ಲಿರುವ ಆಯ್ಕೆಗಳು

* ಬೆರಳಗೆ ಅಂಟಿಕೊಂಡಿರುವ ಆರನೇ ಬೆರಳನ್ನು ತೆಗೆದು, ನಂತರ ಪ್ರಮುಖ ಬೆರಳಿನ ಆರೈಕೆ ಮಾಡುವುದು.

* ಆರನೇ ಬೆರಳು ಹಾಗೂ ಅದಕ್ಕೆ ಕೊಂಡಂತೆ ಇರುವ ಎರಡ ಬೆರಳುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹೊಸ ಬೆರಳುಗಳು ಹುಟ್ಟುವಂತೆ ಮಾಡುವುದು.

ಆರು ಬೆರಳುಗಳಿದ್ದು ಅದನ್ನು ತೆಗೆಸಲು ಇಚ್ಛೆ ಪಡುವುದಾದರೆ ಮಕ್ಕಳಿಗೆ ಎರಡು ವರ್ಷದೊಳಗೆ ಮಾಡುವುದು ಒಳ್ಳೆಯದು.

English summary

Polydactyly (6 fingers) Causes, Symptoms And Treatment

Polydactyly is a condition in which a person has one or more extra fingers or toes and it can occur in one or both hands or feet. It is estimated that polydactyly occurs 1 in every 700-1,000 live births
Story first published: Saturday, December 14, 2019, 16:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X