For Quick Alerts
ALLOW NOTIFICATIONS  
For Daily Alerts

ನಿಮ್ಮಲ್ಲಿ ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಇದೆಯೇ ಎಂದು ಈ ಹೊಸ ಟೆಸ್ಟ್ ಹೇಳುತ್ತೆ!

|

ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ಜನರಿಗೆ ಈ ಕೊರೊನಾ ಕಾಟ ಯಾವಾಗಪ್ಪಾ ಮುಗಿಯುವುದು ಎನ್ನುವಂತಾಗಿದೆ. ಒಟ್ಟಿನಲ್ಲಿ ನಾವೆಲ್ಲಾ ಕೊರೊನಾ ಜೊತೆ ಬದುಕುವುದು ಕಲಿಯಬೇಕಾಗಿದೆ ಅಂದ್ರೆ ಕೊರೊನಾ ಬರದಂತೆ ಮುನ್ನೆಚ್ಚರಿಕೆವಹಿಸಿ ನಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಬೇಕಾಗಿದೆ.

ಕೊರೊನಾ ವಿರುದ್ಧ 2 ಡೋಸ್‌ ಕೋವಿಡ್‌ ಲಸಿಕೆ ತೆಗೆದುಕೊಂಡವರಿಗೆ ಕೊರೊನಾದಿಂದ ಅಪಾಯ ಕಡಿಮೆ, ಆದರೆ ಕೆಲವರಿಗೆ ಲಸಿಕೆ ಪಡೆದು ಕೊಂಡರೂ ಕೊರೊನಾ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಮುನ್ನೆಚ್ಚರಿಕೆವಹಿಸಬೇಕಾಗಿದೆ. ನಾವು ಕೋವಿಡ್‌ 19 ಲಸಿಕೆ ಪಡೆದ ಮೇಲೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಇದೆಯೇ, ಇಲ್ಲವೇ ಎಂದು ಕಂಡು ಹಿಡಿಯುವುದು ಹೇಗೆ ಎಂಬುವುದಕ್ಕೂ ಪರಿಹಾರ ಸಿಕ್ಕಿದೆ, ಹೌದು ಅಮೆರಿಕ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಪತ್ತೆ ಹಚ್ಚಲು ಟೆಸ್ಟ್‌ ಕಂಡು ಹಿಡಿದಿದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ರೋಗ ನಿರೋಧಕ ಶಕ್ತಿ ಪತ್ತೆ ಹಚ್ಚಲು ಟೆಸ್ಟ್

ರೋಗ ನಿರೋಧಕ ಶಕ್ತಿ ಪತ್ತೆ ಹಚ್ಚಲು ಟೆಸ್ಟ್

ಇದು ತುಂಬಾ ಸರಳವಾದ ಟೆಸ್ಟ್‌ ಆಗಿದೆ. ಈ ಟೆಸ್ಟ್‌ ಮಾಡಿಸುವುದರಿಂದ ಕೋವಿಡ್‌ 19ನಿಂದ ಹೆಚ್ಚಿನ ಸುರಕ್ಷತೆ ಕೂಡ ಸಿಗುವುದು. ಈ ಟೆಸ್ಟ್ ಮೂಲಕ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಎಂದು ತಿಳಿದು ಬಂದರೆ ಬೂಸ್ಟರ್‌ ತೆಗೆದುಕೊಳ್ಖಬಹುದಾಗಿದೆ. ಹೀಗೆ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು.

ಈ ಟೆಸ್ಟ್‌ ಹೇಗೆ ಸಹಾಯ ಮಾಡುತ್ತೆ?

ಈ ಟೆಸ್ಟ್‌ ಹೇಗೆ ಸಹಾಯ ಮಾಡುತ್ತೆ?

ರೋಗ ನಿರೋಧಕ ಸಾಮರ್ಥ್ಯ ಬಗ್ಗೆ ತಿಳಿಯಲು ಟೆಸ್ಟ್ ಮಾಡುವುದರಿಂದ ಜನರಿಗೆ ತಮ್ಮ ದೇಹದ ಸಾಮರ್ಥ್ಯದ ಬಗ್ಗೆ ತಿಳಿಯುತ್ತೆ, ಕೊರೊನಾ ಹೆಚ್ಚುತ್ತಿರುವಾಗ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆಯೋ ಅವರು ಹೆಚ್ಚು ಹೊರಗಡೆ ಓಡಾಡದೆ ಇರುವುದು ಒಳ್ಳೆಯದು ಅಲ್ಲದೆ ಹೋಗಲೇ ಬೇಕಾದ ಪರಿಸ್ಥಿತಿ ಬಂದ್ರೆ ಕೋವಿಡ್‌ 19 ಮುನ್ನೆಚ್ಚರಿಕೆವಹಿಸಬಹುದು.

ಈ ಟೆಸ್ಟ್‌ ಹೇಗೆ ಮಾಡಲಾಗುವುದು?

ಈ ಟೆಸ್ಟ್‌ ಹೇಗೆ ಮಾಡಲಾಗುವುದು?

ಈ ಟೆಸ್ಟ್‌ನಲ್ಲಿ ವೈರಲ್‌ ಸ್ಪೈಕ್‌ ಪ್ರೊಟೀನ್‌ನ ತೆಗೆದು ಪರೀಕ್ಷೆ ಮಾಡಲಾಗುವುದು. ಆಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದೆಯೇ, ಇಲ್ಲವೇ ಎಂದು ತಿಳಿಯುವುದು. ಸಂಶೋಧಕರು ಇದರ ಪೇಟೆಂಟ್‌ಗೆ ಪೈಲ್‌ ಮಾಡಿದ್ದಾರೆ. ಈಗ ಈ ಟೆಸ್ಟ್‌ ಅನ್ನು ಅಮೆರಿಕದ FDAದ ಅನುಮತಿಗೆ ಕಳುಹಿಸಲಾಗಿದೆ.

ಈ ಬಗೆಯ ಪರೀಕ್ಷೆ ಕೊರೊನಾದ ಬಗ್ಗೆ ಮತ್ತಷ್ಟು ಮುನ್ನೆಚ್ಚರಿಕೆವಹಿಸಲು ಸಹಕಾರಿಯಾಗಿದೆ. ಈ ಪರೀಕ್ಷೆಯಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಬಗ್ಗೆ ತಿಳಿದುಕೊಂಡರೆ ಕಾಯಿಲೆ ಬರದಂತೆ ನಾವು ತುಂಬಾ ಮುನ್ನೆಚ್ಚರಿಕೆವಹಿಸಲು ಸಹಕಾರಿಯಾಗುವುದು.

English summary

Patriot Umesh Gopinath Jadav’s Jouney To Build Memorial For Army Martyrs

This test will help you to know do you have immunity against COVID-19 or not,Read on...
Story first published: Friday, August 12, 2022, 17:17 [IST]
X
Desktop Bottom Promotion