For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನೂ ಕಾಡುವ ಅಸ್ಥಿ ಸಂಧಿವಾತ: ಕಾರಣ ಏನು, ತಡೆಗಟ್ಟುವುದು ಹೇಗೆ?

|

ಅಸ್ಥಿ ಸಂಧಿವಾತ ಎನ್ನುವುದು ಸಾಮಾನ್ಯವಾಗಿ ಕಂಡು ಬರುವ ಸಂಧಿವಾತತ ಸಮಸ್ಯೆಯಾಗಿದೆ. ವಿಶ್ವದಲ್ಲಿ ಸುಮಾರು 50 ಮಿಲಿಯನ್ ವಯಸ್ಕರು ಹಾಗೂ 3 ಲಕ್ಷದಷ್ಟು ಮಕ್ಕಳು ಎಂದು ಆರ್ಥರೈಟಿಸ್ ಫೌಂಡೇಷನ್ ಹೇಳಿದೆ.

Osteoarthritis Causes, Symptoms, Diagnosis, Treatment And Prevention

ಸಂಧಿವಾತ ಸಮಸ್ಯೆ ಬಗ್ಗೆ ಹೇಳುವುದಾದರೆ ಸುಮಾರು 100ಕ್ಕೂ ಹೆಚ್ಚು ಬಗೆಗಳಿವೆ. ಇಲ್ಲಿ ನಾವು ಅಸ್ಥಿ ಸಂಧಿವಾತದ ಬಗ್ಗೆ ಹೇಳುತ್ತಿದ್ದೇವೆ.

ಅಸ್ಥಿ ಸಂಧಿವಾತ( Osteoarthritis)

ಅಸ್ಥಿ ಸಂಧಿವಾತ( Osteoarthritis)

ಅಸ್ಥಿ ಸಂಧಿವಾತ ಎನ್ನುವುದು ಮೂಳೆ ಸವೆಯುವ ಕಾಯಿಲೆಯಾಗಿದ್ದು ಮಂಡಿ ಮೂಳೆ ಸವೆಯುವುದು ಈ ಕಾಯಿಲೆಯ ಲಕ್ಷಣವಾಗಿದೆ. ಸಾಮಾನ್ಯವಾಗಿ ಸಂಧಿವಾತ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಕಂಡು ಬರುತ್ತದೆ. ಆದರೆ ಈ ಸಂಧಿವಾತ ಮಕ್ಕಳಲ್ಲಿಯೂ ಕಂಡು ಬರುವುದು.

ಅಸ್ಥಿ ಸಂಧಿವಾತ ಹೇಗೆ ಉಂಟಾಗುತ್ತದೆ?

ಅಸ್ಥಿ ಸಂಧಿವಾತ ಹೇಗೆ ಉಂಟಾಗುತ್ತದೆ?

ಸಂಧಿಯ ಕಾರ್ಟಿಲೆಜ್‌ ದುರ್ಬಲವಾಗುವುದನ್ನು ಅಸ್ಥಿ ಸಂಧಿವಾತ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಈ ಸಮಸ್ಯೆ ಮಧ್ಯ ವಯಸ್ಸು ದಾಟಿದ ಮೇಲೆ ಕಂಡು ಬರುತ್ತದೆ. ಸೊಂಟದ ಕೆಳಭಾಗ, ಮೊಣಕಾಲು, ಹೆಬ್ಬರುಗಳ ಕೀಲುಗಳಲ್ಲಿ ನೋವು ಹಾಗೂ ಬಿಗಿತ ಉಂಟಾಗುವುದು. ಈ ಸಮಸ್ಯೆ 55 ವರ್ಷದೊಳಗಿನ ಪುರುಷರಲ್ಲಿ, 55 ವರ್ಷ ದಾಟಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವುದು.

ಅಸ್ಥಿ ಸಂಧಿವಾತಕ್ಕೆ ಕಾರಣಗಳೇನು?

ಅಸ್ಥಿ ಸಂಧಿವಾತಕ್ಕೆ ಕಾರಣಗಳೇನು?

  • ಮೈ ತೂಕ ಹೆಚ್ಚಾದರೆ ಈ ಸಮಸ್ಯೆ ಕಂಡು ಬರುವುದು.
  • ಅತಿಯಾದ ವ್ಯಾಯಾಮ ಮಾಡುವುದು, ಹೆಚ್ಚು ಸಮಯ ನಿಂತು ಕೆಲಸ ಮಾಡುವುದು, ಮೆಟ್ಟಿಲುಗಳನ್ನು ತುಂಬಾ ಹತ್ತುವುದು, ಹೆಚ್ಚಾಗಿ ನಡೆಯುವುದು ಇವು ಕೂಡ ಅಸ್ಥಿ ಸಂಧಿವಾತ ಬರಲು ಕಾರಣ.
  • ಕೆಲವರಲ್ಲಿ ಈ ಸಮಸ್ಯೆ ವಂಶಪಾರಂಪರ್ಯವಾಗಿ ಕಂಡು ಬರುತ್ತದೆ.
  • ಅಸ್ಥಿ ಸಂಧಿವಾತದ ರೋಗ ತೀವ್ರತೆಯನ್ನು ಹೀಗೆ ವಿಂಗಡಿಸಬಹುದು

    ಅಸ್ಥಿ ಸಂಧಿವಾತದ ರೋಗ ತೀವ್ರತೆಯನ್ನು ಹೀಗೆ ವಿಂಗಡಿಸಬಹುದು

    ಸ್ಟೇಜ್ 1: ಈ ಹಂತದಲ್ಲಿ ಮೂಳೆಗಳಲ್ಲಿ ಸಣ್ಣದಾಗಿ ಸ್ಪರ್‌ ಬೆಳವಂಣಿಗೆ ಇರುವುದರಿಂದ ಅಷ್ಟೇ ನು ನೋವು ಕಾಣಿಸಿಕೊಳ್ಳುವುದಿಲ್ಲ.

    ಸ್ಟೇಜ್ 2: ಈ ಹಂತದಲ್ಲಿ ಮೂಳೆಗಳಿಗೆ ಸ್ವಲ್ಪ ಹಾನಿಯುಂಟಾಗಿರುತ್ತದೆ. ಇದರಿಂದಾಗಿ ನಡೆದಾಗ, ಓಡಿದಾಗ, ತುಂಬಾ ಹೊತ್ತು ನಿಂತಾಗ ಕಾಲುಗಳಲ್ಲಿ ಬಿಗಿತ, ನೋವು ಉಂಟಾಗುವುದು.

    ಸ್ಟೇಜ್ 3: ಈ ಹಂತದಲ್ಲಿ ಮೂಳೆಗಳ ನಡುವೆ ಇರುವ ಕಾರ್ಟಿಲೆಜ್‌ ದುರ್ಬಲವಾಗುವುದು. ಈ ಹಂತದಲ್ಲಿ ನಡೆದಾಡುವಾಗ, ತುಂಬಾ ಹೊತ್ತು ಕೂತು ಎದ್ದೇಳುವಾಗ ನೋವು ಕಂಡು ಬರುವುದು.

    ಸ್ಟೇಜ್ 4: ಸಂಧಿವಾತ ಅಧಿಕವಾದಾಗ ತುಂಬಾ ನೋವು ಕಂಡು ಬರುವುದು. ಈ ಹಂತದಲ್ಲಿ ಕಾರ್ಟಿಲೆಜ್ ಸಂಪೂರ್ಣ ದುರ್ಬಲವಾಗುತ್ತದೆ, ಇದರಿಂದಾಗಿ ಸೈನೋವಿಯಲ್ ದ್ರವ ಸಂಪೂರ್ಣ ಕಡಿಮೆಯಾಗುವುದು.

    ಅಸ್ಥಿ ಸಂಧಿವಾತದ ಲಕ್ಷಣಗಳು

    ಅಸ್ಥಿ ಸಂಧಿವಾತದ ಲಕ್ಷಣಗಳು

    • ಊತ
    • ಓಡಾಡುವಾಗ ತುಂಬಾ ನೋವು, ಮಲಗಿ ವಿಶ್ರಾಂತಿ ಪಡೆಯುವಾಗ ನೋವು ಕಡಿಮೆಯಾಗುವುದು.
    • ಮಂಡಿ ಮೂಳೆಯಲ್ಲಿ ಬಿಸಿಯ ಅನುಭವ
    • ಮಂಡಿ ಮೂಳೆ ಬಿಗಿಯಾಗುವುದು
    • ಮಂಡಿ ಅಲ್ಲಾಡಿಸಲು ಕಷ್ಟವಾಗುವುದು, ಮೆಟ್ಟಿಲು ಹತ್ತುವಾಗ ತುಂಬಾ ನೋವು ಉಂಟಾಗುವುದು.
    • ಕಾಲುಗಳನ್ನು ಅಲುಗಾಡಿಸುವಾಗ ಮಂಡಿ ಮೂಳೆಗಳಲ್ಲಿ ಟಕ್‌ ಟಕ್ ಅಂತ ಮೂಳೆ ಮುರಿತದ ಶಬ್ದ ಉಂಟಾಗುವುದು.
    • ಬೋನ್ ಸ್ಪರ್ಸ್ (ಮೂಳೆ ತುದಿಯಲ್ಲಿ ಮೂಳೆ ಬೆಳೆಯುವುದು)
    • ಚಿಕಿತ್ಸೆ

      ಚಿಕಿತ್ಸೆ

      ಇದನ್ನು ಎಕ್ಸ್‌ರೇ, ಎಂಆರ್‌ಐ, ಜಾಯಿಂಟ್ ಫ್ಲೂಯಿಡ್ ಟೆಸ್ಟ್, ರಕ್ತ ಪರೀಕ್ಷೆ ಮೂಲಕ ಪತ್ತೆ ಹಚ್ಚಬಹುದು.

      ಅಸ್ಥಿ ಸಂಧಿವಾತ ಮೊದಲ ಹಂತದಲ್ಲಿ ಇದ್ದರೆ ಔಷಧಿಗಳ ಮೂಲಕ ಕಡಿಮೆ ಮಾಡಬಹುದು. ಎರಡನೇ ಹಂತದಲ್ಲಿ ಇದ್ದರೆ ಔಷಧಿ ಜೊತೆ knee brace ಧರಿಸಿದರೆ ಕಡಿಮೆಯಾಗುವುದು. ಮೂರನೇ ಹಂತದಲ್ಲಿ ಇವುಗಳ ಜೊತೆಗೆ ನೋವು ನಿವಾರಕ ಚುಚ್ಚು ಮದ್ದಗಳನ್ನು ನೀಡಬೇಕಾಗುತ್ತದೆ. ನಾಲ್ಕನೇ ಹಂತದಲ್ಲಿ ಮಂಡಿ ಬದಲಾಯಿಸುವ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ.

      ಇನ್ನು ಈ ಸಮಸ್ಯೆಗೆ ಆಯುರ್ವೇದದಲ್ಲೂ ಚಿಕಿತ್ಸೆ ನೀಡಲಾಗುವುದು. ಪಂಚಕರ್ಮ ಚಿಕಿತ್ಸೆಗಳಾದ ಅಭ್ಯಂಗ, ಸ್ವೇದನ ಕರ್ಮ, ಜಾನುಬಸ್ತಿ, ಬಸ್ತಿ ಕರ್ಮ ಮೊದಲಾದ ಚಿಕಿತ್ಸೆಗಳ ಮೂಲಕ ಈ ನೋವನ್ನು ನಿಯಂತ್ರಣಕ್ಕೆ ತರಬಹುದು.

      ಅಸ್ಥಿ ಸಂಧಿವಾತ ಬಾರದಂತೆ ತಡೆಗಟ್ಟುವುದು ಹೇಗೆ?

      ಅಸ್ಥಿ ಸಂಧಿವಾತ ಬಾರದಂತೆ ತಡೆಗಟ್ಟುವುದು ಹೇಗೆ?

      • ಆರೋಗ್ಯಕರ ಆಹಾರಕ್ರಮ ಪಾಲಿಸಿ
      • ನಿಯಮಿತವಾಗಿ ವ್ಯಾಯಾಮ ಮಾಡಿ
      • ಮಂಡಿ ಮೂಳೆಗಳ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ.
      • ತುಂಬಾ ಹೊತ್ತು ನಿಲ್ಲುವುದು ಮಾಡಬೇಡಿ, ಸ್ವಲ್ಪ ಮಂಡಿಗೆ ವಿರಾಮ ನೀಡಿ.
English summary

Osteoarthritis Causes, Symptoms, Diagnosis, Treatment And Prevention

Arthritis is a common condition that affects more than 50 million adults and 300,000 children, as per the Arthritis Foundation. There are more than 100 types of arthritis and one of the most common types of arthritis is osteoarthritis, which we are going to discuss in this article.
X
Desktop Bottom Promotion