For Quick Alerts
ALLOW NOTIFICATIONS  
For Daily Alerts

ಆರೋಗ್ಯ ಮಾತ್ರವಲ್ಲದೆ ತ್ವಚೆಯನ್ನೂ ಅಂದಗೊಳಿಸುವ ಅಯೋಡಿನ್

|

ಸುಮಾರು 1983 ರಲ್ಲಿ ಭಾರತದಾದ್ಯಂತ ಅಯೋಡಿನ್ ಬೆರೆಸಿದ ಉಪ್ಪನ್ನೇ ಮಾರಬೇಕೆಂಬ ಕಾನೂನು ಅನ್ವಯಗೊಂಡಿತು. ಇದಕ್ಕೆ ಪ್ರಮುಖ ಕಾರಣ ಅಯೋಡಿನ್ ಕೊರತೆಯಿಂದ ಎದುರಾಗುವ ಗಳಗಂಡ ರೋಗ (ಗಾಯ್ಟರ್) ಎಂಬುದಾಗಿತ್ತು. ಆದರೆ ಈ ಅಯೋಡೀಕರಣದ ಪ್ರಕ್ರಿಯೆಯಿಂದ ಉಪ್ಪು ತಯಾರಿಕಾ ಘಟಕಗಳು ಅತ್ಯಂತ ಲಾಭದಾಯಕ ಉದ್ಯಮವಾದದ್ದಂತೂ ಸುಳ್ಳಲ್ಲ.

Iodine Benefits For Skin And Health

ಅದುವರೆಗೂ ಕೇವಲ ಯಂತ್ರ, ಸೋಪುಗಳಲ್ಲಿಯೇ ಮುಳುಗಿದ್ದ ಟಾಟಾದಂತಹ ಸಂಸ್ಥೆಯೂ ಉಪ್ಪಿನ ತಯಾರಿಕೆಗೆ ಕೈ ಹಾಕಿದಾಗ ಅಗ್ಗದ ಉಪ್ಪಿನ ಹಿಂದೆ ಅದೆಂತಹ ಲಾಭವಿದೆ ಎಂದು ಗೊತ್ತಾಗಿರಬೇಕು. ವಾಸ್ತವದಲ್ಲಿ, ಲಾಭದ ಅಂಶವನ್ನು ಹೊರತುಪಡಿಸಿದರೆ ಅಯೋಡಿನ್ ನಮಗೆ ನಿಜಕ್ಕೂ ಅಗತ್ಯವಾಗಿ ಬೇಕಾಗಿರುವ ಖನಿಜವಾಗಿದೆ.

ಉಪ್ಪಿನ ಮೂಲಕ ಕಡ್ಡಾಯವಾಗಿ ಸೇವಿಸುವಂತೆ ಮಾಡಲಾದ ಮೂಲಕ ಕೇವಲ ಗಳಗಂಡ ರೋಗವನ್ನು ಮಾತ್ರವಲ್ಲ, ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನ ಮತ್ತು ರಕ್ಷಣೆಗಳನ್ನು ಅಯೋಡಿನ್ ಮೂಲಕ ಪಡೆಯಲಾಗಿದೆ. ಬನ್ನಿ, ಏನೆಲ್ಲಾ ಪ್ರಯೋಜನಗಳನ್ನು ನಾವು ಪಡೆಯುತ್ತಿದ್ದೇವೆ ಎಂಬುದನ್ನು ನೋಡೋಣ:

1. ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸುತ್ತದೆ

1. ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸುತ್ತದೆ

ಅಯೋಡಿನ್ ನಿಮ್ಮ ದೇಹದ ಜೀವರಾಸಾಯನಿಕ ಕ್ರಿಯೆಯ ಮೇಲೆ ಪ್ರಭಾವ ಬೀರುವ ರಸದೂತಗಳ ಉತ್ಪಾದನೆಗೆ ಸಹಾಯ ಮಾಡುವಂತೆ ನಿಮ್ಮ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ನಡೆಯುವಂತೆ ಅಥವಾ ನಿಲ್ಲಿಸುವಂತೆ ಮಾಡುತ್ತದೆ. ಅಯೋಡಿನ್ ಆಹಾರವನ್ನು ಉತ್ತಮವಾಗಿ ಹೀರಿಕೊಳ್ಳಲು ಮತ್ತು ಅದರ ನಂತರದ ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಕ್ಯಾಲೊರಿಗಳು ಬಳಕೆಗೊಂಡು ಶಕ್ತಿಯಾಗಿ ಪರಿವರ್ತಿಸಲ್ಪಡುತ್ತವೆ, ಇದರಿಂದಾಗಿ ತೂಕ ಇಳಿಕೆಯ ಪ್ರಯತ್ನಗಳು ಸಫಲಗೊಳ್ಳುತ್ತವೆ. ಇವು ಬಳಸಲ್ಪಡದೇ ಇದ್ದಾಗ ಇವು ಕೊಬ್ಬುಗಳಾಗಿ ಸೊಂಟದಲ್ಲಿ ಗರಿಷ್ಟ ಮತ್ತು ಉಳಿದಂತೆ ಇಡಿಯ ದೇಹದಲ್ಲಿ ಸಂಗ್ರಹವಾಗುತ್ತವೆ, ಇದು ತೂಕ ಹೆಚ್ಚಾಗಲು ಮತ್ತು ಆಲಸ್ಯತನಕ್ಕೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ನಿಮ್ಮನ್ನು ದಿನವಿಡೀ ಸಕ್ರಿಯ ಮತ್ತು ಶಕ್ತಿಯುತವಾಗಿರಿಸುತ್ತದೆ ಮತ್ತು ರಾತ್ರಿಯಲ್ಲಿ ಸುಖಕರ ನಿದ್ರೆಗೆ ಕಾರಣವಾಗುತ್ತದೆ, ಇದರಿಂದಾಗಿ ಖಿನ್ನತೆ ಮತ್ತು ನಿದ್ರಾಹೀನತೆಯನ್ನು ನಿವಾರಿಸಲು ಪರೋಕ್ಷವಾಗಿ ನೆರವಾಗುತ್ತದೆ.

2. ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನು ಹೆಚ್ಚಿಸುತ್ತದೆ

2. ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನು ಹೆಚ್ಚಿಸುತ್ತದೆ

ಥೈರಾಯ್ಡ್ ಗ್ರಂಥಿಯು ಥೈರಾಕ್ಸಿನ್ ಮತ್ತು ಟ್ರಯೋಡೋಥೈರೋನೈನ್ (thyroxine and triiodothyronine)ನಂತಹ ರಸದೂತಗಳನ್ನು ಉತ್ಪಾದಿಸಲು ಅಯೋಡಿನ್ ಅನ್ನು ಬಳಸುತ್ತದೆ, ಇದು ವಿವಿಧ ಜೀವ ಉಳಿಸುವ ಕಾರ್ಯವಿಧಾನಗಳ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಅಯೋಡಿನ್ ಕೊರತೆಯು ಥೈರಾಯ್ಡ್ ಗ್ರಂಥಿಯನ್ನು ಹಿಗ್ಗಿಸಲು ಕಾರಣವಾಗುತ್ತದೆ. ತನ್ಮೂಲಕ ಕ್ರೆಟಿನಿಸಂ, ಹೈಪೋಥೈರಾಯ್ಡಿಸಮ್ ಮತ್ತು ಗಾಯಿಟರ್ (cretinism, hypothyroidism, and goiter) ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಥೈರಾಯ್ಡ್ ಗ್ರಂಥಿಗೆ ಅದರ ಸರಿಯಾದ ಕಾರ್ಯವನ್ನು ನಿರ್ವಹಿಸಲು ಅನೇಕ ಪೋಷಕಾಂಶಗಳ ಅಗತ್ಯವಿದೆ ಮತ್ತು ಅಯೋಡಿನ್ ಇವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿದೆ. ಅಯೋಡಿನ್ ಕೊರತೆಯು ಅಸಹಜ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ, ಇದು ಸ್ಮರಣ ಶಕ್ತಿ ಕುಂದುವಿಕೆ, ಕೂದಲು ಉದುರುವಿಕೆ ಮತ್ತು ಅಲರ್ಜಿಯಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.

3. ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

3. ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಸಂತಾನೋತ್ಪತ್ತಿ ಅಂಗಗಳು ನೈಸರ್ಗಿಕವಾಗಿ ಬೆಳೆದು ಪ್ರಬುದ್ಧವಾಗಲು ಅಯೋಡಿನ್ ಅಗತ್ಯವಿದೆ. ಅಲ್ಲದೇ, ಅಯೋಡಿನ್ ಸುಲಭವಾದ ಗರ್ಭಧಾರಣೆಯನ್ನು ಕನಿಷ್ಠ ತೊಡಕುಗಳೊಂದಿಗೆ ಶಕ್ತಗೊಳಿಸುತ್ತದೆ ಮತ್ತು ಹುಟ್ಟಲಿರುವ ಮಗುವನ್ನು ನರವೈಜ್ಞಾನಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಗರ್ಭವತಿಯರು ಅಯೋಡಿನ್ ಅನ್ನುಸೂಕ್ತ ಪ್ರಮಾಣದಲ್ಲಿ ಸೇವಿಸುವುದರಿಂದ ತಾಯಿ ಮತ್ತು ಮಗುವನ್ನು ಆರೋಗ್ಯವಾಗಿರಿಸುತ್ತದೆ, ವಿಶೇಷವಾಗಿ ಹುಟ್ಟಲಿರುವ ಮಗುವಿನ ಆರೋಗ್ಯ. ಏಕೆಂದರೆ ಇದು ಮಗುವಿನ ಮಾನಸಿಕ ಮತ್ತು ದೈಹಿಕ ಆರೋಗ್ಯದ ನಿರ್ಣಾಯಕ ಅಂಶವಾಗಿದೆ.

ಗರ್ಭವತಿಯರು ತಮ್ಮ ಮತ್ತು ಹುಟ್ಟಲಿರುವ ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಅಯೋಡಿನ್ ಅಗತ್ಯವನ್ನು ಪೂರೈಸಲು ಅಯೋಡಿನ್ ಪೂರಕಗಳನ್ನು ಸೇವಿಸುವಂತೆ ಪ್ರಸೂತಿ ತಜ್ಞರು ಶಿಫಾರಸು ಮಾಡುತ್ತಾರೆ. ಅಯೋಡಿನ್ ಅನ್ನು ಎಚ್ಚರಿಕೆಯಿಂದ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಕಡಿಮೆ ಜನನ ತೂಕ, ಅವಧಿಪೂರ್ವತೆ, ಮಗು ಹುಟ್ಟುವಾಗಲೇ ಸತ್ತಿರುವುದು, ಆಟಿಸಂ ಮತ್ತು ಇತರ ಗರ್ಭಧಾರಣೆಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

4. ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

4. ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಅಯೋಡಿನ್ ಇರುವ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈ ಮೂಲಕ, ಅಯೋಡಿನ್ ನಿಮ್ಮ ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ನಿಮ್ಮ ದೇಹವನ್ನು ಹೃದ್ರೋಗಗಳು ಮತ್ತು ಕ್ಯಾನ್ಸರ್ ನಂತಹ ಮಾರಣಾಂತಿಕ ಸಮಸ್ಯೆಗಳಿಂದ ರಕ್ಷಿಸುವ ಮೂಲಕ ಬಲವಾದ ರಕ್ಷಣೆಯನ್ನು ನಿರ್ಮಿಸುತ್ತದೆ. ಅಯೋಡಿನ್ ಕೊರತೆಯು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಅದಕ್ಕಾಗಿಯೇ ಬಲವಾದ ರೋಗನಿರೋಧಕ ವ್ಯವಸ್ಥೆಗೆ ಸಾಕಷ್ಟು ಅಯೋಡಿನ್‍ನ ಸೇವನೆ ಅಗತ್ಯವಾಗಿರುತ್ತದೆ.

5. ಹೈಪೋಥೈರಾಯ್ಡಿಸಮ್ ಎದುರಾಗುವುದರಿಂದ ತಡೆಯುತ್ತದೆ

5. ಹೈಪೋಥೈರಾಯ್ಡಿಸಮ್ ಎದುರಾಗುವುದರಿಂದ ತಡೆಯುತ್ತದೆ

ಥೈರಾಯ್ಡ್ ಗ್ರಂಥಿ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಸ್ರವಿಸದೇ ಇದ್ದಾಗ ಈ ಸ್ಥಿತಿಗೆ ಹೈಪೋಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ. (ಇದಕ್ಕೆ ವಿರುದ್ದವಾಗಿ ಅಗತ್ಯಕ್ಕೂ ಹೆಚ್ಚು ಸ್ರಾವ ಕಂಡುಬಂದರೆ ಇದಕ್ಕೆ ಹೈಪರ್‍‍ಥೈರಾಯ್ಡಿಸಮ್ ಎಂದು ಕರೆಯಲಾಗುತ್ತದೆ) ಆಹಾರದ ಮೂಲಕ ಸಾಕಷ್ಟು ಅಯೋಡಿನ್ ಅನ್ನು ದೇಹ ಪಡೆದಾಗ ಹೈಪೋಥೈರಾಯ್ಡಿಸಮ್ ಸ್ಥಿತಿ ಎದುರಾಗುವ ಸಾಧ್ಯತೆ ತಗ್ಗುತ್ತದೆ. ನಮ್ಮ ಗಂಟಲಿನಲ್ಲಿ ಧ್ವನಿಪೆಟ್ಟಿಗೆಯ ಮೇಲಿರುವ ಚಿಟ್ಟೆಯಾಕಾರದ ಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆ.

ಈ ವಿಸ್ತರಣೆಯು ದೇಹದ ಅನೇಕ ಕಾರ್ಯಗಳನ್ನು ನಿಧಾನಗೊಳಿಸಲು ಕಾರಣವಾಗುತ್ತದೆ ಮತ್ತು ಭಾರೀ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಚರ್ಮವನ್ನು ಒಣಗಿಸಲು, ಕಡಿಮೆ ಸಾಂದ್ರತೆ, ಸೆಳೆತ, ಊತ, ಮಲಬದ್ಧತೆ ಮತ್ತು ವಿಪರೀತ ಸಂದರ್ಭಗಳಲ್ಲಿ, ಕೋಮಾ ಮತ್ತು ಹೃದಯ ವೈಫಲ್ಯಕ್ಕೂ ಕಾರಣವಾಗುತ್ತದೆ. ದೇಹದಲ್ಲಿ ಸಾಕಷ್ಟು ಪ್ರಮಾಣದ ಅಯೋಡಿನ್ ಇರುವುದು ದೇಹದ ಮೇಲೆ ಅಂತಹ ತೀವ್ರತರದ ಕಾಯಿಲೆಗಳು ಎದುರಾಗುವ ಸಾಧ್ಯತೆಗಳನ್ನು ನಿವಾರಿಸುತ್ತದೆ.

6. ಫೈಬ್ರೊಸಿಸ್ಟಿಕ್ ಕಾಯಿಲೆಗೆ ಚಿಕಿತ್ಸೆ ನೀಡಲು ನೆರವಾಗಬಹುದು

6. ಫೈಬ್ರೊಸಿಸ್ಟಿಕ್ ಕಾಯಿಲೆಗೆ ಚಿಕಿತ್ಸೆ ನೀಡಲು ನೆರವಾಗಬಹುದು

ಸ್ತನಗಳಲ್ಲಿ ಚಿಕ್ಕ ಚಿಕ್ಕ ಗಂಟುಗಳು ಬೆಳೆಯುವ ಫೈಬ್ರೊಸಿಸ್ಟಿಕ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ಅಯೋಡಿನ್‌ ಸೇವನೆಯಿಂದ ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಅಯೋಡಿನ್ ಫೈಬ್ರೋಸಿಸ್ ಗಂಟುಗಳನ್ನು ಕಡಿಮೆ ಮಾಡುತ್ತದೆ ಮತ್ತು ಅದರೊಂದಿಗೆ ಬರುವ ನೋವು ಮತ್ತು ಆತಂಕದಿಂದ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ, ಫೈಬ್ರೋಸಿಸ್ ಅನ್ನು ಗುಣಪಡಿಸಲು ಆಧುನಿಕ ಮತ್ತು ಪರ್ಯಾಯ ಚಿಕಿತ್ಸೆಗಳಲ್ಲಿ ಅಯೋಡಿನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಅಯೋಡಿನ್ ಏಕಪ್ರಮಾಣದ ಮತ್ತು ಕ್ರಿಯಾತ್ಮಕ ಈಸ್ಟ್ರೊಜೆನ್ ರಸದೂತದ ಉತ್ಪಾದನೆಯನ್ನು ಶಕ್ತಗೊಳಿಸುತ್ತದೆ, ಇದು ಸ್ತನಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಸ್ತನಗಳಲ್ಲಿ ಗಂಟುಗಳು ಮತ್ತು ದ್ರಾಕ್ಷಿಗೊಂಚಲಿನಂತಹ ರಚನೆಯನ್ನು ನಿವಾರಿಸುತ್ತದೆ. ಈ ಮಾಹಿತಿಯನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆಗಳ ಅಗತ್ಯವಿದ್ದರೂ, ಪ್ರಾಥಮಿಕ ಪರೀಕ್ಷೆಗಳು ಅಯೋಡಿನ್ ಮತ್ತು ಫೈಬ್ರೊಸಿಸ್ಟಿಕ್ ಕಾಯಿಲೆ ಚಿಕಿತ್ಸೆಯ ನಡುವಿನ ಸಂಬಂಧವನ್ನು ಸಾಬೀತುಪಡಿಸಿವೆ.

7. ಕಲಿಕಾ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುತ್ತದೆ

7. ಕಲಿಕಾ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುತ್ತದೆ

ನೀವು ಸರಿಯಾಗಿ ಯೋಚಿಸಲು ಮತ್ತು ಗ್ರಹಿಸಲು ಸಾಧ್ಯವಾದರೆ, ನಿಮ್ಮ ದೇಹದಲ್ಲಿ ಸೂಕ್ತ ಪ್ರಮಾಣದ ಅಯೋಡಿನ್‌ ಇದೆ ಎಂದು ಪರಿಗಣಿಸಬಹುದು . ನಿಮ್ಮ ಮೆದುಳಿನ ಚಟುವಟಿಕೆಗಳಲ್ಲಿ ಕುಸಿತದ ಯಾವುದೇ ಚಿಹ್ನೆ ಇದ್ದರೆ, ತಕ್ಷಣ ನಿಮ್ಮ ದೇಹದ ಅಯೋಡಿನ್ ಮಟ್ಟವನ್ನು ಪರಿಶೀಲಿಸಿ. ಅಯೋಡಿನ್ ಸೇವನೆಯ ನಂತರ ಮಾನಸಿಕ ಕೌಶಲ್ಯಗಳಲ್ಲಿ ತ್ವರಿತ ಸುಧಾರಣೆ ಆಗಿರುವುದನ್ನು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಇದು ವಯಸ್ಕರಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ ಅರಿವಿನ ಮತ್ತು ಕಲಿಕಾ ಸಾಮರ್ಥ್ಯಗಳನ್ನು ಉತ್ತಮಗೊಳಿಸುತ್ತದೆ.

8. ರಸದೂತಗಳನ್ನು ನಿಯಂತ್ರಿಸುತ್ತದೆ

8. ರಸದೂತಗಳನ್ನು ನಿಯಂತ್ರಿಸುತ್ತದೆ

ಥೈರಾಯ್ಡ್ ಗ್ರಂಥಿಯು ನಿಮ್ಮ ದೇಹದಲ್ಲಿನ ಅನೇಕ ಹಾರ್ಮೋನುಗಳನ್ನು ಉತ್ಪಾದಿಸುವ ಮತ್ತು ನಿಯಂತ್ರಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಅಯೋಡಿನ್ ಪ್ರಮುಖ ಪಾತ್ರ ವಹಿಸುತ್ತದೆ, ಇದರಿಂದಾಗಿ ನಿಮ್ಮ ದೇಹದಲ್ಲಿ ಅಗತ್ಯವಿರುವ ರಸದೂತಗಳು ಸೂಕ್ತ ಪ್ರಮಾಣದಲ್ಲಿ ಮಾತ್ರ ಸ್ರವಿಕೆಯಾಗುವಂತೆ ನೋಡಿಕೊಳ್ಳುವ ಮೂಲಕ ಮತ್ತು ಅವು ಏರಿಳಿತಗೊಳ್ಳದಂತೆ ತಡೆಯುತ್ತದೆ. ಈ ರಸದೂತಗಳು ನಮ್ಮ ದೇಹದಲ್ಲಿನ ಬಹಳಷ್ಟು ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತವೆ, ಮತ್ತು ಇವುಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಅಯೋಡಿನ್ ಅತಿ ಅಗತ್ಯವಾಗಿ ಬೇಕಾಗಿರುವ ಖನಿಜವಾಗಿದೆ.

9. ವಿಕಿರಣದ ವಿರುದ್ಧ ರಕ್ಷಿಸುತ್ತದೆ

9. ವಿಕಿರಣದ ವಿರುದ್ಧ ರಕ್ಷಿಸುತ್ತದೆ

ಅಯೋಡಿನ್ ನಿಮ್ಮ ದೇಹದಲ್ಲಿನ ಥೈರಾಯ್ಡ್ ಗ್ರಂಥಿಯನ್ನು ವಿಕಿರಣಶೀಲ ಅಂಶಗಳನ್ನು ಹೀರಿಕೊಳ್ಳದಂತೆ ರಕ್ಷಿಸುತ್ತದೆ ಮತ್ತು ನಂತರದ ವಿಕಿರಣ ಗಾಯದಿಂದ ಗ್ರಂಥಿಯನ್ನು ರಕ್ಷಿಸುತ್ತದೆ. ವಿದ್ಯುತ್ ಸ್ಥಾವರದಲ್ಲಿ ಪರಮಾಣು ಸೋರಿಕೆ ಅಥವಾ ವಿಪತ್ತು ಸಂಭವಿಸಿದಲ್ಲಿ ಅಯೋಡಿನ್‌ನ ಈ ಗುಣ ಅತ್ಯಂತ ಅಗತ್ಯವಾಗಿ ಬೇಕಾಗುತ್ತದೆ. ಅಲ್ಲದೇ ವಿಕಿರಣ ಚಿಕಿತ್ಸೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೂ ವೈದ್ಯರು ಅಯೋಡಿನ್ ಬಳಸುತ್ತಾರೆ.

10. ರೋಗಕಾರಕಗಳ ವಿರುದ್ದ ಹೋರಾಡುತ್ತದೆ

10. ರೋಗಕಾರಕಗಳ ವಿರುದ್ದ ಹೋರಾಡುತ್ತದೆ

ರೋಗವನ್ನು ಉಂಟುಮಾಡುವ ರೋಗಕಾರಕಗಳಿಗೆ ಚಿಕಿತ್ಸೆ ನೀಡಲು ಅಯೋಡಿನ್‌ಗೆ ಆದ್ಯತೆ ನೀಡಲಾಗುತ್ತದೆ. ಬಾಯಿಯ ಮೂಲಕ ಸೇವಿಸುವ ಪ್ರತಿಜೀವಕಗಳು ಕೆಟ್ಟ ಬ್ಯಾಕ್ಟೀರಿಯಾಗಳ ಜೊತೆಗೆ ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುತ್ತವೆ, ಈ ಮೂಲಕ ದೇಹಕ್ಕೆ ಅಗತ್ಯವಿರುವ ಬ್ಯಾಕ್ಟೀರಿಯಾಗಳ ಕೊರತೆ ಎದುರಾಗುತ್ತದೆ. ಆದರೆ ಅಯೋಡಿನ್ ಪ್ರತಿಜೀವಕದಂತೆಯೇ ಪರಿಣಾಮ ಬೀರುತ್ತದೆಯಾದರೂ, ಇದು ದೇಹಕ್ಕೆ ಅಗತ್ಯವಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲದೇ ಕೇವಲ ಹಾನಿ ಎಸಗುವ ಬ್ಯಾಕ್ಟೀರಿಯಾಗಳನ್ನು ಮಾತ್ರ ಕೊಲ್ಲುತ್ತದೆ. ಇದೇ ಕಾರಣಕ್ಕೆ ಗಾಯವಾದರೆ ಟಿಂಕ್ಚರ್ ಅಯೋಡಿನ್ ಎಂಬ ದ್ರಾವಣವನ್ನು ಗಾಯದ ಮೇಲೆ ಹಚ್ಚಿ ಶೀಘ್ರ ಗುಣಪಡಿಸುವಿಕೆಗೆ ಬಳಸಲಾಗುತ್ತದೆ.

11. ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ

11. ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ

ಅಯೋಡಿನ್ ನಿಮ್ಮ ದೇಹವು ಕ್ಯಾನ್ಸರ್ ಉಂಟುಮಾಡುವ ಕೋಶಗಳನ್ನು ಕುಗ್ಗಿಸಲು ಮತ್ತು ಕೊಲ್ಲಲೂ ಸಹಾಯ ಮಾಡುತ್ತದೆ. ಬಹುಕೋಶೀಯ ಜೀವಿಗಳಲ್ಲಿ ವ್ಯವಸ್ಥಿತ ಜೀವಕೋಶದ ಮರಣವಾಗಿರುವ ಅಪೊಪ್ಟೋಸಿಸ್ (apoptosis) ಎಂಬ ಪ್ರಕ್ರಿಯೆಯಲ್ಲಿ, ಅಯೋಡಿನ್ ನಿರಂತರವಾಗಿ ಬೆಳೆಯುವ ಮತ್ತು ದೇಹವನ್ನು ಕೊಲ್ಲುವ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸಿ ಕೊಲ್ಲುತ್ತದೆ. ಥೈರಾಯ್ಡ್, ಸ್ತನ, ಪ್ರಾಸ್ಟೇಟ್ ಮತ್ತು ಗ್ಯಾಸ್ಟ್ರಿಕ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಅಯೋಡಿನ್ ಪ್ರಮುಖ ಪಾತ್ರ ವಹಿಸುತ್ತದೆ.

12. ದೇಹದಲ್ಲಿ ಸದಾ ಶಕ್ತಿ ತುಂಬಿರುವಂತೆ ಮಾಡುತ್ತದೆ

12. ದೇಹದಲ್ಲಿ ಸದಾ ಶಕ್ತಿ ತುಂಬಿರುವಂತೆ ಮಾಡುತ್ತದೆ

ನಿಮ್ಮ ದೇಹದಲ್ಲಿ ಅಯೋಡಿನ್ ಇರುವಿಕೆಯು ನಿಮ್ಮನ್ನು ಸಕ್ರಿಯವಾಗಿರಿಸುತ್ತದೆ. ಅಯೋಡಿನ್ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಉತ್ಸಾಹ, ಚುರುಕುತನ ಮತ್ತು ಸಕಾರಾತ್ಮಕತೆಯೊಂದಿಗೆ ದಿನದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

13. ನಿಮ್ಮ ಉಗುರುಗಳನ್ನು ಬಲಗೊಳಿಸುತ್ತದೆ

13. ನಿಮ್ಮ ಉಗುರುಗಳನ್ನು ಬಲಗೊಳಿಸುತ್ತದೆ

ಅಯೋಡಿನ್ ದುರ್ಬಲ ಮತ್ತು ಸುಲಭವಾಗಿ ತುಂಡಾಗುವ ಉಗುರುಗಳನ್ನು ಬಲಪಡಿಸುತ್ತದೆ. ಇದು ಅವರ ಒಟ್ಟಾರೆ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ಸಮತೋಲಿತ ಆಹಾರವು ಅಯೋಡಿನ್ ಸರಿಯಾದ ಸೇವನೆಯನ್ನು ಖಚಿತಪಡಿಸುತ್ತದೆ, ಇದು ನಿಮ್ಮ ಉಗುರುಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಸ್ಪಷ್ಟ, ಕಠಿಣ ಮತ್ತು ತುದಿಗಳು ಸುಲಭವಾಗಿ ತುಂಡಾಗದ ಉಗುರುಗಳನ್ನು ಖಾತರಿಪಡಿಸುತ್ತದೆ.

14. ಬಾಯಿಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

14. ಬಾಯಿಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಅಯೋಡಿನ್ ನಿಮ್ಮ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ, ಹಲ್ಲು ಹುಟ್ಟುವುದು ಮತ್ತು ಮರಗಟ್ಟುವುದನ್ನು ತಡೆಯುತ್ತದೆ. ಇದು ಹಲ್ಲುಗಳನ್ನು ಶುದ್ಧೀಕರಿಸುತ್ತದೆ ಮತ್ತು ಬಲಪಡಿಸುತ್ತದೆ ಹಾಗೂ ಉತ್ತಮ ಸೋಂಕುನಿವಾರಕವೂ ಆಗಿದ್ದು ನಿಮ್ಮ ಹಲ್ಲುಗಳನ್ನು ಆರೋಗ್ಯಕರ ಮತ್ತು ಗಟ್ಟಿಯಾಗಿಸುತ್ತದೆ. ಅಲ್ಲದೇ ಬಾಯಿಯ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಇಲ್ಲವಾಗಿಸಿ ಬಾಯಿಯ ದುರ್ವಾಸನೆ ಎದುರಾಗದಂತೆ ರಕ್ಷಿಸುತ್ತದೆ.

15. ತ್ವಚೆಗೆ ಅಯೋಡಿನ್‌ನಿಂದ ದೊರಕುವ ಪ್ರಯೋಜನಗಳು

15. ತ್ವಚೆಗೆ ಅಯೋಡಿನ್‌ನಿಂದ ದೊರಕುವ ಪ್ರಯೋಜನಗಳು

ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆಯ ರಚನೆಗೆ ಅಯೋಡಿನ್ ಸಹಾಯ ಮಾಡುತ್ತದೆ. ಇದು ಒಣ ಚರ್ಮ ಎದುರಾಗದಂತೆ ಕಾಪಾಡುತ್ತದೆ ಮತ್ತು ಚರ್ಮದ ತೇವಾಂಶವನ್ನು ನಿಯಂತ್ರಿಸುತ್ತದೆ. ಇದು ತ್ವಚೆಗೆ ಎದುರಾಗಿದ್ದ ಗಾಯಗಳು, ಗೀರುಗಳು ಕಲೆಗಳನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುವ ಮೂಲಕ ಆರೋಗ್ಯಕರ ತ್ವಚೆ ಬೆಳೆಯಲು ನೆರವಾಗುತ್ತದೆ. ಜೊತೆಗೇ ಮೊಡವೆಗಳಿಗೆ ಕಾರಣವಾಗುವ ಹಾರ್ಮೋನುಗಳ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಲ್ಲದೇ ಇದು ಸುಕ್ಕುಗಳು ಮತ್ತು ಸೂಕ್ಷ್ಮ ಗೆರೆಗಳ ರಚನೆಯನ್ನು ನಿಧಾನಗೊಳಿಸುವ ಮೂಲಕ ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಡವಾಗಿಸುತ್ತದೆ.

16. ಕೂದಲಿಗೆ ಅಯೋಡಿನ್‌ನಿಂದ ದೊರಕುವ ಪ್ರಯೋಜನಗಳು

16. ಕೂದಲಿಗೆ ಅಯೋಡಿನ್‌ನಿಂದ ದೊರಕುವ ಪ್ರಯೋಜನಗಳು

ದೇಹದಲ್ಲಿ ಸೂಕ್ತ ಪ್ರಯಾಣದ ಅಯೋಡಿನ್ ಇದ್ದರೆ ಕೂದಲು ಉದ್ದ ಮತ್ತು ಹೊಳಪುಳ್ಳದ್ದಾಗುತ್ತವೆ ಹಾಗೂ ಸೂಕ್ತ ಪ್ರಮಾಣದ ಕೂದಲ ಬೆಳವಣಿಗೆಯನ್ನು ಖಚಿತಗೊಳಿಸುತ್ತದೆ ಮತ್ತು ಕೂದಲುಗಳ ತುದಿ ಒಡೆಯುವುದನ್ನು ತಡೆಯುತ್ತದೆ. ಕೂದಲ ಬುಡಗಳ ಮೇಲೆ ದಾಳಿ ಮಾಡುವ ಶಿಲೀಂಧ್ರವನ್ನು ಕೊಲ್ಲುವುದರಿಂದ ಅಯೋಡಿನ್ ಕೂದಲುಗಳು ಹೊಸದಾಗಿ ಹುಟ್ಟಲು ನೆರವಾಗುತ್ತದೆ. ಅಯೋಡಿನ್ ನ ಪ್ರತಿಜೀವಕ ಗುಣಲಕ್ಷಣಗಳು ನೆತ್ತಿಯ ತ್ವಚೆಯನ್ನು ಸೋಂಕುಗಳಿಂದ ರಕ್ಷಿಸುತ್ತದೆ, ಕೂದಲು ಸೊಂಪಾಗಿ ಬೆಳೆಯಲು ಸ್ವಚ್ಛವಾದ ಮತ್ತು ಆರೋಗ್ಯಕರ ಸ್ಥಳಾವಕಾಶವನ್ನು ನೀಡುತ್ತದೆ.

English summary

Iodine Benefits For Skin And Health

Here we are discussing about Iodine Benefits For Skin And Health. Here are some significant iodine benefits for your health. Let’s take a look at them now. Read on.
X
Desktop Bottom Promotion