Just In
Don't Miss
- Automobiles
ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಜನರೇಷನ್ ಸಫಾರಿ
- Finance
ಕೊರೊನಾ ಕೃಪೆಯಿಂದ ತುಂಬಿ ತುಳುಕುತ್ತಿರುವ ಸಿರಿವಂತರ ತಿಜೋರಿ; ಬಡವರ ಬದುಕು ಮತ್ತೂ ಕಷ್ಟ ರೀ
- News
ಇನ್ನು ಶೇ 5ರಷ್ಟು ಅಸಮಾಧಾನ ಉಳಿದಿದೆ; ಲಕ್ಷ್ಮಣ ಸವದಿ!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದೇಕೆ? ನಿರ್ದೇಶಕರು ಹೇಳಿದ್ದೇನು?
- Sports
ಐಎಸ್ಎಲ್ 2020-21: ಅಂಕ ಹಂಚಿಕೊಂಡ ಜೆಮ್ಷೆಡ್ಪುರ, ಹೈದರಾಬಾದ್
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗರ್ಭಿಣಿ ಔಷಧಿ ತೆಗೆದುಕೊಂಡರೆ ಮುಂದೆ ಮಗುವಿಗೆ ಥೈರಾಯ್ಡ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು
ಥೈರಾಯ್ಡ್ ಎನ್ನುವುದು ನಮ್ಮ ಕುತ್ತಿಗೆಯಲ್ಲಿರುವ ಒಂದು ಗ್ರಂಥಿಯಾಗಿದ್ದು ಇದು ಉತ್ಪತ್ತಿ ಮಾಡುವ ಹಾರ್ಮೋನ್ ನಮ್ಮ ಹೃದಯ ಬಡಿತ, ರಕ್ತದೊತ್ತಡ, ದೇಹದ ಉಷ್ಣತೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ನಮ್ಮ ದೇಹದ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಈ ಹಾರ್ಮೋನ್ ಅತ್ಯಗ್ಯತವಾಗಿದೆ.
ಇತ್ತೀಚೆಗೆ ಥೈರಾಯ್ಡ್ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಪುರುಷ ಹಾಗೂ ಮಹಿಳೆಯರಲ್ಲಿ ಕಂಡು ಬರುವುದಾದರೂ ಈ ಸಮಸ್ಯೆ ಮಹಿಳೆಯರಲ್ಲಿ ಅತೀ ಹೆಚ್ಚಾಗಿ ಕಂಡು ಬರುತ್ತಿದೆ.
ಥೈರಾಯ್ಡ್ ಸಮಸ್ಯೆ ಎನ್ನುವುದು ಹೆಚ್ಚಿನವರಲ್ಲಿ ಕಂಡು ಬರುತ್ತಿದ್ದರೂ ಥೈರಾಯ್ಡ್ ಕ್ಯಾನ್ಸರ್ ಎನ್ನುವುದು ಬಲು ಅಪರೂಪದ ಕಾಯಿಲೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಕ್ಯಾನ್ಸರ್ ಕೂಡ ಹೆಚ್ಚಾಗುತ್ತಿದೆ.
ಥೈರಾಯ್ಡ್ ಕ್ಯಾನ್ಸರ್ ಅಪಾಯಕಾರಿಯಾದ ಸಮಸ್ಯೆಯಾದರೂ ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸಬಹುದಾಗಿದೆ. ಆದರೆ ಹೆಚ್ಚಿನ ಕೇಸ್‌ಗಳಲ್ಲಿ ಥೈರಾಯ್ಡ್ ಕ್ಯಾನ್ಸರ್ ಉಂಟಾಗಿರುವುದು ಪ್ರಾರಂಭದ ಹಂತದಲ್ಲಿ ತಿಳಿದರುವುದೇ ಇಲ್ಲ. ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದಾಗ ಮಾತ್ರ ತಿಳಿದು ಬರುತ್ತದೆ. ಈ ಸಂದರ್ಭದಲ್ಲಿ ಗುಣಪಡಿಸುವುದು ಸ್ವಲ್ಪ ಕಷ್ಟವೇ.

ಕುತ್ತಿಗೆ ಭಾಗದಲ್ಲಿ ಊತ, ನೋವು ನಿರ್ಲಕ್ಷ್ಯ ಬೇಡ
ಕುತ್ತಿಗೆ ಭಾಗದಲ್ಲಿ ನೋವು, ಊತ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಏಕೆಂದರೆ ಅದು ಥೈರಾಯ್ಡ್ ಕ್ಯಾನ್ಸರ್ ಆಗಿರಬಹುದು.
ಯೂನವರ್ಸಿಟಿ ಆಫ್ ಬೆರ್ಗನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ ಇನ್ ಯುಟ್ರೋ ಎಕ್ಸ್‌ಪೋಸರ್ ಅಂದರೆ ಗರ್ಭಿಣಿ ಮಹಿಳೆ ಔಷಧ ತೆಗೆದುಕೊಂಡರೆ ಅದರಿಂದ ಆ ಮಗುವಿಗೆ ಬರುವುದಾಗಿ ಹೇಳಿದೆ. ಥೈರಾಯ್ಡ್ ಕ್ಯಾನ್ಸರ್ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.
ಮಗುವಾಗಿರುವಾಗ ಐಯಾನೈಸಿಂಗ್ ರೇಡಿಯೇಷನ್ ತಾಗಿದ್ದರೆ ಅಥವಾ ಒಬೆಸಿಟಿ ಕಾರಣದಿಂದ ಬರುತ್ತದೆ. ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಬಳಿಕ ಹೈಪೋಥೈರಾಯ್ಡ್ , ಹೈಪರ್ ಥೈರಾಯ್ಡ್ ಉಂಟಾದರೆ, ಗಳಗಂಡ ರೋಗ ಇವೆಲ್ಲಾ ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣವಾಗಿದೆ.

ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣವಾಗುವ ಆರೋಗ್ಯ ಸಮಸ್ಯೆಗಳು
ಡೆನ್ಮಾರ್ಕ್, ಫಿನ್ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ ಈ ದೇಶಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನ ಪ್ರಕಾರ ಗರ್ಭಾವಸ್ಥೆಯಲ್ಲಿ ಕಾಡುವ ಥೈರಾಯ್ಡ್ ಸಮಸ್ಯೆ, ಗಳಗಂಡ ರೋಗ ಇವೆಲ್ಲಾ ಥೈರಾಯ್ಡ್ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದೆ. ಅಲ್ಲದೆ ಹುಟ್ಟುವಾಗ ಅತ್ಯಧಿಕ ಮೈ ತೂಕ, ತಾಯಿಗೆ ಮಧುಮೇಹ, ಪ್ರಸವ ನಂತರ ವಿಪರೀತ ರಕ್ತಸ್ರಾವ ಇವೆಲ್ಲಾ ಥೈರಾಯ್ಡ್ ಕ್ಯಾನ್ಸರ್‌ಗೆ ಸಂಬಂಧಿಸಿದ ಸಮಸ್ಯೆಯಾಗಿದೆ.
ಗರ್ಭಾವಸ್ಥೆಯಲ್ಲಿ ಮಹಿಳೆ ಮಾತ್ರೆಗೆ ತೆಗೆದುಕೊಂಡರೆ ಜನಿಸಿದ ಮಗುವಲ್ಲಿ ನಂತರ ದಿನಗಳಲ್ಲಿ ಥೈರಾಯ್ಡ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ಹೇಳಿದೆ.

ಥೈರಾಯ್ಡ್ ಕ್ಯಾನ್ಸರ್ ಲಕ್ಷಣಗಳು
ಥೈರಾಯ್ಡ್ ಕ್ಯಾನ್ಸರ್ ಉಂಟಾದಾಗ ತ್ವಚೆ ಹಾಗೂ ಕುತ್ತಿಗೆ ನೋಡಿದಾಗ ತಿಳಿದು ಬರುವುದು. ಧ್ವನಿಯಲ್ಲಿ ವ್ಯತ್ಯಾಸ ಉಂಟಾಗುವುದು. ಆಹಾರ ನುಂಗುವಾಗ ಕಷ್ಟವಾಗುವುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ತೋರಿಸಿ ಪರೀಕ್ಷಿಸುವುದು ಒಳ್ಳೆಯದು.

ಅಪಾಯ ಯಾರಿಗೆ ಹೆಚ್ಚು?
* ಪುರುಷರಿಗಿಂತ ಮಹಿಳೆಯರಿಗೆ ಥೈರಾಯ್ಡ್ ಕ್ಯಾನ್ಸರ್ ಅಪಾಯ ಹೆಚ್ಚು.
* ಕುತ್ತಿಗೆ ಹಾಗೂ ತಲೆಭಾಗಕ್ಕೆ ರೇಡಿಯೇಷನ್ ಥೆರಪಿ ಮಾಡಿಸುವುದರಿಂದಲೂ ಥೈರಾಯ್ಡ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
* ಕುಟುಂಬದಲ್ಲಿ ಯಾರಿಗಾದರೂ ಥೈರಾಯ್ಡ್ ಕ್ಯಾನ್ಸರ್ ಇದ್ದರೆ ಇತರರಲ್ಲೂ ಈ ಕ್ಯಾನ್ಸರ್ ಕಂಡು ಬರವ ಸಾಧ್ಯತೆ ಹೆಚ್ಚು. ಈ ರೀತಿ ಇದ್ದಾಗ ಜೆನೆಟಿಕ್ ಟೆಸ್ಟ್ ಮಾಡಿ ಥೈರಾಯ್ಡ್ ಗ್ರಂಥಿ ತೆಗೆದು ಹಾಕುವ ಮೂಲಕ ಥೈರಾಯ್ಡ್ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ.