Just In
- 56 min ago
Horoscope Today 23 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 22 hrs ago
ವಾರ ಭವಿಷ್ಯ (ಜ.22-ಜ.28): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- 1 day ago
Horoscope Today 22 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 1 day ago
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
Don't Miss
- Sports
IND vs AUS Test: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಹೊಸ ವೇಗದ ಅಸ್ತ್ರ!
- News
ಲಾರಿ ಮುಷ್ಕರ; ಬೆಂಗಳೂರು ದಕ್ಷಿಣದಲ್ಲಿ ನಂದಿನಿ ಹಾಲು ಪೂರೈಕೆ ವ್ಯತ್ಯಯ
- Movies
ಬಳ್ಳಾರಿಯಲ್ಲಿ ಹರಿಯಿತು 'ಭಾವ ಗೀತ ಸುಧೆ'
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Technology
ಐಟೆಲ್ನಿಂದ ಮತ್ತೊಂದು ಎಂಟ್ರಿ ಲೆವೆಲ್ ಫೋನ್ ಅನಾವರಣ! ಫೀಚರ್ಸ್ ಹೇಗಿದೆ?
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಯಿಯ ಉತ್ತಮ ಆರೋಗ್ಯಕ್ಕೆ ನಾವು ಏನು ಮಾಡಬೇಕು? ಯಾವ ಆಹಾರ ಸೇವಿಸಬೇಕು? ಇಲ್ಲಿದೆ ಈ ಬಗ್ಗೆ ಟಿಪ್ಸ್
ಬಾಯಿಯ ಆರೋಗ್ಯ ದೇಹದ ಸಾಮಾನ್ಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದು ನಮಗೆಲ್ಲರಿಗೂ ಗೊತ್ತೆ ಇದೆ. ಇನ್ನು ಬ್ಯಾಕ್ಟೀರಿಯಾಗಳ ಸೋಂಕಿನಿಂದ ಬಾಯಿಯಲ್ಲಿ ಒಸಡಿನ ರೋಗ ಉಂಟಾಗಬಹುದು. ಇದು ನಮ್ಮ ದೇಹದ ಆರೋಗ್ಯವನ್ನು ಕೆಡಿಸುತ್ತದೆ ಹೀಗಾಗಿ, ಬಾಯಿಯ ಆರೋಗ್ಯದೆಡೆಗೆ ನಾವು ವಿಶೇಷ ಜಾಗರೂಕತೆ ವಹಿಸಬೇಕು.
ಬಾಯಿ ಆರೋಗ್ಯಕ್ಕೆ ಉಂಟಾಗುವ ಅಪಾಯವನ್ನು ನಾವು ತಡೆಯಬೇಕು. ಅಲ್ಲದೇ ಬಾಯಿಯ ಆರೋಗ್ಯವನ್ನು ಕಾಪಾಡುವ ಆಹಾರ ಅಥವಾ ಚಟುವಟಿಕೆ ಮಾಡಬೇಕು. ಈ ಮೂಲಕ ಬಾಯಿಯ ಆರೋಗ್ಯವನ್ನು ಸಮತೋಲನದಲ್ಲಿ ಇಡಬೇಕು. ಹಾಗಾದರೆ ಹೇಗೆ ನಾವು ಬಾಯಿಯ ಆರೋಗ್ಯವನ್ನು ನೈರ್ಮಲ್ಯದ ಮೂಲಕ ಕಾಪಾಡಬಹುದು. ನಮ್ಮ ಬಾಯಿಯ ಆರೋಗ್ಯವನ್ನು ಚೆನ್ನಾಗಿಡಲು ಯಾವ ಆಹಾರ ಸೇವಿಸಬೇಕು? ಇಲ್ಲಿದೆ ನಿಮಗೆ ಕೆಲವೊಂದು ಟಿಪ್ಸ್.

ಬಾಯಿಯ ಅನಾರೋಗ್ಯಕ್ಕೆ ಕಾರಣವೇನು?
ಬಾಯಿಯ ರೋಗಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅದು ರಕ್ತದ ಮೂಲಕ ದೇಹದ ಇತರೆ ಭಾಗಗಳಿಗೆ ಹಾನಿಯುಂಟಾಗಿ ಹಲ್ಲುಗಳಿಗೂ ಸಮಸ್ಯೆಯಾಗುತ್ತದೆ.
ಆಹಾರ ಮತ್ತು ಪೇಯಗಳನ್ನು ಸೇವಿಸಿದಾಗ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಪ್ಲ್ಯಾಕ್ ಆಸಿಡ್ ಉತ್ಪತ್ತಿಗೊಂಡು ಹಲ್ಲುಗಳ ನಾಶಕ್ಕೆ ಕಾರಣವಾಗುತ್ತವೆ. ಇಂತಹ ಸಂದರ್ಭ ಸಕ್ಕರೆ ಮುಕ್ತ ಚುಯಿಂಗ್ ಗಮ್ ಗಳನ್ನು ಅಗಿಯುವುದರಿಂದ ಬಾಯಿಯ ಆರೈಕೆ ಮಾಡಿಕೊಳ್ಳಬಹುದು. ಅಲ್ಲದೇ ಹಲ್ಲಿನ ಕುಳಿಗಳ ಅಪಾಯದ ವಿರುದ್ಧ ಹೋರಾಡಲು ಸಹಾಯಕವಾಗಲಿದೆ.
ಅದಾಗ್ಯೂ ನಿರಂತರವಾಗಿ ಅನಾರೋಗ್ಯಕರ ಆಹಾರ, ಅಸಮರ್ಪಕ ಹಲ್ಲುಜ್ಜುವ ಅಭ್ಯಾಸಗಳು, ಧೂಮಪಾನ, ಮದ್ಯಪಾನ, ಅತಿ ಸಿಹಿ ತಿನ್ನುವುದು ಮತ್ತು ಒತ್ತಡವು ಬಾಯಿಯ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗಬಹುದು. ಹೀಗಾಗಿ ಇಂತಹುಗಳಿಂದ ದೂರ ಇರಿ.

ಬಾಯಿಯ ಆರೋಗ್ಯಕ್ಕೆ ಏನು ಸೇವಿಸಬೇಕು..?
ನೀವು ತಿನ್ನುವ ಆಹಾರವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ, ಆದ್ದರಿಂದ ನಿಮ್ಮ ಆಹಾರವು ನಿಮ್ಮ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಆಶ್ಚರ್ಯವೇನಿಲ್ಲ.
ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಬೀಜಗಳಲ್ಲಿ ಕಂಡುಬರುವ ಪೋಷಕಾಂಶಗಳು ಬ್ಯಾಕ್ಟೀರಿಯಾ ಮತ್ತು ಇನ್ಫ್ಲಾಮೇಷನ್ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ನಿಮ್ಮ ಹಲ್ಲು ಮತ್ತು ಒಸಡುಗಳನ್ನು ರಕ್ಷಿಸಲು ಇವುಗಳು ಸಹಾಯ ಮಾಡುತ್ತದೆ. ಕೆಲವು ಆಹಾರಗಳು ವಾಸ್ತವವಾಗಿ ವಿಶೇಷ ರೀತಿಯಲ್ಲಿ ದಂತಕ್ಷಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬಾಯಿಯ ಆರೋಗ್ಯಕ್ಕೆ ಸಂಬಂಧಪಟ್ಟ ಆಹಾರಗಳನ್ನು ಸೇವಿಸಿದರೆ ಉತ್ತಮ.

ಅಧ್ಯಯನ ಏನು ಹೇಳುತ್ತದೆ?
ಇತ್ತೀಚಿನ ಅಧ್ಯಯನದ ಪ್ರಕಾರ ತಾಜಾ ಕ್ರ್ಯಾನ್ಬೆರಿಗಳು ಪ್ಲೇಕ್ ನಿಂದ ಬ್ಯಾಕ್ಟೀರಿಯಾ ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಅಲ್ಲದೇ ಕ್ಯಾಲ್ಸಿಯಂ-ಬಲವರ್ಧಿತ ರಸಗಳು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿವೆ, ಇದು ಆರೋಗ್ಯಕರ ಹಲ್ಲು ಮತ್ತು ಗಟ್ಟಿ ಮೂಳೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
ಅಲ್ಲದೇ ಇವುಗಳು ಹಲ್ಲಿನ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಇನ್ನು ಚೀಸ್ ನಲ್ಲಿ ಕ್ಯಾಲ್ಸಿಯಂ ಶಕ್ತಿ ಹೇರಳವಾಗಿರುವುದರಿಂದ ಅದು ಪ್ಲೇಕ್ನೊಂದಿಗೆ ಬೆರೆತು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ. ಇದು ಕೊಳೆತಕ್ಕೆ ಕಾರಣವಾಗುವ ಆಮ್ಲದಿಂದ ನಿಮ್ಮ ಹಲ್ಲುಗಳನ್ನು ರಕ್ಷಿಸುತ್ತದೆ ಮತ್ತು ಸ್ಥಳದಲ್ಲೇ ಹಲ್ಲಿನ ದಂತಕವಚವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುತ್ತದೆ.
ಇನ್ನು ಹಣ್ಣುಗಳು ಮತ್ತು ಹಸಿ ತರಕಾರಿಗಳು, ಸೇಬುಗಳು, ಕ್ಯಾರೆಟ್ಗಳು ಮತ್ತು ಸೆಲರಿಗಳು, ಹಲ್ಲುಗಳಿಂದ ಪ್ಲೇಕ್ ಅನ್ನು ಸ್ವಚ್ಛಗೊಳಿಸಲು ಮತ್ತು ಉಸಿರಾಟವನ್ನು ತಾಜಾಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಸೋಡಾದಲ್ಲಿರುವ ಶುಗರ್, ಚಾಕೊಲೇಟ್ ಮಿಲ್ಕ್ ಮತ್ತು ಕ್ಯಾಂಡಿಯಲ್ಲಿರುವ ಸಕ್ಕರೆಗಳು ಕ್ಯಾವಿಟಿ ಸಮಸ್ಯೆಯನ್ನು ತಂದಿಡುತ್ತದೆ. ಹೀಗಾಗಿ ಇವುಗಳಿಂದ ದೂರ ಇರಿ. ಯಾಕೆಂದರೆ ಈ ಸಕ್ಕರೆ ಆಮ್ಲವಾಗಿ ಪರಿವರ್ತನೆಗೊಂಡು ಹಲ್ಲಿನ ದಂತಕವಚವನ್ನು ಆಕ್ರಮಿಸುತ್ತದೆ ಮತ್ತು ಹಲ್ಲಿನ ಕೊಳೆತವನ್ನು ಉಂಟುಮಾಡುತ್ತದೆ. ಹೀಗಾಗಿ ಇವುಗಳಿಂದ ದೂರ ಇದ್ದು ಉತ್ತಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಎಷ್ಟು ಹೊತ್ತು ಆಹಾರ ಜಗಿಯಬೇಕು?
ಇನ್ನು ಈ ಆಹಾರಗಳನ್ನು ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ನಿಜ ಆದರೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೇವಲ ಆಹಾರವನ್ನು ಪಾಲಿಸಿದರೆ ಸಾಲದು. ಅದರ ಜೊತೆಗೆ ಎಷ್ಟು ಹೊತ್ತಿಗೆ ಆಹಾರ ಸೇವಿಸಬೇಕು? ಎಷ್ಟು ಹೊತ್ತು ಆಹಾರ ಜಗಿಯಬೇಕು? ಎನ್ನುವುದು ಕೂಡ ಅತೀ ಮುಖ್ಯ.
ಹೌದು, ನೀವು ಯಾವುದೇ ಆಹಾರವನ್ನು ಜಾಸ್ತಿ ಹೊತ್ತು ಬಾಯಿಯಲ್ಲಿ ಇಟ್ಟುಕೊಳ್ಳುತ್ತೀರಾ? ಅಥವಾ ಯಾವುದೇ ಆಹಾರ ಜಗಿಯಲು ನಿಮಗೆ ತುಂಬಾ ಸಮಯ ತೆಗೆದುಕೊಳ್ಳುತ್ತೀರಾ? ಹಾಗಾದರೆ ಇವುಗಳಿಂದ ನಿಮ್ಮ ಬಾಯಿ ಹಾಗೂ ಹಲ್ಲಿಗೆ ಹಾನಿ ಜಾಸ್ತಿ ಇದೆ ಎಂದು ಅರ್ಥ.
ಆಹಾರಗಳಲ್ಲಿ ಸಕ್ಕರೆ ಹಿರುವುದರಿಂದ ನೀವು ಜಾಸ್ತಿ ಹೊತ್ತು ನಿಮ್ಮ ಬಾಯಿಯೊಳಗೆ ಇಟ್ಟರೆ ಅವುಗಳು ಹಲ್ಲುಗಳ ವಿರುದ್ಧ ಸಕ್ಕರೆ ರಿಲೀಸ್ ಮಾಡುತ್ತಲೇ ಇರುತ್ತದೆ. ಇದು ಬಾಯಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇನ್ನು ಎಲ್ಲಾ ಸಮಯದಲ್ಲೂ ಏನಾದರೂ ಜಗಿಯುತ್ತ ಇರುವುದಕ್ಕಿಂತ ಯಾವಾಗ ಆಹಾರ ಬೇಕು ಅಂದರೆ ಮೂರು ಹೊತ್ತು ಮಾತ್ರ ಸೇವಿಸಿದರೆ ಉತ್ತಮ. ಯಾಕೆಂದರೆ ಪ್ರತೀ ಕ್ಷಣವೂ ಹಲ್ಲಿಗೆ ಆಸಿಡ್ ಹಾಗೂ ಸಕ್ಕರೆ ಅಂಶದ ಎಫೆಕ್ಟ್ ಕೊಡುವುದನ್ನು ತಪ್ಪಿಸಿಕೊಳ್ಳುವುದು ಒಳ್ಳೆಯದು.
ಇನ್ನು ದಿನ ನಿತ್ಯ ಎರಡು ಬಾರಿಯಾದರು ಹಲ್ಲನ್ನು ಸರಿಯಾಗಿದ ಕ್ರಮದಲ್ಲಿ ಸ್ವಚ್ಛವಾಗಿ ಉಜ್ಜಬೇಕು. ಅಲ್ಲದೇ ಪ್ರತೀ ಆರು ತಿಂಗಳಿಗೆ ಒಂದು ಬಾರಿ ಬಾಯಿಯನ್ನು ನಿಮ್ಮ ಡೆಂಟಲ್ ವೈದ್ಯರಿಗೆ ತೋರಿಸಿ ಸ್ವಚ್ಛಗೊಳಿಸಬೇಕು. ಹೀಗೆ ಈ ಎಲ್ಲಾ ಕ್ರಮಗಳ ಮೂಲಕ ಬಾಯಿಯನ್ನು ನಾವು ಆರೋಗ್ಯವಾಗಿ ಇಡಬಹುದಾಗಿದೆ.