For Quick Alerts
ALLOW NOTIFICATIONS  
For Daily Alerts

ಬೈಪೋಲಾರ್ ಅಸ್ವಸ್ಥತೆ (ವಿಭಿನ್ನ ವರ್ತನೆ): ಇದಕ್ಕೆ ಮನೆಮದ್ದು ಏನು?

|

ಇದ್ದಕ್ಕಿದ್ದಂತೆ ಮಾನಸಿಕ ಸ್ಥಿತಿ ಬದಲಾಗುವುದು, ಕೆಲವು ಸಮಯ ಖುಷಿಯಾಗಿರುವುದು, ಇನ್ನು ಸ್ವಲ್ಪ ಸಮಯ ಬೇಸರದಿಂದ, ದುಃಖದಿಂದ ಕಾಲ ಕಳೆಯುವುದು. ಇಂತಹ ಸ್ವಭಾವಗಳನ್ನು ಒಳಗೊಂಡ ವ್ಯಕ್ತಿಗಳನ್ನು ನೋಡಿದರೆ ಏಕೋ ಇವರು ಎಲ್ಲರಂತೆ ನಾರ್ಮಲ್ ಆಗಿಲ್ಲ ಅನಿಸುತ್ತದೆ. ನಿನ್ನೆ ಮೊನ್ನೆ ಚೆನ್ನಾಗಿಯೇ ಇದ್ದ ವ್ಯಕ್ತಿಗಳು ಇದ್ದಕ್ಕಿದ್ದಂತೆ ಮಾನಸಿಕ ಖಿನ್ನತೆಗೆ ಜಾರಿ ಬಿಡುತ್ತಾರೆ.

ಕೆಲವು ಬಾರಿ ಇಂತಹ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಏಕೆಂದರೆ ಕ್ಷಣ ಕ್ಷಣಕ್ಕೂ ಇವರ ಮಾನಸಿಕ ಸ್ಥಿತಿ ಬದಲಾಗುತ್ತಲೇ ಇರುತ್ತದೆ. ಇಂತಹ ಒಂದು ಆರೋಗ್ಯದ ಅಸ್ವಸ್ಥತೆಯನ್ನು ವೈದ್ಯಲೋಕದಲ್ಲಿ ' ಬೈಪೋಲಾರ್ ಡಿಸಾರ್ಡರ್ ' ಎಂದು ಕರೆಯಲಾಗುತ್ತದೆ. ' ಹಿಸ್ಟೀರಿಯಾ ' ಅಥವಾ' ಹೈಪೋಮನಿಯ ' ಇದಕ್ಕಿರುವ ಇನ್ನೆರಡು ಹೆಸರುಗಳು.

ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿರುವ ವ್ಯಕ್ತಿಗಳನ್ನು ಸರಿಪಡಿಸಲು ಅವರ ಮೆದುಳಿನ ಅತ್ಯುತ್ತಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಚಿಕಿತ್ಸೆ ಒದಗಿಸಲಾಗುತ್ತದೆ. ಒಬ್ಬ ಅನುಭವಿ ಸೈಕಾಲಜಿಸ್ಟ್ ಇಂತಹ ವ್ಯಕ್ತಿಗಳಿಗೆ ತೆರಪಿ ಮುಂದುವರಿಸುವುದರ ಮೂಲಕ ಕೂಡ ಮಾನಸಿಕ ಸ್ಥಿತಿಯನ್ನು ಸಹಜ ಸ್ಥಿತಿಗೆ ಮತ್ತೊಮ್ಮೆ ತರಬಹುದು.

ಆದರೆ ಬೈಪೋಲಾರ್ ಅಸ್ವಸ್ಥತೆಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೆಲವೊಂದು ಮನೆ ಮದ್ದುಗಳು ಕೂಡ ಪರಿಹಾರ ಆಗುತ್ತವೆ. ಆದರೆ ಯಾವುದೇ ಕಾರಣಕ್ಕೂ ವೈದ್ಯರು ನೀಡುವ ಮಾನಸಿಕ ಚಿಕಿತ್ಸೆಗೆ ಸಂಬಂಧ ಪಟ್ಟಂತಹ ಔಷಧಿಗಳನ್ನು ಅಥವಾ ಥೆರಪಿಯನ್ನು ಕೈಬಿಡಬಾರದು.

1. ವಿಟಮಿನ್ ' ಬಿ ' ಕಾಂಪ್ಲೆಕ್ಸ್ ಸೇವನೆ ಮಾಡುವುದು : -

1. ವಿಟಮಿನ್ ' ಬಿ ' ಕಾಂಪ್ಲೆಕ್ಸ್ ಸೇವನೆ ಮಾಡುವುದು : -

ಕಾಂಪ್ಲೆಕ್ಸ್ ಎಂದರೆ ಸಹಯೋಗ ಎಂದರ್ಥ. ಹಾಗಾಗಿ ಹಲವು ' ಬಿ ' ವಿಟಮಿನ್ ಗಳನ್ನು ಒಮ್ಮೆಲೆ ತೆಗೆದುಕೊಳ್ಳುವುದರಿಂದ ಬೈಪೋಲಾರ್ ಅಸ್ವಸ್ಥತೆಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸಬಹುದು. ಇದರಲ್ಲಿ ಸೇರಿರುವ ಒಂದೊಂದು ವಿಟಮಿನ್ - ಬಿ ಅಂಶಗಳು ಸಾಕಷ್ಟು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುವುದರಿಂದ ಇಂತಹ ಆರೋಗ್ಯ ಸಮಸ್ಯೆಗೆ ಮತ್ತೊಂದು ದಾರಿಯಲ್ಲಿ ಪರಿಹಾರ ಸಿಗುತ್ತದೆ. ಯಾವ ಆಹಾರಗಳಲ್ಲಿ ವಿವಿಧ ಬಗೆಯ ವಿಟಮಿನ್ ಬಿ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ ಅಂತಹ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು. ಉದಾಹರಣೆಗೆ ವಿಟಮಿನ್ ಬಿ1, ವಿಟಮಿನ್ ಬಿ6, ವಿಟಮಿನ್ ಬಿ9, ವಿಟಮಿನ್ ಬಿ12 ಅಂಶಗಳನ್ನು ಒಳಗೊಂಡ ಆಹಾರಗಳ ಸೇವನೆ ಮಾಡುವುದರಿಂದ ಕೇವಲ ಮಾನಸಿಕ ಅಸ್ವಸ್ಥತೆ ಮಾತ್ರ ಸರಿಯಾಗುವುದು ಮಾತ್ರವಲ್ಲದೆ ಮಾನಸಿಕ ಖಿನ್ನತೆ, ಮಾನಸಿಕ ಆತಂಕ ಮತ್ತು ದೈಹಿಕ ಆಯಾಸ ಕೊಡ ದೂರವಾಗುತ್ತದೆ.

2 . ಮಸಾಜ್ ಪ್ರಕ್ರಿಯೆ ಅಷ್ಟೇ ಅನುಕೂಲಕಾರಿ!

2 . ಮಸಾಜ್ ಪ್ರಕ್ರಿಯೆ ಅಷ್ಟೇ ಅನುಕೂಲಕಾರಿ!

ನಿಮಗೆಲ್ಲ ಗೊತ್ತಿರಬಹುದು. ಅತಿಯಾದ ಮಾನಸಿಕ ಒತ್ತಡದಿಂದ ಬಳಲುವ ಮಂದಿ ವಾರಕ್ಕೆ ಒಮ್ಮೆ ದೈಹಿಕ ಮಸಾಜಿಗೆ ಒಳಗಾಗುತ್ತಾರೆ. ಏಕೆಂದರೆ ಇದರಿಂದ ಅವರಿಗೆ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುವುದರ ಜೊತೆಗೆ ದೈಹಿಕವಾಗಿ ಸಹ ಮೈ ಕೈ ನೋವು ದೂರವಾಗುತ್ತದೆ. ಆರೋಗ್ಯ ತಜ್ಞರು ಹೇಳುವ ಹಾಗೆ ಬೈಪೋಲಾರ್ ಅಸ್ವಸ್ಥತೆಗೂ ಕೂಡ ಮಸಾಜ್ ಥೆರಪಿ ಲಾಭಕಾರಿ. ಇದರಿಂದ ದೇಹದ ಹಾರ್ಮೋನುಗಳು ಮತ್ತು ನರಗಳ ಸಾಂಕೇತಿಕ ಚಲನೆ ಸಮತೋಲನ ಸ್ಥಿತಿಯಲ್ಲಿ ನಿರ್ವಹಣೆ ಆಗಲಿದೆ. ಸಾಂಪ್ರದಾಯಿಕ ಮಸಾಜ್ ಪ್ರಕ್ರಿಯೆಯನ್ನು ಒಬ್ಬ ಅನುಭವಿ ಮಸಾಜ್ ತೆರಪಿಸ್ಟ್ ಮೂಲಕ ಕೈಗೊಳ್ಳುವುದರಿಂದ ಅನುಕೂಲಕರವಾಗಲಿದೆ. ಆಕ್ಯುಪಂಕ್ಚರ್ ಅಥವಾ ಆಯಿಲ್ ಸ್ಟೀಮ್ ತೆರಪಿ ಕೂಡ ತುಂಬಾ ಒಳ್ಳೆಯದು. ಬೈಪೋಲಾರ್ ಅಸ್ವಸ್ಥತೆಗೆ ಈ ಎಲ್ಲಾ ಪ್ರಕ್ರಿಯೆಗಳು ಸಹಕಾರಿ.

3. ಲೈಕೋರೈಸ್ ಚಹಾ ಸೇವನೆ ಮಾಡಿ : -

3. ಲೈಕೋರೈಸ್ ಚಹಾ ಸೇವನೆ ಮಾಡಿ : -

ಮಾನಸಿಕ ಖಿನ್ನತೆಗೆ ಔಷಧಿಯಾಗಿ ಲೈಕೋರೈಸ್ ಕೆಲಸ ಮಾಡುತ್ತದೆ. ಬೈಪೋಲಾರ್ ಅಸ್ವಸ್ಥತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಲೈಕೋರೈಸ್ ಚಹ ಸೇವನೆ ಮಾಡಬೇಕು. ಮನೆಯಲ್ಲಿ ನೀವೇ ಸ್ವತಹ ಲೈಕೋರೈಸ್ ಚಹ ತಯಾರು ಮಾಡಿ ಕುಡಿಯಬಹುದು. ಕೇವಲ ಒಲೆಯ ಮೇಲೆ ಒಂದು ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಣಗಿದ ಲೈಕೋರೈಸ್ ಬೇರನ್ನು ಹಾಕಿ ಮೀಡಿಯಮ್ ಉರಿಯಲ್ಲಿ ಸುಮಾರು 10 ನಿಮಿಷ ಕುದಿಸಿದರೆ ಚಹ ತಯಾರಾಗುತ್ತದೆ. ನಂತರ ಇದನ್ನು ಸೋಸಿಕೊಂಡು ಸೇವನೆ ಮಾಡಬಹುದು.

4. ಸಮಯಕ್ಕೆ ಸರಿಯಾಗಿ ಈ ಕೆಲಸಗಳನ್ನು ಮಾಡಿ : -

4. ಸಮಯಕ್ಕೆ ಸರಿಯಾಗಿ ಈ ಕೆಲಸಗಳನ್ನು ಮಾಡಿ : -

ಮನುಷ್ಯ ಯಾವುದನ್ನೂ ಲೆಕ್ಕಿಸದೆ ಹೋದರೂ ತಾನು ಸಮಯಕ್ಕೆ ಸರಿಯಾಗಿ ಮಾಡಬೇಕಾದ ತಿಂಡಿ, ಊಟ, ನಿದ್ರೆ ಎಲ್ಲವನ್ನು ಪ್ರತಿ ದಿನ ಒಂದೇ ಸಮಯಕ್ಕೆ ಮೀಸಲಾಗಿರುವ ಹಾಗೆ ಮಾಡಬೇಕು. ಅಪ್ಪಿತಪ್ಪಿಯೂ ಬೆಳಗಿನ ಉಪಹಾರವನ್ನು ಎಂದಿಗೂ ಮಿಸ್ ಮಾಡಬಾರದು. ರಾತ್ರಿ ಸಮಯದಲ್ಲಿ ಬೇಗನೆ ಮಲಗಿ ಸುಮಾರು 8 ರಿಂದ 10 ಗಂಟೆಗಳ ಕಾಲ ನೆಮ್ಮದಿಯಾಗಿ ಕಣ್ತುಂಬ ನಿದ್ರೆ ಮಾಡಬೇಕು. ಇದರಿಂದ ಬೈಪೋಲಾರ್ ಅಸ್ವಸ್ಥತೆ ಗುಣವಾಗುತ್ತದೆ.

5. ನಿದ್ರೆ ತುಂಬಾ ಅವಶ್ಯಕ. ಏಕೆ ಗೊತ್ತಾ?

5. ನಿದ್ರೆ ತುಂಬಾ ಅವಶ್ಯಕ. ಏಕೆ ಗೊತ್ತಾ?

ಬೈಪೋಲಾರ್ ಅಸ್ವಸ್ತತೆ ಇರುವವರಿಗೆ ಸಹಜವಾಗಿ ಮಾನಸಿಕ ಆತಂಕ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಆಗಾಗ ಬೇರೆಯವರ ಮೇಲೆ ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಂಡು ಜಗಳ ಆಡುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಎಲ್ಲೋ ಒಂದು ಕಡೆ ಮನಸ್ಸಿಗೆ ಅಂದರೆ ಮೆದುಳಿಗೆ ತಳಮಳದ ಭಾವನೆ ಎದುರಾಗಿದೆ ಎನ್ನಿಸುತ್ತದೆ. ಹಾಗಾಗಿ ಪ್ರತಿ ದಿನ ಸಾಧ್ಯವಾದಷ್ಟು 8 ರಿಂದ 10 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ಇದರಿಂದ ಮೆದುಳಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದಂತೆ ಆಗುತ್ತದೆ. ಸರಿಯಾದ ರೀತಿಯಲ್ಲಿ ದೇಹದ ಅಂಗಾಂಗಗಳಿಗೆ ಸಂಕೇತಗಳನ್ನು ನೀಡಲು ಅನುಕೂಲವಾಗುತ್ತದೆ.

6. ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಇರಬೇಕು : -

6. ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಇರಬೇಕು : -

ಚೆನ್ನಾಗಿ ತಿನ್ನಬೇಕು ಎಂದರೆ ಸಿಕ್ಕಸಿಕ್ಕ ಆಹಾರಗಳನ್ನು ತಿನ್ನಬೇಕು ಎಂದಲ್ಲ. ಕೇವಲ ಪೌಷ್ಟಿಕಾಂಶಗಳನ್ನು ಒಳಗೊಂಡ ಆಹಾರಗಳನ್ನು ಮತ್ತು ನಮ್ಮ ದೇಹಕ್ಕೆ ಆರೋಗ್ಯವನ್ನು ವೃದ್ಧಿಸುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಸಾಕಾಗುತ್ತದೆ. ಬೈಪೋಲಾರ್ ಅಸ್ವಸ್ಥತೆಯಿಂದ ಬಳಲುತ್ತಿರುವವರು ತಮ್ಮ ಮೆದುಳಿಗೆ ಸಹಕಾರಿಯಾಗಿರುವ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳನ್ನು ಒಳಗೊಂಡ ಆಹಾರಗಳನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.

7. ವ್ಯಾಯಾಮವನ್ನು ಮರೆಯುವಂತಿಲ್ಲ : -

7. ವ್ಯಾಯಾಮವನ್ನು ಮರೆಯುವಂತಿಲ್ಲ : -

ನಮ್ಮ ಆರೋಗ್ಯದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವು ಸದಾ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಹಕ್ಕೆ ಸ್ವಲ್ಪವಾದರೂ ಕಸರತ್ತು ನೀಡಬೇಕು. ಮನೆಯ ಸುತ್ತಮುತ್ತ, ಹತ್ತಿರದ ಪಾರ್ಕ್ ಗಳಲ್ಲಿ ವಾಕಿಂಗ್ ಮಾಡಬೇಕು. ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡಿಕೊಂಡು ಮನೆಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನಮಗೆ ಬಹಳಷ್ಟು ಚೇತರಿಕೆ ಸಿಕ್ಕಂತೆ ಆಗುತ್ತದೆ. ಬೈಪೋಲಾರ್ ಅಸ್ವಸ್ಥತೆಯನ್ನು ಹೊಂದಿರುವ ರೋಗಿಗಳು ತಮ್ಮ ಜೀವನ ಶೈಲಿಯಲ್ಲಿ ವ್ಯಾಯಾಮದ ಅನುಸರಣೆ ಮಾಡುವುದು ಬಹಳ ಮುಖ್ಯ.

8. ಯೋಗ ತುಂಬಾ ಸಹಕಾರಿ : -

8. ಯೋಗ ತುಂಬಾ ಸಹಕಾರಿ : -

ವ್ಯಾಯಾಮದಂತೆ ಯೋಗ ಮಾಡಲು ಯಾವುದೇ ಉಪಕರಣಗಳು ಬೇಕಾಗಿಲ್ಲ. ಕೇವಲ ಮಾನಸಿಕ ಸ್ಥೈರ್ಯ ಇದ್ದರೆ ಸಾಕು. ಇದು ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಲು ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ ಯೋಗ ಮತ್ತು ಧ್ಯಾನ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸಕರ ವಾತಾವರಣವನ್ನು ನಿರ್ಮಾಣ ಮಾಡಿ ಕೊಡುವುದರಿಂದ ಮಾನಸಿಕ ಸ್ಥಿತಿ ಸಹಜವಾಗಿ ಒಳ್ಳೆಯ ರೀತಿಯಲ್ಲಿ ಬದಲಾವಣೆ ಕಾಣುತ್ತದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಉಸಿರಾಟ ಪ್ರಕ್ರಿಯೆಯನ್ನು ಒಳಗೊಂಡ ಯೋಗಾಭ್ಯಾಸ ತುಂಬಾ ಒಳ್ಳೆಯದು.

9. ಕೆಫಿನ್ ಮತ್ತು ಆಲ್ಕೋಹಾಲ್ ಸೇವನೆ ಬೇಡ : -

9. ಕೆಫಿನ್ ಮತ್ತು ಆಲ್ಕೋಹಾಲ್ ಸೇವನೆ ಬೇಡ : -

ಬಹಳಷ್ಟು ಜನರಿಗೆ ಮನಸ್ಸಿಗೆ ಬೇಸರ ಉಂಟಾದಾಗ ತಕ್ಷಣವೇ ಕಾಫಿ ಅಥವಾ ಚಹಾ ಕುಡಿಯಬೇಕು ಎನಿಸುತ್ತದೆ. ಮಾನಸಿಕ ಖಿನ್ನತೆಗೆ ಗುರಿಯಾಗಿರುವವರಿಗೆ ಆಗಾಗ ಮನಸ್ಸಿಗೆ ಬೇಸರ ಉಂಟಾಗುತ್ತಿರುತ್ತದೆ. ಹಾಗೆಂದು ಪ್ರತಿಬಾರಿ ಕಾಫಿ ಕುಡಿಯುತ್ತ ಕುಳಿತರೆ ದೇಹದಲ್ಲಿ ಕೆಫಿನ್ ಅಂಶ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಮಿತಿಯಿಲ್ಲದ ಆಲ್ಕೋಹಾಲ್ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಹಾಗಾಗಿ ಯಾವ ಪಾನೀಯಗಳಲ್ಲಿ ಕೆಫೀನ್ ಅಂಶ ಮತ್ತು ಆಲ್ಕೋಹಾಲ್ ಅಂಶ ಇರುತ್ತದೆ ಅಂತಹವುಗಳನ್ನು ಬೈಪೋಲಾರ್ ಅಸ್ವಸ್ಥತೆ ಹೊಂದಿರುವ ಜನರು ಸೇವನೆ ಮಾಡದಿರುವುದು ಒಳ್ಳೆಯದು.

10. ಖಿನ್ನತೆ ಹೆಚ್ಚು ಮಾಡುವ ವಿಚಾರಗಳನ್ನು ಪಟ್ಟಿ ಮಾಡಿ : -

10. ಖಿನ್ನತೆ ಹೆಚ್ಚು ಮಾಡುವ ವಿಚಾರಗಳನ್ನು ಪಟ್ಟಿ ಮಾಡಿ : -

ಜೀವನದಲ್ಲಿ ಹಿಂದೆ ನಡೆದ ಕೆಟ್ಟ ಘಟನೆಗಳು, ಬೇರೆಯವರ ಚುಚ್ಚು ಮಾತುಗಳು ಆಗಾಗ ನೆನಪಿಗೆ ಬಂದು ಮನುಷ್ಯನನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತವೆ. ಪದೇ ಪದೇ ಇದೇ ರೀತಿ ಆಗುತ್ತಿದ್ದರೆ, ಖಂಡಿತವಾಗಿ ಅಂತಹ ವ್ಯಕ್ತಿ ಮಾನಸಿಕ ಖಿನ್ನತೆಗೆ ಗುರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಇಂತಹ ವಿಚಾರಗಳ ಬಗ್ಗೆ ಗಮನಕೊಟ್ಟು ಇವುಗಳನ್ನು ಒಂದು ಕಡೆ ಪಟ್ಟಿಮಾಡಿ ಇಟ್ಟುಕೊಳ್ಳಿ. ಅಪ್ಪಿತಪ್ಪಿ ಇಂತಹ ನೆನಪುಗಳು ನಿಮ್ಮ ಮನಸ್ಸಿಗೆ ಬಂದ ತಕ್ಷಣ ಬೇರೆ ಯಾವುದಾದರೂ ಒಂದು ಕಾರ್ಯ ಚಟುವಟಿಕೆಯಲ್ಲಿ ತೊಡಗಿ ನಿಮ್ಮ ಮನಸ್ಸನ್ನು ಬೇರೆ ಕಡೆಗೆ ಕೇಂದ್ರೀಕರಿಸಿಕೊಳ್ಳಿ.

11. ಮಾನಸಿಕ ಒತ್ತಡ ನಿವಾರಕ ಗಿಡಮೂಲಿಕೆಗಳನ್ನು ಸೇವಿಸಬಹುದು : -

11. ಮಾನಸಿಕ ಒತ್ತಡ ನಿವಾರಕ ಗಿಡಮೂಲಿಕೆಗಳನ್ನು ಸೇವಿಸಬಹುದು : -

ನಮ್ಮ ಆಯುರ್ವೇದ ಪದ್ಧತಿಯಲ್ಲಿ ಮನುಷ್ಯನ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಬಹಳ ಹಿಂದಿನ ಕಾಲದಿಂದ ಆಸ್ಪತ್ರೆಗಳು ಇಲ್ಲದೆ ಇದ್ದಾಗಲೂ ಕೂಡ ಮನುಷ್ಯನ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಒದಗಿಸಿಕೊಂಡು ಬಂದಿರುವ ನೈಸರ್ಗಿಕ ಔಷಧೀಯ ಪದ್ಧತಿ ಇದು ಎಂದರೆ ತಪ್ಪಾಗಲಾರದು. ಅದೇ ರೀತಿ ಮಾನಸಿಕ ಖಿನ್ನತೆ ಅಥವಾ ಬೈಪೋಲಾರ್ ಅಸ್ವಸ್ಥತೆ ಕಂಡುಬಂದ ಜನರಿಗೂ ಕೂಡ ಕೆಲವೊಂದು ಗಿಡಮೂಲಿಕೆಗಳು ಪರಿಹಾರವಾಗಿ ಕೆಲಸ ಮಾಡುತ್ತವೆ. ಹಾಗಾಗಿ ವೈದ್ಯರು ನೀಡುವ ಔಷಧಿಗಳ ಜೊತೆಗೆ ಇಂತಹ ಗಿಡಮೂಲಿಕೆಗಳನ್ನು ಪರ್ಯಾಯ ಔಷಧಿಗಳ ರೂಪದಲ್ಲಿ ಸೇವನೆ ಮಾಡುವ ಬಗ್ಗೆ ನಿಮ್ಮ ಮನೋವೈದ್ಯರಲ್ಲಿ ಕೇಳಿ ತಿಳಿದುಕೊಂಡು ನಂತರ ಇವುಗಳ ಸೇವನೆಗೆ ಮುಂದಾಗಿ.

12. ಮನಸ್ಸಿಗೆ ಹತ್ತಿರವಾದವರಿಂದ ಸಲಹೆಗಳನ್ನು ಪಡೆದುಕೊಳ್ಳಿ : -

12. ಮನಸ್ಸಿಗೆ ಹತ್ತಿರವಾದವರಿಂದ ಸಲಹೆಗಳನ್ನು ಪಡೆದುಕೊಳ್ಳಿ : -

ನಮ್ಮ ಮನಸ್ಸಿಗೆ ಬೇಸರವಾದಾಗ ಅಥವಾ ಸಣ್ಣ ನೋವು ಉಂಟಾದರೂ ಸಹ ನಾವು ತಕ್ಷಣವೇ ಅದನ್ನು ನಮ್ಮ ಹತ್ತಿರದವರ ಬಳಿ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು. ಇಲ್ಲವೆಂದರೆ ಇದು ಮಾನಸಿಕವಾಗಿ ಮುಂದಿನ ದಿನಗಳಲ್ಲಿ ಆರೋಗ್ಯದ ವಿಚಾರದಲ್ಲಿ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ. ಹಾಗಾಗಿ ನಿಮ್ಮ ಕುಟುಂಬದಲ್ಲಿ, ನಿಮ್ಮ ಸ್ನೇಹಿತ ವರ್ಗದಲ್ಲಿ ಹಾಗೂ ನಿಮ್ಮ ಪ್ರೀತಿಪಾತ್ರರಲ್ಲಿ ನಿಮ್ಮ ಮನಸ್ಸಿನ ನೋವನ್ನು ತೋಡಿಕೊಂಡು ಸಮಯಕ್ಕೆ ಸೂಕ್ತವಾದ ಸಲಹೆಗಳನ್ನು ಅವರಿಂದ ಪಡೆದುಕೊಂಡು ಮುಂದಿನ ಜೀವನ ಖುಷಿಯಾಗಿ ಕಳೆಯುವ ಬಗ್ಗೆ ಆಲೋಚನೆ ಮಾಡಬೇಕು.

13. ಅಶ್ವಗಂಧ ಸೇವನೆ ತುಂಬಾ ಒಳ್ಳೆಯದು : -

13. ಅಶ್ವಗಂಧ ಸೇವನೆ ತುಂಬಾ ಒಳ್ಳೆಯದು : -

ಬಹಳಷ್ಟು ಜನರಿಗೆ ಅಶ್ವಗಂಧ ಗೊತ್ತೆ ಇಲ್ಲ. ಕೆಲವರು ಇನ್ನೂ ಸಹ ಅದನ್ನು ನೋಡಿಯೂ ಇಲ್ಲ. ಆದರೆ ಮನಸ್ಸಿನ ಆರೋಗ್ಯ ಎಂದು ಬಂದಾಗ ಅಶ್ವಗಂಧದ ಪಾತ್ರವನ್ನು ಮರೆಯುವಂತಿಲ್ಲ. ಏಕೆಂದರೆ ಇದು ಸಂಪೂರ್ಣವಾಗಿ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲಿ ಉಳಿಯುವಂತೆ ಮಾಡುತ್ತದೆ. ಬೈಪೋಲಾರ್ ಅಸ್ವಸ್ಥತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಕೆಲವು ವಾರಗಳವರೆಗೆ ಯಾವುದಾದರೂ ಒಂದು ರೂಪದಲ್ಲಿ ಅಶ್ವಗಂಧವನ್ನು ವೈದ್ಯರನ್ನು ಕೇಳಿ ಮಾಹಿತಿ ಪಡೆದುಕೊಂಡು ಸೇವನೆ ಮಾಡಿದರೆ ಒಳ್ಳೆಯದು. ಗ್ರಂಧಿಗೆ ಅಂಗಡಿಗಳಲ್ಲಿ ಅಶ್ವಗಂಧದ ಬೇರು ಎಲ್ಲಾ ಸಮಯದಲ್ಲೂ ಸಿಗುತ್ತದೆ.

English summary

Home Remedies To Relieve Symptoms Of Bipolar Disorder

Home remedies to relieve symptoms of bipolar disorder, read on.. .
Story first published: Saturday, May 22, 2021, 19:30 [IST]
X