For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕಾಡುವ ಮಂಡಿನೋವಿಗೆ ಇಲ್ಲಿದೆ ನೈಸರ್ಗಿಕ ಪರಿಹಾರ

|

ಚಳಿಗಾಲದಲ್ಲಿ ಸಂಧಿವಾತ ಸಮಸ್ಯೆಯಿರುವವರಿಗೆ ನೋವು ಮತ್ತಷ್ಟು ಹೆಚ್ಚುವುದು. ಥರಗುಟ್ಟುವ ಚಳಿಯಲ್ಲಿ ಸಹಿಸಲು ಅಸಾಧ್ಯವಾದ ಮಂಡಿ ನೋವು ಕಾಡಲಾರಂಭಿಸಿದಾಗ ತುಂಬಾನೇ ಹಿಂಸೆ ಅನಿಸುವುದು, ಆದ್ದರಿಂದ ಸಂಧಿವಾತದ ಸಮಸ್ಯೆ ಇದ್ದರೆ ಚಳಿಗಾಲದಲ್ಲಿ ಸ್ವಲ್ಪ ಮುಂಜಾಗ್ರತೆ ಕ್ರಮ ಹಾಗೂ ಆಹಾರಕ್ರಮದ ಕಡೆಗೆ ಗಮನ ನೀಡಿದರೆ ಮಂಡಿ ನೋವಿನ ಸಮಸ್ಯೆ ಬಾರದಂತೆ ಅಥವಾ ಹೆಚ್ಚಾಗದಂತೆ ತಡೆಗಟ್ಟಬಹುದು.

ಚಳಿಗಾಲದಲ್ಲಿ ಸಂಧಿನೋವಿನ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಸಂಧಿವಾತದ ಸಮಸ್ಯೆ ಹೆಚ್ಚಾಗದಿರಲು ಇವುಗಳತ್ತ ಗಮನ ನೀಡಿ

1. ಆರೋಗ್ಯಕರ ಮೈ ತೂಕ:

1. ಆರೋಗ್ಯಕರ ಮೈ ತೂಕ:

ಮೈ ತೂಕ ಹೆಚ್ಚಾದಂತೆ ಮಂಡಿ ಮೇಲೆ ಒತ್ತಡ ಬೀಳುವುದು, ನೀವು ಆರೋಗ್ಯಕರ ಮೈ ತೂಕಕ್ಕಿಂತ 6-7 ಕೆಜಿ ಅಂದರೆ ನಿಮ್ಮ ಎತ್ತರಕ್ಕೆ ನೀವು ಒಂದು 60 ಕೆಜಿ ಇರಬೇಕು, ಬದಲಿಗೆ ಅದಕ್ಕೆ 6-7 ಕೆಜಿ ಅಧಿಕವಿದ್ದರೆ ಮಂಡಿ ಮೇಲೆ ಒತ್ತಡ ಬೀಳುವುದು, ಇನ್ನೂ ಅಧಿಕ ಮೈ ತೂಕ ಹೊಂದಿದ್ದರೆ ಮಂಡಿಗೆ ಹಾನಿಯಾಗುವುದು, ಇದರಿಂದ ಮಂಡಿ ನೋವಿನ ಸಮಸ್ಯೆ ಹೆಚ್ಚುವುದು. ಸಂಸ್ಕರಿಸಿದ ಆಹಾರ, ಸಿಹಿ ಪದಾರ್ಥ, ಫಾಸ್ಟ್ ಫುಡ್ಸ್ ಇವುಗಳು ಮಂಡಿಯೂತವನ್ನು ಮತ್ತಷ್ಟು ಹೆಚ್ಚುವುದು. ಆದ್ದರಿಂದ ಆರೋಗ್ಯಕರ ಮೈ ತೂಕದಲ್ಲಿರಲು ಪ್ರಯತ್ನಿಸಿ.

2. ಆಹಾರ ಆಯ್ಕೆ ಬಗ್ಗೆ ಜಾಗ್ರತೆ:

2. ಆಹಾರ ಆಯ್ಕೆ ಬಗ್ಗೆ ಜಾಗ್ರತೆ:

ಕೆಲವೊಂದು ಆಹಾರಗಳನ್ನು ತಿಂದಾಗ ಊತ ಹೆಚ್ಚುವುದು, ಇದರಿಂದ ಸಂಧಿ ನೋವು ಕೂಡ ಹೆಚ್ಚುವುದು, ಇನ್ನು ಕೆಲವು ಆಹಾರಗಳು ನೋವನ್ನು ಕಡಿಮೆ ಮಾಡಲು ಸಹಕಾರಿ, ಆದ್ದರಿಂದ ನಿಮಗೆ ಸೇರುವ ಆಹಾರಗಳು ಯಾವುದೆಂದು ತಿಳಿದುಕೊಳ್ಳಿ. ಚೆರ್ರಿ, ಬೆರ್ರಿ, ದ್ರಾಕ್ಷಿ, ಕಲೆ ಸೊಪ್ಪು, ಪಾಲಾಕ್‌, ಪ್ಲಮ್, ಒಮೆಗಾ 3 ಇರುವ ಆಹಾರಗಳು (ಮೀನು) ನಟ್ಸ್, ಕ್ಯಾಬೇಜ್‌, ಬ್ರೊಕೋಲಿ, ಹೂ ಕೋಸು ಈ ರೀತಿಯ ಆಹಾರಗಳ ಸೇವನೆ ಒಳ್ಳೆಯದು. ಸಂಸ್ಕರಿಸಿದ ಆಹಾರ, ಮಟನ್, ಪೋರ್ಕ್‌, ಸಕ್ಕರೆಯಂಶ ಅಧಿಕವಿರುವ ಆಹಾರ, ತುಂಬಾ ಕೊಬ್ಬಿನಂಶವಿರುವ ಆಹಾರ ಇವುಗಳನ್ನು ತಿನ್ನಬೇಡಿ, ಏಕೆಂದರೆ ಇವುಗಳು ನೋವನ್ನು ಹೆಚ್ಚಿಸುವ ಆಹಾರಗಳಾಗಿವೆ.

3. ವಿಟಮಿನ್ ಡಿ ಅವಶ್ಯಕ

3. ವಿಟಮಿನ್ ಡಿ ಅವಶ್ಯಕ

ಮನೆಯೊಳಗಡೇ ಇದ್ದರೆ ವಿಟಮಿನ್‌ ಡಿ ಸಿಗುವುದಿಲ್ಲ, ದೇಹಕ್ಕೆ ವಿಟಮಿನ್‌ ಡಿ ಕೊರತೆಯಾದರೆ ಮೂಳೆಗಳು ಬಲಹೀನವಾಗುವುದು. ಬೆಳಗ್ಗೆ ಸೂರ್ಯನ ರಶ್ಮಿಗೆ ಮೈಯೊಡ್ಡಿ. ಅದರಲ್ಲಿ ಮೈಗೆ ಎಣ್ಣೆ ಬೆಳಗ್ಗೆ 9 ಗಂಟೆಯ ಒಳಗೆ ಸೂರ್ಯನ ಬಿಸಿಲು ಮೈಗೆ ಬಿದ್ದರೆ ಒಳ್ಳೆಯದು.

4. ವ್ಯಾಯಾಮ ಮಾಡಿ

4. ವ್ಯಾಯಾಮ ಮಾಡಿ

ಸ್ವಲ್ಪ ನಡೆದಾಡುವುದು, ವ್ಯಾಯಾಮ ಇವೆಲ್ಲಾ ಸಂಧಿನೋವಿನ ಸಮಸ್ಯೆ ಕಡಿಮೆ ಮಾಡುವುದು. ವ್ಯಾಯಾಮ ಮಾಡುವಾಗ ಮಂಡಿಗೆ ಒತ್ತಡ ಬೀಳುವ ವ್ಯಾಯಾಮ ಮಾಡಬೇಡಿ. ವ್ಯಾಯಾಮ ದೇಹವನ್ನು ಬೆಚ್ಚಗಾಗಿಸುತ್ತೆ, ಇನ್ನು ಮೈ ತೂಕ ನಿಯಂತ್ರಣದಲ್ಲಿಡಲು ಕೂಡ ಸಹಕಾರಿ.

5. ವಿಟಮಿನ್‌ ಸಿ ಇರುವ ಆಹಾರ

5. ವಿಟಮಿನ್‌ ಸಿ ಇರುವ ಆಹಾರ

ವಿಟಮಿನ್ ಸಿ ಹೊಸ ಕೊಲೆಜಿನ್‌ ಉತ್ಪತ್ತಿಗೆ ಸಹಕಾರಿ. ದುಂಡು ಮೆಣಸು, ಸಿಟ್ರಸ್ ಅಂಶವಿರುವ ಹಣ್ಣುಗಳು, ಹೂ ಕೋಸು, ಚೆರ್ರಿ, ಸ್ಟ್ರಾಬೆರ್ರಿ, ಬ್ರೊಕೋಲಿ ಇಂಥ ಆಹಾರಗಳನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿ.

6. ಥೆರಪಿ ತೆಗೆದುಕೊಳ್ಳಿ

6. ಥೆರಪಿ ತೆಗೆದುಕೊಳ್ಳಿ

ಸಂಧಿವಾತ ಸಮಸ್ಯೆ ಇರುವವರು ಆಯುರ್ವೇದ, ಆಕ್ಯೂಪಂಕ್ಚರ್ ಮತ್ತಿತರ ಥೆರಪಿ ತೆಗೆದುಕೊಳ್ಳಬಹುದು. ಎಣ್ಣೆ ಮಸಾಜ್‌, ಮಂಡಿಗೆ ಬಿಸಿ ಕೊಡುವುದು ಇವೆಲ್ಲಾ ಮಂಡಿ ನೋವು ಕಡಿಮೆ ಮಾಡುವುದು,'

7. ಗ್ರೀನ್‌ ಟೀ ಕುಡಿಯಿರಿ

7. ಗ್ರೀನ್‌ ಟೀ ಕುಡಿಯಿರಿ

ಗ್ರೀನ್‌ ಟೀ ಕುಡಿಯುವುದರಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಗ್ರೀನ್ ಟೀ ಕಾರ್ಟಿಲೇಜ್‌ ಮತ್ತಷ್ಟು ಹಾನಿಯಾಗುವುದನ್ನು ತಡೆಗಟ್ಟಿ ಸಂಧಿವಾತ ಕಡಿಮೆಯಾಗುವುದು.

FAQ's
  • ಸಂಧಿವಾತಕ್ಕೆ ಯಾವ ಪಾನೀಯಗಳು ಒಳ್ಳೆಯದು?

    * ಗ್ರೀನ್ ಟೀ
    * ಹಾಲು
    * ತಾಜಾ ಹಣ್ಣಿನ ಜ್ಯೂಸ್
    * ಸ್ಮೂತಿ
    * ರೆಡ್‌ ವೈಬ್‌
    * ನೀರು

  • ರಾತ್ರಿಯಲ್ಲಿ ಸಂಧಿನೋವು ತಡೆಗಟ್ಟುವುದು ಹೇಗೆ?

    ಐಸ್‌ ಪ್ಯಾಕ್‌, ಹೀಟ್‌ ಪ್ಯಾಕ್‌ ಅಥವಾ ಹೀಟಿಂಗ್ ಪ್ಯಾಡ್ ಇವುಗಳನ್ನು ಮಲಗುವ ಮುನ್ನ 20 ನಿಮಿಷ ಇಡುವುದು ಒಳ್ಳೆಯದು.

  • ಸಂಧಿವಾತ ಗಂಭೀರವಾದಾಗ ಕಂಡು ಬರುವ ಲಕ್ಷಣಗಳೇನು?

    *ನಿಲ್ಲಲು ಸಾಧ್ಯವಾಗದಿರುವುದು
    * ಮಂಡಿ ಊತ
    *ಮಂಡಿ ಮಡಚಲು, ನಿಮಿರಲು ಕಷ್ಟವಾಗುವುದು
    * ಜ್ವರ, ಮಂಡಿ ನೋವಿನಿಂದ ಕೆಂಪಾಗುವುದು ಇವೆಲ್ಲಾ ಸಂಧಿವಾತ ಗಂಭೀರವಾಗಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ.

English summary

Home Remedies for Managing Winter Arthritis Pain in Kannada

Home Remedies for Managing Winter Arthritis Pain in Kannada,
Story first published: Tuesday, December 21, 2021, 12:44 [IST]
X
Desktop Bottom Promotion